Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಷೋಡೋಪಚಾರ ಪೂಜೆ: ಗಣೇಶ ಪ್ರತಿಷ್ಠಾಪನೆ ಮಾಡುವಾಗ ಈ 16 ಪೂಜಾವಿಧಿಗಳನ್ನು ಅನುಸರಿಸಿ
ಸೆಪ್ಟೆಂಬರ್ 18-19ಕ್ಕೆ ಗಣೇಶ ಚತುರ್ಥಿ. ಸೆಪ್ಟೆಂಬರ್ 19ಕ್ಕೆ ಗಣೇಶನನ್ನು ಪ್ರತಿಷ್ಠಾಪನೆ ಮಾಡಿ 10 ದಿನಗಳ ಗಣೇಶನ ಆರಾಧಿಸಿ ನಂತರ ವಿಸರ್ಜನೆ ಮಾಡಲಾಗುವುದು. ಗಣೇಶನನ್ನು ಪ್ರತಿಷ್ಠಾಪನೆ ಮಾಡುವಾಗ ಷೋಡಶೋಪಚಾರ ಪೂಜೆ ಮಾಡಬೇಕು. ನೀವು ಗಣೇಶನ ಪ್ರತಿಷ್ಠಾಪನೆ ಮಾಡಲು ಈ 16 ಸ್ಟೆಪ್ ಪೂಜಾ ವಿಧಾನಗಳನ್ನು ಅನುಸರಿಸಿ:

1. ಆವಾಹನೆ
ಗಣೇಶನ ಮಂತ್ರವನ್ನು ಹೇಳುವ ಮೂಲಕ ಗಣೇಶನ ಆವಾಹನೆ ಮಾಡಬೇಕು. ಆವಾಹನೆ ಮುದ್ರೆ ಅಂದರೆ ಎರಡು ಕೈಗಳನ್ನು ಜೋಡಿಸಿ ನಮಸ್ಕರಿಸಿ, ಮೂರ್ತಿಯನ್ನು ಸ್ವಾಗತಿಸಬೇಕು.
2. ಪ್ರತಿಷ್ಠಾಪನೆ
ಗಣೇಶನನ್ನು ಆವಾಹನೆ ಮಾಡಿದ ಬಳಿಕ ಗಣೇಶನ ಪಾದಗಳಿಗೆ 5 ಎಲೆಗಳನ್ನು ಇಡಿ, ನಂತರ ಆ ಎಲೆಗಳ ಮೇಲೆ ಅಡಿಕೆ ಹಾಕಿ, ನಂತರ ಅರಿಶಿಣ ಪುಡಿ, ಕುಂಕುಮವನ್ನು ವೀಳ್ಯೆದೆಲೆ ಮೇಲೆ ಹಾಕಿ.
3. ಆಸನ ಸಮಪರ್ಪಣೆ
ನಂತರ 5 ಹೂವುಗಳನ್ನು ತೆಗೆದುಕೊಂಡು ಎರಡು ಕೈಗಳನ್ನು ಸೇರಿಸಿ (ಅಂಗೈಗಳನ್ನು ಸೇರಿಸಿ) ಹೂವುಗಳನ್ನು ಗಣೇಶನ ಕೂರಿಸಿರುವ
ಪೀಠಕ್ಕೆ ಅರ್ಪಿಸಿ.
4. ಪಾಡ್ಯಾ ಸಮರ್ಪಣೆ ಮಾಡಿ
ಗಣೇಶನ ಪಾದಗಳನ್ನು ನೀರು ಹಾಕಿ ತೊಳೆಯಿರಿ
5. ಆರ್ಘ್ಯ ಸಮರ್ಪಣೆ
ಪಾಡ್ಯಾ ಮಾಡಿದ ಬಳಿಕ ಪನ್ನೀರ್(ಸುಗಂಧಭರಿತ) ನೀರನ್ನು ಶ್ರೀ ಗಣೇಶನಿಗೆ ಅರ್ಪಿಸಿ.
5. ಅಚಮನ
ಆರ್ಘ್ಯವನ್ನು ಸಮರ್ಪಿಸಿದ ಬಳಿಕ ಅಚಮನಗೆ ದೇವರಿಗೆ ನೀರನ್ನು ಅರ್ಪಿಸಿ.
6. ಸ್ನಾನ
* ಸ್ನಾನ: ಗಣೇಶನಿಗೆ ನೀರಿನ ಅಭಿಷೇಕ ಮಾಡಿ
* ಪಂಚಾಮೃತ ಸ್ನಾನ: ನೀರಿನ ಸ್ನಾನದ ಬಳಿಕ ಪಂಚಾಮೃತದ ಸ್ನಾನ ಮಾಡಿ
* ದುಗ್ಧ ಸ್ನಾನ: ನಂತರ ಗಣೇಶನಿಗೆ ಹಾಲಿನ ಅಭಿಷೇಕ ಮಾಡಿ
* ದಹಿ ಸ್ನಾನ: ಶ್ರೀ ಗಣೇಶನಿಗೆ ಮೊಸರಿನ ಅಭಿಷೇಕ ಮಾಡಿ
* ಘೃತ ಸ್ನಾನ: ದಹಿ ಸ್ನಾನ ನಂತರ ಶ್ರೀ ಗಣೇಶನಿಗೆ ಸ್ನಾನ ಮಾಡಿ
* ಮಧು ಸ್ನಾನ: ಶ್ರೀ ಗಣೇಶನಿಗೆ ಜೇನಿನಿಂದ ಸ್ನಾನ ಮಾಡಿ
* ಶರ್ಕರ ಸ್ನಾನ: ನಂತರ ಗಣೇಶನಿಗೆ ಸಕ್ಕರೆಯಿಂದ ಸ್ನಾನ ಮಾಡಿ
* ಸುವಿಷ್ಠ ಸ್ನಾನ: ಸುವಾಸನೆ ಎಣ್ಣೆಯಿಂದ ಸ್ನಾನ ಮಾಡಿ
* ಶುದ್ಧೋಡ್ಕಾ ಸ್ನಾನ: ನಂತರ ಗಣೇಶನಿಗೆ ಶುದ್ಧವಾದ ನೀರಿನಿಂದ ಸ್ನಾನ ಮಾಡಿ
7. ವಸ್ತ್ರ ಸಮರ್ಪಣೆ ಮತ್ತು ಉತ್ತೇರಿಯಾ ಸಮರ್ಪಣೆ
ಗಣೇಶನಿಗೆ ವಸ್ತ್ರ ಸಮರ್ಪಿಸಿ
ನಂತರ ಗಣೇಶನ ಮೇಲ್ಭಾಗಕ್ಕೆ ವಸ್ತ್ರವನ್ನು ಹಾಕಿ.
ಯಜ್ಞೋಪವಿತ ಸಮರ್ಪಣೆ
ನಂತರ ಗಣೇಶನಿಗೆ ಯಜ್ಞೋಪವಿತವನ್ನು ಅರ್ಪಿಸಿ
9. ಗಂಧ
ನಂತರ ಸುಗಂಧದ್ರವ್ಯವನ್ನು ಗಣೇಶನಿಗೆ ಅರ್ಪಿಸಿ
10. ಅಕ್ಷತೆ
ನಂತರ ಗಣೇಶನಿಗೆ ಅಕ್ಷತೆಯನ್ನು ಅರ್ಪಿಸಿ.
11. ಪುಷ್ಪಮಾಲೆಯನ್ನು ಅರ್ಪಿಸಿ
ಗಣೇಶನಿಗೆ ಹೂವಿನಿಂದ ಅಲಂಕರಿಸಿ, ಹೂವಿನ ಮಾಲೆ ಅರ್ಪಿಸಿ. ಗರಿಕೆಯನ್ನು ಅರ್ಪಿಸಿ. ದೇವರಿಗೆ ಕುಂಕುಮ ಅರ್ಪಿಸಿ.
12. ಧೂಪವನ್ನು ಅರ್ಪಿಸಿ
13. ದೀಪವನ್ನು ಸಮರ್ಪಿಸಿ
14.ನೈವೇದ್ಯ ಅರ್ಪಿಸಿ
15. ತಾಂಬೂಲ, ದಕ್ಷಿಣೆ ಅರ್ಪಿಸಿ
16. ಆರತಿ ಬೆಳಗಿ, ಪುಷ್ಪಾಂಜಲಿ ಅರ್ಪಿಸಿ.
ಈ ಮಂತ್ರಗಳನ್ನು ಪಠಿಸಿ
ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ
ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದ
ಓಂ ಏಕದಂತಾಯ ವಿಧ್ಮಹೆ
ವಕ್ರತುಂಡಾಯ ಧೀಮಹಿ
ತನ್ನೋ ದಂತಿ ಪ್ರಚೋದಯಾತ್
ಮೂಷಿಕ ವಾಹನ ಮೋದಕ ಹಸ್ತ
ಚಾಮರ ಕರ್ಣ ವಿಳಂಬಿತ ಸೂತ್ರ
ವಾಮನ ರೂಪ ಮಹೇಶ್ವರ ಪುತ್ರ
ವಿಘ್ನ ವಿನಾಯಕ ಪಾದ ನಮಸ್ತೆ
ಶುಕ್ಲಾಂಬರದರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ
ಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘ್ನೋಪ ಶಾಂತಯೇ
ಅಗಜಾನನ ಪದ್ಮಾರ್ಕಂ ಗಜಾನನ ಮಹಾರ್ನಿಶಂ
ಅನೇಕದಂತಂ ಭಕ್ತಾನಾಂ ಏಕದಂತಂ ಉಪಾಸ್ಮಹೆಯ್
ಗಜಾನನಂ ಭೂತ ಗಾಣಧಿ ಸೇವಿತಂ
ಕಪಿಥ ಜಂಬೋ ಫಲ ಸಾರ ಭಕ್ಷಿತಂ
ಉಮಾಸುತಂ ಶೋಕ ವಿನಾಶಕಾರಣಂ
ನಮಾಮಿ ವಿಘ್ನೇಶ ಪಾದ ಪಂಕಜಂ.
ಗಣಾನಾಂ ತ್ವಂ ಗಣಪತಿ ಗಂ ಹವಾಮಹೇ
ಕವಿಂ ಕವೀನಾಂ ಉಪಮಸ್ರ ವಸ್ತಮಂ
ಜ್ಯೇಷ್ಠ ರಾಜಂ ಬ್ರಹ್ಮಣಾಂ ಬ್ರಹ್ಮಣಸ್ಪತ
ಆನಶ್ರುನ್ವನ್ನ ಊತಿಭಿ ಸೀದ ಸಾದನಂ
ಶ್ರೀಕಂಠೋ ಮಾತುಲೋ ಯಸ್ಯ, ಜನನೀ ಸರ್ವ ಮಂಗಳಾ
ಜನಕ: ಶಂಕರೋ ದೇವಃ, ತಮ್ ವಂದೇ ಕುಂಜರಾನನಂ
ಗಜವಕ್ತ್ರಂ ಸುರ-ಶ್ರೇಷ್ಟಂ
ಕರ್ಣ ಚಾಮರ ಭೂಷಿತಾಂ
ಪಾಶಾಂಕುಶ ಧರಂ ದೇವಂ
ವಂದೆಹಂ ಗಣನಾಯಕಂ
ಏಕದಂತಂ ಮಹಾಕಾಯಂ ತಪ್ತಕಾಜ್ಞ್ಚಂಸಂನಿಭಮ್
ಲಂಬೋದರಂ ವಿಶಾಲಾಕ್ಷಂ ವಂದೆಹಂ ಗಣನಾಯಕಂ
ಏಕದಂತಂ ಮಹಕಾಯಂ
ಲಂಬೋದರ ಗಜಾನನಂ
ವಿಘ್ನ ನಾಶಕರ್ಮ ದೇವಂ
ಹೇರಮ್ಬಂ ಪ್ರಾಣ ಮಾಮ್ಯಹಂ
ಪ್ರಸನ್ನ ವಿನಾಯಕಂ ದೇವಂ ಪೆರಿವನ-ಪುರ ಸಂಸ್ತಿತಂ
ಸರ್ವ ವಿಘ್ನ ಹರಂ ನಿತ್ಯಂ ವಂದೇ ಶ್ರೀ ಕುಂಜರಾನನಂ
ವಿಘ್ನೇಶ್ವರಾಯ ವರದಾಯ ಸುರಪ್ರಿಯಯಾ
ಲಂಬೋದರಾಯ ಸಕಲಾಯ ಜಗದ್ವಿತಾಯ
ನಾಗಾನನ್ಯಾಯ ಶ್ರುತಿಯಗ್ನ ವಿಭೂಶಿತಾಯ
ಗೌರಿ-ಸುತಾಯ ಗಣನಾಥ ನಮೋ ನಮಸ್ತೆ



Click it and Unblock the Notifications
