Latest Updates
-
ಸ್ಮ್ಯಾಶ್ ಪ್ಯಾಟ್ರಿಯಾರ್ಕಿ: ದಂಪತಿಗಳ ನಡುವಿನ ಜಗಳಕ್ಕೆ 20 ನಿಮಿಷದ 'ಹೋಮ್ ರಿಸೆಟ್' ಪ್ಲಾನ್! -
ಮಳೆಗಾಲದಲ್ಲಿ ನಿಮ್ಮ ಮನೆ ಮತ್ತು ಬಲ್ಕನಿ ಸುರಕ್ಷಿತವಾಗಿಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್: ಕೇರಳದಲ್ಲಿ ಯೆಲ್ಲೋ ಅಲರ್ಟ್! -
ರಕ್ಷಾಬಂಧನಕ್ಕೆ ಪನ್ನೀರ್ ಖರೀದಿಸುವ ಮುನ್ನ ಎಚ್ಚರ: ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ರಾಖಿ ಹಬ್ಬ 2026: ಆಗಸ್ಟ್ 28ರಂದು ರಕ್ಷಾಬಂಧನ ಆಚರಣೆ; ಶುಭ ಮುಹೂರ್ತ ಮತ್ತು ಭದ್ರಾ ಕಾಲದ ಸಂಪೂರ್ಣ ಮಾಹಿತಿ ಇಲ್ಲಿದೆ -
ಬೆಂಗಳೂರು ಮಳೆ: ಮನೆಯಲ್ಲೇ ಮಾಡಿ 15 ನಿಮಿಷದ ನೋ-ಜಂಪ್ ವರ್ಕೌಟ್, ಫಿಟ್ ಆಗಿರಿ! -
ಮಳೆಗಾಲದ ಪ್ರಯಾಣ: ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ನಡೆಯಲು 7 ನಿಮಿಷದ ಸರಳ ವ್ಯಾಯಾಮಗಳು -
ಮಳೆಗಾಲದ ಪ್ರಯಾಣ: ಟ್ರಾಫಿಕ್ ಮತ್ತು ಕ್ಯಾಬ್ ಸಮಸ್ಯೆಗಳ ನಡುವೆ ದಂಪತಿಗಳು ನೆಮ್ಮದಿ ಕಾಪಾಡಿಕೊಳ್ಳುವುದು ಹೇಗೆ? -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ಇಂದಿನ ಪರಿಷ್ಕೃತ ಪಟ್ಟಿ ಮತ್ತು ನಿಮ್ಮ ಪ್ರಕರಣದ ಸ್ಥಿತಿ ಪರಿಶೀಲಿಸಿ -
ಓಣಂ ಹಬ್ಬ: ಮಳೆಗೆ ಹಾಳಾಗದ, ₹500ರೊಳಗೆ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್! -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಜಾಗ ಉಳಿಸುವ ಸುಂದರ ಪೂಕಳಂ ಐಡಿಯಾಗಳು
ಕೊನೆಗೂ ರಾಧೆಯ ಕೊನೆಯ ಇಚ್ಛೆಯನ್ನು ಕೃಷ್ಣ ಈಡೇರಿಸಿದ್ದು ಹೇಗೆ?
ದ್ವಾಪರಯುಗದಲ್ಲಿ ವಿಷ್ಣುವಿನ ಅವತಾರವಾಗಿದ್ದ ಕೃಷ್ಣ ದೇವರು ಮತ್ತು ಅವರ ಪ್ರೇಯಸಿ ರಾಧೆಯ ಬಗ್ಗೆ ಹಲವಾರು ಕಥೆಗಳು ಇವೆ. ಕೃಷ್ಣ ಮತ್ತು ರಾಧೆ ಸ್ನೇಹಿತರಾಗಿದ್ದರು ಎಂದು ಕೆಲವು ಪುರಾಣಗಳು ಹೇಳಿದರೆ, ಇನ್ನು ಕೆಲವು ಪುರಾಣಗಳ ಪ್ರಕಾರ ಅವರು ಪ್ರೇಮಿಗಳಾಗಿದ್ದರೂ ಎಂದು ಹೇಳುತ್ತವೆ. ತುಂಬಾ ಪವಿತ್ರ ಆತ್ಮಗಳೆರಡರ ಪ್ರೇಮದ ಬಗ್ಗೆ ಯಾವತ್ತೂ ಜನರು ವಿರೋಧ ವ್ಯಕ್ತಪಡಿಸಿರಲಿಲ್ಲ. ಇಂದಿಗೂ ಹೆಚ್ಚಿನವರು ತಮ್ಮ ಪ್ರೀತಿಯು ಕೃಷ್ಣ ಮತ್ತು ರಾಧೆಯ ಪ್ರೇಮಿಯಂತೆ ಇರಬೇಕೆಂದು ಹೇಳುವರು. ಕೃಷ್ಣನ ರೂಪದಲ್ಲಿ ವಿಷ್ಣು ಮತ್ತು ರಾಧೆಯ ರೂಪದಲ್ಲಿ ಲಕ್ಷ್ಮೀಯು ಅವತಾರವೆತ್ತಿದ್ದರು ಎಂದು ಪುರಾಣಗಳು ಹೇಳುತ್ತವೆ. ಇವರು ತಮ್ಮ ಪರಿಶುದ್ಧವಾದ ಪ್ರೀತಿ, ತಾಳ್ಮೆ ಮತ್ತು ನಿರಂತರತೆಗೆ ಸಾಕ್ಷಿಯಾಗಿದ್ದಾರೆ.

ಆಗಿನ ಕಾಲದಲ್ಲೂ ಸಾಮಾಜಿಕವಾಗಿ ಹಲವಾರು ರೀತಿಯ ಕಟ್ಟುಪಾಡುಗಳು ಇದ್ದರೂ ಕೃಷ್ಣನ ಕೊಳಲಿನ ನಾದವನ್ನು ಗುರುತಿಸುತ್ತಿದ್ದ ರಾಧೆಯು ಆತನನ್ನು ಎಲ್ಲಿಗೂ ಹಿಂಬಾಲಿಸಿಕೊಂಡು ಹೋಗುತ್ತಲಿದ್ದಳು. ತನ್ನ ಪ್ರತಿಯೊಂದು ಅವತಾರದಲ್ಲೂ ತಾನು ವಿಷ್ಣು ದೇವರನ್ನು ಮದುವೆಯಾಗಲು ಬಯಸುತ್ತೇನೆ ಎಂದು ಒಂದು ಸಲ ಲಕ್ಷ್ಮೀ ದೇವರು ಹೇಳಿದ್ದರಂತೆ. ಹಾಗಾದರೆ ಕೃಷ್ಣನನ್ನು ರಾಧೆ ಮದುವೆಯಾಗದಿರಲು ಕಾರಣವೇನು?

ಮೂವರು ದೇವರು ಮತ್ತು ಬಿರುಗಾಳಿ
ರಾಧೆಯು ಕೃಷ್ಣನನ್ನು ಮದುವೆಯಾಗಬೇಕೆಂದು ಕನಸು ಕಂಡಿದ್ದಳು ಮತ್ತು ಬ್ರಹ್ಮ ದೇವರು ಕೂಡ ಆಕೆಯ ಕನಸನ್ನು ನನಸು ಮಾಡಲು ಬಯಸಿದ್ದರು. ಪುರಾಣಗಳು ಹೇಳುವಂತೆ ಒಂದು ಸಲ ಬಾಲ ಕೃಷ್ಣನು ತನ್ನ ತಂದೆ ನಂದ ಅವರ ಜತೆಗೆ ಹೋಗುತ್ತಲಿದ್ದಾಗ ದೊಡ್ಡದಾದ ಬಿರುಗಾಳಿಯೊಂದು ದಾರಿಯಲ್ಲಿ ಎದುರಾಯಿತು. ಇದರ ಪರಿಣಾಮ ನಂದನಿಗೆ ಏನು ಕಾಣಲಿಲ್ಲ. ತನ್ನ ಬೆರಳನ್ನು ಹಿಡಿದುಕೊಂಡಿದ್ದ ಬಾಲ ಕೃಷ್ಣನು ಇದನ್ನು ಬಿಟ್ಟಿದ್ದಾನೆ ಎಂದು ನಂದ ಭಾವಿಸಿದ. ಇದು ನಡೆದಾಗ ಬ್ರಹ್ಮ ದೇವರು ಬಂದು ಬಿರುಗಾಳಿ ಮಧ್ಯೆ ರಾಧೆಯನ್ನು ಕೃಷ್ಣನಿಗೆ ಕೊಟ್ಟು ಮದುವೆ ಮಾಡಿದರು. ಅದಾಗ್ಯೂ, ಯಾರಿಗೂ ಕೂಡ ಇದರ ಬಗ್ಗೆ ಮಾತ್ರ ತಿಳಿಯಲೇ ಇಲ್ಲ.

ದ್ವಾರಕದಲ್ಲಿ ರಾಧೆಯನ್ನು ಕೃಷ್ಣ ಭೇಟಿಯಾದ
ಕೃಷ್ಣನು ಬೆಳೆದು ದೊಡ್ಡವನಾದ ಬಳಿಕ ಆತ ಗೋಕುಲವನ್ನು ಬಿಟ್ಟು ಮಥುರಾಗೆ ತೆರಳಿದ ಮತ್ತು ಇದರಿಂದಾಗಿ ರಾಧೆ ಹಾಗೂ ಕೃಷ್ಣ ದೂರವಾದರು. ಕೃಷ್ಣನು ದ್ವಾರಕೆಯಲ್ಲಿ ತನ್ನದೇ ಆಗಿರುವಂತಹ ರಾಜ್ಯ ನಿರ್ಮಾಣ ಮಾಡಿದ ಬಳಿಕ ರಾಧೆಯು ಅಲ್ಲಿಗೆ ತೆರಳಿ ಆತನನ್ನು ಭೇಟಿಯಾದಳು ಎಂದು ಪುರಾಣಗಳು ಹೇಳುತ್ತವೆ.
ಆಕೆಯನ್ನು ನೋಡಿದ ಕೃಷ್ಣನು ತುಂಬಾ ಸಂತೋಷಪಡುವನು. ತನ್ನನ್ನು ನಿನ್ನ ಭಕ್ತೆಯಾಗಿ ಸ್ವೀಕಾರ ಮಾಡಿಕೊಂಡು ಅರಮನೆಯಲ್ಲಿ ಏನಾದರೂ ಕಾರ್ಯವನ್ನು ನೀಡುವಂತೆ ರಾಧೆಯು ಕೃಷ್ಣನಲ್ಲಿ ಕೇಳಿಕೊಳ್ಳುವಳು. ರಾಧೆ ತನ್ನ ಗುರುತನ್ನು ಯಾರಿಗೂ ಬಿಟ್ಟುಕೊಡುವುದಿಲ್ಲ. ಇದಕ್ಕೆ ಕೃಷ್ಣನು ಕೂಡ ಒಪ್ಪಿಕೊಳ್ಳುವನು.

ಕೃಷ್ಣನ ಅರಮನೆಯಲ್ಲಿ ರಾಧೆ
ಕೃಷ್ಣನ ಒಂದು ನೋಟದಿಂದಲೇ ರಾಧೆಯು ಸಂತೋಷವಾಗಿರುತ್ತಿದ್ದಳು ಎಂದು ಹೇಳಲಾಗುತ್ತದೆ. ಸಮಯ ಕಳೆದಂತೆ ರಾಧೆಗೆ ತನ್ನ ಆತ್ಮೀಯನಿಂದ ದೂರವಾಗುವ ಭೀತಿ ಮಾತ್ರ ಯಾವತ್ತೂ ರಾಧೆಯಲ್ಲಿ ಇರುತ್ತದೆ. ರಾಧೆಯು ಈ ಭೀತಿಯನ್ನು ಮೀರಿ ಜೀವಿಸಲು ಸಾಧ್ಯವಾಗದೆ ಇರುವಂತಹ ಸಮಯದಲ್ಲಿ ಆಕೆ ಅರಮನೆಯನ್ನು ಶಾಶ್ವತವಾಗಿ ಬಿಟ್ಟು ತೆರಳುವಳು.

ರಾಧೆಯ ಆಶಯ
ರಾಧೆಯ ಹೃದಯಲ್ಲಿ ಅಸುರಕ್ಷತೆಯ ಭಾವನೆಯನ್ನು ಅರ್ಥ ಮಾಡಿಕೊಂಡಿದ್ದ ಕೃಷ್ಣನು ಆಕೆಯನ್ನು ಹಿಂಬಾಲಿಸಿಕೊಂಡು ಹೋಗುವನು. ಕೃಷ್ಣ ಆಕೆಯನ್ನು ತಡೆದು, ನೀವು ಯಾಕೆ ಅರಮನೆಯನ್ನು ಬಿಟ್ಟೆ ಎಂದು ಕಾರಣ ಕೇಳುತ್ತಾನೆ. ಅರಮನೆ ಬಿಟ್ಟು ತೆರಳದಂತೆ ಆತ ಮನವಿ ಮಾಡುತ್ತಾನೆ ಮತ್ತು ಆಕೆಯ ಯಾವುದೇ ಬಯಕೆಯನ್ನು ಈಡೇರಿಸುವುದಾಗಿ ಹೇಳುವನು. ಈ ವೇಳೆ ರಾಧೆಯು ತನಗಾಗಿ ಕೊಳಲನ್ನು ನುಡಿಸಬೇಕೆಂದು ಹೇಳುವಳು. ಕೃಷ್ಣನು ಕೊಳಲನ್ನು ನುಡಿಸಿದ ವೇಳೆ ಅದರಿಂದ ಪ್ರೀತಿಯು ಹೊರಬರುವುದು ಮತ್ತು ರಾಧೆಯು ಮಾನವ ಜೀವನದ ಕೊನೆಯ ಉಸಿರನ್ನೆಳೆಯುವಳು. ಈ ವೇಳೆ ಅಸಾಯಕನಾದ ಕೃಷ್ಣನು ತನ್ನ ಕೊಳಲನ್ನು ದೂರಕ್ಕೆ ಎಸೆಯುವನು. ಆಗ ಅದು ಚೂರುಚೂರಾಗಿ ಹೋಗುವುದು.



Click it and Unblock the Notifications