Latest Updates
-
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು?
ಮೇ.31 ನಿರ್ಜಲ ಏಕಾದಶಿಯಂದು ಈ ಪರಿಹಾರ ಮಾಡಿದರೆ ಸಂಪತ್ತು ವೃದ್ಧಿಸುವುದು
24 ಏಕಾದಶಿಗಳಲ್ಲಿ ನಿರ್ಜಲ ಏಕಾದಶಿ ಅತ್ಯಂತ ಮಹತ್ವದ ಏಕಾದಶಿ ಎಂದು ಪರಿಗಣಿಸಲಾಗಿದೆ. ಉಳಿದ 23 ಏಕಾದಶಿಗಳ ಫಲವನ್ನು ಈ ಒಂದು ಏಕಾದಶಿ ಆಚರಿಸುವುದರಿಂದ ಪಡೆಯಬಹುದು. ನಿರ್ಜಲ ಏಕಾದಶಿ ಅತ್ಯಂತ ಕಠಿಣವಾದ ಏಕಾದಶಿ ವ್ರತವಾಗಿದೆ. ಒಂದು ತೊಟ್ಟು ನೀರು ಕೂಡ ಸೇವಿಸಿದೆ ಈ ಏಕಾದಶಿ ವ್ರತವನ್ನು ಆಚರಿಸಲಾಗುವುದು. ಈ ವರ್ಷ ನಿರ್ಜಲ ಏಕಾದಶಿಯನ್ನು ಮೇ 31ಕ್ಕೆ ಆಚರಿಸಲಾಗುವುದು.
ನಿರ್ಜಲ ಏಕಾದಶಿಯಂದು ವ್ರತ ನಿಯಮಗಳನ್ನು ಪಾಲಿಸಿ ಶ್ರೀವಿಷ್ಣುವಿನ ಆರಾಧನೆ ಮಾಡುವುದರ ಜೊತೆಗೆ ಈ ದಿನ ಕೆಲವು ಕಾರ್ಯಗಳನ್ನು ಮಾಡಿದರೆ ಲಕ್ಷ್ಮಿ ಒಲಿಯುತ್ತಾಳೆ, ಶ್ರೀ ವಿಷ್ಣುವಿನ ಕೃಪೆಗೆ ಪಾತ್ರರಾಗುವಿರಿ. ಈ ದಿನ ಮಾಡುವ ದಾನಕ್ಕೂ ತುಂಬಾನೇ ಮಹತ್ವವಿದೆ.ಆದ್ದರಿಂದ ಈ ಪವಿತ್ರವಾದ ದಿನ ಭಕ್ತರು ಈ ಕಾರ್ಯಗಳನ್ನು ಮಾಡಿದರೆ ಹೆಚ್ಚಿನ ಫಲ ಪಡೆಯಬಹುದು:

ಆಲದ ಮರವನ್ನು ಪೂಜಿಸಿ
ನಿರ್ಜಲ ಏಕಾದಶಿಯಂದು ಆಲದ ಮರವನ್ನು ಪೂಜಿಸುವುದರಿಂದ ಲಕ್ಷ್ಮಿ ಕೃಪೆಗ ಪಾತ್ರರಾಗಬಹುದು. ಈ ದಿನ ಆಲದ ಮರದ ಬುಡಕ್ಕೆ ಹಾಲು ಬೆರೆಸಿದ ನೀರನ್ನು ಹಾಕಿ, ದೀಪವನ್ನು ಹಚ್ಚಿ ಪೂಜಿಸಬೇಕು. ಹೀಗೆ ಮಾಡುವುದರಿಂದ ನಿಮ್ಮ ಸಂಪತ್ತು ವೃದ್ಧಿಯಾಗುತ್ತದೆ, ನಿಮ್ಮ ಮನೆಯಲ್ಲಿ ಲಕ್ಷ್ಮಿಯೂ ನೆಲೆಸುತ್ತಾಳೆ.
ಗೋ ಪೂಜೆ
ನಿರ್ಜಲ ಏಕಾದಶಿಯ ಸಂ ದಿನದಂದು ಗೋ ಪೂಜೆ ಮಾಡಲಾಗುವುದು. ಲಕ್ಷ್ಮಿ ದೇವಿಯನ್ನು ಪೂಜಿಸಿ ನಂತರ ಗೋ ಪೂಜೆ ಮಾಡಿದರೆ ತುಂಬಾನೇ ಶುಭ ಫಲ ದೊರೆಯಲಿದೆ. ಈ ದಿನ ಏಳು ನಾಣ್ಯಗಳನ್ನು ಹಳದಿ ಬಟ್ಟೆಯಲ್ಲಿ ಏಳು ಗಂಟುಗಳ ಅರಿಶಿನದೊಂದಿಗೆ ಸುತ್ತಿ ಮಾತೆ ಲಕ್ಷ್ಮಿಯನ್ನು ಪೂಜಿಸಿ, ಪೂಜೆಯ ನಂತರ ಹಳದಿ ಬಟ್ಟೆಯನ್ನು ನಿಮ್ಮ ಕಪಾಟಿನಲ್ಲಿ ಇಡುವುದರಿಂದ ಆರ್ಥಿಕ ಸಂಕಷ್ಟ ದೂರಾಗಿ ಸಂಪತ್ತು ವೃದ್ಧಿಸುವುದು.
ಈ ಮಂತ್ರ 5 ಬಾರಿ ಪಠಿಸಿ
ನಿರ್ಜಲ ಏಕಾದಶಿಯ ದಿನದಂದು, ಬೆಳಿಗ್ಗೆ ಮೊದಲು ಎದ್ದು ಈ ಮಂತ್ರವನ್ನು ನಿಮ್ಮ ಎರಡೂ ಕೈಗಳನ್ನು ಜೋಡಿಸಿ ಅಂಗೈಗಳನ್ನು ನೋಡುತ್ತಾ 5 ಬಾರಿ ಜಪಿಸಿ.
ಮಂತ್ರ
ಕರಾಗ್ರೇ ವಸತೇ ಲಕ್ಷ್ಮೀ ಕರಮಧ್ಯೇ ಸರಸ್ವತೀ; ಕರಮೂಲೇತು ಗೋವಿಂದ ಪ್ರಭಾತೇ ಕರದರ್ಶನಂ
ಅರ್ಥ
ನಮ್ಮ ಕೈಯಿನ ಅಗ್ರಭಾಗದಲ್ಲಿ ಲಕ್ಷ್ಮೀ ವಾಸಿಸುತ್ತಾಳೆ, ಮಧ್ಯದಲ್ಲಿ ಸರಸ್ವತಿ ವಾಸಿಸುತ್ತಾಳೆ ಹಾಗೂ ಮೂಲಭಾಗದಲ್ಲಿ ಗೋವಿಂದ ವಾಸಿಸುತ್ತಾನೆ. ಆದ್ದರಿಂದ ಬೆಳಗ್ಗೆ ಎದ್ದ ಕೂಡಲೇ ಅಂಗೈ ನೋಡಿ ಈ ಮಂತ್ರಗಳನ್ನು ಹೇಳುವುದರಿಂದ ಈ ಮೂರು ದೇವರುಗಳ ಆಶೀರ್ವಾದ ಸಿಗುವುದು.
ಲಕ್ಷ್ಮಿ: ನಮಗೆ ಸಂಪತ್ತನ್ನು ನೀಡುತ್ತಾಳೆ
ಸರಸ್ವತಿ: ಜ್ಞಾನವನ್ನು ನೀಡುತ್ತಾಳೆ
ಗೋವಿಂದ: ಈ ಸೃಷ್ಟಿಯನ್ನು ನಡೆಸುವ ಶಕ್ತಿಗೆ ನಮಸ್ಕರಿಸಿದರೆ ನಮಗೆ ಒಳಿತಾಗುವುದು.
ಶ್ರೀ ವಿಷ್ಣುವಿಗೆ ತುಳಸಿ ಅರ್ಪಿಸಿ
ತುಳಸಿಯು ಭಗವಾನ್ ವಿಷ್ಣುವಿಗೆ ತುಂಬಾ ಪ್ರಿಯವಾಗಿದೆ ಮತ್ತು ಈ ದಿನದಂದು ತುಳಸಿಯನ್ನು ಪೂಜಿಸುವುದರಿಂದ ತಾಯಿ ಲಕ್ಷ್ಮಿ ಕೂಡ ಸಂತೋಷಪಡುತ್ತಾರೆ. ನಿರ್ಜಲ ಏಕಾದಶಿಯಂದು ಬೆಳಿಗ್ಗೆ ಸ್ನಾನ ಮಾಡಿದ ನಂತರ, ತುಳಸಿ ಬೇರಿಗೆ ಹಸಿ ಹಾಲನ್ನು ಹಾಕಬೇಕು. ಹೀಗೆ ತುಳಸಿಗೆ ಪೂಜೆ ಮಾಡಿದರೆ ಶ್ರೀ ವಿಷ್ಣು ಹಾಗೂ ಲಕ್ಷ್ಮಿ ಕೃಪೆಗೆ ಪಾತ್ರರಾಗುವಿರಿ, ಇದರಿಂದ ಸಂಕಷ್ಟಗಳು ದೂರಾಗುವುದು. ನಿಮ್ಮ ಸಂಪತ್ತು ವೃದ್ಧಿಸುವುದು
ದಾನದ ಮಹತ್ವ
* ನಿರ್ಜಲ ಏಕಾದಶಿಯಂದು ಜಲದಾನ ಮಾಡುವುದನ್ನು ಮಹಾದಾನವೆಂದು ಪರಿಗಣಿಸಲಾಗುತ್ತದೆ. ಈ ಸಂದರ್ಭದಲ್ಲಿ ಕೆಲವರು ಪಾನೀಯ ತಯಾರಿಸಿ ದಾನ ಮಾಡುತ್ತಾರೆ. ಈ ರೀತಿ ಮಾಡುವುದರಿಂದ ಚಂದ್ರದೋಷವಿದ್ದರೆ ದೂರಾಗುವುದು.
* ನಿಮ್ಮ ಶಕ್ತಿಗೆ ತಕ್ಕಂತೆ ದಾನ ಮಾಡಿ: ಈ ದಿನ ನಿರ್ಗತಿಕರಿಗೆ ದಾನ ಮಾಡುವುದರಿಂದ ಹೆಚ್ಚಿನ ಫಲ ಪಡೆಯುವಿರಿ.
* ಬ್ರಾಹ್ಮಣರಿಗೆ ಹಣ್ಣು, ಹಂಪಲು, ವಸ್ತ್ರ ದಾನ ಮಾಡಿ.
ಈ ದಿನ ಮಾಡುವ ದಾನದಿಂದ ನಿಮ್ಮ ಪುಣ್ಯಫಲ ಹೆಚ್ಚಾಗುವುದು.



Click it and Unblock the Notifications
