Latest Updates
-
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ!
ಇಂದು ದೇವ್ ದೀಪಾವಳಿ: ಏನಿದರ ಮಹತ್ವ?
ಪ್ರತಿವರ್ಷ ಕಾರ್ತಿಕ ಪೂರ್ಣಿಮೆಯಂದು ದೇವ್ ದೀಪಾವಳಿಯನ್ನು ಆಚರಿಸಲಾಗುವುದು. ದೇವ್ ದೀಪಾವಳಿಯನ್ನು ವಾರಾಣಸಿಯಲ್ಲಿ ಆಚರಿಸಲಾಗುವುದು. ಶಿವನು ಈ ದಿನ ಅಸುರ ತ್ರಿಪುರಾಸುರನನ್ನು ವಧಿಸಿದನು ಎಂದು ಹೇಳಲಾಗುವುದು. ಆದ್ದರಿಂದ ಈ ದಿನವನ್ನು ತ್ರಿಪುರಾರಿ ಪೂರ್ಣಿಮಾ ಎಂದು ಕರೆಯಲಾಗುವುದು.

ಈ ದಿನ ಶಿವ ಭಕ್ತರು ಪವಿತ್ರ ಗಂಗೆಯಲ್ಲಿ ಮಿಂದು ಪೂಜೆಯನ್ನು ಸಲ್ಲಿಸುತ್ತಾರೆ. ಈ ದಿನ ಗಂಗೆಯ ತೀರದಲ್ಲಿ ದೀಪಗಳನ್ನು ಹಚ್ಚಲಾಗುವುದು. ಈ ದಿನ ಮನೆಗಳಿಗೂ ಲೈಟಿಂಗ್ಸ್ ಹಾಕಿ ಅಲಂಕರಿಸಲಾಗುವುದು.
ಸಂಜೆ ಹೊತ್ತಿಗೆ ಗಂಗೆಗೆ ಆರತಿಯನ್ನು ಮಾಡಲಾಗುವುದು.
ದೇವ್ ದೀಪಾವಳಿ ದಿನಾಂಕ ಮತ್ತು ಸಮಯ
ದೇವ್ ದೀಪಾವಳಿ ದಿನಾಂಕ: ನವೆಂಬರ್ 26
ದೇವ್ ದೀಪಾವಳಿ ಆಚರಣೆಯ ಮಹತ್ವ
ಅಸುರ ತ್ರಿಪುರಾನನ್ನು ಶಿವನು ಸೋಲಿಸಿದ ದಿನವನ್ನು ದೇವ್ ದೀಪಾವಳಿ ಎಮದು ಆಚರಿಸಲಾಗುವುದು. ಈ ದಿನ ನೂರಾರು ಮಣ್ಣಿನ ಹಣತೆಗಳನ್ನು ಗಂಗಾ ನದಿಯಲ್ಲಿ ತೇಲಿ ಬಿಡಲಾಗುವುದು. ಈ ಆಚರಣೆ 1985ರಿಂದ ಪ್ರಾರಂಭವಾಗಿದೆ. ರಾತ್ರಿ ಪೂರ್ತಿ ಶಿವನ ಕೀರ್ತನೆಗಳನ್ನು ಹಾಡುತ್ತಾ ವಾರಾಣಸಿ ಬೀದಿಗಳಲ್ಲಿ ಮೆರವಣಿಗೆ ಕೂಡ ಇಡುತ್ತದೆ.
ಈ ದಿನ 21 ಬ್ರಾಹ್ಮಣರು ಹಾಗೂ 24 ಮಹಿಳೆಯರು ಗಂಗೆಗೆ ಆರತಿ ಎತ್ತುತ್ತಾರೆ. ಗಂಗೆಗೆ ನೂರಾರು ಮಣ್ಣಿನ ಹಣತೆಗಳನ್ನು ತೇಲಿ ಬಿಡಲಾಗುವುದು, ಇದನ್ನು ಅಲ್ಲಿ ನೆರೆದ ಪ್ರವಾಸಿಗರು ಕಣ್ತುಂಬಿಕೊಳ್ಳುತ್ತಾರೆ. ಈ ಇನ ಗುರುನಾನಕ್ ಜಯಂತಿಯನ್ನು ಕೂಡ ಆಚರಿಸಲಾಗುವುದು.



Click it and Unblock the Notifications
