Latest Updates
-
ಪರಿಸರ ಸ್ನೇಹಿ ಡೇಟಿಂಗ್: ₹300 ರೊಳಗೆ ನಿಮ್ಮ ಪ್ರೀತಿಯನ್ನು ಹಸಿರಾಗಿಸುವ 12 ಅದ್ಭುತ ಐಡಿಯಾಗಳು! -
ಬೆಂಗಳೂರು ಮಳೆ: ಮನೆಯಲ್ಲಿ ನೀರು ನುಗ್ಗಿದೆಯೇ? ತೇವ ಮತ್ತು ದುರ್ವಾಸನೆ ಹೋಗಲಾಡಿಸಲು ಇಲ್ಲಿವೆ ಸರಳ ಟಿಪ್ಸ್! -
ಡೆಂಗ್ಯೂ ಆತಂಕ: ಮಧುಮೇಹಿಗಳು ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿದೆ ವಿಶೇಷ ಆಹಾರ ಪ್ಲಾನ್ -
iPhone 18 ಸೇಲ್: ನಿಮ್ಮ ಹೊಸ ಫೋನ್ ಪಡೆಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ದೆಹಲಿ-ಎನ್ಸಿಆರ್ ಮಳೆ ಎಚ್ಚರಿಕೆ: ಹೊರಗೆ ಹೋಗುವ ಬದಲು ಮನೆಯಲ್ಲೇ ಮಾಡಿ 12 ನಿಮಿಷದ ವರ್ಕೌಟ್! -
ಸೆಪ್ಟೆಂಬರ್ 15ರ ಲವ್ ರಾಶಿಫಲ: ನಿಮ್ಮ ಸಂಗಾತಿಯ ಮನ ಗೆಲ್ಲಲು ಈ 2 ನಿಮಿಷದ ಸೂತ್ರ ಬಳಸಿ! -
ಮಳೆಗಾಲದ ಎಚ್ಚರಿಕೆ: ಮುಂಬೈ-ಪುಣೆಯಲ್ಲಿ ಮನೆ ಸೋರಿಕೆ ತಡೆಯಲು 30 ನಿಮಿಷದ ಸಿಂಪಲ್ ಟಿಪ್ಸ್ -
ಅಡುಗೆಮನೆ ಬಜೆಟ್ ಏರಿಕೆ: ₹30 ಕ್ಕಿಂತ ಕಡಿಮೆ ವೆಚ್ಚದಲ್ಲಿ ಆರೋಗ್ಯಕರ ಪ್ರೋಟೀನ್ ಆಹಾರ ಪಡೆಯುವುದು ಹೇಗೆ? -
iOS 27 ಅಪ್ಡೇಟ್ ನಂತರ ಫೋನ್ ಬ್ಯಾಟರಿ ಬೇಗ ಖಾಲಿಯಾಗುತ್ತಿದೆಯೇ? ಗಾಬರಿಯಾಗಬೇಡಿ, ಈ ಟಿಪ್ಸ್ ಫಾಲೋ ಮಾಡಿ! -
ಗಣೇಶ ವಿಸರ್ಜನೆ: ಮೂರ್ತಿ ಹೊರುವಾಗ ಬೆನ್ನು ನೋವು ಕಾಡದಿರಲು ಈ ಸರಳ ಟಿಪ್ಸ್ ಪಾಲಿಸಿ
ಗುರುಪೂರ್ಣಿಮಾ 2020: ಗುರುವಿನ ಮಹತ್ವ, ಪೂಜಾ ಸಮಯ
ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ|
ಚಕ್ಷುರುನ್ಮೀಲಿತಂ ದೇವ ತಸ್ಮೈ ಶ್ರೀ ಗುರುವೇ ನಮಃ
ಶಿಷ್ಯನ ಅಜ್ಞಾನವೆಂಬ ಬೇನೆಯನ್ನು ಜ್ಞಾನವೆಂಬ ಅಂಜನದಿಂದ ಗುಣಪಡಿಸಿ, ಅವನ ಕೀರ್ತಿ ಎಲ್ಲೆಡೆ ಪಸರಿಸುವಂತೆ ಮಾಡಿದ ಶ್ರೀ ಗುರುವಿಗೆ ಕೃತಜ್ಞತೆ.
ಗುರುಗಳಿಗೆ ಧನ್ಯತಾ ಭಾವವಾಗಿ ವಂದನೆ ಅರ್ಪಿಸುವ ಗುರು ಪೂರ್ಣಿಮಾವನ್ನು ಪ್ರತಿ ವರ್ಷವೂ ಆಷಾಢ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಂದು ಅಥವಾ ವ್ಯಾಸ ಪೂರ್ಣಿಮೆಯಂದು ಆಚರಿಸಲಾಗುತ್ತದೆ. ಆದಿ ಗುರು ಎಂದು ಪೂಜಿಸುವ ವ್ಯಾಸರನ್ನು ಸ್ಮರಿಸುವ ಸಲುವಾಗಿ ಗುರುಪೂರ್ಣಿಮಾ ಆಚರಣೆ ರೂಢಿಗೆ ಬಂದಿತು.
ಈ ವರ್ಷ ಜುಲೈ 5ರಂದು ಗುರುಸ್ಮರಣೆ ಮಾಡುವ ಸದವಕಾಶ ನಮ್ಮೆಲ್ಲರಿಗೂ ಲಭಿಸಿದೆ.

ಕೊರೋನಾ ಮಹಾಮಾರಿ ನಡುವೆಯೂ ನಮ್ಮ ಜೀವನದ ಏಳ್ಗೆಗೆ ಅಲ್ಲದೇ ನಮ್ಮ ಪ್ರತಿ ಹೆಜ್ಜೆಯಲ್ಲೂ ನಮ್ಮನ್ನು ಸರಿಮಾಡಿದ ಗುರುಗಳಿಗೆ ವಂದಿಸುವ ನಮ್ಮ ಆದ್ಯ ಕರ್ತವ್ಯವನ್ನು ನಾವು ಮಾಡಲೇಬೇಕಿದೆ. ಕಾರಣ, ಗುರುಪೂರ್ಣಿಮೆ ದಿನ ಮಹತ್ವವೇ ಹಾಗಿದೇ, ಇತರೆ ದಿನಗಳಿಗಿಂತ ಈ ದಿನಲ್ಲದಿ ಗುರುಗಳ ಆಶೀರ್ವಾದ ಪಡೆದರೆ ಅದು ಬೇರೆ ಯಾವುದೇ ದಿನಕ್ಕಿಂತ ಸಾವಿರ ಪಟ್ಟು ಅಧಿಕ ಫಲಪ್ರದ ಎನ್ನಲಾಗಿದೆ.

ಗುರು ಎಂದರೆ ಯಾರು
ಗುರು ಎಂಬ ಪದದಲ್ಲಿನ ಗು ಎಂಬ ಅಕ್ಷರಕ್ಕೆ ಅಂಧಕಾರವೆಂದು ರು ಎಂಬುದಕ್ಕೆ ಅದನ್ನು ನಿರೋಧಿಸುವವನು ಎಂಬ ಅರ್ಥವನ್ನು ಸಾರುತ್ತದೆ. ಹಿಂದು ಸಂಪ್ರದಾಯದಲ್ಲಿ ಗುರು ಪೂಜೆ ಮಾಡದೇ ಯಾವ ಕಾರ್ಯವನ್ನು ಆರಂಭಿಸಬಾರದು. ಪ್ರಾಚೀನ ಭಾರತದ ಶಿಕ್ಷಣ ಪದ್ದತಿಯಲ್ಲಿ ಶಿಷ್ಯರನ್ನು ಗುರು ತನ್ನಾಶ್ರಮಕ್ಕೆ ಬರಮಾಡಿಕೊಂಡು ಧಾರ್ಮಿಕ ಮತ್ತು ಲೌಕಿಕ ಶಿಕ್ಷಣಗಳೆರಡನ್ನು ನೀಡುತ್ತಿದ್ದರು. ಶಿಷ್ಯರು ಸಹ ಗುರುವಿನ ಬಗ್ಗೆ ಅನನ್ಯ ಭಕ್ತಿಯಿಂದ ವಿದ್ಯಾರ್ಜನೆ ಮಾಡುತ್ತಿದ್ದರು. ಗುರುಗಳ ಆಶ್ರಮದಲ್ಲಿಯೇ ಇದ್ದು ಭಕ್ತಿ, ಶ್ರದ್ದೆ, ಶುದ್ಧ ಮನಸ್ಸಿನಿಂದ ಸ್ವಾರ್ಥರಹಿತರಾಗಿ ಸೇವೆ ಮಾಡಿ ಗುರುಕೃಪೆಗೆ ಪಾತ್ರರಾಗುತ್ತಿದ್ದನು. ಅಂಥ ಶಿಷ್ಯನಿಗೆ ಗುರು ಅನುಗ್ರಹ ಮಾಡುತ್ತಿದ್ದನು.

ಗುರುಪೂಜೆ ಮಾಡುವ ವಿಧಾನ
ಗುರು ಪೂರ್ಣಿಮೆಯಂದು "ಗುರು ಪರಂಪರಾ ಸಿದ್ದಯರ್ಥಂ ವ್ಯಾಸ ಪೂಜಾಂ ಕರಿಷ್ಯೇ" ಎಂದು ಧ್ಯಾನಿಸುತ್ತಾ, ಶುಭ್ರ ವಸ್ತ್ರವನ್ನು ಧರಿಸಿ, ತಂದೆ-ತಾಯಿ ಸೇರಿದಂತೆ ಗುರುಗಳನ್ನು ಕೂಡಿಸಿ ಪಾದ ಪೂಜೆ ಮಾಡಿ, ಅವರಿಗೆ ಆರತಿ ಮಾಡಬೇಕು. ನಂತರ ಶಿರ ಸಾಷ್ಟಾಂಗ ನಮಸ್ಕಾರ ಸಲ್ಲಿಸಿ ಗುರುದಕ್ಷಿಣೆ ನೀಡಿ, ಹೂ, ಫಲತಾಂಬೂಲ ಸಲ್ಲಿಸಿ, ಅವರಿಂದ ಮಂತ್ರ ಪುಷ್ಪದಿಂದ ಆಶೀರ್ವಾದ ಮಾಡಿಸಿಕೊಳ್ಳಬೇಕು.

ಗುರುಪೂಜಾ ಸಮಯ
ಈ ವರ್ಷದ ಗುರುಪೂರ್ಣಿಮಾವನ್ನು ಜುಲೈ 5ರಂದು ಆಚರಿಸಲಾಗುತ್ತಿದ್ದು, ಮತ್ತೊಂದು ವಿಶೇಷ ಎಂದರೆ ಇದೇ ದಿನ ಚಂದ್ರಗ್ರಹಣ ಸಹ ಬಂದಿದೆ. ಈ ದಿದಿನ ಗುರುಪೂರ್ಣಿಮೆಯು ಜುಲೈ 4ರಂದು ಬೆಳಿಗ್ಗೆ 11.33ಕ್ಕೆ ಆರಂಭವಾಗಿ ಜುಲೈ 5ರಂದು ಬೆಳಿಗ್ಗೆ 10.13ಕ್ಕೆ ಅಂತ್ಯವಾಗಲಿದೆ. ಈ ಸಮಯದಲ್ಲಿ ಗುರುಗಳಿಗೆ ಪೂಜೆ ಮಾಡಲು ಶುಭ ಸಮಯ ಎಂದು ಹಿಂದೂ ಪಂಚಾಂಗ ಹೇಳುತ್ತದೆ.



Click it and Unblock the Notifications
