Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಕೃಷ್ಣ ಜನ್ಮಾಷ್ಟಮಿ 2021: ದುಷ್ಟ ಶಿಶುಪಾಲನ 100 ತಪ್ಪುಗಳು ದಾಟಿದ ಬಳಿಕ-ಭಗವಾನ್ ಕೃಷ್ಣ ಏನು ಮಾಡಿದ ಗೊತ್ತೇ?

ವ್ಯಕ್ತಿ ತಪ್ಪು ಮಾಡುವುದು ಸಹಜ. ತಪ್ಪು ಮಾಡದೆಯೇ ಬುದ್ಧಿ ಬರಲು ಸಾಧ್ಯವಿಲ್ಲ ಎಂದು ಕೆಲವು ತತ್ವಜ್ಞಾನಗಳು ಹೇಳುತ್ತವೆ. ಹಾಗಂತ ಜೀವನ ಪರ್ಯಂತ ತಪ್ಪುಗಳನ್ನು ಮಾಡುತ್ತಲೇ ಇರಬಾರದು. ನಾವು ಕೈಗೊಳ್ಳುವ ತಪ್ಪಿನಿಂದ ಮುಂದೊಂದು ಅನಾಹುತವೇ ಸಂಭವಿಸುತ್ತದೆ ಎಂದು ಪೂರ್ವದಲ್ಲಿಯೇ ತಿಳಿದರೆ ಯಾರೂ ತಪ್ಪನ್ನು ಮಾಡುವುದೇ ಇಲ್ಲ. ಮಾಡುತ್ತಿದ್ದ ಕೆಲಸ ತಪ್ಪು ಎನ್ನುವ ಅರಿವು ನಮಗಿದ್ದು, ಅದೇ ತಪ್ಪನ್ನು ಪುನಃ ಪುನಃ ಮಾಡಿದರೆ ಆಗ ಅಪರಾಧ ಎನಿಸಿಕೊಳ್ಳುತ್ತದೆ. ತಿಳಿಯದೆ ಉಂಟಾದ ತಪ್ಪಿಗೆ ಸದಾ ಕ್ಷಮೆಯಿದೆ ಎನ್ನುತ್ತದೆ ಧರ್ಮ.
2021ನೇ ಸಾಲಿನಲ್ಲಿ ಆಗಸ್ಟ್ 30ರಂದು ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತಿದೆ, ಈ ದಿನದ ವಿಶೇಷ ಕೃಷ್ಣನ ಕುರಿತು ಇನ್ನಷ್ಟು ಮಾಹಿತಿಯನ್ನು ತಿಳಿಯೋಣ.

ಪುರಾಣ ಇತಿಹಾಸದ ಕಥೆಯಲ್ಲಿ ಕೆಲವು ದುಷ್ಟರು ತಪ್ಪು ಎನ್ನುವುದು ತಿಳಿದುಕೊಂಡ ನಂತರವೂ ಪದೇ ಪದೇ ತಪ್ಪುಗಳನ್ನು ಮಾಡುತ್ತಲೇ ಬಂದರು. ಅದರ ಪರಿಣಾಮವಾಗಿ ಜೀವನದಲ್ಲಿ ಬಹುದೊಡ್ಡ ಶಿಕ್ಷೆಗಳನ್ನು ಅನುಭವಿಸಿದರು ಎನ್ನಲಾಗುವುದು. ಅಂತಹ ದುಷ್ಟರ ಸಾಲಿನಲ್ಲಿ ಮೊದಲಿಗೆ ಹಿರಣ್ಯ ಕಶಿಪು, ಹಿರಣ್ಯಾಕ್ಷ, ರಾವಣ, ಕುಂಭಕರ್ಣ, ಕಂಸ ಮತ್ತು ಶಿಶುಪಾಲ್ ಎಂದು ಹೇಳಲಾಗುವುದು.
ಇವರಲ್ಲಿ ಶಿಶುಪಾಲ್‍ನ ಕಥೆಯನ್ನು ಅಷ್ಟಾಗಿ ಯಾರು ತಿಳಿದಿಲ್ಲದೆ ಇರಬಹುದು. ದುಷ್ಟನಾದ ಇವನ 100 ತಪ್ಪುಗಳನ್ನು ಭಗವಾನ್ ಶ್ರೀಕೃಷ್ಣನು ಕ್ಷಮಿಸಿದನು. ಇದಕ್ಕೆ ಕಾರಣ ಏನು ಎನ್ನುವುದರ ವಿವರಣೆಯನ್ನು ಜನ್ಮಾಷ್ಟಮಿಯ ಪ್ರಯುಕ್ತ ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡಲಿದೆ.

ಶಿಶುಪಾಲನ ಜನನ
ಕೃಷ್ಣನ ಚಿಕ್ಕಮ್ಮನಿಗೆ ಮಗು ಹುಟ್ಟಿದ ಕಥೆಯ ಸಮಯಕ್ಕೆ ಹಿಂತಿರುಗೋಣ. ಆಕೆಗೆ ಜನಿಸಿದ ಗಂಡುಮಗುವು ನಾಲ್ಕು ಕೈ, ಮೂರು ಕಣ್ಣುಗಳನ್ನು ಹೊಂದಿತ್ತು. ಈ ಮಗುವಿನ ಜೀವನದ ಅಂತ್ಯ ಯಾರ ಕೈಯಿಂದ ಆಗುವುದೋ ಆ ವ್ಯಕ್ತಿಯ ಕೈಗೆ ಮಗುವನ್ನು ಕೊಟ್ಟರೆ ಮಗುವು ಸಹಜವಾದ ಮಾನವನ ಸ್ಥಿತಿಗೆ ಬರುವನು ಎಂದು ಸನ್ಯಾಸಿಗಳು ಹೇಳಿದರು.
ಹಾಗಾಗಿ ಆ ಹುಡುಗನ ಪಾಲಕರು ಮಗನನ್ನು ಎಲ್ಲರ ಕೈಗೂ ಕೊಟ್ಟು ನೋಡಿದರು. ಆದರೆ ಅವನ ದೇಹವು ಸಾಮಾನ್ಯ ಸ್ಥಿತಿಗೆ ಮರಳಲಿಲ್ಲ. ಒಮ್ಮೆ ಕೃಷ್ಣನು ತನ್ನ ಸೋದರಸಂಬಂಧಿ ಸಹೋದರನನ್ನು ಎತ್ತಿಕೊಂಡನು. ಆಗ ಹುಡುಗನು ಸಹಜ ಸ್ಥಿತಿಗೆ ಬಂದನು. ಇದನ್ನು ಕಂಡು ಅವನ ಹೆತ್ತವರು ಸಂತೋಷ ಪಟ್ಟರು. ಆದರೆ ತಮ್ಮ ಮಗನ ಅಂತ್ಯವೂ ಕೃಷ್ಣನ ಕೈಯಲ್ಲಿಯೇ ಆಗುವುದು ಎಂಬ ಸೂಚನೆಯನ್ನು ಪಡೆದುಕೊಂಡರು.

ಕೃಷ್ಣನು ಕೊಲ್ಲುವುದಿಲ್ಲ ಎಂದು ಮಾತು ಕೊಟ್ಟಿದ್ದನು
ಹುಡುಗನ ತಾಯಿಯು ತನ್ನ ಮಗ ನೂರು ತಪ್ಪು ಮಾಡುವವ ವರೆಗೂ ಅವನನ್ನು ಕೊಲ್ಲಬಾರದು ಎಂದು ಮಾತು ಪಡೆದುಕೊಂಡಿದ್ದಳು. ಆಗ ಕೃಷ್ಣನು ಶಿಶುಪಾಲನ ನೂರು ತಪ್ಪುಗಳನ್ನು ಮಾತ್ರ ಕ್ಷಮಿಸಲಾಗುವುದು ಎಂದು ಹೇಳಿದನು. ತನ್ನ ಮಗನು ಅಷ್ಟೊಂದು ತಪ್ಪುಗಳನ್ನು ಮಾಡುವುದಿಲ್ಲ ಎಂದು ತಾಯಿ ನಂಬಿದ್ದಳು. ಹಾಗಾಗಿ ಅದಕ್ಕೆ ಒಪ್ಪಿಕೊಂಡಳು. ಅವಳಿಗೆ ತನ್ನ ಮಗ ಹಿಂದಿನ ಜನ್ಮದಲ್ಲಿ ವಿಷ್ಣುವಿನ ಸೇವಕನಾಗಿದ್ದ ಎನ್ನುವುದು ತಿಳಿದಿರಲಿಲ್ಲ. ಮಗನ ನೂರು ತಪ್ಪುಗಳ ತನಕವೂ ಕ್ಷಮೆಯಿದೆ ಎಂದು ತೃಪ್ತಿಪಟ್ಟಳು.

ಶಿಶುಪಾಲ್ ರುಕ್ಮಿಣಿಯನ್ನು ವಿವಾಹ ಆಗಲು ಬಯಸಿದನು
ಶಿಶುಪಾಲ್ ಬೆಳೆದು, ವಿವಾಹದ ವಯಸ್ಸಿಗೆ ಬಂದಾಗ ರುಕ್ಮಿಣಿಯನ್ನು ವಿವಾಹವಾಗಲು ಬಯಸಿದನು. ಅದರಂತೆಯೇ ಮದುವೆಯ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಆದರೆ ರುಕ್ಮಿಣಿ ಮತ್ತು ಕೃಷ್ಣನು ಮುಂಚೆಯೇ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಹಾಗಾಗಿ ಕೃಷ್ಣ ಪರಮಾತ್ಮ ರುಕ್ಮಿಣಿ ಮತ್ತು ಶಿಶುಪಾಲನ ವಿವಾಹದ ದಿನ ರುಕ್ಮಿಣಿಯನ್ನು ಕರೆದುಕೊಂಡು ಓಡಿ ಹೋದನು. ಅಂದಿನಿಂದ ಕೃಷ್ಣ ಮತ್ತು ಶಿಶುಪಾಲನು ಬದ್ಧ ವೈರಿಗಳಾದರು.

ಶಿಶುಪಾಲನ ವಧೆ/ಮರಣ
ಯುಧಿಷ್ಠಿರನು ಒಮ್ಮೆ ಯಜ್ಞ ಒಂದನ್ನು ಆಯೋಜಿಸಿದ್ದನು. ಈ ಒಂದು ಪವಿತ್ರ ಕಾರ್ಯಕ್ಕೆ ಗೌರವಾನ್ವಿತ ಋಷಿ ಮಹರ್ಷಿಗಳು ಆಗಮಿಸಿದ್ದರು. ಈ ಯಜ್ಞಕ್ಕೆ ಯಾರು ಪ್ರಾರ್ಥನೆಯನ್ನು ಹೇಳಬೇಕು ಎನ್ನುವ ಚರ್ಚೆ ನಡೆಯಿತು. ಆಗ ಶಿಶುಪಾಲನನ್ನು ಬಿಟ್ಟು ಉಳಿದವರೆಲ್ಲಾ ಕೃಷ್ಣ ಹೇಳಬೇಕು ಎಂದು ಹೇಳಿದರು. ಇನ್ನೊಂದೆಡೆ ಇದನ್ನು ಕೇಳಿದ ಶಿಶುಪಾಲನು ಕೋಪಗೊಂಡಿದ್ದನು.

ಶಿಶುಪಾಲನು ಕೂಗಾಡಲು ಪ್ರಾರಂಭಿಸಿದನು
ಯಾರು ಕೃಷ್ಣನ ಹೆಸರನ್ನು ಹೇಳಿರುವರೋ ಅವರೆಲ್ಲಾ ಹೆಸರನ್ನು ಹಿಂದಕ್ಕೆ ತೆಗೆದುಕೊಳ್ಳಿ, ಇಲ್ಲವಾದರೆ ಪರಿಸ್ಥಿತಿ ಬಿಗಡಾಯಿಸುವುದು ಎಂದು ಶಿಶುಪಾಲನು ಕೂಗಾಡಲು ಪ್ರಾರಂಭಿಸಿದನು. ಅಲ್ಲಿ ಪಾಂಡವರನ್ನು ಒಳಗೊಂಡಂತೆ ಎಲ್ಲರೂ ಶಿಶುಪಾಲನನ್ನು ವಧಿಸಲು ಮುಂದಾದರು. ಆದರೆ ಕೃಷ್ಣನು ಅದನ್ನು ತಡೆದು, ಯಜ್ಞವನ್ನು ಮುಂದುವರಿಸಬೇಕು ಎಂದು ಕೇಳಿಕೊಂಡನು.
ಶಿಶುಪಾಲನು ಮಿತಿಮೀರಿ ವರ್ತಿಸುವುದು ಹಾಗೂ ತಪ್ಪುಗಳ ಮೇಲೆ ತಪ್ಪನ್ನು ಮಾಡುತ್ತಲೇ ಸಾಗಿದ್ದನು. ಇದರಿಂದ ಅವನ 100 ಬಾರಿಯ ತಪ್ಪುಗಳು ಸಂಭವಿಸಿತ್ತು. ಆಗ ಕೃಷ್ಣನು ಶಿಶುಪಾಲನಿಗೆ ಈಗಾಗಲೇ ನಿನ್ನ 100 ತಪ್ಪುಗಳು ಆಗಿವೆ. 101ನೇಯ ತಪ್ಪು ನಡೆದರೆ ವಧೆ ಆಗುವುದು ಎಂದು ಎಚ್ಚರಿಸಿದ್ದನು. ಆದರೆ ಕೃಷ್ಣನ ಮಾತಿಗೆ ಕಿವಿಕೊಡದೆ ಎಂದಿನಂತೆಯೇ ತನ್ನ ತಪ್ಪು ಕೆಲಸಗಳನ್ನು ಮುಂದುವರಿಸಿದನು. ಅವನ ತಪ್ಪು 101 ಆದಾಗ ಶ್ರೀಕೃಷ್ಣನು ತನ್ನ ಸುದರ್ಶನ ಚಕ್ರವನ್ನು ಬಿಟ್ಟು ಅವನ ಕುತ್ತಿಗೆಯನ್ನು ಕತ್ತರಿಸಿದನು. ಕ್ಷಣದಲ್ಲಿಯೇ ಶಿಶುಪಾಲನು ನೆಲಕ್ಕೆ ಉರುಳಿ ಜೀವ ಬಿಟ್ಟನು.



Click it and Unblock the Notifications











