Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ಭಾದ್ರಪದ ಮಾಸ 2020: ಹಬ್ಬ, ಶುಭದಿನ ಮತ್ತು ಅಮಾವಾಸ್ಯೆ ದಿನಗಳು
ಭಗವಾನ್ ಕೃಷ್ಣನಿಗೆ ಪ್ರಿಯವಾದ ಮಾಸ ಭಾದ್ರಪದ ಮಾಸ. ಭಗವಾನ್ ಕೃಷ್ಣ ಮತ್ತು ಆತನ ಸಹೋದರ ಬಲರಾಮನ ಭಾದ್ರಪದ ಮಾಸದಲ್ಲಿ ಜನಿಸಿದರು. ಆದ್ದರಿಂದ ಭಾದ್ರಪದ ಮಾಸ ಕೃಷ್ಣನ ಅತ್ಯಂತ ಪ್ರಿಯವಾದ ಮಾಸ ಎಂದು ಹೇಳಲಾಗುತ್ತದೆ.

ಕರ್ನಾಟಕದ ಹಿಂದೂ ಪಂಚಾಂಗದ ಪ್ರಕಾರ ಭಾದ್ರಪದ ಮಾಸ ಆರನೇ ತಿಂಗಳಲ್ಲಿ ಬರಲಿದೆ. 2020ನೇ ಸಾಲಿನಲ್ಲಿ ಭಾದ್ರಪದ ಮಾಸವು ಆಗಸ್ಟ್ 19ರಿಂದ ಆರಂಭವಾಗಿ ಸೆಪ್ಟೆಂಬರ್ 17ರವರೆಗೆ ಇರಲಿದೆ. ಈ ಮಾಸದ ಸೆಪ್ಟೆಂಬರ್ 14 ರಿಂದ ಸೆಪ್ಟೆಂಬರ್ 28 ರವರೆಗೆ ಮಹಲ್ಯ ಶ್ರದ್ಧಾ ಅವಧಿ (ಸರ್ವ ಪಿತೃ ಅಮಾವಾಸ್ಯೆ)ಯನ್ನು ನಡೆಸಲಾಗುತ್ತದೆ.
ಭಾದ್ರಪದ ಮಾಸವನ್ಉ ಶೂನ್ಯ ಮಾಸ ಎಂದೂ ಸಹ ಕರೆಯಲಾಗುತ್ತದೆ. ಈ ಮಾಸದಲ್ಲಿ ಮದುವೆ, ಗೃಹಪ್ರವೇಶ, ನಿಶ್ಚಿತಾರ್ಥ ಸೇರಿದಂತೆ ಯಾವುದೇ ಶುಭ ಕಾರ್ಯಗಳಿಗೆ ಶುಭ ಮಾಸ ಎನ್ನಲಾಗುತ್ತದೆ.
ಈ ಮಾಸದಲ್ಲಿ ಬರುವ ಪ್ರಮುಖ ಹಬ್ಬಗಳು ಸ್ವರ್ಣ ಗೌರಿ ವ್ರತ (ಆಗಸ್ಟ್ 21) ಮತ್ತು ಗಣೇಶ ಚತುರ್ಥಿ (ಆಗಸ್ಟ್ 22). ಇತರ ಶುಭ ದಿನಗಳು ಅಥವಾ ಪೂಜಾ ದಿನಗಳೆಂದರೆ, ಋಷಿ ಪಂಚಮಿ, ಅನಂತ ಚತುರ್ದಶಿ ಅನಂತ ವ್ರತ, ಪಿತೃ ಪಕ್ಷ, ಶ್ರದ್ಧಾ ಅಮಾವಾಸ್ಯೆ, ವಾಮನ ಜಯಂತಿ, ಗಜಾ ಗೌರಿ ವ್ರತ ಇತ್ಯಾದಿ.

1. ಭಾದ್ರಪದ ಮಾಸದಲ್ಲಿರುವ ಪ್ರಮುಖ ಹಬ್ಬಗಳು
ಶುಕ್ರವಾರ 21 ಆಗಸ್ಟ್ - ಸ್ವರ್ಣ ಗೌರಿ ವ್ರತ/ಹರ್ತಲಿಕಾ ತೀಜ್
ಶನಿವಾರ 22 ಆಗಸ್ಟ್- ಗಣೇಶ ಚತುರ್ಥಿ
ಭಾನುವಾರ 23 ಆಗಸ್ಟ್ - ರಿಷಿ ಪಂಚಮಿ
ಬುಧವಾರ 26 ಆಗಸ್ಟ್ - ರಾಧಾ ಅಷ್ಟಮಿ
ಶನಿವಾರ 29 ಆಗಸ್ಟ್ - ಪಾರ್ಶ್ವ ಏಕಾದಶಿ
ಮಂಗಳವಾರ 1 ಸೆಪ್ಟೆಂಬರ್- ಅನಂತ ಚತುರ್ದಶಿ
ಮಂಗಳವಾರ 1 ಸೆಪ್ಟೆಂಬರ್- ಗಣೇಶ ವಿಸರ್ಜನೆ
ಬುಧವಾರ 2 ಸೆಪ್ಟೆಂಬರ್ - ಪ್ರತಿಪಾದ ಶ್ರದ್ಧಾ
ಬುಧವಾರ 2 ಸೆಪ್ಟೆಂಬರ್ - ಬಾಧ್ರಪದ ಪೂರ್ಣಿಮಾ
ಭಾನುವಾರ 13 ಸೆಪ್ಟೆಂಬರ್ - ಇಂದಿರಾ ಏಕಾದಶಿ
ಬುಧವಾರ 16 ಸೆಪ್ಟೆಂಬರ್ - ಕನ್ಯಾ ಸಂಕ್ರಾಂತಿ
ಗುರುವಾರ 16 ಸೆಪ್ಟೆಂಬರ್ - ಸರ್ವ ಪಿತೃ ಅಮಾವಾಸ್ಯೆ (ಮಹಾಲಯ ಅಮಾವಾಸ್ಯೆ)
ಗಣೇಶನಿಗೆ ಅರ್ಪಿತವಾದ ಸಂಕಷ್ಟಹರ ಚತುರ್ಥಿ ವ್ರತವು ಸೆಪ್ಟೆಂಬರ್ 5ರಂದು ಚಂದ್ರೋದಯ ರಾತ್ರಿ 8:42ಕ್ಕೆ ಇದೆ.

2. ಭಾದ್ರಪದ ಮಾಸದಲ್ಲಿ ಪ್ರದೋಷ ಉಪವಾಸದ ದಿನಗಳು
ಪ್ರದೋಷ - ಆಗಸ್ಟ್ 30
ಪ್ರದೋಷ - ಸೆಪ್ಟೆಂಬರ್ 15
ಭಾದ್ರಪದ ಮಾಸದಲ್ಲಿ ಏಕಾದಶಿ ಉಪವಾಸದ ದಿನಗಳು
ಪರಿವರ್ತಿನಿ ಏಕಾದಶಿ - ಆಗಸ್ಟ್ 29
ಇಂದಿರಾ ಏಕಾದಶಿ - ಸೆಪ್ಟೆಂಬರ್ 13

3. ಭಾದ್ರಪದ ಮಾಸದ ಶುಕ್ಲ ಪಕ್ಷ ಮತ್ತು ಕೃಷ್ಣ ಪಕ್ಷ
ಭಾದ್ರಪದ ಮಾಸದ ಶುಕ್ಲ ಪಕ್ಷ ಆಗಸ್ಟ್ 19 ರಿಂದ ಸೆಪ್ಟೆಂಬರ್ 2 ರವರೆಗೆ.
ಭಾದ್ರಪದ ಮಾಸದ ಕೃಷ್ಣ ಪಕ್ಷ ಸೆಪ್ಟೆಂಬರ್ 3 ರಿಂದ ಸೆಪ್ಟೆಂಬರ್ 17 ರವರೆಗೆ.

4. ಭಾದ್ರಪದ ಮಾಸದ ಪೂರ್ಣಿಮಾ ದಿನ
ಭಾದ್ರಪದ ಮಾಸದ ಪೂರ್ಣಿಮಾ ಅಥವಾ ಹುಣ್ಣಿಮೆಯ ದಿನವು ಸೆಪ್ಟೆಂಬರ್ 2 ರಂದು ಇದೆ.
ಪೂರ್ಣಿಮೆಯು ಸೆಪ್ಟೆಂಬರ್ 1 ರಂದು ಬೆಳಿಗ್ಗೆ 9:38ಕ್ಕೆ ಪ್ರಾರಂಭವಾಗುತ್ತದೆ ಮತ್ತು ಸೆಪ್ಟೆಂಬರ್ 2ರಂದು ಬೆಳಿಗ್ಗೆ 10:51ಕ್ಕೆ ಕೊನೆಗೊಳ್ಳುತ್ತದೆ.
ಭಾದ್ರಪದ ಮಾಸದ ಅಮಾವಾಸ್ಯೆ
ಸೆಪ್ಟೆಂಬರ್ 17 ಭಾದ್ರಪದ ಮಾಸದ ಅಮವಾಸ್ಯೆ.
ಅಮಾವಾಸ್ಯೆಯು ಸೆಪ್ಟೆಂಬರ್ 16ರಂದು ಸಂಜೆ 7:57ಕ್ಕೆ ಪ್ರಾರಂಭವಾಗುತ್ತದೆ ಮತ್ತು ಸೆಪ್ಟೆಂಬರ್ 17ರಂದು ಸಂಜೆ 4:30ಕ್ಕೆ ಕೊನೆಗೊಳ್ಳುತ್ತದೆ.



Click it and Unblock the Notifications