Latest Updates
-
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ!
ರಾಮಭಕ್ತ ಹನುಮಂತನ ಬಗ್ಗೆ ಹೆಚ್ಚಿನವರಿಗೆ ತಿಳಿದಿರದ ರಹಸ್ಯಗಳು..!
ರಾಮನ ಪರಮಭಕ್ತ ಹನುಮಂತ. ಈತನು ಚಿರಂಜೀವಿಯಾಗಿರು ಎಂಬ ವರವನ್ನು ರಾಮನಿಂದ ಪಡೆದುಕೊಂಡಿದ್ದಾನೆ. ಭೂಮಿಯಲ್ಲಿ ರಾಮನ ಭಕ್ತರು ಬದುಕಿರುವ ತನಕ ಈತ ಕಲಿಯುಗದಲ್ಲೇ ಇರುತ್ತಾನೆ ಎಂಬ ನಂಬಿಕೆಯಿದೆ.

ಹನುಮಂತನಿಗೆ ಅಂಜನೀಪುತ್ರ, ಆಂಜನೇಯ, ವಾನರಪುತ್ರ ಹೀಗೆ ಹಲವಾರು ಹೆಸರುಗಳಿದೆ. ನಿಮಗೊತ್ತಾ? ಹನುಮಂತನು ಚೈತ್ರಮಾಸದ ಹುಣ್ಣಿಮೆಯಂದು ಜನಿಸಿದನೆಂದು ಹೇಳಲಾಗುತ್ತದೆ. ಹೀಗೆ ಹನುಮಂತನ ಬಗ್ಗೆ ಸಾಮಾನ್ಯ ಜನರಿಗೆ ಗೊತ್ತಿರದ ಐದು ರಹಸ್ಯಗಳು ಇಂದಿಗೂ ರಹಸ್ಯವಾಗೇ ಉಳಿದಿದೆ. ಅಷ್ಟಕ್ಕು ಯಾವುದು ಆ 5 ರಹಸ್ಯಗಳು ಯಾವುದು ಇಲ್ಲಿದೆ ಡಿಟೇಲ್ಸ್.
1. ಹನುಮಂತನಿಗೆ 5 ಜನ ಸಹೋದರರಿದ್ದಾರೆ
ಆಂಜನೇಯನು ಇಂದಿಗೂ ಭಾರತ ಮತ್ತು ಶ್ರೀಲಂಕಾದ ಮಧ್ಯೆ ಇರುವ ಮೌಂಟ್ ಗಂಧಮದನದಲ್ಲಿ ವಾಸವಾಗಿದ್ದಾನೆ ಎಂಬ ಉಲ್ಲೇಖವಿದೆ. ಬ್ರಹ್ಮಾಂಡ ಪುರಾಣದಲ್ಲಿ ವಾನರ ವಂಶಾವಳಿ ಬಗ್ಗೆ ಸವಿಸ್ತಾರವಾದ ವಿವರಣೆ ನೀಡಲಾಗಿದೆ. ಇದರಲ್ಲಿ ಹನುಮಂತನ ಖಾಸ ಸಹೋದರರ ಬಗ್ಗೆ ಉಲ್ಲೇಖವಿದೆ. ಹನುಮಂತನು ಆರು ಜನ ಸಹೋದರರಲ್ಲಿ ದೊಡ್ಡವನಾಗಿದ್ದು, ಉಳಿದವರ ಹೆಸರುಗಳು ಇಂತಿವೆ ಮತಿಮಾನ್, ಶೃತಿಮಾನ್, ಕೇತುಮಾನ್, ಗತಿಮಾನ್ ಮತ್ತು ದೃತಿಮಾನ್. ಮಹಾಭಾರತದ ಸಮಯದಲ್ಲಿ ಕುಂತಿಯ ಮಗನಾದ ಭೀಮನನ್ನು ಹನುಮಂತನ ಸಹೋದರ ಎಂದು ಕರೆಯಲಾಗುತ್ತಿತ್ತು.
2. ರಾಮಾಯಣವನ್ನು ಮೊದಲು ಬರೆದವನು ಹನುಮಂತ
ದಕ್ಷಿಣ ಭಾರತದ ಜನಪದದಲ್ಲಿ ಉಲ್ಲೇಖವಾಗಿರುವಂತೆ ಹನುಮಂತನೇ ಮೊದಲು ರಾಮಾಯಣವನ್ನು ಬರೆದಿದಂತೆ. ಅದೂ ಕೂಡ ಆತನ ಉಗುರಿನ ಸಹಾಯದಿಂದ ಬಂಡೆಗಳ ಮೇಲೆ ರಾಮಾಯಣ ಬರೆದಿದ್ದನು ಎನ್ನಲಾಗಿದೆ. ಇದು ವಾಲ್ಮಿಕಿ ರಾಮಾಯಣಕ್ಕೂ ಮೊದಲೇ ಬರೆಯಲಾಗಿದೆ ಎಂಬ ಉಲ್ಲೇಖವಿದೆ. ಇದನ್ನು ಹಮುಮಾನ್ ರಾಮಾಯಣ ಅಂತಲೇ ದಕ್ಷಿಣ ಭಾರತದಲ್ಲಿ ಕರೆಯಲಾಗುತ್ತದೆ. ರಾಮಾಯಣವನ್ನು ಬರೆದ ಮೇಲೆ ಹನುಮಂತನು ಆ ಕಲ್ಲನ್ನು ಸಮುದ್ರಕ್ಕೆ ಎಸೆದಿದ್ದಾನಂತೆ. ನಂತರ ಇದು ತುಳಸಿದಾಸರಿಗೆ ಲಭ್ಯವಾಯಿತು ಎನ್ನಲಾಗಿದೆ.
3. ಹನುಮಂತನ ವಾಹನ
ಎಲ್ಲಾ ದೇವರು ಹಾಗೂ ದೇವತೆಗಳಿಗೆ ವಾಹನ ಇರುವ ಬಗ್ಗೆ ನಾವು ಕೇಳಿದ್ದೇವೆ. ಆದರೆ ಹನುಮಂತನ ವಾಹನ ಬಗ್ಗೆ ನಿಮಗೆ ಗೊತ್ತಿದ್ಯಾ? ಹೌದು, ಹನುಮಂತನಿಗೂ ವಾಹನ ಇದೆ ಆದರೆ ಅದು ನಮ್ಮ ಕಣ್ಣಿಗೆ ಕಾಣಿಸೋದಿಲ್ಲ. ಹನುಮಾನ್ ಸಹಸ್ರನಾಮ ಸ್ತೋತ್ರದಲ್ಲಿ ಎಪ್ಪತ್ತೆರಡನೇ ಪದ್ಯದಲ್ಲಿ ವಾಯುವಾಹನದ ಬಗ್ಗೆ ಉಲ್ಲೇಖ ಮಾಡಲಾಗಿದೆ. ಹಾಗೆಂದರೆ ಆ ವಾಹನವು ಗಾಳಿ ಎಂದರ್ಥ. ಹನುಮಂತನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವೇಗವಾಗಿ ಹೋಗಲು ವಾಯುವನ್ನು ವಾಹನವಾಗಿ ಬಳಸುತ್ತಾನೆ.
4. ಹನುಮಂತನಿಗೆ ನಾಲ್ಕು ಗುರುಗಳಿದ್ದರು
ಪುರಾಣಗಳ ಪ್ರಕಾರ ಹನುಮಂತನಿಗೆ ನಾಲ್ಕು ಜನ ಗುರುಗಳು ಇದ್ದರಂತೆ ಇವರಿಂದ ಹನುಮಂತನು ಶಿಕ್ಷಣ ಹಾಗೂ ಇತರ ವಿದ್ಯೆಗಳನ್ನು ಕಲಿತಿದ್ದನಂತೆ. ಅದರಲ್ಲಿ ಮೊದಲನೇಯ ಗುರು ಸೂರ್ಯದೇವ, ಎರಡನೇಯ ಗುರು ನಾರದ, ಮೂರನೇ ಗುರು ಪವನ ದೇವ, ನಾಲ್ಕನೇಯ ಗುರು ಮತಂಗ ಋಷಿ.
5. ಹನುಮಂತನ ಜಾತಿ
ಸಂಶೋಧನೆಗಳ ಪ್ರಕಾರ ಒಂಬತ್ತು ಲಕ್ಷ ವರ್ಷಗಳ ಮೊದಲು ಕೋತಿಗಳ ವಿಭಿನ್ನ ಪ್ರಭೇಧವೊಂದು ಭೂಮಿಯ ಮೇಲೆ ಇತ್ತಂತೆ. ಈ ಪ್ರಭೇಧವು 12 ರಿಂದ 15 ವರ್ಷಗಳಲ್ಲಿ ನಶಿಸಿ ಹೋಗಿದ್ಯಂತೆ. ಈ ಪ್ರಭೇಧದ ಹೆಸರೇ ಕಪಿ. ಹನುಮಾನ್ ಕೂಡ ಇದೇ ಪ್ರಭೇಧಕ್ಕೆ ಸೇರಿದವನಾಗಿದ್ದಾನೆ. ವಾನರರು ಕೂಡ ಕಾಡು ವಾಸಿಗಳೇ ಆದರೆ ಇವರು ಹನುಮಾನ್‌ಗಿಂತ ವಿಭಿನ್ನರು. ಯಾಕೆಂದರೆ ಅವರು ಕಾಡುಗಳಲ್ಲಿ ಮಾತ್ರ ವಾಸಿಸುತ್ತಾರೆ.
ಇದುವೇ ಹನುಮಾನ್ ಬಗ್ಗೆ ಸಾಮಾನ್ಯ ಜನರಿಗೆ ಗೊತ್ತಿರದ ಕೆಲವೊಂದು ರಹಸ್ಯಕಾರಿ ಸಂಗತಿಗಳು.



Click it and Unblock the Notifications

