Latest Updates
-
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್! -
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು!
ಶ್ರಾವಣ ಶಿವ ಪೂಜೆ: ರುದ್ರಾಭಿಷೇಕಕ್ಕೆ ಬೇಕಾಗುವ ಸಾಮಗ್ರಿ, ಪೂಜಾ ವಿಧಾನ ಹಾಗೂ ಮಂತ್ರಗಳು
ಶಿವ ಭಕ್ತರು ಶಿವನಿಗೆ ನಾನಾ ಬಗೆಯಲ್ಲಿ ಪೂಜೆ, ಅಭಿಷೇಕ ಸಲ್ಲಿಸುತ್ತಾರೆ. ಅವುಗಳಲ್ಲಿ ಪ್ರಮುಖವಾದದ್ದು ರುದ್ರಾಭಿಷೇಕ. ರುದ್ರಾಭಿಷೇಕ ಎಂಬುವುದು ಶಿವನಿಗೆ ಅಲ್ಲಿಸುವ ಅತ್ಯಂತ ಶ್ರೇಷ್ಠವಾದ ಆರಾಧನ ವಿಧಾನವಾಗಿದೆ.
ರುದ್ರಾಭಿಷೇಕ ಮಾಡುವುದರಿಂದ ಶಿವನನ್ನು ಮೆಚ್ಚಿಸಿ, ಅವನ ಕೃಪೆಗೆ ಪಾತ್ರರಾಗಲು ಸಾಧ್ಯವಾಗುವುದು. ಶಿವನು ರುದ್ರ ಅವತಾರ ತಾಳಿದಾಗ ಅವನನ್ನು ಶಾಂತಗೊಳಿಸಲು ಹಾಗೂ ಮೆಚ್ಚಿಸಲು ದೇವತೆಗಳು ರುದ್ರಾಭಿಷೇಕ ಮಾಡುತ್ತಿದ್ದರು ಎಂದು ಪೌರಾಣಿಕ ಕತೆಗಳಲ್ಲಿ ವಿವರಿಸಲಾಗಿದೆ.
ಸೃಷ್ಟಿಯಲ್ಲಿ ಅಸಮತೋಲನ ಅಥವಾ ದುಷ್ಟ ಶಕ್ತಿಗಳ ಕ್ರೌರ್ಯ ಹೆಚ್ಚಾದಾಗ ಶಿವನು ರುದ್ರ ರೂಪವನ್ನು ತಾಳಿ ಆ ದುಷ್ಟರನ್ನು ಸರ್ವನಾಶ ಮಾಡುತ್ತಾಣೇ. ಹೀಗೆ ರುದ್ರಾವತಾರ ತಾಳಿದ ಶಿವನನ್ನು ಶಾಂತಗೊಳಿಸಲು ಧಾರ್ಮಿಕ ವಿಧಿ ವಿಧಾನಗಳ ಮೂಲಕ ರುದ್ರಾಭಿಷೇಕ ಮಾಡಲಾಗುವುದು. ರುದ್ರಾಭಿಷೇಕ ಮಾಡಿದಾಗ ಶಿವನು ಶಾಂತನಾಗುತ್ತಾನೆ ಹಾಗೂ ಭಕ್ತರಿಗೆ ಬೇಡಿದ ವರವನ್ನು ನೀಡುತ್ತಾನೆ ಎಂದು ಹೇಳಲಾಗುವುದು.
ಜೀವನದಲ್ಲಿ ಕಷ್ಟಗಳು, ಅನಾರೋಗ್ಯ ಸಮಸ್ಯೆ, ಶತ್ರುಗಳ ಕಾಟ ಇವೆಲ್ಲಾ ಹೆಚ್ಚಾದಾಗ ರುದ್ರಾಭಿಷೇಕ ಮಾಡಿದರೆ ಆರೋಗ್ಯ, ಸಂಪತ್ತು, ಸಂತೋಷ ಹೆಚ್ಚುವುದು. ರುದ್ರಾಭಿಷೇಕ ಮಾಡಲು ಕೆಲವೊಂದು ಧಾರ್ಮಿಕವಾದ ವಿಧಿ ವಿಧಾನಗಳಿವೆ, ಅದರಂತೆಯೇ ಮಾಡಬೇಕು ಹಾಗೂ ರುದ್ರಾಭಿಷೇಕಕ್ಕೆ ಕೆಲವೊಂದು ನಿರ್ದಿಷ್ಟ ಪೂಜೆ ಸಾಮಗ್ರಿಗಳು ಬೇಕು.
ರುದ್ರಾಭಿಷೇಕ ವಿಧಿ-ವಿಧಾನಗಳೇನು? ರುದ್ರಾಭಿಷೇಕಕ್ಕೆ ಯಾವೆಲ್ಲಾ ಸಾಮಗ್ರಿಗಳು ಬೇಕು ಎಂದು ನೋಡೋಣ ಬನ್ನಿ:

ರುದ್ರಾಭಿಷೇಕಕ್ಕೆ ಬೇಕಾಗುವ ಸಾಮಗ್ರಿಗಳು
* ಮಣೆ
* ಮಣೆ ಮೇಲೆ ಹಾಸಲು ಬಿಳಿಯ ಮಡಿ ವಸ್ತ್ರ
* ಪಂಚ ಧಾತು ಅಥವಾ ಅಷ್ಟಧಾತುವುನಿಂದ ಮಾಡಿದ ಶಿವಲಿಂಗ
* ಕರವೀರ ಹೂಗಳು (ಹಳದಿ ಅಥವಾ ನಸು ಕೆಂಪು ಹೂಗಳು)
* ಬಿಳಿ ಹೂಗಳು
* ಗುಲಾಬಿಗಳು
* ಬಿಲ್ವೆ ಪತ್ಎ
* ವೀಳ್ಯೆದೆಲೆ
* ಅಡಿಕೆ, ಲವಂಗ, ಏಲಕ್ಕಿ
* ಧೂಪ/ಅಗರಬತ್ತಿ
* ಎಣ್ಣೆ ಅಥವಾ ತುಪ್ಪ
* ಎಣ್ಣೆ ಬತ್ತು
* ದೀಪ
* ಕರ್ಪೂರ
* ಬಸ್ಮ
* ಶ್ರೀಗಂಧ
ಜನಿವಾರ
ಅಕ್ಷತೆ
ನೈವೇದ್ಯಕ್ಕೆ ಹಣ್ಣುಗಳು ಅಥವಾ ಡ್ರೈ ಫ್ರೂಟ್ಸ್
ಹಾಲು
ಪಂಚಾಮೃತ
ಗಂಗಾಜಲ
ಜಲಾಧರ ಪಾತ್ರೆ
ತೆಂಗಿನಕಾಯಿ
ತೀರ್ಥದ ಬಟ್ಟಲು
ಶಿವ ಲಿಂಗ ಇಡಲು ತಾಮ್ರ ಅಥವಾ ಕಂಚಿನ ತಟ್ಟೆ,
ಘಂಟೆ

ರುದ್ರಾಭಿಷೇಕ ಪೂಜಾ ವಿಧಿಗಳೇನು?
* ಬೆಳಗ್ಗೆ ಎದ್ದು ಸ್ನಾನ ಮಾಡಿ ಮಡಿ ವಸ್ತ್ರ ಧರಿಸಿ ಪೂಜಾ ಕಾರ್ಯ ಪ್ರಾರಂಭಿಸಬೇಕು.
* ಮರದ ಮಣೆ ಇಟ್ಟು ಅದರ ಮೇಲೆ ಬಿಳಿ ಬಟ್ಟೆ ಅಥವಾ ಟವಲ್ ಹಾಕಿ ಅದರ ಮೇಲೆ ಬೆಳ್ಳಿ/ಕಂಚು/ ತಾಮ್ರದ ತಟ್ಟೆ ಇಡಬೇಕು. ನಂತರ ಆ ತಟ್ಟೆಯ ಮೇಲೆ ಶಿವಲಿಂಗವನ್ನು ಇಡಿ.
* ಶಿವಲಿಂಗವನ್ನು ಉತ್ತರಾಭಿಮುಖವಾಗಿ ಇಡಬೇಕು.
* ಈಗ ಎಣ್ಣೆ ಅಥವಾ ತುಪ್ಪದ ದೀಪವನ್ನು ಹಚ್ಚಿ.
* ಪೂಜಾ ಸಾಮಗ್ರಗಳೆನ್ನೆಲ್ಲಾ ಒಮದು ತಟ್ಟೆಯಲ್ಲಿ ಇಟ್ಟು ಪೂರ್ವಕ್ಕೆ ಮುಖ ಮಾಡುವಂತೆ ಕುಳಿತುಕೊಳ್ಳಬೇಕು.
* ಪೂಜೆ ಮಾಡುವಾಗ ಪುರುಷರು ಹಾಗೂ ಮಹಿಳೆಯರು ಸಾಂಪ್ರದಾಯಿಕವಾದ ಬಟ್ಟೆಗಳನ್ನು ಧರಿಸಿರಬೇಕು.
* ಆಚಮನ್ಯ ಮಾಡುತ್ತಾ(ಚೊಂಬಿನಿಂದ ಸ್ವಲ್ಪ ನೀರನ್ನು ಬಲಗೈಗಯ ಅಂಗೈಗೆ ಸುರಿದು ಸೇವಿಸುವುದು) ಓಂ ನಮ ಶಿವಾಯ, ಓಂ ಕೇಶವಾಯ ನಮಃ, ಓಂ ನಾರಾಣಾಯ ನಮಃ, ಓಂ ಮಾಧವಯ್ಯ ನಮಃ, ಓಂ ಹೃಷಿಕೇಷಾಯ ನಮಃ ಎಂದು ಶಿವನ ನಾಮ ಪಠಿಸಬೇಕು.
* ಶಿವನಿಗೆ ಪೂಜೆ ಮಾಡುವ ಮುನ್ನ ಗಣೇಶನಿಗೆ ಪೂಜೆ ಸಲ್ಲಿಸಬೇಕು. ನಂತರ ನಿಮ್ಮ ಕುಲ ದೇವರಿಗೆ ಪೂಜೆ ಸಲ್ಲಿಸಬೇಕು.
* ಸ್ವಲ್ಪ ತೀರ್ಥ ನೀರನ್ನು ನೀವು ಕೂತಿರುವ ಆಸನದ ಮೇಲೆ ಹಾಗೂ ನಿಮ್ಮ ಮೇಲೆ ಸಿಂಪಡಿಸಿ ಶುದ್ಧ ಮಾಡಿ.
* ಈಗ ಓಂ ನಮ ಶಿವಾಯ... ಎಂದು ಪಠಿಸುತ್ತಾ ಬಿಲ್ವೆ ಪತ್ರೆ ಎಲೆಗಳನ್ನು ಶಿವನಿಗೆ ಅರ್ಪಿಸಿ.
* ಈಗ ಹೂಗಳು ಹಾಗೂ ಅಕ್ಷತೆಯನ್ನು ಅರ್ಪಿಸಿ.
* ಈಗ ನಿಧಾನಕ್ಕೆ ಶಿವಲಿಂಗವನ್ನು ಮಣೆಯ ಮೇಲಿಂದ ತೆಗೆದು ತಟ್ಟೆಯ ಮೇಲೆ ಇಡಿ. ಶಿವ ಲಿಂಗವನ್ನು ಇಡುವ ಮುಂಚೆ ಬಿಲ್ವೆ ಪತ್ರೆ ಎಲೆಗಳನ್ನು ಇಟ್ಟು ನಂತರ ಶಿವಲಿಂಗವನ್ನು ಇಡಿ. ಹೀಗೆ ಶಿವಲಿಂಗವನ್ನು ಎತ್ತಿ ಇಡುವಾಗ ಶಿವನ ಮಂತ್ರಗಳನ್ನು ಪಠಿಸುತ್ತಲೇ ಇರಿ.
* ಈಗ ನೀರು ಹಾಗೂ ಅಕ್ಷತೆಯನ್ನು ಓಂ ನಮ ಶಿವಾಯ ಎಂದು ಹೇಳುತ್ತಾ ಅರ್ಪಿಸಿ.
* ನಂತರ ಪಂಚಾಮೃತವನ್ನು ಮಂತ್ರವನ್ನು ಪಠಿಸುತ್ತಲೇ ನಿಧಾನಕ್ಕೆ ಶಿವಲಿಂಗಕ್ಕೆ ಅಭಿಷೇಕ ಮಾಡಿ.
* ಈಗ ನೀರು ಹಾಗೂ ಅಕ್ಷತೆಯನ್ನು ಅರ್ಪಿಸಿ ನಂತರ ಶ್ರೀಗಂಧ ಹಾಕಿರುವ ನೀರಿಂದ ಅಭಿಷೇಕ ಮಾಡಿ.
* ಈಗ ಮತ್ತೆ ನೀರು ಮತ್ತು ಅಕ್ಷತೆಯನ್ನು ಅರ್ಪಿಸಿ.
* ಈಗ ಹೂಗಳನ್ನು ಅರ್ಪಿಸಿ, ನಂತರ ಹಾಲು ಅರ್ಪಿಸಿ, ಅದಾದ ಬಳಿಕ ಗಂಗಾಜಲ ಅಥವಾ ಶುದ್ಧ ನೀರನ್ನು ಅರ್ಪಿಸಿ ತೊಳೆಯಿರಿ.
* ನಂತರ ಶಿವಲಿಂಗವನ್ನು ಶುದ್ಧ ಮಾಡಿ ನಂತರ ಮತ್ತೆ ಮೊದಲಿನ ಸ್ಥಾನದಲ್ಲಿ ಅಂದ್ರೆ ಮಣೆಯ ಮೇಲಿನ ತಟ್ಟೆಯಲ್ಲಿ ಇಡಿ. ಶಿವಲಿಂಗವನ್ನು ಇಡುವ ಮುಂಚೆ ಬಿಲ್ವೆ ಪತ್ರೆಯನ್ನು ಇಡಬೇಕು.
* ಈಗ ಶಿವಲಿಂಗವನ್ನು ಹೊಸ ಶುದ್ಧ ಬಟ್ಟೆಯಿಂದ ಒರೆಸಿ.
* ಜನೀವಾರ, ವಸ್ತ್ರ ಅರ್ಪಿಸಿ.
* ಈಗ ಬಲಗೈಯ ಉಂಗುರ ಬೆರಳಿನಿಂದ ಶ್ರೀಗಂಧ ತೆಗೆದು ಲಿಂಗಕ್ಕೆ ಹಚ್ಚಿ, ನಂತರೆ ಅಕ್ಷತೆ ಹಾಕಿ.
* ಭಸ್ಮ, ಬಿಲ್ವೆ ಪತ್ರೆ, ಹೂಗಳು, ಧೂಪ ಇವುಗಳನ್ನು ಅರ್ಪಿಸಿ, ಹೀಗೆ ಅರ್ಪಿಸುವಾಗ ಶಿವನಾಮ ಜಪಿಸುತ್ತಾ ಘಂಟೆ ಭಾರಿಸಿ.
* ನಂತರ ಪಂಚಾಮೃತ, ತೆಂಗಿನಕಾಯಿ, ಹಣ್ಣುಗಳು, ವೀಳ್ಯೆದೆಲೆ, ಅಡಿಕೆ, ಲವಂಗ, ಏಲಕ್ಕಿ, ದಕ್ಷಿಣೆ, ನೈವೇದ್ಯ ಅರ್ಪಿಸಿ.
* ಈ ಎಲ್ಲಾ ಪೂಜೆಗಳನ್ನು ಮಾಡುವಾಗ ಓಂ ನಮ ಶಿವಾಯ ಅಂತ ಜಪಿಸುತ್ತಲೇ ಇರಿ.
* ಮೃತ್ಯುಂಜಯ ಮಂತ್ರ ಹೇಳಿ.
* ಕರ್ಪೂರ ಹಚ್ಚಿ ಆರತಿ ಮಾಡಿ.
* ದೇವರಿಗೆ ಪ್ರದಕ್ಷಣೆ ಮಾಡಿ.
* ದೇವರಿಗೆ ಪುಷ್ಪಾಂಜಲಿ ಅರ್ಪಿಸಿ ನಮಸ್ಕಾರ ಮಾಡಿ.

ರುದ್ರಾಭಿಷೇಕ ಮಾಡುವುದರಿಂದ ದೊರೆಯುವ ಪ್ರಯೋಜನಗಳು
* ರುದ್ರಾಭಿಷೇಕ ಮಾಡುವುದರಿಂದ ಆವರಿಸಿರುವ ಋಣಾತ್ಮಕ ಶಕ್ತಿ ದೂರವಾಗವುದು.
* ರುದ್ರಾಭಿಷೇಕ ಮಾಡುವುದರಿಂದ ಆರೋಗ್ಯ, ಆಯುಸ್ಸು ವೃದ್ಧಿಯಾಗುವುದು.
* ಸಂಪತ್ತು, ಸಂತೋಷ ಹೆಚ್ಚುವುದು.
* ದುಷ್ಟ ಶಕ್ತಿಗಳಿಂದ ರಕ್ಷಣೆ ದೊರೆಯುವುದು.
* ಗ್ರಹ ದೋಷಗಳು, ಕುಂಡಲಿಯಲ್ಲಿ ದೋಷ, ಪಿತೃದೋಷ ಇವೆಲ್ಲಾ ದೂರವಾಗುವುದು.
* ಪಾಪಕರ್ಮಗಳು ದೂರವಾಗಿ ಆತ್ಮವು ಶುದ್ಧವಾಗುವುದು.

ಮಂತ್ರ
ಓಂ ತ್ರ್ಯಯಂಬಕಂ ಯಜ್ಮಹೇ ಸುಗಂಧಿ ಪುಷ್ಠಿ ವರ್ಧನಂ
ಉರ್ವಾರುಕಮೀವ ಬಂಧನಾತ್ ಮೃತ್ಯುರೊರ್ಮುಕ್ಶಯ ಮಮ್ರಿತಾತ್



Click it and Unblock the Notifications