Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಮಂಗಳಗೌರಿ ವ್ರತ: ಮದುವೆ ವಿಳಂಬ, ವೈವಾಹಿಕ ಜೀವನದಲ್ಲಿ ಸಮಸ್ಯೆಗಳಿದ್ದರೆ ಈ ಪರಿಹಾರ ಮಾಡಿ
ಶ್ರಾವಣ ಮಾಸದ ಮಂಗಳವಾರ ಮಂಗಳ ಗೌರಿ ವ್ರತವನ್ನು ಮಾಡಿ ತಾಯಿ ಪಾರ್ವತಿಯನ್ನು ಆರಾಧಿಸಲಾಗುವುದು, ಈ ದಿನ ವಿವಾಹಿತ ಮಹಿಳೆಯರು ಮುತ್ತೈದೆ ಭಾಗ್ಯಕ್ಕಾಗಿ ಪೂಜೆ ಮಾಡಿದರೆ ಮದುವೆ ವಿಳಂಬವಾಗುತ್ತಿರುವವರು ಮಂಗಳ ದೋಷ ನಿವಾರಣೆಗೆ ಪೂಜೆಯನ್ನು ಮಾಡಲಾಗುವುದು, ಕುಂಡಲಿಯಲ್ಲಿ ಮಂಗಳ ದೋಷ ಹೇಗೆ ಉಂಟಾಗುತ್ತದೆ, ಮಂಗಳ ದೋಷದ ಪ್ರಭಾವವೇನು? ಶ್ರಾವಣ ಮಂಗಳವಾರ ಯಾವೆಲ್ಲಾ ಪರಿಹಾರ ಮಾಡಿದರೆ ಒಳ್ಳೆಯದು ಎಂದು ನೋಡೋಣ ಬನ್ನಿ:

ಕುಂಡಲಿಯಲ್ಲಿ ಮಂಗಳ ದೋಷ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವ್ಯಕ್ತಿಯ ಜಾತಕದ ಮೊದಲ, ನಾಲ್ಕನೇ, ಏಳನೇ, ಎಂಟನೇ ಅಥವಾ ಹನ್ನೆರಡನೇ ಮನೆಯಲ್ಲಿ ಮಂಗಳ ಸ್ಥಿತಗೊಂಡಾಗ ಮಂಗಳ ದೋಷ ಉಂಟಾಗುವುದು. ಇದರಿಂದ ವೈವಾಹಿಕ ಜೀವನದಲ್ಲಿ ಹಲವು ಸಮಸ್ಯೆಗಳನ್ನು ತರುತ್ತದೆ, ಮಂಗಳವು ದುರ್ಬಲ ಸ್ಥಾನದಲ್ಲಿದ್ದರೆ ವಿವಾಹ ಯೋಗ ಕೂಡಿ ಬರುವುದಿಲ್ಲ, ಬರುವ ಸಂಬಂಧಗಳು ಒಂದೆಲ್ಲಾ ಒಂದು ಕಾರಣದಿಂದ ತಪ್ಪಿ ಹೋಗುವುದು.
ಮಂಗಳ ದೋಷದ ಪ್ರಭಾವ
ಮಂಗಳ ದೋಷವಿದ್ದರೆ ಮದುವೆ ವಿಳಂಬವಾಗುವುದು, . ಮದುವೆ ಮುರಿದು ಬೀಳುತ್ತದೆ, ಮದುವೆಯಾದರೂ ಜೀವನ ಸಂಗಾತಿಯೊಂದಿಗೆ ಹೊಂದಾಣಿಕೆ ಇರುವುದಿಲ್ಲ. ಜಾತಕದ ಏಳನೇ ಮನೆಯನ್ನು ಮದುವೆ ಅಥವಾ ವೈವಾಹಿಕ ಜೀವನವೆಂದು ಪರಿಗಣಿಸುವುದು, ಇದರಲ್ಲಿ ಮಂಗಳವಿದ್ದರೆ ಈ ಬಗೆಯ ಸಮಸ್ಯೆಗಳು ಉಂಟಾಗುವುದು. ಮಂಗಳನ ಈ ಸ್ಥಾನವು ಗಂಡ ಮತ್ತು ಹೆಂಡತಿಯ ನಡುವೆ ಘರ್ಷಣೆ, ಉದ್ವೇಗ, ಜಗಳ ಮತ್ತು ವಿಚ್ಛೇದನ ಇತ್ಯಾದಿಗಳನ್ನು ಉಂಟುಮಾಡುತ್ತದೆ. ಇದಲ್ಲದೆ, ವ್ಯಕ್ತಿಯ ಮೇಲೆ ಸಾಲದ ಹೊರೆ ಹೆಚ್ಚಾಗುತ್ತದೆ. ಆಸ್ತಿಗೆ ಸಂಬಂಧಿಸಿದಂತೆ ಹಲವು ರೀತಿಯ ಸಮಸ್ಯೆಗಳು ಉಂಟಾಗುವುದು.
ಮಂಗಳ ಗೌರಿ ವ್ರತದ ಸಮಯದಲ್ಲಿ ಯಾವ ಪರಿಹಾರ ಮಾಡಿದರೆ ಒಳ್ಳೆಯದು
ಮಂಗಳಗೌರಿ ವ್ರತದ ದಿನದಂದು ಬೆಳಿಗ್ಗೆ ಎದ್ದು ಸ್ನಾನ ಮಾಡಿ ಗೌರಿಯನ್ನು ಪೂಜಿಸಬೇಕು. ಅವರಿಗೆ 16 ಅಲಂಕಾರಿಕ ವಸ್ತುಗಳನ್ನು ದೇವಿಗೆ ಅರ್ಪಿಸಿ ಪೂಜಿಸಬೇಕು, ನಂತರ ಮುತ್ತೈದೆಯರಿಗೆ ತಾಂಬೂಲ ನೀಡಬೇಕು. ಈ ದಿನ ಮಂಗಳ ಗೌರಿ ವ್ರತವನ್ನು ಕೇಳಬೇಕು. ಹೀಗೆ ಮಾಡುವುದರಿಂದ ಮಂಗಳಗೌರಿಯ ಆಶೀರ್ವಾದ ಸಿಗುವುದು, ವಿವಾಹ ಭಾಗ್ಯ, ವೈವಾಹಿಕ ಜೀವನದಲ್ಲಿ ನೆಮ್ಮದಿ ಎಲ್ಲವೂ ಸಿಗಲಿದೆ.
ಶ್ರೀ ಮಂಗಳ ಗೌರಿ ಮಂತ್ರ "ಓಂ ಗೌರಿ ಶಂಕರಾಯ ನಮಃ" 108 ಬಾರಿ ಪಠಿಸಿ. ಇದರಿಂದ ಮಂಗಳಗೌರಿಯ ಆಶೀರ್ವಾದ ದೊರೆಯುತ್ತದೆ ಹಾಗೂ ಮದುವೆಯಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ.
ಶ್ರಾವಣ ಮಾಸದ ಮಂಗಳವಾರದಂದು ರಾಮಚರಿತಮಾನಸದ ಸುಂದರಕಾಂಡವನ್ನು ಪಠಿಸಿ. ಹನುಮಾನ್ ಜಿಯವರ ಆಶೀರ್ವಾದದಿಂದ, ಮಂಗಳ ದೋಷವು ನಿವಾರಣೆಯಾಗುತ್ತದೆ , ಇದರಿಂದಾಗಿ ವಿವಾಹ ಭಾಗ್ಯ ಕೂಡಿ ಬರಲಿದೆ.
ಅಶುಭ ಮಂಗಳ ಸ್ಥಾನವು ನಿಮ್ಮನ್ನು ತೊಂದರೆಗೊಳಿಸುತ್ತಿದ್ದರೆ ಶ್ರಾವಣ ಮಾಸದ ಮಂಗಳವಾರ ಮಂಗಳಗೌರಿ ಮತ್ತು ಹನುಮಂತನ್ನು ಪೂಜಿಸಿ. ಹನುಮಂತನಿಗೆ ಸಿಂಧೂರ ಅರ್ಪಿಸಿ, ನಂತರ ಆ ಸಿಂಧೂರವನ್ನು ನಿಮ್ಮ ಹಣೆಗೆ ಹಚ್ಚಿಕೊಳ್ಳಿ. ಹೀಗೆ ಮಾಡುವುದರಿಂದ ಮಂಗಳದೋಷದಿಂದ ಮುಕ್ತಿ ಪಡೆಯಬಹುದು.



Click it and Unblock the Notifications
