Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಪಿತೃ ಪಕ್ಷ ಪೂಜೆಯನ್ನು ಮನೆಯಲ್ಲಿ ಮಾಡುವಾಗ ಅನುಸರಿಸಬೇಕಾದ ವಿಧಿವಿಧಾನಗಳು
ಪಿತೃ ಪಕ್ಷ ಎಂಬುದು ಸಪ್ಟೆಂಬರ್ 24 ರಿಂದ ಆರಂಭವಾಗುತ್ತಿದ್ದು ನಮ್ಮ ಹಿರಿಯರಿಗೆ ನಾವು ಈ ಮೂಲಕ ಗೌರವವನ್ನು ಸಲ್ಲಿಸುತ್ತೇವೆ. ಪಿತೃ ಪಕ್ಷವು ಅಕ್ಟೋವರ್ 8 ರವರೆಗೆ ಮುಂದುವರಿಯುತ್ತದೆ. ಬೇರೆ ಬೇರೆ ಕ್ರಮಗಳು ಮತ್ತು ಶ್ರಾದ್ಧ ಕಾರ್ಯಕ್ರಮವನ್ನು ಈ ಸಮಯದಲ್ಲಿ ಮಾಡುತ್ತಾರೆ. ಇದರ ಮೂಲಕ ಮೃತರಾದ ಹಿರಿಯರಿಗೆ ಗೌರವವನ್ನು ಸಲ್ಲಿಸಲಾಗುತ್ತದೆ. ಪಿತೃ ದೋಷ ಪೂಜೆ ಅಥವಾ ಯಜ್ಞದಲ್ಲಿ ಪಿತೃ ದಾನ ಕೂಡ ಹಿರಿದಾದುದು. ಯಾವ ತಿಥಿಯಲ್ಲಿ ಹಿರಿಯರು ಮೃತರಾಗಿದ್ದಾರೋ ಆ ದಿನವನ್ನು ಹೆಚ್ಚು ಮಹತ್ವ ಮತ್ತು ಪುನೀತವಾದುದು ಎಂದು ಪರಿಗಣಿಸಲಾಗುತ್ತದೆ.

ಮೃತರಾದ ಹಿರಿಯರು ಪಿತೃ ಲೋಕವನ್ನು ಸೇರುತ್ತಾರೆ ಎಂದು ಹೇಳಲಾಗುತ್ತದೆ ಅಂತೆಯೇ ಅವರು ಆಹಾರವನ್ನು ಸೇವಿಸಲಾರರು ಮತ್ತು ಸಿದ್ಧಪಡಿಸಲಾರರು. ಭೂಮಿಯಲ್ಲಿರುವ ಅವರ ಕುಟುಂಬದವರು ಪಿತೃ ಪಕ್ಷದ ಪದ್ಧತಿಗಳನ್ನು ಅನುಸರಿಸಿ ಅವರನ್ನು ತೃಪ್ತಿ ಪಡಿಸುವ ಕಾರ್ಯವನ್ನು ಮಾಡುತ್ತಾರೆ. ಇಂದಿನ ಲೇಖನದಲ್ಲಿ ನಿಮ್ಮ ಹಿರಿಯರನ್ನು ಹೇಗೆ ಆಹ್ವಾನಿಸಬೇಕು ಮತ್ತು ಶ್ರಾದ್ಧವನ್ನು ಹೇಗೆ ಮಾಡಬೇಕು ಎಂಬುದನ್ನು ತಿಳಿಸುತ್ತಿದ್ದೇವೆ. ಹಿರಿಯರು ಮೃತರಾದ ದಿನವೇ ಪಿತೃ ಪಕ್ಷದ ಪೂಜೆಯನ್ನು ಮಾಡಬೇಕು. ಬೆಳಗ್ಗೆ 11.30 ಯಿಂದ ಮಧ್ಯಾಹ್ನ 12.30 ಯ ಒಳಗೆ ಅವರನ್ನು ಆಹ್ವಾನಿಸಬೇಕು. ಪಿತೃ ಪೂಜಾ ವಿಧಿ ವಿಧಾನ ಇಲ್ಲಿದೆ.

ಪಿತೃ ಪೂಜಾ ವಿಧಿ
ದಕ್ಷಿಣ ದಿಕ್ಕಿನಲ್ಲಿ ಮರದ ಸ್ಟೂಲ್ ಅನ್ನು ಇರಿಸಿ. ಬಿಳಿ ಬಟ್ಟೆಯಿಂದ ಅದನ್ನು ಮುಚ್ಚಿ. ಕಪ್ಪು ಎಳ್ಳನ್ನು ಹರಡಿ ಮತ್ತು ಅದರ ಮೇಲೆ ಬಾರ್ಲಿ ಬೀಜ ಹಾಕಿ. ನಿಮ್ಮ ಹಿರಿಯರ ಫೋಟೋವನ್ನು ಅದರ ಮೇಲಿರಿಸ. ಕುಶ ಎಲೆಯನ್ನು ಕೂಡ ಚಿತ್ರದ ಪಕ್ಕ ಇರಿಸಬಹುದು. ವಿಷ್ಣುವಿನ ಅಂಶ ಈ ಹುಲ್ಲಿನಲ್ಲಿ ಇದೆ ಎಂದು ನಂಬಲಾಗಿದೆ.
ನೀವು ಯಾರಿಗೆ ಪೂಜೆ ಮಾಡಬೇಕೋ ಅವರನ್ನು ಆಹ್ವಾನಿಸಿ. ಅವರ ಹೆಸರನ್ನು ಕರೆಯಿರಿ, ನಮ್ಮ ಸಂಪೂರ್ಣ ಕುಟುಂಬ ನಿಮ್ಮನ್ನು ನಮ್ಮ ಮನೆಗೆ ಆಹ್ವಾನಿಸುತ್ತಿದ್ದು ಈ ಪಿತೃ ಪಕ್ಷದ ಪೂಜೆಯನ್ನು ಸ್ವೀಕರಿಸಿ ಎಂದು ಹೇಳಿ. ಇದರ ನಂತರ ತಾಮ್ರ ಅಥವಾ ಹಿತ್ತಾಳೆ ಪಾತ್ರೆಯನ್ನು ತೆಗೆದುಕೊಂಡು ಅದರಲ್ಲಿ ನೀರು ತುಂಬಿಸಿ. ಅದಕ್ಕೆ ಸ್ವಲ್ಪ ಹಾಲು ಹಾಕಿ (ಹಸಿ ದನದ ಹಾಲು). ಇದಕ್ಕೆ ಎಳ್ಳಿನ ಬೀಜ ಹಾಕಿ ಮತ್ತು ಬಾರ್ಲಿ ಅಕ್ಕಿ ಸೇರಿಸಿ ಇದನ್ನು ಫೋಟೋವನ್ನು ಇರಿಸುವ ಮುನ್ನ ಇಡಿ.

ಪಿಂಡ ಸಿದ್ಧತೆ
ಅನ್ನವನ್ನು ಸಿದ್ಧ ಮಾಡಿ ಇದಕ್ಕೆ ಹಾಲು, ಜೇನು ಮತ್ತು ಗಂಗಾಜಲವನ್ನು ಸೇರಿಸಿ. ಈಗ ಅನ್ನದ ಉಂಡೆಯನ್ನು ಸಿದ್ಧ ಮಾಡಿ ಮತ್ತು ಪೋಟೋದ ಮುಂದೆ ಎಲೆಯ ಮೇಲಿರಿಸಿ. ಈ ಅನ್ನದ ಉಂಡೆಯನ್ನು ಪಿಂಡ ಎಂದು ಕರೆಯುತ್ತಾರೆ ಇದನ್ನು ಪಿಂಡ ದಾನದಲ್ಲಿ ಬಳಸಲಾಗುತ್ತದೆ. ಪೂರ್ಣವಾಗಿ ನಿಯಮಗಳು ಕೊನೆಗೊಂಡ ನಂತರ ಹತ್ತಿರದ ನದಿಯಲ್ಲಿ ಅದನ್ನು ಮಿಶ್ರ ಮಾಡಬೇಕು.

ಇನ್ನೊಂದು ಪದ್ಧತಿಯನ್ನು ನೀವು ನಿರ್ವಹಿಸಬಹುದು
ಈ ಪದ್ಧತಿಯನ್ನು ಅನುಸರಿಸಲು ನಿಮಗೆ ಸಾಧ್ಯವಿಲ್ಲ ಎಂದಾದಲ್ಲಿ, ಕೆಳಗೆ ತಿಳಿಸಿದ ಇನ್ನೊಂದು ವಿಧಾನವನ್ನು ನೀವು ಅನುಸರಿಸಬಹುದು. ರೋಟಿ ಮಾಡಿ ಅದರ ಮೇಲೆ ಬೆಲ್ಲ ಮತ್ತು ತುಪ್ಪವನ್ನು ಹಾಕಿ. ಹಿರಿಯರ ಫೋಟೋದ ಮುಂದೆ ಇದನ್ನು ಇರಿಸಿ. ಪ್ರತೀ ದಿನ ಹೀಗೆ ಮಾಡಿ ರೋಟಿಯನ್ನು ದನಕ್ಕೆ ನೀಡಿ.
ಪೂಜೆ ಮತ್ತು ಅರ್ಪಣೆಯನ್ನು ಮಾಡುವ ಮುನ್ನ ನೀವು ಅರ್ಚಕರನ್ನು ಆಹ್ವಾನಿಸಬೇಕು ಮತ್ತು ಅವರಿಗೆ ಆಹಾರವನ್ನು ನೀಡಬೇಕು. ಅವರಿಗೆ ಆಹಾರವನ್ನು ನೀಡಿದ ನಂತರ ಅರ್ಚಕರಿಗೆ ಉಡುಪನ್ನು ನೀಡಬೇಕು.

ಬೆಲ್ಲ ಮತ್ತು ತುಪ್ಪವನ್ನು ನೀಡುವುದು
ಅರ್ಚಕರಿಗೆ ಆಹಾರವನ್ನು ಉಣಬಡಿಸಿದ ನಂತರ, ಸೆಗಣಿಯನ್ನು ಉರಿಸಿ ಮತ್ತು ಇದು ಸಂಪೂರ್ಣ ಉರಿದ ನಂತರ ಇದಕ್ಕೆ ತುಪ್ಪವನ್ನು ಹಾಕಿ ಮತ್ತು ಸಣ್ಣ ತುಂಡು ಬೆಲ್ಲ ಇರಿಸಿ. ಪೂರ್ವಿಕರಿಗೆ ಇದು ಅರ್ಪಣೆಯನ್ನು ನೀಡುವ ಇನ್ನೊಂದು ವಿಧಾನವಾಗಿದೆ. ಬೆಲ್ಲವು ಸಂಪೂರ್ಣ ಉರಿದ ನಂತರ, ಅದನ್ನು ಪೂರ್ವಿಕರು ಸೇವಿಸುತ್ತಾರೆ ಎಂದು ಹೇಳಲಾಗಿದೆ.



Click it and Unblock the Notifications
