Latest Updates
-
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ -
ರಣವೀರ್-ದೀಪಿಕಾ ದಂಪತಿಗೆ ಹೆಣ್ಣು ಮಗು: ಹೊಸ ಪೋಷಕರಿಗೆ ಸಂಬಂಧಿಕರು ನೀಡಬೇಕಾದ ಗೌರವಯುತ ಬೆಂಬಲವೇನು? -
ಬೆಂಗಳೂರಿನಲ್ಲಿ ಇಂದು 6 ಗಂಟೆಗಳ ಕಾಲ ನೀರಿನ ವ್ಯತ್ಯಯ: ಈ ಪ್ರದೇಶಗಳ ನಿವಾಸಿಗಳು ಎಚ್ಚರ! -
ಗಣೇಶ ಹಬ್ಬದ ಸಂಭ್ರಮ: ಮಧುಮೇಹಿಗಳಿಗೂ ಸುರಕ್ಷಿತವಾದ ಆರೋಗ್ಯಕರ 'ಉಕಡಿಚೆ ಮೋದಕ' ತಯಾರಿಸುವುದು ಹೇಗೆ? -
ಸೆಪ್ಟೆಂಬರ್ ಇಕ್ವಿನಾಕ್ಸ್: ನಿಮ್ಮ ಕ್ಯಾಮೆರಾದಲ್ಲಿ ಸೂರ್ಯೋದಯ-ಸೂರ್ಯಾಸ್ತದ ಅದ್ಭುತ ದೃಶ್ಯ ಸೆರೆಹಿಡಿಯಿರಿ! -
ವಿಶ್ವ ಕಾರ್-ಫ್ರೀ ಡೇ: ಟ್ರಾಫಿಕ್ ಬಿಟ್ಟು 20 ನಿಮಿಷದ ಈ ಸಿಂಪಲ್ ರೂಟೀನ್ ಫಾಲೋ ಮಾಡಿ! -
ಸೈಫ್-ಕರೀನಾ ಪ್ರೇಮಪತ್ರದ ರಹಸ್ಯ: ನಿಮ್ಮ ಸಂಬಂಧವನ್ನೂ ಗಟ್ಟಿಗೊಳಿಸಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಈರುಳ್ಳಿ ಬೆಲೆ ಏರಿಕೆ: ಬಜೆಟ್ ಉಳಿಸಲು ಮತ್ತು ಈರುಳ್ಳಿ ದೀರ್ಘಕಾಲ ಸಂಗ್ರಹಿಸಲು ಸರಳ ಟಿಪ್ಸ್ -
ಏಕಾದಶಿ ಉಪವಾಸ: ಆರೋಗ್ಯಕರವಾಗಿರಲು ₹300ರಲ್ಲಿ ಪೌಷ್ಟಿಕ ಆಹಾರದ ಪ್ಲಾನ್ ಇಲ್ಲಿದೆ! -
ಸ್ಯಾಮ್ಸಂಗ್ One UI 9 ಅಪ್ಡೇಟ್: ನಿಮ್ಮ ಫೋನ್ಗೆ ಬಂದಿದೆಯೇ? ಸುರಕ್ಷಿತವಾಗಿ ಇನ್ಸ್ಟಾಲ್ ಮಾಡುವುದು ಹೇಗೆ?
ದೇವರು ಅಸ್ತಿತ್ವದಲ್ಲಿ ಇದ್ದಾನೆಯೇ ? ಹೀಗೊಂದು ಪ್ರಶ್ನೆ !
ದೇವರು ನಿಜವಾಗಿಯೂ ಇದ್ದಾನೆಯೇ ? ಪ್ರತಿಯೊಬ್ಬರೂ ಒಂದಲ್ಲ ಒಂದು ಬಾರಿ ಇದರ ಬಗ್ಗೆ ಯೋಚಿಸಿಯೇ ಇರುತ್ತೇವೆ.ದೇವರ ಬಗ್ಗೆ ನಂಬುವುದು ಅವರವರ ಭಾವಕ್ಕೆ ಬಿಟ್ಟದ್ದು ಹಾಗೆಯೇ ಇಲ್ಲ ಎಂದು ಹೇಳುವವರು ಕೂಡ ಅದೊಂದು ಭ್ರಮೆ,ಮರೀಚಿಕೆ ಅಥವಾ ಪುರಾಣ ಎನ್ನುತ್ತಾರೆ.
ನಾವು ಪದೇ ಪದೇ ಚಿಂತಿಸುವ ಈ ದೇವರು, ನಡೆಯುವ ಕೆಲವೊಂದು ಪವಾಡಗಳು ಇವುಗಳ ನಂತರವೂ ದೇವರು ಏಕೆ ಒಂದು ಕಂಡು ಹಿಡಿಯಲಾಗದ ಪ್ರಶ್ನೆಯಾಗಿಯೇ ಉಳಿದಿದ್ದಾನೆ?ನಾವು ಆತನನ್ನು ಸೃಷ್ಟಿಕರ್ತ ಎಂದು ಕರೆಯುವುದಾದರೆ ಏಕೆ ಇಷ್ಟೊಂದು ನೋವುಗಳನ್ನು ಅನುಭವಿಸುತ್ತಿದ್ದೇವೆ? ಅವನೇ ಸೃಷ್ಟಿಸಿದ ಅವನ ಮಕ್ಕಳಾದ ನಾವೆಲ್ಲಾ ಏಕಿಷ್ಟು ನೋವನ್ನು ಅನುಭವಿಸಬೇಕಾಗಿ ಬರುತ್ತಿದೆ. ಅವನ ಮಕ್ಕಳಿಗೇ ಏಕೆ ಹತಾಶರಾಗುವಂತೆ ಆಗುತ್ತಿದೆ,ಸ್ವಂತ ಮಗುವನ್ನೇ ಸಂಕಟಕ್ಕೆ ತಳ್ಳಲು ಯಾರು ಇಚ್ಚಿಸುತ್ತಾರೆ?
ದೈವಿಕ ಶಕ್ತಿ ಹೊಂದಿರುವ ಭಾರತದ ಆರು ವೃಕ್ಷಗಳು
ಹೀಗೆ ನಮ್ಮಲ್ಲಿ ಸಾಕಷ್ಟು ಯೋಚನೆಗಳು ಬರುತ್ತವೆ ಮತ್ತು ಅವುಗಳಿಗೆ ಉತ್ತರವಿಲ್ಲ!ಈ ಎಲ್ಲಾ ಪ್ರಶ್ನೆಗಳಿಗೆ ಜಿಜ್ಞಾಸೆಗಳಿಗೆ ಉತ್ತರಿಸಲು ದೇವರು ಯಾರನ್ನೂ ಕೂಡ ನೇರವಾಗಿ ಸ್ವರ್ಗದಿಂದ ಕಳಿಸಿಕೊಟ್ಟಿಲ್ಲ.ನಾವು ನಮ್ಮದೇ ವಿಚಾರಲಹರಿಯ ಮೂಲಕ ಚಿಂತಿಸಿ ಕೊನೆಗೊಂದು ಉತ್ತರವನ್ನು ಕಂಡು ಹಿಡಿದುಕೊಳ್ಳಲು ಸತ್ಯ ಅಥವಾ ದೇವರು ಎಂಬುದನ್ನು ಒಪ್ಪಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಾನೆ ಎನ್ನಬಹುದಷ್ಟೆ. ಬ್ರಹ್ಮಾಂಡ, ಸೂರ್ಯ, ನೀರು, ಶಕ್ತಿ,

ಇವುಗಳೆಲ್ಲವನ್ನು ನೋಡಿದಾಗ ನಿಗೂಡವಾದ ಒಂದು ಶಕ್ತಿ ಇರುವುದು ಕಂಡು ಬರುತ್ತದೆ.ಇವುಗಳೆಲ್ಲ ಪ್ರತಿದಿನ ಇಲ್ಲದಿದ್ದರೆ ದಿನಗಳು ನಡೆಯುವುದು ಸಾಧ್ಯವಾಗುತ್ತಲೇ ಇರಲಿಲ್ಲ. ವಿಶಾಲ ಅರ್ಥದಲ್ಲಿ ದೇವರು ತಂದೆ, ಸೃಷ್ಟಿಕರ್ತ,ಆತನೇ ಅಂತಿಮ ಎನ್ನಲಾಗುತ್ತದೆ.
ಪ್ರತಿಯೊಂದು ಕಾರ್ಯವನ್ನೂ ಆದಷ್ಟು ಪರಿಪೂರ್ಣ ರೀತಿಯಲ್ಲಿ ದೋಷರಹಿತವಾಗಿ ಮಾಡಲು ಆತ ಪ್ರಯತ್ನಿಸುತ್ತಾನೆ.ಆತ ಸರ್ವಶಕ್ತಿ,ಸರ್ವವ್ಯಾಪಿಯಾದ ಹಿತಚಿಂತಕನಾಗಿದ್ದಾನೆ.ಆತ ಶಕ್ತಿಯುತ ಆದ್ದರಿಂದ ತನ್ನ ರೀತಿಯಲ್ಲಿ ನಡೆಸಿಕೊಂಡು ಹೋಗುತ್ತಾನೆ ಮನುಷ್ಯರಿಗೆ ಯಾವುದೇ ರೀತಿಯಲ್ಲಿ ನಿಯಂತ್ರಿಸುವ ಅಧಿಕಾರವಿಲ್ಲ.
ಕಾಮಕ್ಯ ದೇವಿ ಮುಟ್ಟಾದರೆ ಬ್ರಹ್ಮಪುತ್ರಾ ಕೆಂಪಾಗುವುದು!
ನಂಬುವವರು ನಂಬುತ್ತಾರೆ ನಂಬದೆ ಇರುವವರು ನಿಜಕ್ಕಾಗಿ ಆಧಾರ ಹುಡುಕುತ್ತಾರೆ.ನಾವು ವಿಚಾರಹೀನ ಚಿಂತನೆ ಮಾಡಬಾರದು ಮತ್ತು ಆತನನ್ನು ನಂಬುವುದರಿಂದ ಯಾವುದೇ ಕೇಡಿಲ್ಲ ಎಂಬುದನ್ನು ತಿಳಿದುಕೊಳ್ಳಬೇಕು.
ದೇವರು ಇದ್ದಾನೆಯೇ ಎಂಬ ಈ ಪ್ರಶ್ನೆ ಎಷ್ಟು ಅಗಾಧವಾದುದು ಎಂದರೆ ಇದಕ್ಕೆ ಉತ್ತರ ಹುಡುಕುವಲ್ಲಿ ಜೀವನದ ಸಾಕಷ್ಟು ವರ್ಷಗಳು ಕಳೆದುಹೋಗುತ್ತವೆ.ಒಂದು ದಿನ ಅಥವಾ ಒಂದು ವಾರ,ಒಂದು ವರ್ಷದಲ್ಲಿ ಇದಕ್ಕೆ ಉತ್ತರ ದೊರಕುವುದಿಲ್ಲ.ಇದು ಸಂಪೂರ್ಣ ಸುಳ್ಳು ಅಥವಾ ಸಂಪೂರ್ಣ ಸತ್ಯ ಎಂಬುದನ್ನು ಕಂಡು ಹಿಡಿಯಲು ಅಥವಾ ಒಪ್ಪಿಕೊಳ್ಳುವುದು ವಿಶಾಲವಾದ,ಜಟಿಲವಾದ ಪ್ರಶ್ನೆ ಎಂದೇ ಹೇಳಬಹುದು.ಆದ್ದರಿಂದ ನಂಬಿಕೆ ಕಳೆದುಕೊಳ್ಳಬೇಡಿ ದೇವರು ಯಾವಾಗ ನಿಮಗೆ ಸಂತೋಷದ ಬಾಗಿಲನ್ನು ತೆಗೆಯುತ್ತಾನೆ ಎಂಬುದು ಯಾರಿಗೂ ತಿಳಿದಿರುವುದಿಲ್ಲ.



Click it and Unblock the Notifications
