ಬದುಕಿಗೆ ಪ್ರೇರಕವಾಗಿರುವ ದಾನಶೂರ ಕರ್ಣನ ಆದರ್ಶ ಗುಣಗಳು

By manu

ಭಾರತದಲ್ಲಿ ಶಾಸ್ತ್ರ ಪುರಾತನ ಕಾವ್ಯಗಳು ಮತ್ತು ಗ್ರಂಥಗಳು ತಮ್ಮದೇ ಆದ ಪ್ರಸಿದ್ಧಿಯನ್ನು ಪಡೆದುಕೊಂಡು ಬಂದಿವೆ. ಅತಿ ಪ್ರಾಚೀನ ಮತ್ತು ಪುಣ್ಯ ಗ್ರಂಥಗಳೆಂದೇ ಹೆಸರುವಾಸಿಯಾಗಿರುವ ಮಹಾಭಾರತ ಹಾಗೂ ರಾಮಾಯಣ ವಿಶ್ವದೆಲ್ಲೆಡೆ ಜನಜನಿತವಾಗಿದೆ. ಈ ಗ್ರಂಥಗಳು ನಮ್ಮ ನೈಜ ಜೀವನದ ಮೇಲೆ ಬೆಳಕು ಚೆಲ್ಲಿದ್ದು ಮೋಹ, ಮದ, ಮಾತ್ಸರ್ಯ, ಸಂಶಯಗಳಿಂದ ಜೀವನ ಹೇಗೆ ಅಸ್ತವ್ಯಸ್ತಗೊಳ್ಳುತ್ತದೆ ಎಂಬುದನ್ನು ತಿಳಿಸುತ್ತದೆ.

ಯಾವುದೂ ಕೂಡ ಅತಿರೇಕಕ್ಕೆ ಹೋದರೆ ವಿನಾಶಕ್ಕೆ ಕಾರಣವಾಗುತ್ತದೆ ಎಂಬುದನ್ನು ಮಹಾಭಾರತ ನಮಗೆ ತಿಳಿಸಿಕೊಡುತ್ತದೆ. ಇದು ನಾವು ಸಹೋದರ ವಾತ್ಸಲ್ಯ, ಮಕ್ಕಳ ಮೇಲಿನ ಕುರುಡು ಮೋಹ, ಹೆಣ್ಣಿನ ಮೇಲಿನ ಕ್ರೋಧ, ಗೆಳೆಯರ ತ್ಯಾಗ ಹೀಗೆ ನಮ್ಮ ಜೀವನದಲ್ಲಿ ನಾವು ಹಾದುಹೋದ ಮತ್ತು ಹಾದುಹೋಗಬೇಕಾಗಿರುವ ಎಲ್ಲಾ ಮಜಲುಗಳನ್ನು ಸೂಕ್ಷ್ಮವಾಗಿ ಬಣ್ಣಿಸಿದೆ. ಮಹಾಭಾರತದಲ್ಲಿ ಬರುವ ಎಲ್ಲಾ ಪಾತ್ರಗಳೂ

ನಮ್ಮ ಜೀವನದಲ್ಲಿ ಬರುವ ವ್ಯಕ್ತಿಗಳನ್ನು ಆಧರಿಸಿಯೇ ಇದೆ. ಹುಟ್ಟುತ್ತಾ ಅಣ್ಣತಮ್ಮಂದಿರುವ ಬೆಳೆಯುತ್ತಾ ದಾಯಾದಿಗಳು ಎಂಬ ಪದಕ್ಕೆ ಮಹಾಭಾರತ ತಕ್ಕ ಉದಾಹರಣೆಯಾಗಿದೆ. ಕಡ್ಡಿಯಂತಿರುವ ಅಂಶಗಳನ್ನು ಗುಡ್ಡದಂತೆ ಮಾಡಿ ಅದು ಒಬ್ಬರು ಇನ್ನೊಬ್ಬರನ್ನು ಬಲಿತೆಗೆದುಕೊಳ್ಳುವಂತಹ ಮಟ್ಟಕ್ಕೆ ಹೋಗುತ್ತದೆ. ಅದಾಗ್ಯೂ ಮಹಾಭಾರತದಲ್ಲಿ ನೆನಪಿನಲ್ಲಿ ಉಳಿಯುವಂತಹ ಕೆಲವು ಪಾತ್ರಗಳೂ ಇದ್ದು ಅದರಲ್ಲಿ ಸದಾ ನೆನಪಿನಲ್ಲಿ ಉಳಿಯುವುದು ಕರ್ಣ. ಕರ್ಣ ಗೆಳೆತನಕ್ಕೆ ಜೀವಂತ ನಿದರ್ಶನವಾಗಿದ್ದಾನೆ.

ಆತನ ದುರಾದೃಷ್ಟ ಮತ್ತು ಭವಿಷ್ಯದೊಂದಿಗಿನ ಹೋರಾಟ, ಆತ ಒಬ್ಬ ನೈಜ ಪುರುಷ ಎಂಬುದನ್ನು ಸಾಧಿಸಿದೆ. ಆತನ ನೀತಿ ತತ್ವಗಳು ನಮಗೆಲ್ಲಾ ಆದರ್ಶಪ್ರಾಯವಾಗಿದ್ದು ತನ್ನ ಕರ್ಮದಲ್ಲಿ ನಂಬಿಕೆ ಉಳ್ಳವನು ಕರ್ಣನಾಗಿದ್ದಾನೆ. ತನ್ನ ಮಹತ್ವಾಂಕ್ಷೆ ಮತ್ತು ಧೈರ್ಯದಲ್ಲಿ ಕರ್ಣನಿಗೆ ಸಂಪೂರ್ಣ ನಂಬಿಕೆಯಿತ್ತು. ದುರ್ಯೋಧನನ ಗೆಳೆತನವನ್ನು ಮಾಡಿದ್ದರೂ ಆತ ಮಾಡುತ್ತಿರುವುದು ಅಪಚಾರ ಎಂಬುದು ಅರಿತಿದ್ದರೂ ಕರ್ಣ ಗೆಳೆತನಕ್ಕಾಗಿ ಆತನೊಡನೆ ನಿಲ್ಲುತ್ತಾನೆ. ಸಕಲ ಶಾಸ್ತ್ರ ಪ್ರವೀಣನಾಗಿದ್ದರೂ ಆತ ಕ್ಷತ್ರಿಯನಲ್ಲನೆಂಬ ಕಾರಣಕ್ಕೆ ಆತನಿಗೆ ಯಾವುದೇ ಸ್ಥಾನಮಾನಗಳನ್ನು ನೀಡಿಲ್ಲದ ಸಂದರ್ಭದಲ್ಲಿ ಗೆಳೆಯ ದುರ್ಯೋಧನನೊಬ್ಬನೇ ಆತನನ್ನು ಕೈಹಿಡಿದು ಮೇಲಕ್ಕೆತ್ತುತ್ತಾನೆ ಹಾಗೂ ತನ್ನಂತೆ ಸಮಾನವಾಗಿ ಕಾಣುತ್ತಾನೆ.

ಈ ಸ್ನೇಹಕ್ಕೆ ಕಟ್ಟುಬಿದ್ದ ಕರ್ಣ ದುರ್ಯೋಧನನಿಗೆ ತನ್ನ ಪ್ರಾಣವನ್ನೂ ನೀಡಲೂ ಸಿದ್ಧನಾಗುತ್ತಾನೆ. ಇದರಿಂದಲೇ ಕರ್ಣ ಮಹಾನ್ ಪುರುಷನಾಗಿ ಮಹಾಭಾರತದಲ್ಲಿ ಇಂದಿಗೂ ನೆಲೆನಿಲ್ಲುವುದು. ಇಂದಿನ ಲೇಖನದಲ್ಲಿ ಕರ್ಣ ನಮಗೆ ಕಲಿಸಿದ ಕೆಲವು ಜೀವನ ತತ್ವಗಳನ್ನು ನಾವು ನಿಮಗೆ ತಿಳಿಸಲಿದ್ದು ಜೀವನದಲ್ಲಿ ಅದರ ಮಹತ್ವವನ್ನು ನಿಮಗೆ ಅರಿತುಕೊಳ್ಳಬಹುದಾಗಿದೆ ಹಾಗೆಯೇ ಕರ್ಣನಂತಹ ಮಾನಸಿಕ ಬಲ ನಿಮ್ಮದಾಗುವಲ್ಲಿ ಇದು ನೆರವನ್ನು ನೀಡುತ್ತದೆ....

ಶಕ್ತಿಯುತ ಮನುಷ್ಯ

ಶಕ್ತಿಯುತ ಮನುಷ್ಯ

ಮಹಾಭಾರತದಲ್ಲಿ ಶಕ್ತಿಶಾಲಿ ಮನುಷ್ಯನೆಂಬ ಹೆಗ್ಗಳಿಕೆಯನ್ನು ಕರ್ಣ ಪಡೆದುಕೊಂಡಿದ್ದಾನೆ.ಅರ್ಜುನನಿಗಿಂತಲೂ ಆತ ಬಲಿಷ್ಟನಾಗಿದ್ದು ಆತನನ್ನು ಮಣಿಸುವುದು ಅಷ್ಟು ಸುಲಭದ ಕೆಲಸವಲ್ಲ. ಕುರುಕ್ಷೇತ್ರ ಯುದ್ಧದಲ್ಲಿ ಕರ್ಣನನ್ನು ಸೋಲಿಸಲು ಕೃಷ್ಣ ಮತ್ತು ಇಂದ್ರ ಪಾಂಡವರಿಗೆ ನೆರವನ್ನು ನೀಡುತ್ತಾರೆ. ಕೃಷ್ಣ ಅರ್ಜುನನ ಸಾರಥಿಯಾಗಿದ್ದು, ಇಂದ್ರ ಉಪಾಯವಾಗಿ ಕರ್ಣನ ರಕ್ಷಾಕವಚವನ್ನು ಪಡೆದುಕೊಂಡು ಅರ್ಜುನನ ಹಾದಿಯನ್ನು ಸುಲಭಗೊಳಿಸುತ್ತಾನೆ.

ಉದಾರತೆ

ಉದಾರತೆ

ಮಹಾಭಾರತದಲ್ಲಿ ಕರ್ಣ ತನ್ನ ಹೆಸರನ್ನು ಅಜರಾಮರವಾಗಿರಿಸಿಕೊಂಡಿರುವುದು ತನ್ನ ದಾನಶೀಲತೆಯಂದಾಗಿದೆ. ಸೂರ್ಯನ ಪುತ್ರನಾದ ಕರ್ಣ, ರಕ್ಷಾಕವಚ ಮತ್ತು ಚಿನ್ನದ ಕಿವಿಯಾಭರಣಗಳಿಂದ (ಕರ್ಣಕುಂಡಲ) ಜನಿಸಿದವನಾಗಿರುತ್ತಾನೆ. ಇದು ಕರ್ಣನ ಶಕ್ತಿಗೆ ಪೂರಕವಾಗಿರುವ ದಿವ್ಯಾಯುಧಗಳು. ಇದನ್ನರಿತಿದ್ದ ಇಂದ್ರ ಕುರುಕ್ಷೇತ್ರ ಯುದ್ಧ ಸಂದರ್ಭದಲ್ಲಿ ಬ್ರಾಹ್ಮಣವ ವೇಷವನ್ನು ತೊಟ್ಟು ಉಪಾಯವಾಗಿ ಈ ಆಯುಧಗಳನ್ನು ಕರ್ಣನಲ್ಲಿ ಕೇಳುತ್ತಾನೆ. ಕರ್ಣ ಹಿಂದೆ ಮುಂದೆ ಯೋಚಿಸದೇ ತನ್ನಲ್ಲಿರುವ ಆಭರಣಗಳನ್ನು ಇಂದ್ರನಿಗೆ ನೀಡುತ್ತಾನೆ. ಕರ್ಣನ ಈ ಗುಣನಿಂದ ಸಂಪ್ರೀತನಾದ ಇಂದ್ರನು ಆತನಿಗೆ ಶಕ್ತಿ ಎಂಬ ಆಯುಧವನ್ನು

ನೀಡುತ್ತಾನೆ.

ಶ್ರೇಷ್ಟ ಧನುರ್ಧಾರಿ

ಶ್ರೇಷ್ಟ ಧನುರ್ಧಾರಿ

ಕರ್ಣನ ಇನ್ನೊಂದು ನೆನಪಿನಲ್ಲುಳಿಯುವಂತಹ ಗುಣವೆಂದರೆ ಆತ ಶ್ರೇಷ್ಟ ಧರ್ನುಧಾರಿ ಎಂಬುದಾಗಿದೆ. ಅರ್ಜುನನಿಗಿಂತಲೂ ಬಿಲ್ಲುಗಾರಿಕೆಯಲ್ಲಿ ಕರ್ಣನದು ಎತ್ತಿದ ಕೈಯಾಗಿದೆ.

ದಾನಶೀಲ

ದಾನಶೀಲ

ಎಷ್ಟೇ ದುಬಾರಿಯಾಗಿದ್ದರೂ ಯಾವುದೇ ದಾನ ಅಥವಾ ಕೊಡುಗೆಯನ್ನು ನೀಡುವುದಕ್ಕೆ ಕರ್ಣ ಹಿಂದೆಮುಂದೆ ನೋಡುವುದಿಲ್ಲ, ತಾನು ಮರಣಶಯ್ಯೆಯಲ್ಲಿರುವಾಗ ಕೂಡ ಭಿಕ್ಷುಕರಂತೆ ವೇಷ ಧರಿಸಿ ತನ್ನಲ್ಲಿ ಯಾಚಿಸಿದ ಸೂರ್ಯ ಹಾಗೂ ಇಂದ್ರರಿಗೆ ಕರ್ಣ ದಾನವನ್ನು ಮಾಡುತ್ತಾನೆ.

ಕುಂತಿಯ ಬಗೆಗಿನ ಗೌರವ

ಕುಂತಿಯ ಬಗೆಗಿನ ಗೌರವ

ಕುರುಕ್ಷೇತ್ರ ಯುದ್ಧಕ್ಕಿಂತ ಮುನ್ನ, ಕುಂತಿಯು ಕರ್ಣನ ಬಳಿ ಸಾರಿ ತಾನು ಆತನ ತಾಯಿ ಎಂಬುದನ್ನು ಹೇಳುತ್ತಾಳೆ. ಪಾಂಡವರಲ್ಲಿ ಅತಿಹಿರಿಯವನು ಎಂದೆನಿಸಿಕೊಂಡ ಕರ್ಣ ರಾಜನಾಗಲು ಅರ್ಹ ಅಂತೆಯೇ ತನ್ನ ಸಹೋದರರಾದ ಪಾಂಡವರೊಂದಿಗೆ ಯುದ್ಧದಲ್ಲಿ ಸೇರಿಕೊಳ್ಳಲು ಕರ್ಣನಲ್ಲಿ ಯಾಚಿಸುತ್ತಾಳೆ. ಆದರೆ ಗೆಳೆತನದ ಬಂಧನ ಕರ್ಣನನ್ನು ಕಟ್ಟಿಹಾಕಿ ಕುಂತಿಯ ಈ ಕೋರಿಕೆಯನ್ನು ತಿರಸ್ಕರಿಸುತ್ತಾನೆ. ಆದರೆ ಅರ್ಜುನನ್ನು ಬಿಟ್ಟು ಬೇರೆ ಯಾರೊಂದಿಗೂ ಯುದ್ಧಮಾಡುವುದಿಲ್ಲ ಎಂದು ತಾಯಿಗೆ ಭರವಸೆಯನ್ನು ನೀಡುತ್ತಾನೆ.

 ಗುಣಸಂಪನ್ನ

ಗುಣಸಂಪನ್ನ

ದುರ್ಯೋಧನನ್ನು ತ್ಯಜಿಸಿ ಪಾಂಡವರೊಂದಿಗೆ ಸೇರಿಕೊಳ್ಳಲು ಶ್ರೀಕೃಷ್ಣ ಕೂಡ ಕರ್ಣನಿಗೆ ಸಲಹೆ ನೀಡುತ್ತಾರೆ. ಸಕಲ ರಾಜವೈಭೋಗಗಳು ಅಂತೆಯೇ ದ್ರೌಪದಿಯನ್ನು ನೀಡುವುದಾಗಿ ಕೂಡ ಕೃಷ್ಣ ಕರ್ಣನಿಗೆ ಆಮಿಷವನ್ನೊಡ್ಡುತ್ತಾರೆ. ಆದರೆ ತನ್ನ ಮೌಲ್ಯಗಳಿಗೆ ಬದ್ಧನಾಗಿದ್ದ ಕರ್ಣ ತನ್ನ ಸ್ವಂತ ಸುಖಕ್ಕಾಗಿ ದುರ್ಯೋಧನನ್ನು ಬಿಟ್ಟು ಹೋಗುವುದಿಲ್ಲ. ಇದರಿಂದ ಕರ್ಣನ ಗುಣ ಸಾಬೀತಾಗುತ್ತದೆ. ಮಹಾಭಾರತದಲ್ಲಿ ಕರ್ಣನ ಸ್ಫೂರ್ತಿದಾಯಕ ಗುಣಗಳಲ್ಲಿ ಇದೂ ಕೂಡ ಒಂದಾಗಿದೆ.

X
Desktop Bottom Promotion