Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಅನ್ನಪ್ರಾಶನಕ್ಕೆ 2023ರಲ್ಲಿ ಇರುವ ಶುಭದಿನಗಳು ಹಾಗೂ ಇದರ ಮಹತ್ವ
ಅನ್ನಪ್ರಾಶನ ಎಂಬುದು ಹಿಂದೂ ಸಂಸ್ಕೃತಿಯ ಒಂದು ಮಹತ್ವದ ವಿಧಿವತ್ತಾದ ಪದ್ಧತಿಯಾಗಿದೆ. ಮಗು ಹಾಲಿನ ಜೊತೆಗೇ ಇತರ ಘನ ಆಹಾರಗಳನ್ನು ಪ್ರಥಮ ಬಾರಿಗೆ ಸ್ವೀಕರಿಸುವ ಶುಭ ಸಮಯವನ್ನು ಹಿಂದೂ ಸಂಸ್ಕೃತಿಯಲ್ಲಿ ಅನ್ನಪ್ರಾಶನ ಎಂದು ಹೇಳಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಇದುವರೆಗೆ ತಾಯಿಹಾಲನ್ನೇ ಸೇವಿಸುತ್ತಿದ್ದ ಮಗು ಘನ ಆಹಾರ ಸ್ವೀಕರಿಸುವ ಮೂಲಕ ನಮ್ಮ ನಿತ್ಯದ ಆಹಾರ ಪದ್ಧತಿಗೆ ಮಗುವನ್ನು ಅನುವು ಮಾಡಿಕೊಡುವ ಸಾಂಸ್ಕೃತಿಕ ವಿಧಿಯೇ ಅನ್ನಪ್ರಾಶನ ಸಮಾರಂಭ:

ಅನ್ನಪ್ರಾಶನ ಎಂದರೇನು?
ಸಂಸ್ಕೃತ ಪದ "ಅನ್ನಪ್ರಾಶನ" ನೇರವಾಗಿ "ಧಾನ್ಯ ದೀಕ್ಷೆ" ಎಂದರ್ಥ. ಅನ್ನಪ್ರಾಶನದ ಹಿಂದೂ ಸಂಪ್ರದಾಯವು ಮಗುವಿನ ಮೊದಲ ಊಟದ ಪ್ರಾರಂಭವನ್ನು ಸೂಚಿಸುತ್ತದೆ. ಅಂದರೆ, ಮಗುವು ತಾಯಿಯ ಹಾಲನ್ನು ಹೊರತುಪಡಿಸಿ ಆಹಾರವನ್ನು ಸೇವಿಸಲು ಪ್ರಾರಂಭಿಸಿದಾಗ ಅನ್ನಪ್ರಾಶನ ಸಂಸ್ಕಾರ ಆಚರಣೆಯನ್ನು ನಡೆಸಲಾಗುತ್ತದೆ.
ಮಗುವಿಗೆ ಆರು ತಿಂಗಳ ನಂತರ ಈ ಅನ್ನಪ್ರಾಶನ ಮಾಡಲು ವೈದ್ಯರು ಸಲಹೆ ನೀಡುತ್ತಾರೆ.
ಜ್ಯೋತಿಷ್ಯಾಸ್ತ್ರದ ಪ್ರಕಾರ ಅನ್ನಪ್ರಾಶನ ಎಂದರೇನು?
ಜೀವನದ ಮೂಲ ಅಂಶವೆಂದರೆ ಆಹಾರ. ಶುದ್ಧ ಆಹಾರ ಸೇವನೆಯಿಂದ ದೇಹ ಮತ್ತು ಒಳ ಮನಸ್ಸು ಶುದ್ಧಿಯಾಗುತ್ತದೆ ಎಂದು ನಮ್ಮ ಶಾಸ್ತ್ರಗಳು ಹೇಳುತ್ತವೆ. ಅನ್ನಪ್ರಾಶನ ಸಮಾರಂಭದಲ್ಲಿ ಆಹಾರದ ದೇವತೆ ಅನ್ನಪೂರ್ಣಳನ್ನು ಪೂಜಿಸಲಾಗುತ್ತದೆ ಮತ್ತು ಪೋಷಕರು ತಮ್ಮ ಮಗುವಿನ ಆರೋಗ್ಯ ಮತ್ತು ಸಮೃದ್ಧಿಗಾಗಿ ಮೊದಲ ತುತ್ತು ತಿನ್ನಿಸಿ ಹಾರೈಸುತ್ತಾರೆ. ಹಾಲಿನ ಜೊತೆಗೆ ಆಹಾರ ನೀಡಿದರೆ ಮಗುವಿನ ದೇಹ ಮತ್ತು ಬುದ್ಧಿ ಪೂರ್ಣವಾಗಿ ಅಭಿವೃದ್ಧಿ ಹೊಂದುತ್ತದೆ.
ಅನ್ನಪ್ರಾಶನ ಆಚರಣೆ ಹೇಗೆ ಮಾಡಬೇಕು?
ಅನ್ನಪ್ರಾಶನ ಸಮಾರಂಭಕ್ಕೆ, ಪುರೋಹಿತರು ವೈದಿಕ ಜ್ಯೋತಿಷ್ಯದ ಪ್ರಕಾರ ನಿರ್ದಿಷ್ಟ ದಿನ ಮತ್ತು ಮುಹೂರ್ತ ನೋಡಲಾಗುತ್ತದೆ. ಈ ವಿಶೇಷ ದಿನ ಸ್ನೇಹಿತರು, ಕುಟುಂಬ ಮತ್ತು ಪರಿಚಯಸ್ಥರನ್ನು ಆಹ್ವಾನಿಸಲಾಗುತ್ತದೆ.
ಅನ್ನಪ್ರಾಶನ ಮುಹೂರ್ತದಲ್ಲಿ, ಶಿಶುವನ್ನು ಹಿರಿಯರ ಮಡಿಲಲ್ಲಿ ಕೂರಿಸಲಾಗುತ್ತದೆ. ಸಮಾರಂಭದ ಮೊದಲು ಪೂಜೆಯನ್ನು ನಡೆಸಲಾಗುತ್ತದೆ. ಧೂಪ ಮತ್ತು ಎಣ್ಣೆ ದೀಪಗಳನ್ನು ಬೆಳಗಿಸಿ, ದೇವರ ಪ್ರಾರ್ಥನೆ ಮಾಡಲಾಗುತ್ತದೆ. ಮೊದಲ ಭೋಜನವನ್ನು ದೇವಾನುದೇವತೆಗಳಿಗೆ ಅರ್ಪಿಸಲಾಗುತ್ತದೆ. ಅದರ ನಂತರ, ಹಿರಿಯರೊಬ್ಬರು ಮಗುವಿಗೆ ಅದರ ಮೊದಲ ವಿಧ್ಯುಕ್ತವಾದ ಘನ ಆಹಾರವನ್ನು ನೀಡುತ್ತಾರೆ, ಇದನ್ನು ಪ್ರಸಾದ ಎಂದು ಕರೆಯಲಾಗುತ್ತದೆ.
ಅನ್ನಪ್ರಾಶನಲ್ಲಿ ಪಾಯಸ, ಬೇಯಿಸಿದ ತರಕಾರಿಗಳು, ಬೇಯಿಸಿದ ಬೇಳೆಗಳು, ಚೆನ್ನಾಗಿ ಬೇಯಿಸಿ ಅನ್ನ ತುಪ್ಪದಂತಹ ಆಹಾರವನ್ನು ನೀಡಲಾಗುತ್ತದೆ.



Click it and Unblock the Notifications



