Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಇಷ್ಟಾರ್ಥ ನೆರವೇರಲು ಗಣೇಶ ಮಂತ್ರ ಪಠಣೆ ಈ ರೀತಿ ಮಾಡಬೇಕು
ಗಣೇಶ ಚತುರ್ಥಿಯ ಶುಭಾಶಯಗಳು. ಗಣೇಶನನ್ನು ಮಂತ್ರಗಳನ್ನು ಆರಾಧಿಸಿದರೆ ನಿಮ್ಮೆಲ್ಲಾ ಇಷ್ಟಾರ್ಥಗಳನ್ನು ನೆರವೇರಿಸುತ್ತಾನೆ. ಆದರೆ ಗಣೇಶನ ಮಂತ್ರಗಳನ್ನು ಸರಿಯಾದ ಕ್ರಮದಲ್ಲಿ ಪಠಿಸಬೇಕಾಗುತ್ತದೆ, ಆದರೆ ಮಾತ್ರ ಅದರ ಫಲ ದೊರೆಯುವುದು. ನಾವಿಲ್ಲಿ ಶ್ರೀ ಗಣೇಶನ ಆರಾಧನೆಯಲ್ಲಿ ಪಠಿಸಬೇಕಾದ ಮಂತ್ರಗಳು ಹಾಗೂ ಪಠಣೆಯ ಕ್ರಮವನ್ನು ಹೇಳಿದ್ದೇವೆ ನೋಡಿ:

ಗಣೇಶನ ಮಂತ್ರ ಪಠಣೆ ಮಾಡುವಾಗ ಈ ನಿಯಮಗಳನ್ನು ಪಾಲಿಸಿ
* ಬೆಳಗ್ಗೆ ಎದ್ದು ಸ್ನಾನ ಮಾಡಿ ಮಡಿ ಬಟ್ಟೆ ಧರಿಸಿ, ಮನಸ್ಸು ಕೂಡ ಸ್ವಚ್ಛವಾಗಿರಬೇಕು. ಮಂತ್ರಗಳನ್ನು ಪಠಣೆ ಮಾಡುವಾಗ ದೇಹ ಹಾಗೂ ಮನಸ್ಸು ಎರಡೂ ಶುದ್ಧವಾಗಿರಬೇಕು.
* ಮಂತ್ರಗಳನ್ನು ಹೇಳುವಾಗ ನಿಮ್ಮೆಲ್ಲಾ ಚಿಂತೆ ಬಿಟ್ಟು ಗಣೇಶನ ಆರಾಧನೆಯಲ್ಲಿ ಮಾತ್ರ ನಿಮ್ಮ ಗಮನವಿರಬೇಕು.
* ಗಣೇಶನ ಪೂಜಿಸುವಾಗ ನಿರ್ದಿಷ್ಟ ಮಂತ್ರಗಳನ್ನು ಹೇಳುವ ಮೂಲಕ ಪೂಜೆಯನ್ನು ಪ್ರಾರಂಭಿಸಬೇಕು.
ಈ ಮಂತ್ರ ಪಠಿಸಿ
ವಕ್ರತುಣ್ಡ ಮಹಾಕಾಯ ಸೂರ್ಯಕೋಟಿ ಸಮಪ್ರಭ ।
ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದಾ ॥
ಮುರಿದ ದಂತವನ್ನು ಹೊಂದಿರುವ , ಕೋಟಿ ಸೂರ್ಯನ ಬೆಳಕಿನಂತೆ ಪ್ರಜ್ವಲಿಸುವ ಕಾಯದ ದೇವರೇ ನನ್ನ ಕಾರ್ಯಗಳು ನಿರ್ವಿಘ್ನವಾಗಿ ನಡೆಯುವಂತೆ ಆಶೀರ್ವದಿಸು.
* ಈ ಮಂತ್ರ ಯಾವುದೇ ಕಾರ್ಯಗಳನ್ನು ಮಾಡುವ ಮೊದಲು ಆ ಕೆಲಸಗಳು ನಿರ್ವಿಘ್ನವಾಗಿ ನೆರವೇರಲು ಈ ಮಂತ್ರವನ್ನು ಪಠಿಸಬೇಕು.
* ಪ್ರತಿದಿನ ಬೆಳಗ್ಗೆ ಈ ಮಂತ್ರ ಹೇಳಿದರೆ ಇನ್ನೂ ಒಳ್ಳೆಯದು
* ಈ ಮಂತ್ರವನ್ನು ಗಣೇಶನ ಮೂರ್ತಿ ಅಥವಾ ಫೋಟೋದ ಮುಂದೆ ಉತ್ತರ ಅಥವಾ ಪೂರ್ವಕ್ಕೆ ಮುಖ ಮಾಡಿ ನಿಂತು ಪಠಿಸಿ
* ಈ ಮಂತ್ರವನ್ನು 108 ಬಾರಿ ಪಠಿಸಿದರೆ ಒಳ್ಳೆಯದು.
ಗಣೇಶ ಗಾಯತ್ರಿ ಮಂತ್ರ
ಓಂ ಏಕದನ್ತಾಯ ವಿದ್ಧಮಹೇ, ವಕ್ರತುಣ್ಡಾಯ ಧೀಮಹಿ, ತನ್ನೋ ದನ್ತಿ ಪ್ರಚೋದಯಾತ್॥
ಪ್ರಯೋಜನಗಳು
* ಈ ಮಂತ್ರ ಪಠಣೆ ಮಾಡುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗಲಿದೆ.
* ತುಂಬಾ ಸಮಯದಲ್ಲಿ ಅನಾರೋಗ್ಯ ಸಮಸ್ಯೆ ಹೊಂದಿರುವವರು ಈ ಮಂತ್ರ ಪಠಣೆ ಮಾಡುವುದು ಒಳ್ಳೆಯದು.
* ಇದರಿಂದ ಅವ್ಯಕ್ತ ಭಯ ದೂರಾಗುವುದು, ಮನಸ್ಸಿಗೆ ನೆಮ್ಮದಿ ಸಿಗುವುದು.
* ಈ ಮಂತ್ರ ಪಠಣೆ ಮಾಡುವುದರಿಂದ ನಿಮ್ಮ ಸಂಪತ್ತು ವೃದ್ಧಿಸುವುದು.
* ಈ ಮಂತ್ರ ಗಣೇಶನ ಆರಾಧನೆ ಮಾಡುವಾಗ ಪಠಿಸಿ
ಈ ಮಂತ್ರವನ್ನು 108 ಬಾರಿ ಪಠಿಸಿ
* ಈ ಮಂತ್ರವನ್ನು ಯಾರು ಬೇಕಾದರೂ ಪಠಿಸಬಹುದು.
ಗಣೇಶ ಮಂತ್ರ ಹೀಗಿದೆ:
ಓಂ ಗಂ ಗಣಪತಯೇ ನಮಃ |
* ಯಾವುದೇ ದೇವರ ಪೂಜೆ ಮಾಡುವ ಮುನ್ನ ಈ ಮಂತ್ರ ಪಠಿಸಬೇಕು
* ಈ ಮಂತ್ರವನ್ನು ಭಕ್ತಿಯಿಂದ ಪಠಣೆ ಮಾಡುವುದರಿಂದ ನಕಾರಾತ್ಮಕ ಶಕ್ತಿ ದೂರಾಗುವುದು
* ವೃತ್ತಿ ಸಂಬಂಧಿ ಕೆಲಸದ ಯಶಸ್ವಿಯಾಗಿ ಈ ಮಂತ್ರವನ್ನು ಪಠಿಸಿ.
ಋಣ ಹರತಾ ಮಂತ್ರ
ಓಂ ಗಣೇಶ ಋಣಂ ಚಿಂಧಿ ವರೇಣ್ಯಂ ಹುಂ ನಮಃ ಫಟ್॥
* ಈ ಮಂತ್ರ ಪಠಣೆ ಮಾಡುವುದರಿಂದ ಸಂಪತ್ತು ವೃದ್ಧಿಸುಉದು
* ಈ ಮಂತ್ರ ಪಠಣೆ ಮಾಡುವುದರಿಂದ ಜ್ಞಾನ ಹೆಚ್ಚಾಗುವುದು.
* ಸಾಲದ ಸಮಸ್ಯೆಯಿಂದ ಮುಕ್ತನಾಗುತ್ತಾನೆ.
ಸಾಲ ಬಾಧೆ ಇರುವವರು ಪ್ರತಿದಿನ ಈ ಮಂತ್ರವನ್ನು 108 ಬಾರಿ ಪಠಣೆ ಮಾಡುವುದು ಒಳ್ಳೆಯದು.
ಸಿದ್ಧಿ ವಿನಾಯಕ ಮಂತ್ರವು
ಓಂ ನಮೋ ಸಿದ್ಧಿ ವಿನಾಯಕಾಯ ಸರ್ವ ಕಾರ್ಯ ಕರ್ತ್ರೇ ಸರ್ವ ವಿಘ್ನ ಪ್ರಶಮನಾಯ ಸರ್ವ ರಾಜ್ಯ ವಶ್ಯಕರಣಾಯ ಸರ್ವಜನ ಸರ್ವಸ್ತ್ರೀ ಪುರುಷ ಆಕರ್ಷಣಾಯ ಶ್ರೀಂ ಓಂ ಸ್ವಾಹಾ ॥
* ಈ ಮಂತ್ರ ಪಠಣೆ ಮಾಡುವುದರಿಂದ ಆದ್ಯಾತ್ಮಿಕವಾಗಿ ಪ್ರಬುದ್ಧನಾಗುತ್ತಾನೆ. ನಿಮ್ಮ ಕಾರ್ಯಕ್ಷೇತ್ರದಲ್ಲಿ ಅನೇಕ ಹೊಸ ಅವಕಾಶ ಸಿಗಲಾರಂಭಿಸುವುದು.
* ನೀವು ಯಾವುದಾದರು ಹೊಸ ಉದ್ಯಮ ಪ್ರಾರಂಭಿಸುವ ಮುನ್ನ ಈ ಮಂತ್ರ ಪಠಣೆ ಮಾಡಿ.
ಶಕ್ತಿ ವಿನಾಯಕ ಮಂತ್ರ ಹೀಗಿದೆ:
ಓಂ ಹ್ರೀಂಗ್ ಗ್ರೀಂಗ್ ಹ್ರೀಂಗ್ ।
* ಈ ಮಂತ್ರ ಪಠಣೆ ಮಾಡುವುದರಿಂದ ಯಶಸ್ಸು ದೊರೆಯಲಿದೆ.
* ಆರೋಗ್ಯ ಸ್ಥಿತಿ ಉತ್ತಮವಾಗುವುದು.
ಗಣೇಶ ಮೂಲ ಮಂತ್ರ ಹೀಗಿದೆ:
ಓಂ ಶ್ರೀಂ ಹ್ರೀಂ ಕ್ಲೀಂ ಗ್ಲೌಂ ಗಂ ಗಣಪತಯೇ ವರ ವರದ ಸರ್ವಜನಂ ಮೇ ವಶಮಾನಯ ಸ್ವಾಹಾ॥
ಏಕದಂತಾಯ ವಿದ್ಮಹೇ , ವಕ್ರತುಂಡಾಯ ಧೀಮಹಿ, ತನ್ನೋ ದಂತಿ ಪ್ರಚೋದಯಾತ್ ॥
* ಈ ಮಂತ್ರವನ್ನು ತುಂಬಾನೇ ಸ್ಪಷ್ಟವಾಗಿವಾಗಿ ಪಠಿಸಬೇಕು
* ಇದನ್ನು ಪಠಣೆ ಮಾಡುವುದರಿಂದ ನಿಮ್ಮ ಇಷ್ಟಾರ್ಥಗಳು ನೆರವೇರುವುದು, ನಿಮ್ಮ ಕಾರ್ಯಗಳು ನಿರ್ವಿಘ್ನವಾಗಿ ನೆರವೇರುವುದು.



Click it and Unblock the Notifications











