Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
Gowri Habba 2022: ಗೌರಿ ಹಬ್ಬದ ದಿನ, ಶುಭ ಮುಹೂರ್ತ ಮತ್ತು ಹಬ್ಬದ ಮಹತ್ವ
ಪ್ರಕೃತಿಯ ಪ್ರತಿರೂಪ ಗೌರಿ ದೇವಿ. ಪಾರ್ವತಿ ದೇವಿಯ ಅಪರಾವತಾರ ಗೌರಿ ವ್ರತ ಈ ವರ್ಷ 2022ನೇ ಸಾಲಿನಲ್ಲಿ ಆಗಸ್ಟ್ 30ರಂದು ಆಚರಿಸಲಾಗುತ್ತಿದೆ. ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಹೆಚ್ಚು ಮಹತ್ವ ಪಡೆದಿರುವ ಸ್ವರ್ಣ ಗೌರಿ ವ್ರತ ಪುತ್ರ ವಿನಾಯಕ ಚತುರ್ಥಿಯ ಹಿಂದಿನ ದಿನ ಆಚರಿಸಲಾಗುತ್ತದೆ.
ಶಕ್ತಿ, ಧೈರ್ಯ, ಸ್ಥೈರ್ಯಕ್ಕೆ ಹೆಸರುವಾಗಿಯಾದ ಗೌರಿ ಮಾತೆ ಶಕ್ತಿಯನ್ನು ನಮಗೆ ದಯಪಾಲಿಸಲು ಎಂದು ಮಹಿಳೆಯರು ಗೌರಿಯನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸುತ್ತಾರೆ. ಗೌರಿ ವ್ರತದ ಪೂಜಾ ದಿನ, ಶುಭ ಸಮಯ ಹಾಗೂ ಗೌರಿ ಹಬ್ಬದ ಮಹತ್ವದ ಬಗ್ಗೆ ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ.

ಗೌರಿ ವ್ರತದ ದಿನಾಂಕ, ಶುಭ ಮುಹೂರ್ತ
ಅಗಸ್ಟ್ 30ರಂದು ಮಂಗಳವಾರ
ಭಾದ್ರಪದ ಮಾಸ ಶುಕ್ಲ ಪಕ್ಷದ ತದಿಗೆ
ಪ್ರಾತಃಕಾಲ ಗೌರಿ ಪೂಜಾ ಶುಭ ಮುಹೂರ್ತ: ಬೆಳಗ್ಗೆ 6.08 ರಿಂದ 8.37

ಗೌರಿ ವ್ರತದ ಮಹತ್ವ
ಭಗವಾನ್ ಶಿವನ ಪತ್ನಿ ಮತ್ತು ಗಣೇಶ ಮತ್ತು ಕಾರ್ತಿಕೇಯರ ತಾಯಿ ಗೌರಿ ದೇವಿಯನ್ನು ಅತ್ಯಂತ ಶಕ್ತಿಶಾಲಿ ದೇವಿಯಾಗಿ ಪೂಜಿಸಲಾಗುತ್ತದೆ. ಅವಳು ಶಕ್ತಿ, ದೈವಿಕತೆ, ಸೃಜನಶೀಲ ಶಕ್ತಿಯ ಪರಿಕಲ್ಪನೆಯಾಗಿದ್ದಾಳೆ. ಗೌರಿ ಹಬ್ಬದ ಸಮಯದಲ್ಲಿ, ಶುಕ್ಲ ಪಕ್ಷದಲ್ಲಿ ಅಂದರೆ ಬಾಧ್ರಪದ ಮಾಸದ ಮೂರನೇ ದಿನ ತದಿಗೆಯ ದಿನ ಮಾತಾ ಗೌರಿಯು ತನ್ನ ತವರು ಮನೆಗೆ ಬಂದು ಬಾಗಿನ ಪಡೆಯುತ್ತಾಳೆ, ಮರುದಿನ ಚತುರ್ಥಿಯಂದು ಅವಳ ಮಗ ಗಣೇಶನು ಗೌರಿಯನ್ನು ಕೈಲಾಸ ಪರ್ವತಕ್ಕೆ ಕರೆದೊಯ್ಯುವಂತೆ ಬರುತ್ತಾನೆ. ಅಂತೆಯೇ ಗೌರಿ ವ್ರತದ ದಿನ ವಿವಾಹಿತ ಮಹಿಳೆಯರು ತಮ್ಮ ತವರು ಮನೆಗೆ ಬಂದು ಬಾಗಿನ ಪಡೆಯುವ ಸಂಪ್ರದಾಯ ಈಗಲೂ ಮುಂದುವರೆದಿದೆ.

ಪೂಜಾ ದಿನ, ಶುಭ ಮುಹೂರ್ತ ಮತ್ತು ಹಬ್ಬದ ಮಹತ್ವ
ವಿವಾಹಿತ ಮಹಿಳೆಯರು ತಮ್ಮ ವೈವಾಹಿಕ ಜೀವನ ಉತ್ತಮವಾಗಿರಲು, ಪತಿಯ ದೀರ್ಘಾಯುಷ್ಯ ಹಾಗೂ ಕೌಟುಂಬಿಕ ಜೀವನದ ಶ್ರೇಯೋಭಿವೃದ್ಧಿಗಾಗಿ ಗೌರಿ ದೇವಿಯ ಆಶೀರ್ವಾದ ಪಡೆಯಲು ಸ್ವರ್ಣ ಗೌರಿ ವ್ರತವನ್ನು ಆಚರಿಸುತ್ತಾರೆ. ಅವಿವಾಹಿತ ಹೆಣ್ಣು ಮಕ್ಕಳು ಉತ್ತಮ ಜೀವನ ಸಂಗಾತಿ ಸಿಗಲಿ ಎಂದು ಕೋರಿ ದೇವಿ ವ್ರತವನ್ನು ಮಾಡುತ್ತಾರೆ. ವ್ರತದ ದಿನ ಉಪವಾಸ ಆಚರಿಸುತ್ತಾರೆ, ಗೌರಿಯ ಆಶೀರ್ವಾದ ಎಂದು ಭಾವಿಸಿ 16 ಗಂಟುಗಳ ಗೌರ ದಾರವನ್ನು ಧರಿಸುತ್ತಾರೆ.



Click it and Unblock the Notifications