Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಶನಿವಾರದ ದಿನ ಈ ವಸ್ತುಗಳನ್ನು ಖರೀದಿಸಿದರೆ ಶನಿದೇವನ ಕೆಂಗಣ್ಣಿಗೆ ಗುರಿಯಾಗುತ್ತೀರಿ!
ಶನಿ ದೇವನನ್ನು ನ್ಯಾಯ ಹಾಗೂ ಕರ್ಮದಾತ ಎಂದು ಕರೆಯಲಾಗುತ್ತದೆ. ಈತನ ಪ್ರಭಾವ ಎಷ್ಟು ಕೆಟ್ಟದಿದೆಯೋ ಅಷ್ಟೇ ಒಳ್ಳೆಯ ಫಲವನ್ನು ನೀವು ಶನಿದೇವನಿಂದ ಪಡೆಯಬಹುದು. ಅದ್ರಲ್ಲೂ ಶನಿದೇವನನ್ನು ಶನಿವಾರದದಿಂದ ಭಕ್ತಿಯಿಂದ ಬಜಿಸಿದರೆ ಒಳ್ಳೆಯದಾಗುತ್ತೆ ಎನ್ನುವ ನಂಬಿಕೆಯಿದೆ.
ಆದರೆ ಶನಿವಾರದ ದಿನ ನಾವು ಕೆಲವೊಂದು ಕೆಲಸಗಳನ್ನು ಮಾಡಬಾರದಂತೆ. ಯಾಕಂದ್ರೆ ಶನಿದೇವನ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಇದರಿಂದ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಅಷ್ಟಕ್ಕು ಶನಿವಾರದ ದಿನ ಯಾವ ಕೆಲಸಗಳನ್ನು ಮಾಡಬಾರದು ಅನ್ನೋದನ್ನು ತಿಳಿದುಕೊಳ್ಳೋಣ.

ಈ ದಿನ ಇಂತಹ ದೇವರನ್ನು ಪೂಜೆಸಿದ್ರೆ ಒಳಿತಾಗಿಲಿದೆ!
ಹಿಂದೂ ಧರ್ಮದ ಪ್ರಕಾರ ವಾರದ ಪ್ರತಿಯೊಂದು ದಿನವನ್ನು ಒಬ್ಬೊಬ್ಬ ದೇವರಿಗೆ ಮೀಸಲಿಡಲಾಗಿದೆ. ಇದರ ಪ್ರಕಾರ ಸೋಮವಾರ ಶಿವ, ಮಂಗಳವಾರ ಆಂಜನೇಯಾ ಮತ್ತು ದುರ್ಗಾದೇವಿ, ಬುಧವಾರ ಗಣೇಶ, ಗುರುವಾರ ಶ್ರೀಹರಿ ವಿಷ್ಣು ಮತ್ತು ಸರಸ್ವತಿ, ಶುಕ್ರವಾರ ಲಕ್ಷ್ಮೀ, ಶನಿವಾರದ ದಿನ ಶನಿ ದೇವ, ಕಾಳಿ, ಆಂಜನೇಯಾ ಮತ್ತ ಭಾನುವಾರದ ದಿನ ಸೂರ್ಯದೇವನನ್ನು ಪೂಜಿಸಿದ್ರೆ ಒಳಿತಾಗತ್ತೆ ಅನ್ನೋ ನಂಬಿಕೆಯಿದೆ.
ಶನಿವಾರ ಈ ವಸ್ತುಗಳನ್ನು ಖರೀದಿ ಮಾಡಬೇಡಿ!
ಶನಿ ದೇವನು ನ್ಯಾಯದಾತ. ಮುನುಷ್ಯರು ಮಾಡೋ ಒಳ್ಳೆಯ ಹಾಗೂ ಕೆಟ್ಟ ಕೆಲಸಗಳ ಆಧಾರದ ಮೇಲೆ ಶನಿ ದೇವನು ಅವರವರ ಕರ್ಮಫಲಗಳನ್ನು ಕರುಣಿಸುತ್ತಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿವಾರದ ದಿನ ಕೆಲವೊಂದು ವಸ್ತುಗಳನ್ನು ಖರೀದಿ ಮಾಡೋದ್ರಿಂದ ಶನಿದೇವನ ಕೋಪಕ್ಕೆ ಗುರಿಯಾಗಬೇಕಾಗುತ್ತಂತೆ. ಹೀಗಾಗಿ ಕೆಲವು ವಸ್ತುಗಳನ್ನು ಶನಿವಾರ ಖರೀದಿಸೋದು ಅಶುಭ ಅಂತಲೂ ಹೇಳಲಾಗುತ್ತದೆ.
ಕಬ್ಬಿಣದಿಂದ ಮಾಡಿದ ಯಾವುದೇ ವಸ್ತುಗಳನ್ನು ಖರೀದಿಸಬೇಡಿ!
ಧರ್ಮಗ್ರಂಥಗಳ ಪ್ರಕಾರ ಶನಿವಾರದ ಕಬ್ಬಿಣ ವಸ್ತುವಿನ ಮಾಡಿದ ಯಾವುದೇ ವಸ್ತುಗಳು ಖರೀದಿ ಮಾಡಲೇಬಾರದು. ಇದರಿಂದ ಅಶುಭವಾಗುತ್ತೆ ಎಂಬ ನಂಬಿಕೆ. ಅಷ್ಟೇ ಅಲ್ಲ, ಶನಿವಾರ ಖರೀದಿಸಿದ ಕಬ್ಬಿಣದ ವಸ್ತುಗಳನ್ನು ನೀವು ಮನೆಯೊಳಗಡೆ ತಂದರೆ ಶನಿದೇವನ ಕೆಂಗಣ್ಣಿಗೆ ಗುರಿಯಾಗುತ್ತೀರಿ. ಯಾವುದೇ ಕಾರಣಕ್ಕೂ ಶನಿವಾರದ ದಿನ ಕಬ್ಬಿಣದ ವಸ್ತುಗಳನ್ನು ಖರೀದಿ ಮಾಡಲು ಹೋಗಬೇಡಿ.
ಉಪ್ಪು ಖರೀದಿಸಬೇಡಿ!
ಶನಿವಾರದ ಉಪ್ಪು ಖರೀದಿಸುವುದನ್ನು ಕೂಡ ನಿಷೇಧಿಸಲಾಗಿದೆ. ನಂಬಿಕೆಗಳ ಪ್ರಕಾರ ಶನಿವಾರದ ಉಪ್ಪು ಖರೀದಿ ಮಾಡೋದ್ರಿಂದ ದಾರಿದ್ರ್ಯ ಬರುತ್ತಂತೆ. ಹೀಗಾಗಿ ಯಾವುದೇ ಕಾರಣಕ್ಕೂ ಶನಿವಾರ ಉಪ್ಪು ಖರೀದಿ ಮಾಡಲೇಬೇಡಿ.
ಶನಿವಾರದ ದಿನ ಉಗುರು ತೆಗೆಯಬೇಡಿ!
ಶನಿವಾರದ ದಿನ ಉಗುರು ತೆಗೆಯಬಾರದು. ಅಷ್ಟೇ ಅಲ್ಲ, ಇದರ ಜೊತೆಗೆ ಕೂದಲು ಹಾಗೂ ಗಡ್ಡ ತೆಗೆಯುವುದನ್ನೂ ಈ ದಿನ ನಿಷೇಧಿಸಲಾಗಿದೆ. ಆ ದಿನ ನಿಮಗೆ ತುರ್ತು ಕೆಲಸಕ್ಕೆ ಹೋಗಬೇಕಾಗಿ ಬಂದರೂ ಕೂಡ ಅಪ್ಪಿ-ತಪ್ಪಿಯೂ ಗಡ್ಡ ಹಾಗೂ ಕೂದಲಿಗೆ ಕೈ ಹಾಕೋದಕ್ಕೆ ಹೋಗಲೇಬೇಡಿ. ಇನ್ನೂ ನಿಮಗೆ ಉಗುರು ಕಚ್ಚುವ ಅಭ್ಯಾಸವಿದ್ದರೂ ಶನಿವಾರದ ದಿನ ನಿಮ್ಮನ್ನು ನೀವು ನಿಯಂತ್ರಿಸಿಕೊಳ್ಳಿ. ಇದರಿಂದ ಶನಿದೋಷ ಎದುರಾಗುತ್ತಂತೆ.
ಮದ್ಯಪಾನ ಹಾಗೂ ಮಾಂಸ ಸೇವಿಸಬೇಡಿ!
ಶನಿವಾರದ ದಿನ ಸಾತ್ವಿಕ ಆಹಾರಗಳನ್ನು ಸೇವನೆ ಮಾಡೋದ್ರಿಂದ ಶನಿದೇವನ ಕೃಪೆಗೆ ಪಾತ್ರವಾಗಬಹುದಂತೆ. ಈ ದಿನ ಯಾವುದೇ ಕಾರಣಕ್ಕೂ ಮಧ್ಯಪಾನ ಅಥವಾ ಮಾಂಸವನ್ನು ಸೇವನೆ ಮಾಡಬಾರದು. ಶನಿವಾರ ಆದಷ್ಟು ಸಾತ್ವಿಕ ಆಹಾರಗಳನ್ನೇ ಸೇವಿಸಿ.
ಅಶ್ವಥ ಮರವನ್ನು ಪೂಜಿಸಿ
ನಂಬಿಕೆಗಳ ಪ್ರಕಾರ ಶನಿವಾರದ ದಿನ ಅಶ್ವಥ ಮರವನ್ನು ಭಕ್ತಿಯಿಂದ ಪೂಜಿಸಿದ್ರೆ ಶನಿದೇವನ ಕೃಪೆಗೆ ಪಾತ್ರವಾಗಬಹುದಂತೆ. ಹಾಗೂ ಜೀವನದ ತುಂಬೆಲ್ಲಾ ಖುಷಿಯೇ ತುಂಬಿಕೊಂಡಿರುತ್ತಂತೆ. ಹೀಗಾಗಿ ಅಶ್ವಥ ಮರವನ್ನು ಶನಿವಾರದ ದಿನ ಪೂಜಿಸಿದರೆ ಯಾವುದೇ ರೀತಿಯ ಕಷ್ಟಗಳು ಎದುರಾಗೋದಿಲ್ವಂತೆ.
ಕಪ್ಪು ಎಳ್ಳು
ಕಪ್ಪು ಎಳ್ಳನ್ನು ಶನಿವಾರದ ದಿನ ಖರೀದಿ ಮಾಡಬಾರದು. ಈ ದಿನ ಎಳ್ಳು ಖರೀದಿ ಮಾಡಿದ್ರೆ ನಮ್ಮ ಕೆಲಸಕ್ಕೆ ಅಡ್ಡಿಯಾಗುತ್ತಂತೆ. ಹೀಗಾಗಿ ಶನಿದೇವನಿಗೆ ಶನಿವಾರದ ದಿನ ಎಳ್ಳು ಹಾಗೂ ಸಾಸಿವೆ ಎಣ್ಣೆಯನ್ನು ಅರ್ಪಿಸಿದ್ರೆ ಒಳ್ಳೆಯದಾಗುತ್ತೆ ಅನ್ನೋ ನಂಬಿಕೆಯಿದೆ. ಆದರೆ ಯಾವುದೇ ಕಾರಣಕ್ಕೂ ಎಳ್ಳು ಖರೀದಿ ಮಾಡಲು ಹೋಗಬೇಡಿ.
ಕಪ್ಪು ಶೂ ಖರೀದಿ ಮಾಡಬೇಡಿ!
ಶನಿವಾರದ ದಿನ ನೀವು ಎಲ್ಲಿ ಹೋಗೇಕಾದರೂ ಕಪ್ಪು ಶೂ ಅನ್ನು ಧರಿಸಲೇಬೇಡಿ. ಇದರಿಂದ ನೀವು ಹೋಗಬೇಕಾದ ಕೆಲಸ ಆಗೋದಿಲ್ಲ ಅನ್ನೋ ನಂಬಿಕೆಯಿದೆ. ಇನ್ನೂ ಶನಿವಾರದ ದಿನ ಕಪ್ಪು ಶೂ ಖರೀದಿ ಮಾಡೋದಕ್ಕೂ ಹೋಗಬೇಡಿ. ಇದರಿಂದ ನೀವು ಶನಿದೇವನ ಕೋಪಕ್ಕೆ ಗುರಿಯಾಗಬೇಕಾಗುತ್ತದೆ.
ಈ ವಸ್ತುಗಳನ್ನು ದಾನ ಮಾಡಿ!
ಶನಿದೇವನಿಂದ ಉಂಟಾಗುವ ದುಷ್ಪರಿಣಾಮಗಳನ್ನು ದೂರ ಮಾಡಲು ಶನಿದೇವನಿಗೆ ಬೆಲ್ಲ ಮತ್ತು ಕಾಳುಗಳೊಂದಿಗೆ ಶನಿ ದೇವನನ್ನು ಪೂಜೆ ಮಾಡಬೇಕು. ಆದರೆ ಪೂಜೆಯ ನಂತರ ಆ ಪ್ರಸಾದವನ್ನು ನೀವೆ ಮೊದಲು ತಿನ್ನಬೇಕು. ನಂತರ ಇತರರಿಗೆ ಹಂಚಬೇಕು. ಇನ್ನೂ ಶನಿವಾರದ ದಿನ ಕಪ್ಪು ಬೂಟು, ಕಪ್ಪು ಕಂಬಳಿಗಳು, ಕಪ್ಪು ಎಳ್ಳು, ಉದ್ದಿನ ಬೇಳೆ ಮತ್ತು ಕಿಚಿಡಿಯನ್ನು ದಾನ ಮಾಡಬೇಕು. ಇದರಿಂದ ಶನಿಯ ಪ್ರಭಾವ ಕಡಿಮೆಯಾಗುತ್ತಂತೆ.
ಶನಿವಾರದ ದಿನ ಅಪ್ಪಿ- ತಪ್ಪಿಯೂ ಈ ವಸ್ತುಗಳನ್ನು ಖರೀದಿಸುವ ತಪ್ಪುಗಳನ್ನು ಮಾಡಲೇಬೇಡಿ. ಶನಿದೇವನನ್ನು ಭಜಿಸುವ ಮೂಲಕ ಆತನ ಕೃಪೆಗೆ ಪಾತ್ರರಾಗಿ.



Click it and Unblock the Notifications

