Latest Updates
-
ಸಮ್ಮರ್ ಸ್ಪೆಷಲ್.. ಈ ಹೊಸ ರುಚಿಯ ಕಪ್ಪು ದ್ರಾಕ್ಷಿ ಲೆಮನೇಡ್ ಮಾಡಿ! ಬೇಸಿಗೆಯಲ್ಲಿ ಕೂಲ್ ಕೂಲ್ ಆಗಿ -
Ugadi 2026: ಯುಗಾದಿ ಹಬ್ಬದಂದು ಬೇವು-ಬೆಲ್ಲ ಸವಿಯುವುದರ ವೈಜ್ಞಾನಿಕ ಕಾರಣ ಏನು ಗೊತ್ತಾ? -
ದಶಕಗಳ ಬಳಿಕ ಅಪರೂಪದ ರಾಜಯೋಗ! ಈ ರಾಶಿಗಳಿಗೆ ಹರಿದು ಬರಲಿದೆ ಸಂಪತ್ತು.. ನಿಮ್ಮ ಕಷ್ಟಗಳೆಲ್ಲಾ ದೂರ! -
ಹೊಟ್ಟೆಗೆ ತಂಪು.. ನಾಲಿಗೆಗೆ ರುಚಿ..! ಇಡ್ಲಿ, ದೋಸೆ, ಅನ್ನಕ್ಕೆ ಸೂಪರ್.. ಸೌತೆಕಾಯಿ ಬಳಸಿ ಈ ರೀತಿ ಪಚ್ಚಡಿ ಮಾಡಿ -
March 18 Horoscope: ಪ್ರಯಾಣಗಳ ಮಾಡುವಾಗ ಎಚ್ಚರಿಕೆ ವಹಿಸಿ! -
ಲವ್ ಮ್ಯಾರೇಜ್ನ ಅಡೆತಡೆಗಳು ದೂರ! ಸಂಗಾತಿಗೆ ಹೊಸ ಉದ್ಯೋಗ -
ಯುಗಾದಿ ಹಬ್ಬಕ್ಕೆ ಮಾಡಿ ಗಸೆಗಸೆ ಪಾಯಸ: ಬಾಯಲ್ಲಿ ನೀರು ತರಿಸುವ ಸಿಹಿ -
Summer Garden: ಬೇಸಿಗೆಯಲ್ಲಿ ಬಾಡದ ಹೂವುಗಳಿವು! ಈ 5 ಹೂಗಳನ್ನು ನೆಡಿದ್ರೆ ಸಾಕು.. ನಿಮ್ಮ ಗಾರ್ಡನ್ ಕಲರ್ಫುಲ್ -
ಸೂರ್ಯ ಬುಧನಿಂದ ಬುಧಾದಿತ್ಯ ಯೋಗ; ಈ ರಾಶಿಯವರ ಬದುಕಲ್ಲಿ ಬೆಳಕು, ಕಷ್ಟಗಳು ಪರಿಹಾರ -
ಯುಗಾದಿ ಹೊಸತೊಡಕು.. ಮಟನ್ ಖರೀದಿಸುವಾಗ ಮೋಸ ಹೋಗಬೇಡಿ! ಫ್ರೆಶ್ ಇದ್ಯಾ? ಅಥವಾ ನಿನ್ನೆಯದ್ದೇ? ಹೀಗೆ ಗುರುತಿಸಿ
ಪರಾಕ್ರಮಿ ಪರಶುರಾಮನ ಕುರಿತ ವಾಸ್ತವ ಸತ್ಯಗಳು
ಭಗವಾನ್ ವಿಷ್ಣುವಿನ ಆರನೆಯ ಅವತಾರವೆಂದೇ ಖ್ಯಾತರಾಗಿರುವ ಮಹಾರ್ಷಿ ಪರಶುರಾಮರು ಬ್ರಾಹ್ಮಣ ಸಪ್ತರ್ಷಿಯಾದ ಜಮದಗ್ನಿ ಮತ್ತು ರೇಣುಕಾರ ಪುತ್ರರಾಗಿದ್ದಾರೆ. ತ್ರೇತಾಯುಗದಲ್ಲಿ ಜನಿಸಿ, ಹಿಂದೂ ಧರ್ಮದಲ್ಲಿ ಕರೆಯಲಾದ ಏಳು ದೇವತೆಗಳಲ್ಲಿ ಒಬ್ಬರೆನಿಸಿದ್ದಾರೆ. ಹುಟ್ಟುವಾಗಲೇ ಬ್ರಾಹ್ಮರಾಗಿದ್ದರೂ, ಕ್ಷತ್ರಿಯರ ಆಕ್ರಮಶೀಲತೆ ಮತ್ತು ಧೈರ್ಯ ಪರಶುರಾಮನಿಗೆ ಇದ್ದುದರಿಂದ ಬ್ರಹ್ಮ ಕ್ಷತ್ರಿಯನೆಂಬ ಹೆಸರನ್ನೂ ಪರಶುರಾಮ ಪಡೆದುಕೊಂಡಿದ್ದಾರೆ.
ಯುದ್ಧ ವಿದ್ಯಾ ಪರಿಣಿತನಾಗಿದ್ದ ಪರಶುರಾಮ ಭ್ರಷ್ಟ ಯೋಧರಿಗೆ ಸಿಂಹಸ್ವಪ್ನ ಎಂದೆನಿಸಿದ್ದರು. ಭೂಮಿಯ ಮೇಲೆ 21 ಬಾರಿ ಇಂತಹವರನ್ನು ಇವರೊಬ್ಬರೇ ವಧಿಸಿದ್ದಾರೆ. ಪರಶು ಎಂಬುದು ಕೊಡಲಿ ಅರ್ಥವನ್ನು ಹೊಂದಿರುವುದರಿಂದ ಕೊಡಲಿಯನ್ನು ಹೊಂದಿರುವ ರಾಮ ಎಂಬ ಹೆಸರಿನಿಂದ ಕೂಡ ಪರಶುರಾಮ ಜನಜನಿತರಾಗಿದ್ದರು. ತಾಯಿಯ ಶಿರವನ್ನೇ ಕಡಿದ ಪರಶುರಾಮನ ಪಿತೃಭಕ್ತಿಗೆ ಎಣೆಯು೦ಟೇ..?!
ತಮ್ಮ ದಾರಿಗೆ ಅಡ್ಡ ಬರುವಂತಹ ಕ್ಷತ್ರಿಯ ರಾಜರನ್ನು ಕೊಲ್ಲುತ್ತಾ ಪರಶುರಾಮ ಏಕೈಕ ರಾಜನನ್ನೂ ಬಿಟ್ಟಿಲ್ಲ ಎಂಬುದಾಗಿ ಪುರಾಣ ಹೇಳುತ್ತದೆ. ಇದರಿಂದಾಗಿ ಬ್ರಾಹ್ಮಣ ಜೀವನ ಶೈಲಿಯನ್ನು ಅವರು ಉಲ್ಲಂಘಿಸಿದ್ದರೆಂದು ಕೊಲೆಗಳಿಂದ ಅವರು ಕಳಂಕಿತರಾಗಿದ್ದರೆಂದು ಇತರೆ ಬ್ರಾಹ್ಮಣರು ಅವರನ್ನು ದೂರವಿರಿಸಿದ್ದರು. ಹಿಂದೂ ಪುರಾಣದಲ್ಲಿ ಪರಶುರಾಮರನ್ನು ಕುರಿತ ಇನ್ನಷ್ಟು ಸತ್ಯಗಳು ಮರೆಯಾಗಿದ್ದು ಅವುಗಳನ್ನು ನಿಮ್ಮ ಮುಂದೆ ತೆರೆದಿಡುವ ಪ್ರಯತ್ನವನ್ನು ಇಂದಿನ ಲೇಖನದಲ್ಲಿ ನಾವು ಮಾಡುತ್ತಿದ್ದೇವೆ. ಪರಶುರಾಮರನ್ನು ಕುರಿತಿರುವ ಕೆಲವೊಂದು ವಾಸ್ತವಾಂಶಗಳೇನು ಎಂಬುದನ್ನು ಕೆಳಗಿನ ಸ್ಲೈಡರ್ಗಳಿಂದ ತಿಳಿದುಕೊಳ್ಳಿ...

ಪರಶುರಾಮರ ಜನ್ಮಸ್ಥಳ
ಪರಶುರಾಮರ ಜನ್ಮಸ್ಥಳ ರೇಣುಕಾ ತೀರ್ಥವೆಂದು ಹೇಳಲಾಗುತ್ತಿದೆ. ಆಧುನಿಕ ಮಹೇಶ್ವರದಲ್ಲಿ ಅವರ ವಂಶಾವಳಿ ನಡೆಯಿತು ಎಂಬುದಾಗಿ ಪ್ರಸ್ತಾಪಿಸಲಾಗಿದೆ. ಅವರ ತಂದೆ ಋಷಿ ಜಮದಗ್ನಿ ಬ್ರಹ್ಮ ದೇವರ ನೇರ ತಲೆಮಾರಿನವರಾಗಿದ್ದರು ಎಂಬುದಾಗಿ ಮೂಲಗಳು ತಿಳಿಸಿವೆ.

ಹುಟ್ಟಿದಾಗ ಇಟ್ಟ ಹೆಸರು ರಾಮಭದ್ರ
ಇವರ ಜನನಕ್ಕೂ ಮುನ್ನ, ಇವರ ಜನ್ಮದಾತರು ಶಿವನ ಅನುಗ್ರಹವನ್ನು ಪಡೆಯಲು ಧ್ಯಾನ ಮಾಡಿದ್ದರು. ಇದರಿಂದಾಗಿ ವಿಷ್ಣುವಿನ ಆರನೇ ಅವತಾರ ದಂಪತಿಗಳಿಗೆ ಐದನೇ ಪುತ್ರನಾಗಿ ಜನಿಸಿದ್ದನು. ಆದ್ದರಿಂದ ಜನ್ಮ ಸಮಯದಲ್ಲಿ ಪರಶುರಾಮನಿಗೆ ರಾಮ ಭದ್ರ ಎಂಬ ಹೆಸರನ್ನಿಟ್ಟಿದ್ದರು.

ಪವಿತ್ರ ಆಯುಧ
ಸಣ್ಣ ವಯಸ್ಸಿನಲ್ಲಿಯೇ ಪರಶುರಾಮನಿಗೆ ಶಸ್ತ್ರಾಸ್ತ್ರಗಳ ಮೇಲೆ ಆಸಕ್ತಿ ಇತ್ತು. ಶಿವನನ್ನು ಒಲಿಸಿ ಪವಿತ್ರ ಆಯುಧವನ್ನು ಪಡೆಯಲು ಪರಶುರಾಮ ಕಠಿಣ ತಪಸ್ಸನ್ನಾಚರಿಸುತ್ತಾರೆ ಕೊನೆಗೆ ಶಿವನು ಪರಶುರಾಮನ ಭಕ್ತಿಗೆ ಮೆಚ್ಚಿ ಪವಿತ್ರ ಆಯುಧವಾದ ಕೊಡಲಿಯನ್ನು ಅನುಗ್ರಹಿಸುತ್ತಾನೆ. ಆಯುಧಕ್ಕೆ ತನ್ನನ್ನು ಯೋಗ್ಯನನ್ನಾಗಿಸಿದ ನಂತರವೇ ಶಿವನು ತಾನಾಗಿಯೇ ಪರಶುರಾಮನಿಗೆ ಆಧ್ಯಾತ್ಮಿಕ ಗುರುವಾದರು.ಪವಿತ್ರ ಆಯುಧವನ್ನು ಸ್ವೀಕರಿಸಿದ ನಂತರ ಇವರಿಗೆ ಪರಶುರಾಮ ಎಂಬ ಹೆಸರು ಬಂದಿತು.

ಗುರು ಮತ್ತು ಶಿಷ್ಯರ ನಡುವಿನ ಯುದ್ಧ
ಪರಶುರಾಮನ ಯುದ್ಧ ಕೌಶಲ್ಯ ಮತ್ತು ಸಾಮರ್ಥ್ಯವನ್ನು ಅರಿಯುವುದಕ್ಕಾಗಿ ಶಿವನು ಅವರಿಗೆ ಸವಾಲನ್ನು ಒಡ್ಡುತ್ತಾರೆ. ಗುರು ಮತ್ತು ಶಿಷ್ಯರ ನಡುವಿನ ಈ ಯುದ್ಧ 21 ದಿನಗಳವರೆಗೆ ನಡೆಯಿತು. ಎಂಬುದು ಮೂಲಗಳಿಂದ ತಿಳಿದು ಬಂದಿದೆ.

ಪರಶುರಾಮ ಯುದ್ಧ ಕೌಶಲ್ಯದಿಂದ ಪ್ರಭಾವಿತನಾದ ಶಿವ
ಯುದ್ಧದ ಸಂದರ್ಭದಲ್ಲಿ, ತನ್ನೊಂದಿಗೆ ಯುದ್ಧ ಮಾಡುತ್ತಿರುವುದು ಸಾಕ್ಷಾತ್ ಶಿವ ಎಂಬುದನ್ನರಿಯದೇ ಪರಾಕ್ರಮದ ಆವೇಶದಲ್ಲಿ ತನ್ನ ಕೊಡಲಿಯಿಂದ ಅವರ ಹಣೆಗೆ ಬಡಿಯುತ್ತಾರೆ. ತನ್ನ ಶಿಷ್ಯನ ಯುದ್ಧದ ಕಲೆಯಿಂದ ಸಂಪ್ರೀತನಾದ ಶಿವನು ತನ್ನ ಹಣೆಗೆ ಉಂಟಾದ ಗಾಯವನ್ನು ಒಂದೇ ಕೈಯಿಂದ ಒತ್ತಿಕೊಂಡು ಪರಶುರಾಮನ ಯುದ್ಧದ ಕಲೆಯ ಕುರುಹನ್ನಾಗಿ ಅದನ್ನಿರಿಸಿಕೊಂಡರು. ಆದ್ದರಿಂದ ಪರಶುರಾಮನಿಗೆ 'ಕಾಂದ್ - ಪರಶು' ಎಂಬ ಹೆಸರು ಕೂಡ ಇದೆ.

ಪರಶುರಾಮ ಒಬ್ಬ ವಿಧೇಯ ಪುತ್ರ ಹೇಗೆ
ಪರಶುರಾಮನ ತಾಯಿ ರೇಣುಕಾ ಮಹಾನ್ ಪತಿವ್ರತೆ ಎಂದೆನಿಸಿದ್ದರು. ಆಕೆಯ ಶಕ್ತಿ ಎಷ್ಟಿತ್ತೆಂದರೆ ಸುಡದೇ ಇರುವ ಹಸಿ ಜೇಡಿಮಣ್ಣಿನ ಮಡಿಕೆಯಿಂದ ಆಕೆ ನೀರನ್ನು ತುಂಬಿಸಿಕೊಳ್ಳುವ ಶಕ್ತಿಯನ್ನು ಪಡೆದುಕೊಂಡಿದ್ದಳು. ಇತ್ತು. ಆದರೆ ದುರಾದೃಷ್ಟವಶಾತ್, ಮಡಿಕೆಗೆ ನೀರನ್ನು ತುಂಬಿಸಿಕೊಳ್ಳುತ್ತಿರುವಾಗ, ಆಕಾಶದಲ್ಲಿ ಹಾದು ಹೋಗುತ್ತಿರುವ ಗಂಧರ್ವನ ರಥ ನೋಡಿದಾಗ ಆ ಕ್ಷಣ ಆಕೆಯ ಮನದಲ್ಲಿ ಬಯಕೆ ತುಂಬಿಕೊಂಡಿತು.ಪರಿಣಾಮವಾಗಿ ಮಡಿಕೆಯು ನೀರಿನಲ್ಲಿ ಕರಗಿ ಹೋಯಿತು. ಆಕೆಯ ಪತಿಯಾದ ಜಮದಗ್ನಿಯು ತಮ್ಮ ಮಂತ್ರ ಶಕ್ತಿಯಿಂದ ಈ ವಿಷಯವನ್ನರಿತುಕೊಂಡು ತಮ್ಮ ಮಕ್ಕಳಲ್ಲಿ ಆಕೆಯನ್ನು ವಧಿಸಲು ಹೇಳುತ್ತಾರೆ. ಆದರೆ ಈ ಕೆಲಸವನ್ನು ಪರಶುರಾಮ ಮಾತ್ರವೇ ಮಾಡುತ್ತಾರೆ. ತರುವಾಯ ತನ್ನ ತಾಯಿ ಮತ್ತು ನಾಲ್ಕು ಜನ ಸಹೋದರರನ್ನು ತಂದೆಯಿಂದ ವರವಾಗಿ ಇವರು ಪಡೆದುಕೊಳ್ಳುತ್ತಾರೆ. ಮಗನ ವಿಧೇಯತೆಯನ್ನು ನೋಡಿ ಸಂಪ್ರೀತನಾದ ತಂದೆ ಜಮದಗ್ನಿಯು ಎರಡು ವರಗಳನ್ನು ಕೇಳುವಂತೆ ಹೇಳಿದಾಗ ಪರಶುರಾಮ ತಮ್ಮ ತಾಯಿ ಮತ್ತು ಸಹೋದರರನ್ನು ಜೀವಂತವಾಗಿಸಲು ಕೇಳಿಕೊಳ್ಳುತ್ತಾನೆ.



Click it and Unblock the Notifications











