Latest Updates
-
ಭಾರತ-ಜಿಂಬಾಬ್ವೆ ಟಿ20 ಪಂದ್ಯದ ಮಜಾ ಸವಿಯುತ್ತಲೇ ಮನೆಯ ಜವಾಬ್ದಾರಿ ನಿಭಾಯಿಸುವುದು ಹೇಗೆ? ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
IMD ರೆಡ್ ಅಲರ್ಟ್: ಭಾರಿ ಮಳೆಯಿಂದ ಮನೆಯನ್ನು ರಕ್ಷಿಸಲು ಈ 5 ಮುನ್ನೆಚ್ಚರಿಕೆಗಳು ಕಡ್ಡಾಯ! -
ಗುರು ಪೂರ್ಣಿಮಾ ಉಪವಾಸ: ಮಧುಮೇಹಿಗಳು ಆರೋಗ್ಯವಾಗಿರಲು ಈ ಸಾತ್ವಿಕ ಆಹಾರ ಕ್ರಮ ಪಾಲಿಸಿ -
ಪೇಪರ್ ಸೋರಿಕೆ ಮಾಡಿದ್ರೆ 10 ವರ್ಷ ಜೈಲು: ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಿಗಲಿದೆ ಹೊಸ ಭದ್ರತೆ! -
ಕಾರ್ಗಿಲ್ ವಿಜಯ್ ದಿವಸ್: ದೇಶಭಕ್ತಿಯ ನಡಿಗೆಯಲ್ಲಿ ಪಾಲ್ಗೊಳ್ಳುವ ಮುನ್ನ ಈ ಆರೋಗ್ಯ ಟಿಪ್ಸ್ ಮರೆಯದಿರಿ -
ದೇವಶಯನಿ ಏಕಾದಶಿ: ದಂಪತಿಗಳ ಬಾಂಧವ್ಯ ಹೆಚ್ಚಿಸಲು ಈ ಉಪವಾಸದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ತೇವಾಂಶ: ನಿಮ್ಮ ದುಬಾರಿ ಸೀರೆ ಮತ್ತು ಶೂಗಳನ್ನು ಬೂಸ್ಟ್ನಿಂದ ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಸಾಕು! -
ಅಹಮದಾಬಾದ್ ಮಳೆ: ಪ್ರವಾಹದ ಸಮಯದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಮಾರ್ಗಸೂಚಿಗಳನ್ನು ಅನುಸರಿಸಿ -
ಕಾಮನ್ವೆಲ್ತ್ ಗೇಮ್ಸ್ 2026: 3ನೇ ದಿನ ಭಾರತದ ಆಟಗಾರರ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ! -
ಮಳೆಗಾಲದ ಜಾರುವ ರಸ್ತೆಗಳಲ್ಲಿ ನಡೆಯುವಾಗ ಎಚ್ಚರ: ಸುರಕ್ಷಿತವಾಗಿರಲು 8 ನಿಮಿಷಗಳ ಈ ವ್ಯಾಯಾಮ ಮಾಡಿ!
ಪುಣ್ಯ ಪ್ರಾಪ್ತಿ ಮಾಡುವ ದೇವ ಉತ್ಥಾನ ಏಕಾದಶಿ ಎಂದು? ಅದರ ಆಚರಣೆ ಹೇಗೆ?
ಇದೇ ಬರುವ 14ರಂದು ದೇವ ಉತ್ಥಾನ ಏಕಾದಶಿ. ಇದನ್ನು ಪ್ರಬೋಧಿನಿ ಏಕಾದಶಿ ಎಂದೂ ಕರೆಯಲಾಗುತ್ತಿದ್ದು, ಹಿಂದೂ ಸಂಸ್ಕೃತಿಯಲ್ಲಿ ಅತ್ಯಂತ ಮಹತ್ವದ ಏಕಾದಶಿ ಎಂದು ಪರಿಗಣಿಸಲಾಗಿದೆ. ಕಾರ್ತಿಕ ಮಾಸದ ಶುಕ್ಲ ಪಕ್ಷದ ಹನ್ನೊಂದನೇ ದಿನದಂದು (ಏಕಾದಶಿ) ಆಚರಿಸಲಾಗುವ ಈ ದಿನವು ಚಾತುರ್ಮಾಸದ ಮುಕ್ತಾಯವನ್ನು ಸೂಚಿಸುತ್ತದೆ.
ಹಿಂದೂ ಪುರಾಣಗಳ ಪ್ರಕಾರ, ಭಗವಾನ್ ವಿಷ್ಣುವು ಶುಕ್ಲ ಪಕ್ಷದ ಆಷಾಢ ಮಾಸದ ಏಕಾದಶಿಯ ಮುನ್ನಾದಿನದಂದು ಮಲಗುತ್ತಾನೆ. ನಂತರ ದೇವ ಉತ್ಥಾನ ಏಕಾದಶಿಯ ಮುನ್ನಾದಿನದಂದು ಎಚ್ಚರಗೊಳ್ಳುತ್ತಾನೆ ಎಂಬ ನಂಬಲಾಗಿದೆ. ಈ ನಾಲ್ಕು ತಿಂಗಳ ಅವಧಿಯಲ್ಲಿ, ಯಾವುದೇ ಶುಭ ಕಾರ್ಯವನ್ನು ಮಾಡುವುದಿಲ್ಲ, ವಿಷ್ಣುವು ಎದ್ದ ನಂತರವೇ, ಎಲ್ಲಾ ಮಂಗಳಕರ ಮತ್ತು ಧಾರ್ಮಿಕ ಕಾರ್ಯಗಳು ನಡೆಯುತ್ತವೆ.

ದೇವ ಉತ್ಥಾನ ಏಕಾದಶಿಯ ಆಚರಣೆಗಳು:
- ಏಕಾದಶಿಯ ದಿನದಂದು ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ ಮಡಿಬಟ್ಟೆಯನ್ನು/ ಸ್ವಚ್ಛ ಬಟ್ಟೆಯನ್ನು ಧರಿಸಬೇಕು.
- ವಿಷ್ಣುವಿನ ಜಪ ಮಾಡುವುದರ ಮೂಲಕ ಉಪವಾಸ ಕ್ರಮವನ್ನು ಅನುಸರಿಸಬೇಕು.
- ಮನೆಯ ಅಂಗಳ ಹಾಗೂ ಬಾಗಿಲನ್ನು ಸ್ವಚ್ಛಗೊಳಿಸಿ, ವಿಷ್ಣುವಿನ ಪಾದದ ಗುರುತಿನ ರಂಗೋಲಿ ಹಾಕಬೇಕು.
- ವಿಷ್ಣು ದೇವರ ಚಿತ್ರವನ್ನು ಬಿಡಿಸಿ.
- ಪೂಜೆಗೆ ತಯಾರಿಸಿದ ಸಿಹಿ ತಿಂಡಿ, ಹಣ್ಣು ಹಂಪಲು, ಕಬ್ಬಿನ ತುಂಡುಗಳು ಹಾಗೂ ಸಿಂಗಾರಗಳನ್ನು ಒಂದೆಡೆ ಜೋಡಿಸಿಕೊಂಡು, ಪವಿತ್ರ ಬಟ್ಟೆಯಿಂದ ಮುಚ್ಚಿಡಿ.
- ರಾತ್ರಿ ತುಳಸಿ ಕಟ್ಟೆ ಅಥವಾ ಗಿಡಗಳ ಸುತ್ತ ರಂಗೋಲಿಯನ್ನು ಹಾಕಿ, ದೀಪವನ್ನು ಬೆಳಗಿ.
- ನಂತರ ಮನೆಯ ಸದಸ್ಯರೆಲ್ಲರೂ ವಿಷ್ಣು ದೇವರ ಪ್ರಾರ್ಥನೆಯನ್ನು ಹೇಳುತ್ತಾ ಪೂಜಾ ವಿಧಿ-ವಿಧಾನವನ್ನು ಕೈಗೊಳ್ಳಬೇಕು.
- ಪೂಜೆಯಲ್ಲಿ ಜಮಟೆ, ಗಂಟೆ, ತಾಳಗಳನ್ನು ಬಡಿಯುತ್ತಾ ದೇವರನ್ನು ಆಹ್ವಾನಿಸಿ ಪೂಜೆ ಕೈಗೊಳ್ಳಬೇಕು.

ವಿಷ್ಣುವನ್ನು ಪೂಜಿಸುವಾಗ ಜಪಿಸಬೇಕಾದ ಮಂತ್ರ:
"ಉತ್ತಿಷ್ಠ ಗೋವಿಂದ ತ್ಯಾಜ್ ನಿದ್ರಾನ್ ಜಗತ್ಪತ್ಯೇ,
ತ್ವಾಯಿ ಸೂಪ್ತೆ ಜಗನ್ನಾಥ ಜಗತ್ ಸುಪ್ತಮ್ ಭವೇದಿದಂ,
ಉತ್ತೇ ಚೆಸ್ಟೆ ಸರ್ವಮುತ್ತಿಸ್ಟೋತ್ತಿಷ್ಟ ಮಾಧವ,
ಗತಮೇಘ ವಯಾಚೈವ ನಿರ್ಮಲಂ ನಿರ್ಮಲಾಧೀಶ,
ಶರದಂಚಿ ಪುಷ್ಪಾನಿ ಗ್ರಿಹಾನ್ ಮಮ ಕೇಶವ."

ದೇವ ಉತ್ಥಾನಿ ಏಕಾದಶಿ ಕಥೆ:
ಪುರಾಣ ಕಥೆಯ ಪ್ರಕಾರ, ಒಮ್ಮೆ ಲಕ್ಷ್ಮಿ ದೇವಿಯು ಭಗವಾನ್ ವಿಷ್ಣುವನ್ನು ಕೇಳಿದಳು, "ಓ ಪ್ರಭುವೇ, ನೀವು ಹಗಲು ರಾತ್ರಿ ಎನ್ನದೆ ಎಚ್ಚರವಾಗಿರುತ್ತೀರಿ. ಸದಾ ಭಕ್ತರ ಕಲ್ಯಾಣಕ್ಕಾಗಿ ಸಿದ್ಧರಾಗಿರುತ್ತೀರಿ. ಅಂತೆಯೇ ಎಲ್ಲಾ ದೇವತೆಗಳು ಸಹ ಕಾರ್ಯನಿರತರಾಗಿರುತ್ತಾರೆ. ಇದರಿಂದ ನಮಗೆ ವಿಶ್ರಮಿಸಲು ಸ್ವಲ್ಪ ಸಮಯ ಮಾತ್ರ ನೀಡಿದಂತಾಗುವುದು ಎಂದು ಹೇಳಿದಳು.
ಆಗ ವಿಷ್ಣು ದೇವರು ಮುಗುಳ್ನಕ್ಕು, " ದೇವಿ, ನೀವು ಹೇಳಿದ್ದು ಸರಿ, ನನ್ನಿಂದ ಎಲ್ಲಾ ದೇವರುಗಳು ಹಾಗೂ ವಿಶೇಷವಾಗಿ ನೀವು ಬಳಲುತ್ತೀರಿ. ಅದಕ್ಕಾಗಿಯೇ ಇಂದಿನಿಂದ ಅಂದರೆ ಮಳೆಗಾಲದ ನಾಲ್ಕು ತಿಂಗಳುಗಳ ಕಾಲ ಮಲಗಿರುತ್ತೇನೆ. ಆ ಸಮಯದಲ್ಲಿ ನಿಮಗೆ ಮತ್ತು ದೇವತೆಗಳಿಗೆ ರಜೆ ಇರುತ್ತದೆ. ಈ ಸಮಯವನ್ನು ಚಾತುರ್ಮಾಸದ ಸಮಯ ಎಂದು ಕರೆಯಲಾಗುವುದು. ನಾಲ್ಕು ತಿಂಗಳ ನಂತರ ಎದ್ದೇಳುತ್ತೇನೆ, ಅದೇ ದೇವ ಉತ್ಥಾನ ಏಕಾದಶಿ. ಅಂದಿನಿಂದ ಚಾತುರ್ಮಾಸ ಹಾಗೂ ದೇವ ಉತ್ಥಾನ ಆಚರಣೆಯು ಜಾರಿಗೆ ಬಂತು ಎನ್ನಲಾಗುತ್ತದೆ.

ದೇವ ಉತ್ಥಾನಿ ಏಕಾದಶಿ ಮತ್ತು ತುಳಸಿ ವಿವಾಹ:
ದೇವ ಉತ್ಥಾನಿ ಏಕಾದಶಿಯ ದಿನದಂದು ತುಳಸಿ ವಿವಾಹದ ಹಬ್ಬವನ್ನು ಆಚರಿಸಲಾಗುವುದು. ಅಂದು ತುಳಸಿ ಗಿಡ ಮತ್ತು ಸಾಲೀಗ್ರಾಮದ ರೂಪದಲ್ಲಿ ವಿಷ್ಣು ಮತ್ತು ತುಳಸಿಗೆ ವಿವಾಹ ನಡೆಯುತ್ತದೆ ಎಂಬ ನಂಬಿಕೆಯಿದೆ. ವಿಷ್ಣು ನಾಲ್ಕು ತಿಂಗಳ ನಿದ್ರೆಯಿಂದ ಎದ್ದ ನಂತರ ಮೊದಲು ತುಳಸಿಯ ಪ್ರಾರ್ಥನೆಯನ್ನು ಕೇಳುತ್ತಾನೆ ಎಂದು ಸಹ ಹೇಳಲಾಗುವುದು. ತುಳಸಿಯನ್ನು 'ವಿಷ್ಣು ಪ್ರಿಯಾ' ಎಂದೂ ಪೂಜಿಸಲಾಗುತ್ತದೆ. ಹಿಂದೂ ಧರ್ಮಗ್ರಂಥಗಳ ಪ್ರಕಾರ, ಹೆಣ್ಣು ಮಗುವನ್ನು ಹೊಂದಿರದ ದಂಪತಿಗಳು ಕನ್ಯಾದಾನದ ಪುಣ್ಯವನ್ನು ಪಡೆಯಲು ತಮ್ಮ ಜೀವಿತಾವಧಿಯಲ್ಲಿ ಒಮ್ಮೆ ತುಳಸಿ ವಿವಾಹವನ್ನು ಮಾಡಬೇಕು ಎನ್ನಲಾಗುತ್ತದೆ.

ಏಕಾದಶಿ ಉಪವಾಸದ ದಿನಗಳು:
ದೇವ ಉತ್ಥಾನ ಏಕಾದಶಿಯನ್ನು ಹೊರತುಪಡಿಸಿ, ಹಿಂದೂ ಪಂಚಾಂಗದ ಕೃಷ್ಣ ಮತ್ತು ಶುಕ್ಲ ಪಕ್ಷದಲ್ಲಿ ವರ್ಷದಲ್ಲಿ 23 ಏಕಾದಶಿ ವ್ರತಗಳಿವೆ. ಈ ಎಲ್ಲಾ ಏಕಾದಶಿ ತಿಥಿಗಳು ಹಿಂದೂ ಸಂಪ್ರದಾಯಗಳಲ್ಲಿ ಬಹಳ ಮಹತ್ವದ್ದಾಗಿದ್ದು, ವಿವಿಧ ಏಕಾದಶಿ ಹೆಸರುಗಳೊಂದಿಗೆ ಜನಪ್ರಿಯವಾಗಿವೆ.

ಪ್ರಾಮುಖ್ಯತೆ:
ದೇವ ಉತ್ಥಾನ ಏಕಾದಶಿಯನ್ನು ಹರಿಪ್ರಭೋಧಿನಿ ಏಕಾದಶಿ ಮತ್ತು ತುಳಸಿ ಅಯನ/ ತುಳಸಿ ವಿವಾಹ ಏಕಾದಶಿ ಎಂದು ಕರೆಯುವರು. ತುಳಸಿ ವಿವಾಹವು ಹಿಂದುಗಳ ಪವಿತ್ರ ಹಬ್ಬಗಳಲ್ಲಿ ಒಂದು. ಇದರ ಆಚರಣೆಯು ಪವಿತ್ರ ಧಾರ್ಮಿಕ ಆಚರಣೆಗಳಿಂದ ಕೈಗೊಳ್ಳಲಾಗುವುದು. ಹಿಂದೂ ನಂಬಿಕೆಗಳ ಪ್ರಕಾರ ತುಳಸಿ ವಿವಾಹದ ನಂತರ ಕೈಗೊಳ್ಳುವ ಶುಭ ಕಾರ್ಯಕ್ಕೆ ದೇವರ ಆಶೀರ್ವಾದ ಲಭಿಸುವುದು. ಹಾಗಾಗಿಯೇ ತುಳಸಿ ವಿವಾಹದ ಬಳಿಕವೇ ಮನೆಯಲ್ಲಿ ಶುಭ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಾರೆ.



Click it and Unblock the Notifications