Latest Updates
-
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ
ಕಾರ್ತಿಕ ಅಮಾವಾಸ್ಯೆಯಂದು ಹೀಗೆ ಮಾಡಿದರೆ ಸಕಲ ಗ್ರಹದೋಷ ನಿವಾರಣೆ
ಹಿಂದೂ ಧರ್ಮದಲ್ಲಿ ಕಾರ್ತಿಕ ಅಮಾವಾಸ್ಯೆಗೆ ತುಂಬಾನೇ ಮಹತ್ವವಿದೆ. ಏಕೆಂದರೆ ಕಾರ್ತಿಕ ಅಮಾವಾಸ್ಯೆಯಂದು ಹಿಂದೂಗಳ ದೊಡ್ಡ ಹಬ್ಬಗಳಲ್ಲಿ ಒಂದಾದ ದೀಪಾವಳಿಯನ್ನು ಆಚರಿಸಲಾಗುವುದು.
ಮಹಾಭಾರತದ ಶಾಂತಿ ಪರ್ವದಲ್ಲಿ, ಕಾರ್ತಿಕ ಅಮಾವಾಸ್ಯೆಯ ದಿನದ ಮಹತ್ವವನ್ನು ವಿವರಿಸುವಾಗ, ಶ್ರೀ ಕೃಷ್ಣ ಇದು ನನ್ನ ನೆಚ್ಚಿನ ದಿನ, ಈ ದಿನ ನನ್ನ ಪೂಜೆ ಮಾಡಿದ ಮನುಷ್ಯರ ಎಲ್ಲಾ ಗ್ರಹದೋಷಗಳು ನಿವಾರಣೆಯಾಗುತ್ತದೆ ಎಂದು ಹೇಳಿರುವುದಾಗಿ ಪುರಾಣದಲ್ಲಿ ಹೇಳಲಾಗಿದೆ.

ಕಾರ್ತಿಕ ಅಮಾವಾಸ್ಯೆಯ ಮಹತ್ವ
* ಸ್ಕಂದ ಪುರಾಣದ ಪ್ರಕಾರ, ಕಾರ್ತಿಕ ಮಾಸದ ಅಮಾವಾಸ್ಯೆಯಂದು ಪುಣ್ಯ ಸ್ನಾನ ಮತ್ತು ದಾನ ಮಾಡುವುದರಿಂದ ವ್ಯಕ್ತಿಯ ಎಲ್ಲಾ ಪಾಪಗಳು ನಾಶವಾಗುತ್ತವೆ. ಅಮಾವಾಸ್ಯೆಯ ರಾತ್ರಿ ಎಣ್ಣೆಯ ದೀಪವನ್ನು ಹಚ್ಚುವುದರಿಂದ ಲಕ್ಷ್ಮಿ ದೇವಿಯು ಮನೆಯಲ್ಲಿ ನೆಲೆಸುತ್ತಾಳೆ ಎಂದು ನಂಬಲಾಗಿದೆ.
* ಈ ದಿನ, ವಿಷ್ಣುವಿಗೆ ತುಳಸಿಯನ್ನು ಅರ್ಪಿಸಿ ಮತ್ತು ಗೀತೆಯನ್ನು ಪಠಿಸಬೇಕು. ಕಾರ್ತಿಕ ಅಮಾವಾಸ್ಯೆಯಂದು ತುಳಸಿಯನ್ನು ಪೂಜಿಸುವುದರಿಂದ ಭಗವಾನ್ ವಿಷ್ಣುವು ತುಂಬಾ ಪ್ರಸನ್ನನಾಗುತ್ತಾನೆ. ಇದರಿಂದ ಮೋಕ್ಷ ಸಿಗುವುದು. ಇದರೊಂದಿಗೆ, ಪೂರ್ವಜರಿಗೆ ತರ್ಪಣ ಮತ್ತು ಶ್ರಾದ್ಧ ಮಾಡಲು ಅಮವಾಸ್ಯೆಯ ದಿನಾಂಕವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ.
ಕಾರ್ತಿಕ ಅಮಾವಾಸ್ಯೆಯಂದು ದೀಪ, ಅನ್ನ ಮತ್ತು ಬಟ್ಟೆ (ಉಣ್ಣೆಯ ಬಟ್ಟೆ) ದಾನ ಮಾಡುವುದರಿಂದ ರೋಗಗಳು ಮತ್ತು ದೋಷಗಳಿಂದ ಮುಕ್ತಿ ದೊರೆಯುತ್ತದೆ ಎಂದು ಭವಿಷ್ಯ ಪುರಾಣದಲ್ಲಿ ಹೇಳಲಾಗಿದೆ. ಕಾರ್ತಿಕ ಅಮಾವಾಸ್ಯೆಯ ದಿನ ಇರುವೆಗಳಿಗೆ ಸಿಹಿ ಹಿಟ್ಟನ್ನು ತಿನ್ನಿಸುವುದರಿಂದ ಎಲ್ಲಾ ಪಾಪಗಳು ದೂರವಾಗುತ್ತವೆ ಮತ್ತು ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಕೆ ಇದೆ.

ಕಾರ್ತಿಕ ಅಮಾವಾಸ್ಯೆ 2022 ತಿಥಿ
ಹಿಂದೂ ಧರ್ಮದಲ್ಲಿ, ಪ್ರತಿ ತಿಂಗಳ ಅಮಾವಾಸ್ಯೆಯಂದು ಪೂರ್ವಜರ ಶಾಂತಿಗಾಗಿ ಸ್ನಾನ, ದಾನ, ತರ್ಪಣವನ್ನು ಅರ್ಪಿಸುವುದು ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ವರ್ಷದಲ್ಲಿ ಕಾರ್ತಿಕ ಮಾಸದಲ್ಲಿ ಬರುವ ಅಮವಾಸ್ಯೆಗೆ ಹೆಚ್ಚಿನ ಮಹತ್ವವಿದೆ.ಇದನ್ನು ಬಡಿ ಅಮವಾಸ್ಯೆ ಮತ್ತು ದೀಪಾವಳಿ ಅಮವಾಸ್ಯೆ ಎಂದೂ ಕರೆಯುತ್ತಾರೆ. ದೀಪಾವಳಿ ಹಬ್ಬವನ್ನು ಕಾರ್ತಿಕ ಅಮಾವಾಸ್ಯೆಯಂದು ಆಚರಿಸಲಾಗುತ್ತದೆ. ಈ ವರ್ಷ ಕಾರ್ತಿಕ ಅಮವಾಸ್ಯೆ 25 ಅಕ್ಟೋಬರ್ 2022 ರಂದು ಆಚರಿಸಲಾಗುವುದು. ಬ್ರಹ್ಮ ಪುರಾಣದ ಪ್ರಕಾರ ಲಕ್ಷ್ಮಿ ದೇವಿಯು ಕಾರ್ತಿಕ ಅಮಾವಾಸ್ಯೆಯಂದು ಭೂಮಿಗೆ ಬರುತ್ತಾಳೆ ಎಂದು ನಂಬಲಾಗಿದೆ.
ಹಿಂದೂ ಕ್ಯಾಲೆಂಡರ್ ಪ್ರಕಾರ, ಕಾರ್ತಿಕ ಮಾಸದ ಅಮಾವಾಸ್ಯೆಯ ದಿನಾಂಕವು 24 ಅಕ್ಟೋಬರ್ 2022 ರಂದು ಸಂಜೆ 05:27 ರಿಂದ ಪ್ರಾರಂಭವಾಗುತ್ತದೆ, ಅದು ಮರುದಿನ 25 ಅಕ್ಟೋಬರ್ 2022 ರಂದು ಸಂಜೆ 04:18 ಕ್ಕೆ ಕೊನೆಗೊಳ್ಳುತ್ತದೆ. ಉದಯತಿಥಿ ಪ್ರಕಾರ ಕಾರ್ತಿಕ ಅಮಾವಾಸ್ಯೆ 25 ಅಕ್ಟೋಬರ್ 2022 ರಂದು ಇದೆ.
ಅಮವಾಸ್ಯೆಯ ತಿಥಿಯ ಅಧಿಪತಿಯನ್ನು ಪಿತೃ ದೇವ ಎಂದು ಪರಿಗಣಿಸಲಾಗುತ್ತದೆ.

ಗ್ರಹ ಸಂಬಂಧಿ ದೋಷಗಳಿಗೆ ಮತ್ತು ನವಗ್ರಹಗಳ ಶಾಂತಿಗಾಗಿ ಬೆಳಿಗ್ಗೆ ನವಗ್ರಹ ಸ್ತೋತ್ರವನ್ನು ಪಠಿಸಿ
* ಈ ದಿನ ಬೆಳಗ್ಗೆ ಬೇಗನೆ ಎದ್ದು, ನದಿ, ಜಲಾಶಯ ಅಥವಾ ನೀರಿನ ಬಕೆಟ್‌ಗೆ ಸ್ವಲ್ಪ ಗಂಗಾ ಜಲ ಸೇರಿಸಿ ಸ್ನಾನ, ನಂತರ ಸೂರ್ಯ ದೇವರಿಗೆ ಅರ್ಘ್ಯವನ್ನು ಅರ್ಪಿಸಿ ಹರಿಯುವ ನೀರಿನಲ್ಲಿ ಎಳ್ಳನ್ನು ಸುರಿಯಬೇಕು. ಇದರಿಂದ ಶುಭ ಉಂಟಾಗುವುದು.
* ಈ ದಿನ ವಿಷ್ಣು ಸಹಸ್ರನಾಮದ ಪಠಣಕ್ಕೆ ವಿಶೇಷವಾದ ಮಹಿಮೆಯಿದೆ. ಅದರ ಪ್ರಭಾವದಿಂದ ಜಾತಕದಲ್ಲಿ ಎಷ್ಟೇ ಅಶುಭ ಯೋಗವಿದ್ದರೂ ದೂರವಾಗುತ್ತದೆ.
* ಕಾರ್ತಿಕ ಅಮಾವಾಸ್ಯೆಯಂದು ದೇವಸ್ಥಾನ ಅಥವಾ ಬಡವರ ಮನೆಗೆ ಹೋಗಿ ದೀಪ ಹಚ್ಚುವುದರಿಂದ ಶನಿ ದೋಷನಿವಾರಣೆಯಾಗುತ್ತದೆ.
* ಕಾರ್ತಿಕ ಅಮಾವಾಸ್ಯೆಯ ದಿನ ಶಿವಲಿಂಗಕ್ಕೆ ಜೇನುತುಪ್ಪದ ಅಭಿಷೇಕ ಮಾಡುವುದು ಒಳ್ಳೆಯದು.

ಕಾರ್ತಿಕ ಅಮಾವಾಸ್ಯೆಯಂದು ದೀಪ ಹಚ್ಚುವುದರ ಮಹತ್ವ
ಕಾರ್ತಿಕ ಅಮವಾಸ್ಯೆಯಂದು ದೀಪಾವಳಿಯಲ್ಲಿ ರಾತ್ರಿ ಹಣತೆಯನ್ನು ಹಚ್ಚುವ ಹಚ್ಚುವ ಸಂಪ್ರದಾಯವಿದೆ. ಈ ದಿನದಂದು ಭಗವಾನ್ ಶ್ರೀರಾಮನು 14 ವರ್ಷದ ವನವಾಸದ ಮುಗಿಸಿದ ಅಯೋಧ್ಯೆಗೆ ಮರಳಿದ ದಿನವೆಂದು ರಾಮಾಯಣದಲ್ಲಿ ಹೇಳಲಾಗಿದೆ.



Click it and Unblock the Notifications











