Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಏನಿದು ಆಶ್ಚರ್ಯ; ಶ್ರೀರಾಮಚಂದ್ರನಿಗೂ ಸೋದರಿ ಇದ್ದರಂತೆ?
ಇದು ಅಸಾಧ್ಯ ಎಂಬ ಭಾವನೆ ನಿಮ್ಮಲ್ಲೂ ಸಹ ಇರಬಹುದು. ಆದರೆ ರಾಮಾಯಣದ ವಿವಿಧ ಪ್ರಕಾರಗಳಲ್ಲಿ ಈ ಬಗೆಯ ನಿದರ್ಶನಗಳು ಸಹ ಸಿಗುತ್ತದೆ. ಅವುಗಳ ಪ್ರಕಾರ ಶ್ರೀ ರಾಮಚಂದ್ರನಿಗು ಸಹ ಒಬ್ಬ ಸಹೋದರಿಯಿದ್ದಳು. ನಿಮಗೆಲ್ಲರಿಗು ತಿಳಿದಿರುವಂತೆ ರಾಮಾಯಣವನ್ನು ವಿವಿಧ ಕವಿಗಳು, ವಿವಿಧ ಭಾಷೆಗಳಲ್ಲಿ ಬರೆದಿದ್ದಾರೆ. ದಕ್ಷಿಣ ಭಾರತದ ರಾಮಾಯಣದ ಪ್ರಕಾರದಲ್ಲಿ ದಶರಥ ಮಹಾರಾಜನಿಗೆ ರಾಮ, ಲಕ್ಷ್ಮಣ, ಭರತ ಮತ್ತು ಶತ್ರುಘ್ನ ಈ ನಾಲ್ಕು ಮಕ್ಕಳಲ್ಲದೆ ಇವರೆಲ್ಲರಿಗು ಹಿರಿಯಳಾದ ಕೌಸಲ್ಯ ತನುಜೆಯಾದ ಶಾಂತ ಎಂಬ ಮಗಳು ಸಹ ಇದ್ದಳು.
ಜನರಿಗೆ ಈಕೆಯ ಬಗ್ಗೆ ಅಷ್ಟೇನು ಪರಿಚಯವಿಲ್ಲ, ಏಕೆಂದರೆ ಈಕೆಯ ಬಗ್ಗೆ ರಾಮಾಯಣದ ಜನಪ್ರಿಯ ಆವೃತ್ತಿಗಳಲ್ಲಿ ಯಾವುದೇ ಉಲ್ಲೇಖವಿಲ್ಲ. ಬನ್ನಿ ನಾವು ಇಂದು ರಾಮನ ಸಹೋದರಿಯ ಬಗ್ಗೆ ಮತ್ತು ಆಕೆ ಏಕೆ ರಾಮಾಯಣದದಲ್ಲಿ ಉಲ್ಲೇಖಗೊಂಡಿಲ್ಲ ಎಂಬುದರ ಬಗ್ಗೆ ಗಮನ ಹರಿಸೋಣ.
ನಾವು ಏಕೆ ದೇವರಿಗೆ ತೆಂಗಿನಕಾಯಿ ಸಮರ್ಪಿಸುತ್ತೇವೆ?

ಶಾಂತಾಳ ಕಥೆ
ದಶರಥ ಮಹಾರಾಜ ಮತ್ತು ಆತನ ಪತ್ನಿ ಕೌಸಲ್ಯಳಿಗೆ ಶಾಂತಾ ಎಂಬ ಒಬ್ಬ ಮಗಳಿದ್ದಳು. ಜನಿಸಿದ ತಕ್ಷಣ ಈ ಮಗುವನ್ನು ದಶರಥ ಮಹಾರಾಜನು ಆ ಮಗುವನ್ನು ಕೌಸಲ್ಯಳ ಸಹೋದರಿಗೆ ಒಪ್ಪಿಸಿದನಂತೆ. ಎಲ್ಲರಿಗು ತಿಳಿದಿರುವಂತೆ ಕೌಸಲ್ಯಳ ಸಹೋದರಿ ವರ್ಷಿಣಿಯು ರೋಮಪಾದ ಎಂದೆ ಖ್ಯಾತನಾಗಿದ್ದ ಅಂಗ ಮಹಾರಾಜನ ಮಡದಿಯಾಗಿದ್ದಳು. ಈಕೆಗೆ ಮಕ್ಕಳಿರಲಿಲ್ಲವಾದ್ದರಿಂದ ಈ ಮಗುವನ್ನು ಅವರಿಗೆ ದಶರಥ ಮಹಾರಾಜನು ನೀಡಿದನು.

ಶಾಂತಾಳ ಕಥೆ
ಒಂದು ದಿನ ವರ್ಷಿಣಿಯು ತಮಾಷೆಗೆ ದಶರಥ ಮಹಾರಾಜನಿಗೆ ನಿನ್ನ ಮಗಳನ್ನು ನಾನು ದತ್ತು ತೆಗೆದುಕೊಳ್ಳುತ್ತೇನೆ ಎಂದು ಹೇಳಿದಳು. ವರ್ಷಿಣಿಗೆ ಮಕ್ಕಳಿರಲಿಲ್ಲ, ಮತ್ತು ಶಾಂತಾಳನ್ನು ಆಕೆಯ ಸಾಕು ಮಗಳಾಗಿ ಸ್ವೀಕರಿಸುವುದರಿಂದ, ಶಾಂತಾಳು ಅವರ ಪಟ್ಟಕ್ಕೆ ಉತ್ತರಾಧಿಕಾರಿಯಾಗುವುದಿಲ್ಲ ಎಂದು ತಿಳಿದ ದಶರಥನು ವರ್ಷಿಣಿ ಮತ್ತು ರೋಮಪಾದರಿಗೆ ತನ್ನ ಮಗಳನ್ನು ದತ್ತು ನೀಡಿದನು.

ಶಾಂತಾಳ ಕಥೆ
ಆದರೂ ಶಾಂತಾಳು ಅಂಗ ರಾಜ್ಯದ ಯುವರಾಣಿಯಾದಳು. ಕೆಲವು ಮೂಲಗಳ ಪ್ರಕಾರ ಯುವರಾಣಿ ಶಾಂತಾಳು ಅತ್ಯಂತ ಸುಂದರವಾಗಿದ್ದಳು ಮತ್ತು ಯುವರಾಜರಿಗೆ ನೀಡುವ ಎಲ್ಲಾ ಬಗೆಯ ಶಿಕ್ಷಣಗಳನ್ನು ಪಡೆದಿದ್ದಳಂತೆ. ಮುಂದೆ ಶಾಂತಾಳು ಮಹಾಮುನಿಗಳಾದ ಋಷ್ಯಶೃಂಗರ ಕೈ ಹಿಡಿದಳು. ಋಷ್ಯಶೃಂಗರು ದಶರಥ ಮಹಾರಾಜನಿಗೆ ಪುತ್ರಕಾಮೇಷ್ಟಿ ಯಾಗವನ್ನು ಮಾಡಲು ಸಲಹೆ ನೀಡಿದ್ದರು.

ಶಾಂತಾಳ ಕಥೆ
ಶಾಂತಾಳ ಕುರಿತಾದ ಮತ್ತೊಂದು ಕುತೂಹಲಕಾರಿ ಇದೆ. ಅದೇನೆಂದರೆ ದಶರಥ ಮಹಾರಾಜನ ಸಾಮ್ರಾಜ್ಯವು ಒಮ್ಮೆ ಭಯಾನಕವಾದ ಕ್ಷಾಮಕ್ಕೆ ತುತ್ತಾಯಿತು. ಆಗ ದಶರಥ ಮಹಾರಾಜನು ತನ್ನ ಮಂತ್ರಿ ಸುಮಂತನಿಗೆ ಶಾಂತಾಳನ್ನು ಸಾಮ್ರಾಜ್ಯಕ್ಕೆ ಕರೆದುಕೊಂಡು ಬರುವಂತೆ ತಿಳಿಸಿದನು. ಆಗ ಶಾಂತಾಳು ಸಾಮ್ರಾಜ್ಯಕ್ಕೆ ಬಂದಳಂತೆ, ಆಕೆ ಎಲ್ಲೆಲ್ಲಿ ಅಡಿಯಿರಿಸಿದ ಕಡೆಯೆಲ್ಲ ಹಸಿರು ನಳ ನಳಿಸಲು ಆರಂಭಿಸಿ, ಕ್ಷಾಮವು ಹೊರಟು ಹೋಯಿತಂತೆ.

ಶಾಂತಾಳ ಕಥೆ
ಪುರಾಣಗಳಲ್ಲಿ ಕೆಲವೊಂದು ಗೊತ್ತೇ ಇಲ್ಲದ ರಹಸ್ಯಗಳು ಇರುತ್ತವೆ. ಶಾಂತಾಳು ಸಹ ಇಂತಹ ಒಂದು ರಹಸ್ಯ. ಈಕೆಯ ಬಗ್ಗೆ ರಾಮಾಯಣದ ಹಲವಾರು ಆವೃತ್ತಿಗಳಲ್ಲಿ ಉಲ್ಲೇಖವೇ ಇಲ್ಲ. ಹಾಗೆಂದು ಈಕೆಯ ಅಸ್ತಿತ್ವವನ್ನು ಎಲ್ಲಿಯೂ ತಳ್ಳಿ ಹಾಕಲಾಗಿಲ್ಲ. ಇದರಿಂದ ನಮಗೆ ಗೊತ್ತಾಗುತ್ತದೆ, ಶ್ರೀ ರಾಮಚಂದ್ರನಿಗು ಸಹ ಒಬ್ಬ ಅಕ್ಕ ಇದ್ದಳು.



Click it and Unblock the Notifications