Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕಾರ್ತಿಕ ಸೋಮವಾರ ಉಪವಾಸ ಮಾಡುವಾಗ ಪಾಲಿಸಬೇಕಾದ ನಿಯಮಗಳೇನು?
ಕಾರ್ತಿಕ ಮಾಸ ಎನ್ನುವುದು ಶಿವನ ಆರಾಧನೆ ಹಾಗೂ ಪೂಜೆಗೆ ಮುಡಿಪಾಗಿರುವ ಮಾಸ. ಶಿವ ಎಂದರೆ ಜ್ಞಾನದ ಪ್ರತೀಕ, ಓಂಕಾರದ ಸ್ವರೂಪಿ, ಭಕ್ತಿಗೆ ಒಲಿಯುವ ಕರುಣಾಮಯಿ. ತನ್ನ ಭಕ್ತರು ಭಕ್ತಿಯಿಂದ ಏನೇ ಬೇಡಿದರೂ ಅದನ್ನು ಸಾಕಾರಗೊಳಿಸುವ ಪರಮಾತ್ಮ. ಕಾರ್ತಿಕ ಮಾಸದ ಅಧಿಪತಿ ಶಿವನಾಗಿರುವುದರಿಂದ ಕಾರ್ತಿಕ ಮಾಸದಲ್ಲಿ ಶಿವನನ್ನು ಪೂಜಿಸಿದರೆ ಭಕ್ತರು ಬೇಡಿದ್ದು ನೆರವೇರುವುದು. ಕಾರ್ತಿಕ ಸೋಮವಾರದಂದು ಶಿವನಿಗೆ ಪ್ರದೋಷ ಪೂಜೆ ಮಾಡಿದರೆ ಶಿವನ ಕೃಪೆಗೆ ಪಾತ್ರರಾಗುವಿರಿ.

ಕಾರ್ತಿಕ ಮಾಸದ ಸೋಮವಾರದ ಪೂಜೆಯನ್ನು ಉಪವಾಸವಿದ್ದು ಮಾಡಿದರೆ ಶಿವನ ಪುಣ್ಯ ಬೇಗನೆ ಪ್ರಾಪ್ತಿಯಾಗುವುದು. ಆದ್ದರಿಂದ ಉಪವಾಸಕ್ಕೆ ಕಾರ್ತಿಕ ಸೋಮವಾರ ಶ್ರೇಷ್ಠವೆಂದು ಹೇಳಲಾಗುವುದು. ಉಪವಾಸ ಮಾಡುವುದರಿಂದ ಅದು ನಮ್ಮನ್ನು ಸಾತ್ವಿಕತೆಯ ಕಡೆಗೆ ಕೊಂಡೊಯ್ಯುತ್ತದೆ ಹಾಗೂ ದೇಹಕ್ಕೆ ಚೈತನ್ಯ ದೊರೆಯುವುದು.

ಕಾರ್ತಿಕ ಸೋಮವಾರ ಉಪವಾಸ ಮಾಡುವಾಗ ಅನುಸರಿಬೇಕಾದ ನಿಯಮಗಳೇನು?
* ಬೆಳಗ್ಗೆ ಎದ್ದು ತಣ್ಣೀರಿನಲ್ಲಿ ಸ್ನಾನ ಮಾಡಿ, ಶಿವ ಲಿಂಗ ಅಥವಾ ಶಿವ ಪಾರ್ವತಿ ಫೋಟೋಗೆ ಹೂಗಳಿಂದ ಅಲಂಕಾರ ಮಾಡಿ, ಸೂರ್ಯ ಹುಟ್ಟುವ ಮುಂಚೆ ದೇವರಿಗೆ ದೀಪ ಹಚ್ಚಬೇಕು. ನಂತರ 'ಓಂ ಲಕ್ಷ್ಮಿ ಗಣಪತಿಯೇ ನಮಃ' ಅಂತ ಪ್ರಾರಂಭಿಸಿ, 'ಓಂ ನಮಃ ಶಿವಾಯ' ಅಂತ ಮಂತ್ರವ ಪಠಣೆ ಮಾಡಿ.
* ದೇವರಿಗೆ ಎರಡು ಅಥವಾ 27 ದೀಪವನ್ನು ಹಚ್ಚಿ ವಿಶೇಷ ಪೂಜೆ ಸಲ್ಲಿಸಬಹುದು.
* ನಂತರ ಸಮೀಪದ ಶಿವನ ದೇವಾಲಯಕ್ಕೆ ಹೋಗಿ ಪೂಜೆ ಸಲ್ಲಿಸಿ, ಸಾಧ್ಯವಾದರೆ ದೇವಾಲಯದಲ್ಲೂ ದೀಪವನ್ನು ಹಚ್ಚಿ.
* ಇನ್ನು ಆಹಾರದ ವಿಷಯಕ್ಕೆ ಬಂದಾಗ ಏನು ತಿನ್ನದೆ ಉಪವಾಸ ಮಾಡಿದರೆ ತುಮಬಾ ಒಳ್ಳೆಯದು, ಅದರೆ ಅದು ಸಾಧ್ಯವಾಗದಿದ್ದರೆ ಕಾರ್ತಿಕ ಪೂರ್ಣಂನಲ್ಲಿ ಹೇಳಿರುವ ಪ್ರಕಾರ ನೀವು ಹಣ್ಣುಗಳನ್ನು ಸೇವಿಸಬಹುದು.
* ಮಜ್ಜಿಗೆ, ಕಾಫಿ, ಟೀ ಇವುಗಳನ್ನು ತೆಗೆದುಕೊಳ್ಳುವಂತೆ ಇಲ್ಲ.
* ಕಾರ್ತಿಕ ಸೋಮವಾರ ಉಪವಾಸ ಮಾಡುವವರು ಬೇಯಿಸಿದ ಅಥವಾ ಕಾಯಿಸಿದ ಯಾವುದೇ ವಸ್ತುಗಳನ್ನು ತೆಗೆದುಕೊಳ್ಳಬಾರದು.
* ಸಂಜೆ ಕೂಡ ಸ್ನಾನ ಮಾಡಿ ದೆವರಿಗೆ ದೀಪ ಹಚ್ಚಿ ಶಿವನನ್ನು ಆರಾಧಿಸಿ, ನಂತರ ನಕ್ಷತ್ರಗಳನ್ನು ನೋಡಿದ ಬಳಿಕ ಊಟ ಮಾಡಬಹುದು.
* ಸಾತ್ವಿಕ ಆಹಾರವನ್ನಷ್ಟೇ ಸೇವಿಸಿ. ನೀರು, ಹಣ್ಣಿನ ರಸ ತೆಗೆದುಕೊಳ್ಳಬಹುದು.
* ಶಿವನಿಗೆ ಅರ್ಪಿಸಿದ ಹಣ್ನುಗಳನ್ನು ಸೇವಿಸಬಹುದು.
* ದೀಪಾರಾಧನೆ ನಂತರ ದೇವಾಲಯದ ಬಾಗಿಲು ಮುಚ್ಚಿದ ಬಳಿಕವಷ್ಟೇ ಆಹಾರ ಸೇವಿಸಿ.
* ಮಾಂಸ, ಮದ್ಯ ಮುಟ್ಟಬಾರದು.

ಕಾರ್ತಿಕ ಸೋಮಾವಾರ ಉಪವಾಸದಲ್ಲಿ 3 ಬಗೆಗಳಿವೆ
* ಸೋಮವಾರದ ಉಪವಾಸ
* ಸೋಮವಾರ ಪ್ರದೋಷ ಉಪವಾಸ
* 16 ಸೋಮವಾರ ಉಪವಾಸ
ಈ ವ್ರತಗಳನ್ನು ಪಾಲಿಸುವವಾಗ ಅನುಸರಿಸಬೇಕಾದ ನಿಯಮಗಳು ಒಂದೇ ರೀತಿ ಇವೆ. ಬೆಳಗ್ಗೆ ಎದ್ದು ಸ್ನಾನ ಮಾಡಿ, ಮಡಿಯುಟ್ಟು ದೀಪ ಹಚ್ಚಿ ಶಿವನ ಪೂಜೆ ಮಾಡಬೇಕು. ದಿನದಲ್ಲಿ ಬೇಯಿಸಿದ ಆಹಾರಗಳನ್ನು ಮಾತ್ರ ತಿನ್ನಬೇಕು. ಆದರೆ ಈ ವ್ರತಗಳನ್ನು ಮಾಡುವ ವಿಧಾನದಲ್ಲಿ ಸ್ವಲ್ಪ ವ್ಯತ್ಯಾಸವಿದೆ. ಸೋಮವಾರ ಉಪವಾಸ ಬೆಳಗ್ಗೆಯಿಂದ ಸಂಜೆವರೆಗೆ ಮಾಡುವ ಸರಳವಾದ ಉಪವಾಸವಾದರೆ ಪ್ರದೋಷ ಉಪವಾಸ ಒಂದು ದಿನ ಪೂರ್ತಿ ಮಾಡಬೇಕು ಇನ್ನು 16 ಸೋಮವಾರ ಉಪವಾಸ 16 ವಾರಗಳು ಮಾಡಬೇಕಾಗುತ್ತದೆ.

ಸೋಮವಾರದ ಉಪವಾಸ
ಈ ಉಪವಾಸ ಸಾಮಾನ್ಯವಾಗಿ ಮಾಡುವ ಉಪವಾಸವಾಗಿದೆ. ಈ ಉಪವಾಸವನ್ನು ಬೆಳಗ್ಗೆ ಮಾಡಿ ರಾತ್ರಿ ಶಿವನಿಗೆ ಪೂಜೆ ಸಲ್ಲಿಸಿ, ಶಿವಾಲಯ ಬಾಗಿಲು ಹಾಕಿದ ಬಳಿಕ ನಕ್ಷತ್ರಗಳನ್ನು ನೋಡುತ್ತಾ ಸಾತ್ವಿಕ ಆಹಾರವನ್ನು ಸೇವಿಸಬಹುದು. ಈ ರೀತಿ ಉಪವಾಸ ಮಾಡುವವರು ದಿನದಲ್ಲಿ ನೀರು, ಹಣ್ಣಿನ ರಸಗಳನ್ನು ತೆಗೆದುಕೊಳ್ಳಬಹುದು, ಹಣ್ಣುಗಳನ್ನು ತಿನ್ನಬಹುದು. ಈ ಉಪವಾಸವನ್ನು ಮಾಡುವವರು ಏನೂ ತಿನ್ನದೇ ಇದ್ದರೆ ಇನ್ನೂ ಒಳ್ಳೆಯದು. ಬೆಳಗ್ಗೆಯಿಂದ ಸಂಜೆವರೆಗೆ ಮಾತ್ರ ಉಪವಾಸದಲ್ಲಿ ಇರುವುದರಿಂದ ಏನೂ ಸೇವಿಸದೆ ಇರಲು ಸಾಧ್ಯ.

ಪ್ರದೋಷ ಉಪವಾಸ
ಈ ಉಪವಾಸ ಸೂರ್ಯ ಹುಟ್ಟುವ ಮೊದಲು ಪ್ರಾರಂಭವಾಗುವುದು. ಹಿಂದೂ ಕ್ಯಾಲೆಂಡರ್ ಪ್ರಕಾರ ಹಬ್ಬಗಳು ಸುರ್ಯೋದಯಕ್ಕಿಂತ ಮುಂಚೆ ಪ್ರಾರಂಬವಾಗುವುದು ಎಂದು ಹೇಳಲಾಗುವುದು. ಈ ವ್ರತ ಇಡೀ ದಿನ ನಡೆಯುವುದು. ಯಾರು ಈ ಉಪವಾಸವನ್ನು ಮಾಡುತ್ತಾರೋ ಅವರು ಒಂದು ದಿನ ಪೂರ್ತಿ ಉಪವಾಸ ಇರಬೇಕಾಗುತ್ತದೆ. ಮಾರನೆಯ ದಿನ ಸೋರ್ಯೋದಯವಾದ ಬಳಿಕವಷ್ಟೇ ಆಹಾರವನ್ನು ಸೇವಿಸಬಹುದಾಗಿದೆ. ಯಾರು ಪ್ರದೋಷ ಉಪವಾಸ ಮಾಡುತ್ತಾರೋ ಅವರು ದಿನಪೂರ್ತಿ ಎಚ್ಚರವಾಗಿದ್ದು ಶಿವ ನಾಮ ಹೇಳುತ್ತಾ ಕಳೆಯುತ್ತಾರೆ.
ಇನ್ನು ಈ ವಿಶೇಷ ದಿನದಂದು ಸೂರ್ಯಾಸ್ತಮಕ್ಕೆ ಮುಂಚೆ ಸ್ನಾನ ಮಾಡಿ ಬಡವರಿಗೆ ಪಾತ್ರೆ, ಮತ್ತಿತರ ವಸ್ತುಗಳನ್ನು ಧಾನ ಮಾಡಿದರೆ ಒಳಿತಾಗುವುದು.

16 ಸೋಮವಾರಗಳ ವ್ರತ
ಇದು ಸರಳವಾದ ವ್ರತವಾಗಿದೆ, ಯಾರು ಈ ವ್ರತ ಮಾಡುತ್ತಾರೋ ಸಿವನನ್ನು ಧ್ಯಾನಿಸುತ್ತಾ ಬೆಳಗ್ಗೆ ಶಿವನಿಗೆ ಹೂಗಳನ್ನು ಅರ್ಪಿಸಿ, ದೀಪಗಳನ್ನು ಹಚ್ಚಿ ಪೂಜಿಸಲಾಗುವುದು, ಪೂಜೆಯ ಕೊನೆಯಲ್ಲಿ ವೀಳ್ಯೆದೆಲೆ, ತೆಂಗಿನಕಾಯಿ ಹಾಗೂ ಸಿಹಿ ಪದಾರ್ಥಗಳನ್ನು ನೈವೇದ್ಯವಾಗಿ ಇಡಲಾಗುವುದು. ನಂತರ 16 ಸೋಮವಾರ ವ್ರತ ಮಂತ್ರವನ್ನು ಹೇಳಬೇಕು. ಹೀಗೆ ಮಂತ್ರ ಹೇಳುವಾಗ ಕರ್ಪೂರ ಬೆಳಗಿ ಆರತಿ ಎತ್ತಿ. ಈ ವ್ರತ ಮಾಡುವವರು ದಿನದಲ್ಲಿ ಏನೂ ತಿನ್ನಬಾರದು. ಆ ದಿನ ಶಿವನ ಧ್ಯಾನದಲ್ಲಿಯೇ ಇರಬೇಕು, ಮನೆ ಕೆಲಸಗಳನ್ನು ಮಾಡುವಾಗ, ಆಫೀಸ್ ಕೆಲಸ ಮಾಡುವಾಗ ಶಿವನ ಮಂತ್ರಗಳನ್ನು ಪಠಿಸುತ್ತಾ ಮಾಡಬೇಕು. ಸಂಜೆ ಶಿವನಿಗೆ ದೀಪ ಬೆಳಗಿ ಆರತಿ ಎತ್ತಿ, ನಂತರವಷ್ಟೇ ಅಹಾರ ಸೇವಿಸಬಹುದು. ಈ ರೀತಿ 16 ಸೋಮವಾರ ಮಾಡಬೇಕು.



Click it and Unblock the Notifications