Latest Updates
-
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ
ಸಿದ್ದೇಶ್ವರ ಸ್ವಾಮೀಜಿ: ನಡೆದಾಡುವ ದೇವರು ಹೇಳಿರುವ ಈ ನುಡಿಗಳು ನಮ್ಮ ಬದುಕಿನ ದಿಕ್ಕನ್ನೇ ಬದಲಾಯಿಸುತ್ತೆ
ನಡೆದಾಡುವ ದೇವರು ಎಂದು ಕರೆಸಿಕೊಂಡಿದ್ದ ಸಿದ್ಧೇಶ್ವರ ಸ್ವಾಮೀಜಿ ಸರಳ, ಸಜ್ಜನಿಕೆಯ ಪೂಜನೀಯ ವ್ಯಕ್ತಿತ್ವ. ಇವರು ಯಾವತ್ತೂ ಯಾವುದೇ ವಸ್ತುಗಳಿಗೆ ಆಸೆಪಟ್ಟಿಲ್ಲ, ತಮ್ಮ ಬಳಿ ಏನೇ ವಸ್ತು ಇರಬಾರದು ಎಂಬ ಉದ್ದೇಶಕ್ಕೆ ಜೇಬು ಇಲ್ಲದ ಅಂಗಿ ಧರಿಸುತ್ತಿದ್ದರು. ತಮಗೆ ಬಂದಂಥ ಪದ್ಮಶ್ರೀ ಸೇರಿ ಹಲವಾರು ಪ್ರಶಸ್ತಿಗಳನ್ನು ನಯವಾಗಿ ಬೇಡ ಎಂದಂಥ ಮೇರು ವ್ಯಕ್ತಿತ್ವ. ತಮ್ಮ ಜೀವನವನ್ನು ಧರ್ಮಕ್ಕಾಗಿ ಮೀಸಲಾಗಿಟ್ಟ ಮಹಾನ್ ಯೋಗಿ.
ಇವರ ಪ್ರವಚನಗಳು ಮನುಷ್ಯರನ್ನು ಸನ್ಮಾರ್ಗದಲ್ಲಿ ನಡೆಸುವಂಥ ಶಕ್ತಿ ಹೊಂದಿದ್ದೆವು. ಇವರ ಪ್ರವಚನ ಕೇಳಲು ಸಾವಿರಾರು ಜನರು ಸೇರುತ್ತಿದ್ದರು. ಇವರ ಒಂದೊಂದು ಪ್ರವಚನಗಳು ಜನ ಸಾಮಾನ್ಯ ಬದುಕಿಗೆ ತುಂಬಾ ಹತ್ತಿರವಾಗುತ್ತಿತ್ತು, ತಾವು ಯಾವ ದಾರಿಯಲ್ಲಿ ನಡೆಯಬೇಕು ಎಂಬ ಬೆಳಕನ್ನು ತೋರಿಸುವಂತಿರುತ್ತಿತ್ತು, ಇವರ ಪ್ರವಚನಗಳು ಲಕ್ಷಾಂತರ ಜನರ ಮೇಲೆ ಪ್ರಭಾವ ಬೀರಿದೆ.
ಅದರಲ್ಲೂ ಶ್ರೀಗಳು ನುಡಿದ ಈ ಮಾತುಗಳು ಪ್ರತಿಯೊಬ್ಬರ ಬದುಕಿಗೂ ಅನ್ವಯಿಸುವಂತಿದೆ...

1. ಬದುಕಿನ ಬಗ್ಗೆ ಸ್ವಾಮೀಜಿ ಮಾತು
ಕುದಿಯುವವರು ಕುದಿಯಲಿ
ಉರಿಯುವವರು ಉರಿಯಲಿ
ನಿನ್ನ ಪಾಡಿಗೆ ನೀನು ಇರು
ಕುದಿಯುವವರು ಆವಿಯಾಗುತ್ತಾರೆ
ಉರಿಯುವವರು ಬೂದಿಯಾಗುತ್ತಾರೆ
-ಪರಮ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿ

2. ಬದುಕು ಹೇಗಿರಬೇಕು?-ಸಿದ್ದೇಶ್ವರ ಸ್ವಾಮೀಜಿಯ ನುಡಿಮುತ್ತುಗಳು
ಅಮೂಲ್ಯವಾದ ನಮ್ಮ ಬದುಕನ್ನು ನಾವು ಎಂದೂ ಉಪೇಕ್ಷಿಸಬಾರದು, ತಿರಸ್ಕರಿಸಬಾರದು. ಇನ್ನೊಮ್ಮೆ ಈ ಜಗತ್ತಿಗೆ ಬರುವುದೇ ಬೇಡ, ಬದುಕುವುದೇ ಬೇಡ ಎನ್ನುವಂತೆ ಬದುಕಬಾರದು
ಈ ಸತ್ಯಂ ಶಿವಂ ಸುಂದರಂ ಸೃಷ್ಟಿಯನ್ನು ಮತ್ತೆ ಮತ್ತೆ ನೋಡಲು ಬರುತ್ತೇನೆ, ಈ ಜಗತ್ತನ್ನು, ಈ ಜೀವನವನ್ನು ಇನ್ನಷ್ಟು ಸುಂದರಗೊಳಿಸುತ್ತೇನೆ ಎಂಬ ಉತ್ಸಾಹ ನಮ್ಮಲ್ಲಿರಬೇಕು
-ಪರಮ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿ

3. ಮನಸ್ಸು ಹಾಗೂ ಮಾತಿನ ಸಂಬಂಧ
ಮನಸ್ಸು ಮಲಿನವಾದರೆ ಮಾತು ಕಲ್ಮಶವಾಗಿ ಹೊರಡುತ್ತದೆ
ಹೃದಯ ಪರಿಮಳ, ಮಾತು ಮಕರಂದ
-ಪರಮ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿ

4. ಸಂಸ್ಕಾರದ ಮಹತ್ವ
ಅಕ್ಷರ ಕಲಿತ ವ್ಯಕ್ತಿ ಭ್ರಷ್ಟನಾದರೂ ಆಗಹುದು, ಆದರೆ ಸಂಸ್ಕಾರವನ್ನು ಕಲಿತ ವ್ಯಕ್ತಿ ಎಂದೆಂದಿಗೂ ಭ್ರಷ್ಟನಾಗಲಾಗಲಾರ
-ಪರಮ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿ

5. ಸಿದ್ಧೇಶ್ವರ ಸ್ವಾಮೀಜಿ ನುಡಿಮುತ್ತುಗಳು
ಸತ್ಯದ ಶೋಧಕನಾದ ಸಾಧಕನು ಮೊಟ್ಟಮೊದಲು ಮಾಡಬೇಕಾದ ಮಹತ್ತರ ಕಾರ್ಯವೆಂದರೆ ತನ್ನ ಹೃದಯದಲ್ಲಿ ಪ್ರೇಮ ಜ್ಯೋತಿಯನ್ನು ಹೊತ್ತಿಸುವುದು
-ಪರಮ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿ

6. 2014ರಲ್ಲಿ ಸ್ವಾಮೀಜಿ ತಮ್ಮ ಸಾವಿನ ಬಗ್ಗೆ ಬರೆದ ನುಡಿಗಳು
ಅಂತಿಮ ನೆನಹು
ಸತ್ಯವೂ ಇಲ್ಲ, ಅಸತ್ಯವೂ ಇಲ್ಲ
ನಾನೂ ಇಲ್ಲ, ನೀನೂ ಇಲ್ಲ
ಇಲ್ಲ ಇಲ್ಲ ಎಂಬುವುದು ತಾನಿಲ್ಲ
ಗುಹೇಶ್ವರನೆಂಬುದು ತಾ ಬಯಲು
ಅಂತ್ಯಃ ಪ್ರಣಾಮಾಂಜಲಿಃ!
ಸ್ವಾಮಿ ಸಿದ್ಧೇಶ್ವರ

7. ಸಂತೃಪ್ತಿ ಮುಖ್ಯ
ಅಡವಿಯಲ್ಲಿ ದನಗಳನ್ನು ಕಾಯುವ ದನಗಾಹಿ ಕೂಡ ನಿಸರ್ಗದ ಮಡಿಲಿನಲ್ಲಿ ಹಾಡುತ್ತಾ ಆಡುತ್ತಾ ಆನಂದವಾಗಿರುತ್ತಾನೆ. ದನಗಳು ಕೂಡ ಅಷ್ಟೇ ಆನಂದವಾಗಿರುತ್ತವೆ. ಇನ್ನು ಅರಮನೆಯಂಥ ಮನೆಯಲ್ಲಿದ್ದೂ ಸಿರಿವಂತರು ಆನಂದವಾಗಿರದಿದ್ದರೆ ಆ ದನಗಾಯಿ ಮತ್ತು ದನಗಳೇ ಸಿರಿವಂತರಿಗಿಂತ ಭಾಗ್ಯವಂತರೆಂದು ಹೇಳಬಹುದಲ್ಲವೇ? ಇದರರ್ಥ ನಮ್ಮಲ್ಲಿ ಸಂಪತ್ತು ಇರಬಾರದೆಂದಲ್ಲ, ಸಂಪತ್ತು ಸಾಕಷ್ಟಯ ಇರಲಿ, ಜೊತೆಗೆ ಸಂತೃಪ್ತಿ ಇರಲಿ
ಪರಮಪೂಜ್ಯ ಸಿದ್ಧೇಶ್ವರ ಸ್ವಾಮೀಜಿ

8. ನಿಮ್ಮ ಬದುಕು ರೂಪಿಸುವುದು ನಿಮ್ಮ ಕೈಯಲ್ಲಿದೆ
ಆ ಕಲ್ಲುಗಳಿಂದ ಗೋಡೆ ಕಟ್ಟುತ್ತೀರೋ ಅಥವಾ ಸೇತುವೆ ನಿರ್ಮಿಸುತ್ತೀರೊ ನಿಮಗೆ ಬಿಟ್ಟದ್ದು. ನೆನಪಿರಲಿ ನೀವೆ ನಿಮ್ಮ 'ಬದುಕಿನ ಶಿಲ್ಪಿಗಳು'
ಪರಮ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿ



Click it and Unblock the Notifications