Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಮಕ್ಕಳು ರುದ್ರಾಕ್ಷಿ ಧರಿಸಿದರೆ ಈ ಪ್ರಯೋಜನಗಳಿವೆ, ಈ ನಿಯಮಗಳೂ ತಿಳಿದಿರಲಿ
ಹಿಂದೂ ಧರ್ಮದಲ್ಲಿ ರುದ್ರಾಕ್ಷಿಗೆ ತುಂಬಾನೇ ಪ್ರಾಮುಖ್ಯತೆ ಇದೆ. ಯಾರು ರುದ್ರಾಕ್ಷಿಯನ್ನು ಧರಿಸುತ್ತಾರೋ ಅವರು ಇದರ ಪ್ರಯೋಜನಗಳನ್ನು ಪಡೆಯುತ್ತಾರೆ ಎಂಬುವುದು ಬಲವಾದ ನಂಬಿಕೆ. ರುದ್ರಾಕ್ಷಿಗೆ ಅಂಥ ಶಕ್ತಿ ಇದೆ. ರುದ್ರಾಕ್ಷಿಯನ್ನು ಶಿವನ ಪ್ರತಿರೂಪವೆಂದೇ ಹೇಳಲಾಗುವುದು.

ರುದ್ರಾಕ್ಷಿ ಧರಿಸಿದರೆ ಮನಸ್ಸಿಗೆ ಶಾಂತಿ ಸಿಗುವುದು, ದೇಹದ ಆರೋಗ್ಯ ಉತ್ತಮವಾಗುವುದು, ಜೀವನದಲ್ಲಿ ಖುಷಿ ಇರುತ್ತದೆ. ಆದರೆ ಈ ರುದ್ರಾಕ್ಷಿಯನ್ನು ಯಾರು, ಯಾವಾಗ ಬೇಕಾದರೂ ಧರಿಸಲು ಸಾಧ್ಯವಿಲ್ಲ. ಈ ರುದ್ರಾಕ್ಷಿಯನ್ನು ಧರಿಸಲು ಕೆಲವೊಂದು ನಿಯಮಗಳಿವೆ, ಅವುಗಳನ್ನು ಪಾಲಿಸಿದರೆ ಮಾತ್ರ ಇದರ ಸಂಪೂರ್ಣ ಪ್ರಯೋಜನ ಪಡೆಯಬಹುದು. ಅವುಗಳ ಕುರಿತ ಹೆಚ್ಚಿನ ಮಾಹಿತಿ ತಿಳಿಯುವುದಾದರೆ :
ರುದ್ರಾಕ್ಷಿಯನ್ನು ಬೆಳಗ್ಗೆ ಹೊತ್ತಿನಲ್ಲಿಯೇ ಧರಿಸಬೇಕು
ರುದ್ರಾಕ್ಷಿಯನ್ನು ಯಾವುದೋ ಹೊತ್ತಿನಲ್ಲಿ ಧರಿಸುವಂತಿಲ್ಲ, ರುದ್ರಾಕ್ಷಿಯನ್ನು ಬೆಳಗ್ಗೆ ಹೊತ್ತಿನಲ್ಲಿ ಶುಭ ಸಮಯದಲ್ಲಿಯೇ ಧರಿಸಬೇಕು. ಅಲ್ಲದೆ ಮಲಗುವ ಮುನ್ನ ರುದ್ರಾಕ್ಷಿ ಬಿಚ್ಚಿ ದೇವರ ಮುಂದೆ ಇಡಬೇಕು. ಹೀಗೆ ಇಡುವಾಗ ರುದ್ರಾಕ್ಷಿ ಮಂತ್ರವನ್ನು 9 ಬಾರಿ ಪಠಿಸಬೇಕು.
ರುದ್ರಾಕ್ಷಿಯನ್ನು ಮಡಿಯಿಂದಲೇ ಧರಿಸಬೇಕು
ಯಾರು ರುದ್ರಾಕ್ಷಿಯನ್ನು ಧರಿಸುತ್ತಾರೋ ಅವರು ದೇಹ ಹಾಗೂ ಮನಸ್ಸಿನಲ್ಲಿ ಮಡಿಯಿಂದಿರಬೇಕು. ಸ್ನಾನ ಮಾಡಿದ ಬಳಿಕ ರುದ್ರಾಕ್ಷಿ ಧರಿಸಬೇಕು. ರುದ್ರಾಕ್ಷಿ ಧರಿಸಿದವರು ಸುಳ್ಳು ಹೇಳಬಾರದು. ಮತ್ತೊಬ್ಬರಿಗೆ ವಂಚನೆ ಮಾಡಬಾರದು.
ಇನ್ನು ರುದ್ರಾಕ್ಷಿ ಮಾಲೆಯನ್ನು ಮಕ್ಕಳಿಗೆ ಧರಿಸುವುದರಿಂದ ಈ ಪ್ರಯೋಜನಗಳಿವೆ
* ಮಕ್ಕಳನ್ನು ಋಣಾತ್ಮಕ ಶಕ್ತಿಯಿಂದ ರಕ್ಷಿಸುತ್ತದೆ. ಮಕ್ಕಳಲ್ಲಿ ಆಧ್ಯಾತ್ಮದಲ್ಲಿ ಆಸಕ್ತಿ ಹೆಚ್ಚಿಸುತ್ತದೆ. ರುದ್ರಾಕ್ಷಿಯನ್ನು ಧರಿಸಿದಾಗ ಓಂ ನಮ ಶಿವಾಯ ಮಂತ್ರ ಪಠಿಸಲು ಮಕ್ಕಳಿಗೆ ಹೇಳಬೇಕು.
* ವಿದ್ಯಾರ್ಥಿಗಳಿಗೆ ತುಂಬಾ ಒಳ್ಲೆಯದು
ಓದುವ ವಿದ್ಯಾರ್ಥಿಗಳು 4 ಮುಖಿ ಅಥವಾ 6 ಮುಖಿ ರುದ್ರಾಕ್ಷಿ ಧರಿಸಿದರೆ ಒಳ್ಳೆಯದು. ಮಕ್ಕಳಿಗೆ ಏಕಮುಖಿ ರುದ್ರಾಕ್ಷಿ ಧರಿಸಲೇಬಾರದು, ಈ ರುದ್ರಾಕ್ಷಿಯನ್ನು ತಪಸ್ವಿಗಳಷ್ಟೇ ಧರಿಸುತ್ತಾರೆ.
* ರುದ್ರಾಕ್ಷಿ ಧರಿಸುವುದರಿಂದ ಮಕ್ಕಳ ಮಾನಸಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ಸಹಕಾರಿ.
* ರುದ್ರಾಕ್ಷಿಯನ್ನು ಬೇರೆಯವರಿಂದ ಪಡೆದಿರಬಾರದು ಅಥವಾ ಸಾಲ ಮಾಡಿ ತೆಗೆದಿರಬಾರದು.
ರುದ್ರಾಕ್ಷಿಯನ್ನು ಕಪ್ಪು ದಾರದಲ್ಲಿ ಧರಿಸಬಾರದು
ಕೆಲವರು ರುದ್ರಾಕ್ಷಿಯನ್ನು ಕಪ್ಪು ದಾರದಲ್ಲಿ ಧರಿಸುತ್ತಾರೆ. ಆದರೆ ರುದ್ರಾಕ್ಷಿಯನ್ನು ಕಪ್ಪು ದಾರದಲ್ಲಿ ಧರಿಸಬಾರದು. ರುದ್ರಾಕ್ಷಿಯನ್ನು ಕೆಂಪು ಅಥವಾ ಅರಿಶಿಣ ದಾರದಲ್ಲಿ ಧರಿಸಬೇಕು.
* ಒಡೆದ ರುದ್ರಾಕ್ಷಿ ಧರಿಸಬಾರದು
ರುದ್ರಾಕ್ಷಿ ಒಡೆದು ಹೋಗಿದ್ದರೆ ಅದನ್ನು ಬದಲಾಯಿಸಬೇಕು.
ಮನೆಯಲ್ಲಿ ಈ ರೀತಿಯಾದಾಗ ಧರಿಸಬಾರದು
* ಮನೆಯಲ್ಲಿ ಮಗುವಿನ ಜನನವಾದರೆ ಧರಿಸಬಾರದು
* ಮನೆಯಲ್ಲಿ ಸಾವಾದರೆ ಅಥವಾ ಸಾವಿಗೆ ಹೋಗುವಾಗ ಧರಿಸಬಾರದು
* ರುದ್ರಾಕ್ಷಿ ಧರಿಸಿ ಮಾಂಸಾಹಾರ ಸೇವಿಸಬಾರದು.
ತುಂಬಾ ಚಿಕ್ಕ ಮಕ್ಕಳಿಗೆ ಧರಿಸಬೇಡಿ
ರುದ್ರಾಕ್ಷಿಯನ್ನು ಸ್ವಲ್ಪ ತಿಳುವಳಿಕೆ ಬಂದ ಮೇಲೆ ಮಕ್ಕಲಿಗೆ ಧರಿಸಬೇಕು, ಆವಾಗ ಅವರು ರುದ್ರಾಕ್ಷಿ ನಿಯಮಗಳನ್ನು ಚೆನ್ನಾಗಿ ಅನುಸರಿಸುತ್ತಾರೆ.



Click it and Unblock the Notifications
