Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಝೆನ್ ಕಥೆ: ನಾನೊಂದು ಬೆಕ್ಕು ಎಂದಷ್ಟೆ ಗೊತ್ತು!

ಆಗ ಅವನ ಮನೆಯಲ್ಲಿದ್ದ ಇಲಿಯೊಂದು ಅತ್ತಿತ್ತ ಓಡಾಡುತ್ತಿದ್ದರಿಂದ ಅವನ ನಿದ್ದೆಗೆ ಭಂಗವಾಯಿತು. ಈ ಇಲಿನ್ನು ಕೊಂದು ಹಾಕಬೇಕು ಎಂದು ಕೋಪದಿಂದ ಖಡ್ಗ ತೆಗೆದು ಇಲಿಯನ್ನು ಕೊಲ್ಲಲು ಹೋದನು. ಇವನು ಖಡ್ಗ ಬೀಸಿದಂತೆ ಆ ಇಲಿ ತಪ್ಪಿಸಿಕೊಳ್ಳುತ್ತಿತ್ತು. ಕೊನೆಗೂ ಅವನಿಂದ ಆ ಇಲಿಯನ್ನು ಕೊಲ್ಲಲು ಅವನಿಂದ ಸಾಧ್ಯವಾಗಲಿಲ್ಲ!
ಈ ಇಲಿ ಅಸಾಮಾನ್ಯವಾದ ಇಲಿಯಾಗಿರಬಹುದು ಎಂದು ಭಾವಿಸಿ ಹೆಂಡತಿಯನ್ನು ಕೂಗಿದನು. ಹೆಂಡತಿಯ ಹತ್ತಿರ "ಇದು ಅಸಾಮಾನ್ಯವಾದ ಇಲಿ" ಎಂದಾಗ ಹೆಂಡತಿಯು "ಹಾಗೇನು ಇಲ್ಲ, ಇದು ಸಾಮಾನ್ಯವಾದ ಇಲಿ, ಇದನ್ನು ಕೊಲ್ಲಲು ಒಂದು ಬೆಕ್ಕು ತನ್ನಿ" ಎಂದಳು.
ಈ ಸೈನಿಕ ಹೋಗಿ ಇಲಿ ಹಿಡಿಯುವುದರಲ್ಲಿ ಪರಿಣಿತಿಯನ್ನು ಪಡೆದ ಬೆಕ್ಕನ್ನು ತಂದನು. ಆ ಬೆಕ್ಕಿನಿಂದಲೂ ಆ ಇಲಿಯನ್ನು ಹಿಡಿಯಲು ಸಾಧ್ಯವಾಗಲಿಲ್ಲ. ನಂತರ ರಾಜನ ಹತ್ತಿರ ಹೋಗಿ ರಾಜನ ಬಳಿ ಇರುವ ಮಾರ್ಷಲ್ ಆರ್ಟ್ ಕಲಿತ ಬೆಕ್ಕನ್ನು ತಂದನು ಅದರಿಂದಲೂ ಆ ಇಲಿಯನ್ನು ಹಿಡಿಯಲು ಸಾಧ್ಯವಾಗಲಿಲ್ಲ. ನಂತರ ರಾಜನ ಬೆಕ್ಕು ಒಂದು ಸಾಮಾನ್ಯ ಬೆಕ್ಕನ್ನು ತರಲು ಹೇಳಿತು.
ಅದರಂತೆ ಸೈನಿಕ ಸಾಮಾನ್ಯವಾದ ಬೆಕ್ಕನ್ನು ತಂದನು. ಆ ಬೆಕ್ಕು ನೋಡಿದರೆ ತುಂಬಾ ಸಣಕಲು ಇತ್ತು, ಅಲ್ಲದೆ ಯಾವತ್ತೂ ನಿದ್ದೆ ಮಾಡವುದು ಒಂದೇ ಅದರ ಕೆಲಸವಾಗಿತ್ತು. ಆ ಬೆಕ್ಕನ್ನು ತಂದು ಮನೆಯೊಳಗೆ ಬಿಟ್ಟನು. ಬೆಕ್ಕು ನಿದ್ದೆ ಮಾಡಲಾರಂಭಿಸಿತು. ಈ ಬೆಕ್ಕಿನಿಂದ ಆ ಇಲಿಯನ್ನು ಹಿಡಿಯಲು ಸಾಧ್ಯವೇ ಎಂದು ಸೈನಿಕ ಅಸಡ್ಡೆಯಿಂದ ಬೆಕ್ಕಿನೆಡೆಗೆ ನೋಡಿದನು. ಬೆಕ್ಕಿಗೆ ಇಲಿಯ ವಾಸನೆ ಮೂಗಿಗೆ ಬಡೆಯಿತು,
ನಿದ್ದೆಯಿಂದ ಎಚ್ಚೆತ್ತ ಆ ಬೆಕ್ಕು ಕೆಲವೇ ನಿಮಿಷಗಳಲ್ಲಿ ಇಲಿಯನ್ನು ಕೊಂದು ತಂದು ಸೈನಿಕನ ಎದುರಿಗೆ ಹಾಕಿತು. ನಂತರ ಎಲ್ಲಾ ಬೆಕ್ಕಗಳು ಆ ಸಾಮಾನ್ಯ ಬೆಕ್ಕನ್ನು ಸುತ್ತುವರಿದು 'ಇಲಿಯನ್ನು ಕೊಲ್ಲಲು ನೀ ಬಳಸಿದ ವಿದ್ಯೆ ಏನು?' ಎಂದು ಕೇಳಿದವು ಅದಕ್ಕೆ ಈ ಬೆಕ್ಕು 'ನನಗೆ ಯಾವ ವಿಶೇಷ ವಿದ್ಯೆಯೂ ಗೊತ್ತಿಲ್ಲ, ನಾನೊಂದು ಬೆಕ್ಕು ಅಷ್ಟು ಮಾತ್ರ ಗೊತ್ತು' ಎಂದಿತು.



Click it and Unblock the Notifications
