Latest Updates
-
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು
ಈ 5 ಶ್ರೀ ಕೃಷ್ಣ ಮಂತ್ರ ಪಠಿಸಿದರೆ ಹಣ-ಸಂಪತ್ತು ವೃದ್ಧಿಯಾಗುವುದು
ಹಿಂದೂ ಧರ್ಮದ ನಂಬಿಕೆ ಪ್ರಕಾರ ಶ್ರೀವಿಷ್ಣುವಿನ ಎಂಟನೇ ಅವತಾರವೇ ಶ್ರೀಕೃಷ್ಣ. ಧರ್ಮ ರಕ್ಷಣೆಗಾಗಿ ಶ್ರೀ ಕೃಷ್ಣನ ಅವತಾರವೆತ್ತಿ ಕೃಷ್ಣ ಭೂಮಿಗೆ ಬಂದ ಎನ್ನಲಾಗುತ್ತದೆ. ಕೃಷ್ಣನ ಬದುಕಿನ ಕತೆ ಹಾಗೂ ಕೃಷ್ಣ ಹೇಳಿದ ಭಗವದ್ಗೀತೆ ಸಾರಗಳು ಧರ್ಮ ಎಂದಿಗೂ ಸೋಲಲ್ಲ ಎಂಬುವುದಕ್ಕೆ ಸ್ಪೂರ್ತಿದಾಯಕ.

ಕಷ್ಟದಲ್ಲಿದ್ದಾಗ ಕೃಷ್ಣನನ್ನು ನೆನೆದರೆ ಆತ ಬಂದು ರಕ್ಷಿಸಿದ ಅನೇಕ ಪೌರಾಣಿಕ ಕತೆಗಳಿವೆ. ಅಷ್ಟೇ ಅಲ್ಲ ಶ್ರೀಕೃಷ್ಣನ ನಂಬಿದ ಭಕ್ತರನ್ನು ಕೃಷ್ಣ ಪೊರೆಯುತ್ತಾನೆ ಎಂಬ ನಂಬಿಕೆ ಕೃಷ್ಣ ಭಕ್ತರದ್ದು. ಈ ನಂಬಿಕೆ ಅಚಲ ಕೂಡ. ಆದ್ದರಿಂದಲೇ ಕೃಷ್ಣ ಎಂಬ ಶಕ್ತಿಯನ್ನು ಜನರು ಇಂದಿಗೂ ಪೂಜಿಸುತ್ತಿದ್ದಾರೆ, ಆರಾಧಿಸುತ್ತಿದ್ದಾರೆ ಅವನ ಲೀಲೆಗಳನ್ನು ಕೊಂಡಾಡುತ್ತಿದ್ದಾರೆ.
ಶ್ರೀ ಕೃಷ್ಣನ ಮಂತ್ರಗಳು ತುಂಬಾ ಶಕ್ತಿಯುತವಾದದ್ದು. ಈ ಮಂತ್ರಗಳನ್ನು ಹೇಳುವುದರಿಂದ ಒಳಿತು ಉಂಟಾಗುವುದು, ಕಷ್ಟಗಳು ದೂರವಾಗುವುದು, ಆರ್ಥಿಕ ಸ್ಥಿತಿ ಉತ್ತಮವಾಗುವುದು. ಈ ಮಂತ್ರಗಳನ್ನು ಪ್ರತಿನಿತ್ಯ ಹೇಳುವುದರಿಂದ ಸಂಪತ್ತು ವೃದ್ಧಿಯಾಗುವುದು.

ಶ್ರೀ ಕೃಷ್ಣಾಯ ನಮಃ
ಇದು ಭಗವಾನ್ ಕೃಷ್ಣನ ಮೂಲಮಂತ್ರವಾಗಿದೆ. ಇದು ತುಂಬಾ ಸರಳವಾದ ಹಾಗೂ ಅಷ್ಟೇ ಫವರ್‌ಫುಲ್ ಮಂತ್ರವಾಗಿದೆ. ಈ ಮಂತ್ರವನ್ನು ದಿನಾ ಹೇಳುವುದರಿಂದ ಮನೆಯಲ್ಲಿ ಸಂಪತ್ತು ವೃದ್ಧಿಯಾಗುವುದು. ಅಲ್ಲದೆ ಮನೆಯಲ್ಲಿ ಸಂತೋಷ ಹಾಗೂ ಶಾಂತಿ ನೆಲೆಸಿರುತ್ತದೆ. ಈ ಮಂತ್ರವನ್ನು ಬೆಳಗ್ಗೆ 108 ಬಾರಿ ಪಠಿಸುವುದರಿಂದ ಒಳಿತು ಉಂಟಾಗುತ್ತದೆ.

ಗೋ ವಲ್ಲಭಾಯ ಸ್ವಾಹಾಃ
ಈ ಮಂತ್ರವನ್ನು ತುಂಬಾ ಜಾಗೂರೂಕತೆಯಿಂದ ಹೇಳಬೇಕು. ಇದನ್ನು ಹೇಳುವಾಗ ಉಚ್ಛಾರಣೆ ದೋಷ ಉಂಟಾದರೆ ಫಲ ಸಿಗುವುದಿಲ್ಲ. ಈ ಮಂತ್ರ ಹೇಳುವುದರಿಂದ ಕೂಡ ಸಂಪತ್ತು ವೃದ್ಧಿಯಾಗುವುದು. ಕಷ್ಟಗಳು ಕೆಲವೇ ದಿನಗಳಲ್ಲಿ ಮಾಯವಾಗಿ ಅದೃಷ್ಟದ ಬಾಗಿಲು ತೆರೆಯುವುದು. ಈ ಮಂತ್ರವನ್ನು 1.5 ಲಕ್ಷ ಬಾರಿ ಪಠಿಸಬೇಕು. ಈ ಮಂತ್ರವನ್ನು ಸರಿಯಾಗಿ ಹೇಳಲು ತುಂಬಾ ಎಚ್ಚರಿಕೆಯಿಂದ ಪಠಿಸಬೇಕು.

ಕ್ಲೀಂ ಗ್ಲೈಂ ಕ್ಲೀಂ ಶ್ಯಾಮಲಾಂಗಾಯ ನಮಃ
ಈ ಮಂತ್ರ ಕೂಡ ತುಂಬಾ ಪವರ್‌ಫುಲ್ ಮಂತ್ರವಾಗಿದೆ. ಈ ಮಂತ್ರ ಹೇಳುವುದರಿಂದ ಆರ್ಥಿಕ ಸ್ಥಿತಿ ಉತ್ತಮವಾಗುವುದು. ಇದು ಆರ್ಥಿಕ ಸ್ಥಿತಿ ಸುಸ್ಥಿತಿಯಲ್ಲಿಡುತ್ತದೆ ಅಲ್ಲದೆ ಪ್ರಗತಿಯನ್ನು ಕೂಡ ಹೊಂದುವಿರಿ.

ಓಂ ಶ್ರೀ ನಮಃ ಶ್ರೀಕೃಷ್ಣಾಯ ಪರಿಪೂರ್ಣಮಾಯ ಸ್ವಾಹಾಃ
ಈ ಮಂತ್ರವನ್ನು ಕೃಷ್ಣ ಸಪ್ತದಾಸ್ಕರ ಮಂತ್ರ ಎಂದು ಕರೆಯುತ್ತಾರೆ. ಈ ಮಂತ್ರವನ್ನು 108 ಬಾರಿ ಪಠಿಸುವುದರಿಂದ ಲಕ್ಷ್ಮಿ ಒಲಿಯುತ್ತಾಳೆ. ಈ ಮಂತ್ರವನ್ನು ಪೂರ್ಣ ಭಕ್ತಯಿಂದ 1.5 ಲಕ್ಷ ಬಾರಿ ಪಠಿಸಿದರೆ ಅದೃಷ್ಟ ಒಲಿಯುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ.

ಶ್ರೀ ಕೃಷ್ಣ ಗಾಯತ್ರಿ ಮಂತ್ರ
ಓಂ ದಾಮೋದರಾಯ ವಿದ್ಮಹೇ,
ರುಕ್ಮಿಣಿ ವಲ್ಲಭಾಯ ಧೀಮಹೀ
ತನ್ನೋ ಕೃಷ್ಣ ಪ್ರಚೋದಯಾತ್
ಓಂ ಗೋವಿಂದಾಯ ವಿದ್ಮಹೇ,
ಗೋಪಿವಲ್ಲಭಾಯ ಧೀಮಹೀ
ತನ್ನೋ ಕೃಷ್ಣ ಪ್ರಚೋದಯಾತ್
ಈ ಮಂತ್ರ ಪಠಿಸುವುದರಿಂದ ಕೂಡ ಒಳಿತಾಗುವುದು. ಇದು ಕುಟುಂಬದಲ್ಲಿ ಸದಸ್ಯರ ನಡುವೆ ಪ್ರೀತಿ-ಬಾಂಧವ್ಯ ಮೂಡಿಸುತ್ತದೆ. ಬ್ಯುಸ್‌ನೆಸ್ ಒಳ್ಳೆಯದಾಗುತ್ತದೆ. ಈ ಮಂತ್ರವನ್ನು ಪ್ರತಿದಿನ ಬೆಳಗ್ಗೆ108 ಬಾರಿ ಅಥವಾ 1008 ಬಾರಿ ಪಠಿಸಬೇಕು.

ಶ್ರೀ ಕೃಷ್ಣ ಮಂತ್ರ ಪಠಿಸುವಾಗ ಈ ನಿಯಮಗಳನ್ನು ಪಾಲಿಸಬೇಕು
- ಸೋಮವಾರದಿಂದ ಪ್ರಾರಂಭಿಸಿ
- ಉತ್ತರಕ್ಕೆ ಮುಖ ಮಾಡಿ ಕುಳಿತುಕೊಳ್ಳಿ
- ಹಳದಿ ಬಣ್ಣದ ಬಟ್ಟೆ ಧರಿಸಿ
- ತುಪ್ಪದ ದೀಪ ಹಚ್ಚಿ, ಗಂಧದ ಕಡ್ಡಿ ಹಚ್ಚಿ
- ಶ್ರೀ ಕೃಷ್ಣ ಮೂರ್ತಿಯನ್ನು ಹೂಗಳಿಂದ ಅಲಂಕರಿಸಿ.
- ಶಾಂತ ಮನಸ್ಥಿತಿಯಲ್ಲಿ ಕುಳಿತು ಧ್ಯಾನಸ್ಥರಾಗಿ ಮಂತ್ರವನ್ನು ಪಠಿಸಿ.



Click it and Unblock the Notifications