Latest Updates
-
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು!
ನವರಾತ್ರಿಯಲ್ಲಿ ಕಳಸ ಸ್ಥಾಪನೆ: ದಿನಾಂಕ, ಶುಭ ಮುಹೂರ್ತ ಹಾಗೂ ಮಹತ್ವ
ಘಟಸ್ಥಾಪನೆ ಅಥವಾ ಕಲಶ ಸ್ಥಾಪನೆ ನವರಾತ್ರಿಯ ಪ್ರಮುಖ ಆಚರಣೆಗಳಲ್ಲಿ ಒಂದಾಗಿದೆ. ಇದನ್ನು ಶಾರದಿಯ ನವರಾತ್ರಿ ಎಂದು ಕೂಡ ಕರೆಯಲಾಗುವುದು. ಈ ದಿನದಿಂದ ದುರ್ಗೆಯ ಒಂಭತ್ತು ಅವತರಗಳನ್ನು ಪೂಜಿಸಲಾಗುವುದು. ಈ ಕಳಶ ಸ್ಥಾಪನೆಗೆ ಕೆಲವೊಂದು ವಿಧಿ-ವಿಧಾನಗಳಿವೆ. ಆ ನಿಯಮಗಳಿಗೆ ಯಾವುದೇ ತಪ್ಪುಗಳಾಗದಂತೆ ಎಚ್ಚರಿಕೆಯಿಂದ ಮಾಡಬೇಕು. ಇಲ್ಲದಿದ್ದರೆ ದುರ್ಗೆಯ ಕೋಪಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಹೇಳಲಾಗುವುದು.
ಘಟಸ್ಥಾಪನೆ ಮಾಡಿ ತಾಯಿ ದುರ್ಗೆಯನ್ನು ಆಹ್ವಾನಿಸಬೇಕು. ಕಲಶ ಸ್ಥಾಪನೆಗೆ ಒಂದು ನಿರ್ದಿಷ್ಟ ಸಮಯದಲ್ಲಿ ಮಾಡಬೇಕು. ಯಾವ್ಯಾವುದೋ ಸಮಯದಲ್ಲಿ ಕಳಶ ಸ್ಥಾಪನೆ ಮಾಡಲಾಗುವುದಿಲ್ಲ, ಅಲ್ಲದೆ ಅಮವಾಸ್ಯೆಗೆ ಮಾಡಲಾಗುವುದಿಲ್ಲ. ದುರ್ಗಾ ಶಕ್ತಿಯ ಆಶೀರ್ವಾದ ಪಡೆಯಲು, ಅವಳ ಅನುಗ್ರಹ ಸದಾ ನಮ್ಮ ಮೇಲಿರಲು ಅಭಿಜಿತ್ ಮುಹೂರ್ತದಲ್ಲಿ ಘಟಸ್ಥಾಪನೆ ಮಾಡಲಾಗುವುದು. 2021ರಲ್ಲಿ ಘಟಸ್ಥಾಪನೆಯ ದಿನಾಂಕ ಶುಭ ಮುಹೂರ್ತ ಹಾಗೂ ಪೂಜೆಯ ವಿಧಿ-ವಿಧಾನಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ...

ಘಟಸ್ಥಾಪನೆ ದಿನಾಂಕ ಹಾಗೂ ಪೂಜಾ ಮುಹೂರ್ತ
ಶಾರದಿಯ ನವರಾತ್ರಿ ಆರಂಭ: ಅಕ್ಟೋಬರ್ 7
ಘಟಸ್ಥಾಪನೆಗೆ ಶುಭ ಮುಹೂರ್ತ: ಬೆಳಗ್ಗೆ 6.17 ರಿಂದ 7.07 ರವರೆಗೆ. ಈ ಸಮಯದಲ್ಲಿ ಘಟಸ್ಥಾಪನ ಮಾಡುವುದರಿಂದ ನವರಾತ್ರಿ ಫಲಪ್ರದವಾಗುತ್ತದೆ.
ಅಭಿಜಿತ್ ಮುಹೂರ್ತ ಕಳಶ ಸ್ಥಾಪಿಸಲು ಅತ್ಯುತ್ತಮವೆಂದು ಪರಿಗಣಿಸಲಾಗಿದೆ.

ಕಲಶ ಸ್ಥಾಪನೆಗೆ ಬೇಕಾಗುವ ಸಾಮಗ್ರಿ
7 ಬಗೆಯ ಧಾನ್ಯಗಳು, ಅಗಲವಾದ ಬಾಯಿಯ ಮಣ್ಣಿನ ಮಡಿಕೆ, ಪವಿತ್ರ ಸ್ಥಳದಿಂದ ತಂದ ಮಣ್ಣು, ಕಳಶ, ಗಂಗಾಜಲ, ಪವಿತ್ರದಾರ, ಅಕ್ಷತೆ, ಮಾವು ಅಥವಾ ಅಶೋಕ ಎಲೆಗಳು, ವೀಳ್ಯದೆಲೆ, ಅಡಿಕೆ ತೆಂಗಿನಕಾಯಿ, ನಾಣ್ಯಗಳು, ಕೆಂಪು ಬಟ್ಟೆ ಮತ್ತು ಹೂವುಗಳು, ಗರಿಕೆ ಹುಲ್ಲು ಬೇಕಾಗುತ್ತವೆ.

ಘಟಸ್ಥಾಪನೆಯ ಮಹತ್ವ
ಘಟಸ್ಥಾಪನೆ ಅಥವಾ ಕಲಶ ಸ್ಥಾಪನೆಯನ್ನು ಪ್ರತಿಪಾದ ತಿಥಿ, ಚೈತ್ರಾ ನಕ್ಷತ್ರ, ಶುಕ್ಲ ಪಕ್ಷದಲ್ಲಿ ಮಾಡಲಾಗುವುದು. ಇಲ್ಲಿಂದ ನವರಾತ್ರಿ ಪ್ರಾರಂಭ. ಮೊದಲ ದಿನ ನವದುರ್ಗೆಯ ಮೊದಲ ರೂಪವಾದ ಶೈಲಪುತ್ರಿ ಅವತಾರವನ್ನು ಆರಾಧಿಸಲಾಗುವುದು. ಇದನ್ನು ಆಚರಣೆ ಮಾಡುವುದರಿಂದ ನವದುರ್ಗೆಯರ ಆಶೀರ್ವಾದ ನಮ್ಮ ಮೇಲಿರುವುದು. ಕಳಸ ಸ್ಥಾಪನೆ ಮಾಡದೆ ನವರಾತ್ರಿ ಆಚರಣೆ ಸಂಪೂರ್ಣವಾಗುವುದಿಲ್ಲ.
ಕಳಸ ಪ್ರತಿಷ್ಠಾಪನೆ ಮಾಡಿ ದೇವಿಯನ್ನು ಆಹ್ವಾನಿಸಲಾಗುವುದು. ನಂತರವಷ್ಟೇ ನವರಾತ್ರಿಯ ಆಚರಣೆ ಆರಂಭವಾಗುವುದು.



Click it and Unblock the Notifications
