Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಆಗಸ್ಟ್ 5ಕ್ಕೆ ಸಂಪತ್ತು ಶನಿವಾರ: ಶನಿದೋಷದಿಂದ ಪಾರಾಗಲು ಶ್ರಾವಣ ಶನಿವಾರ ಏನು ಮಾಡಬೇಕು?
ಶ್ರಾವಣ ತಿಂಗಳು ಹಿಂದೂಗಳಿಗೆ ಪವಿತ್ರವಾದ ತಿಂಗಳು, ಅದರಲ್ಲೂ ಈ ವರ್ಷ ಅಧಿಕ ಮಾಸ ಬಂದಿರುವುದರಿಂದ ಎರಡು ತಿಂಗಳು ಶ್ರಾವಣ ಮಾಸವಿದೆ. ಶ್ರಾವಣ ಸೋಮವಾರ ಶಿವನ ಆರಾಧನೆಗೆ ತುಂಬಾನೇ ಶ್ರೇಷ್ಠವಾದ ದಿನವೆಂದು ಹೇಳಲಾಗುವುದು, ಶ್ರಾವಣ ಸೋಮವಾರದಂತೆ ಶ್ರಾವಣ ಶನಿವಾರ ಕೂಡ ತುಂಬಾನೇ ಮುಖ್ಯ. ಶ್ರಾವಣ ಶನಿವಾರವನ್ನು ಸಂಪತ್ತು ಶನಿವಾರ ಎಂದು ಕರೆಯಲಾಗುವುದು.
ಶನಿವಾರದಂದು ಶನಿದೇವನ ಪೂಜಿಸಲಾಗುವುದು, ಶ್ರಾವಣ ಶನಿವಾರದಲ್ಲಿ ಶಿವನ ಪೂಜೆ ಮಾಡಿ ಶನಿಯ ಆರಾಧನೆ ಮಾಡುವುದರಿಂದ ಶನಿದೋಷವಿರುವವರಿಗೆ ಉತ್ತಮ ಪರಿಹಾರ ಸಿಗಲಿದೆ.

ಸಂಪತ್ತು ಶನಿವಾರದ ಮಹತ್ವ
ಶ್ರಾವಣ ಶನಿವಾರದಂದುಶಿವನ ಆರಾಧನೆ ಮಾಡುವುದರಿಂದ ಕಷ್ಟಗಳೆಲ್ಲಾ ದೂರಾಗಿ ಸಂಪತ್ತು ಹೆಚ್ಚಾಗಲಿದೆ ಎಂಬ ನಂಬಿಕೆ ಇದೆ, ಈ ಕಾರಣಕ್ಕೆ ಶ್ರಾವಣ ಶನಿವಾರವನ್ನು ಸಂಪತ್ತು ಶನಿವಾರ ಎಂದು ಕರೆಯಲಾಗುವುದು. ಶ್ರಾವಣ ಶನಿವಾರದಂದು ಸಂಪತ್ತು ವೃದ್ಧಿಗಾಗಿ ಶಿವನಿಗೆ ಅಭಿಷೇಕ ಮಾಡಿಸಬೇಕು.
ಶನಿ ದೋಷ ನಿವಾರಣೆಗೆ
ರಾಶಿಯಲ್ಲಿ ಶನಿದೋಷವಿದ್ದರೆ ತುಂಬಾನೇ ಕಷ್ಟಗಳನ್ನು ಎದುರಿಸಬೇಕಾಗುವುದು, ವೃತ್ತಿ ಜೀವನ, ವೈಯಕ್ತಿಕ ಬದುಕು, ಸಾಮಜಿಕ ಜೀವನ ಎಲ್ಲದರ ಮೇಲೂ ಕೆಟ್ಟ ಪ್ರಭಾವ ಬೀರುವುದು, ಈ ಕಾರಣಕ್ಕೆ ಶನಿದೋಷಕ್ಕೆ ಜನ ಭಯಪಡುತ್ತಾರೆ. ಶನಿ ಸಾಡೇಸಾತಿ ಅಥವಾ ಶನಿ ಧೈಯ್ಯ ಇರುವವರು ದೀರ್ಘ ಸಮಯದವರೆಗೆ ತುಂಬಾನೇ ಕಷ್ಟಪಡಬೇಕಾಗುತ್ತದೆ. ಶನಿಯ ಕೆಟ್ಟ ಪ್ರಭಾವ ಕಡಿಮೆ ಮಾಡಲು ಶನಿವಾರ ಶನಿ ದೇವಾಲಯಕ್ಕೆ ಹೋಗಿ ಪೂಜೆ ಮಾಡುವುದು ಒಳ್ಳೆಯದು.
ಶನಿ ದೋಷ ನಿವಾರಣೆಗೆ ಸಂಪತ್ತು ಶನಿವಾರ ಪೂಜೆ ಹೇಗೆ ಮಾಡಬೇಕು?
* ಈ ದಿನ ಕಪ್ಪು ಬಟ್ಟೆಗಳನ್ನು ಧರಿಸಬೇಕು
* ದೇವರಿಗೆ ಕಪ್ಪು ಎಳ್ಳು, ಕಪ್ಪು ಉದ್ದಿನ ಬೇಳೆ ಅರ್ಪಿಸಬೇಕು
* ಈ ದಿನ ಪೂರ್ತಿ ಉಪವಾಸವಿದ್ದು ಶನಿ ದೇವನಿಗೆ ಪೂಜೆ ಮಾಡಿದ ಬಳಿಕ ನಂತರ ಉಪವಾಸ ಮುರಿಯಬೇಕು.
* ಕೆಲವರು ಈ ದಿನ ಒಂದು ಹೊತ್ತಿನ ಊಟವನ್ನಷ್ಟೇ ಮಾಡುತ್ತಾರೆ, ಕೆಲವರು ಏನೂ ತಿನ್ನದೆ ಉಪವಾಸ ಮಾಡುತ್ತಾರೆ.
ಶನಿದೋಷವಿರುವವರು ಸಂಪತ್ತು ಶನಿವಾರ ಈ ಪರಿಹಾರವನ್ನು ಮಾಡಿ
* ಹನುಮಂತನ ದೇವಾಲಯಕ್ಕೆ ಹೋಗಿ ವೀಳ್ಯೆದೆಲೆ ಹಾಗೂ ಅಡಿಕೆಯನ್ನು ಅರ್ಪಿಸಿ, ಸಿಹಿ ಪಾನ್ ಕೂಡ ಅರ್ಪಿಸಬಹುದು, ಹೀಗೆ ಮಾಡುವುದರಿಂದ ನೀವು ಮಂಗಳಕರ ಫಲಿತಾಂಶವನ್ನು ಪಡೆಯಬಹುದು.
* ಹನುಮಂತನಿಗೆ ಸಿಂಧೂರ ಅರ್ಪಿಸಿ: ಶನಿವಾರ ಹನುಮಂತನಿಗೆ ಸಿಂಧೂರವನ್ನು ಅರ್ಪಿಸುವುದರಿಂದ ಹನುಮಂತನ ಕೃಪೆಯಿಂದಾಗಿ ಶನಿಯ ಕೆಟ್ಟ ಪ್ರಭಾವ ಕಡಿಮೆಯಾಗಲಿದೆ.
* ಹನುಮಂತನಿಗೆ ಧ್ವಜನಿಗೆ ಅರ್ಪಿಸಿ
ಶನಿ ಸಾಡೇಸಾತಿಯಿಂದಾಗಿ ತುಂಬಾನೇ ಕಷ್ಟಗಳನ್ನು ಎದುರಿಸುತ್ತಿದ್ದರು ಹನುಮಂತನಿಗೆ ಧ್ವಜವನ್ನು ಅರ್ಪಿಸಿ
ಹನುಮಾನ್ ಚಾಲೀಸ ಪಠಿಸಿ: ಈ ದಿನ ನೀವು ಹನುಮಾನ್ ಚಾಲೀಸ ಪಠಿಸಿ.
ಈ ಶನಿ ಮಂತ್ರಗಳನ್ನು ಪಠಿಸಿ
"ಓಂ ಹಿಲ್ಮ್ ಶಾಮ್ ಶನಾಯ ನಮ"
"ಓಂ ಪ್ರಾಮ್ ಪ್ರೀಮ್ ಪ್ರೌಮ್ ಸಹ ಶಾನೈಶ್ರಾಯ ನಮ"
"ಓಂ ಶಾಮ್ ಶನೇಶ್ಚಾರ ನಮಃ"
"ಔಮ್ ಐಂಗ್ ಹರಿಂಗ್ ಶರಿಂಗ್ ಶಂಗ್ ಶನೈಶ್ಚರಾಯ ನಮ ಔಮ್"
ಶನಿ ಗಾಯತ್ರಿ ಮಂತ್ರ
ಓಂ ಶನೈಶ್ಚರಾಯ ವಿದ್ಮಯೇ ಸೂರ್ಯಪುತ್ರಾಯ ದಹಿಮಹಿ ತನ್ನೊ ಮಂಡಾ ಪ್ರಚೋದಾಯತ್
ಶನಿ ಧ್ಯಾನ ಮಂತ್ರ
ನೀಲಂಜನ ಸಮಾಭಮ್ ರವಿಪುತ್ರಂ ಯಮಗ್ರಾಜಂ
ಚಯಾ ಮಾರ್ತಾಂದ ಸಂಭಾತ್ ತಮ್ ನಮಮಿ ಶೈಶ್ಚರಂ



Click it and Unblock the Notifications
