Latest Updates
-
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ!
ಜನವರಿ 22ಕ್ಕೆ ಕರ್ನಾಟಕದ ಎಲ್ಲಾ ದೇಗುಲಗಳಲ್ಲಿ ಮಧ್ಯಾಹ್ನ 12:29ರಿಂದ 1:32ರವರೆಗೆ ನಡೆಯಲಿದೆ ವಿಶೇಷಪೂಜೆ
ಈಗ ಎಲ್ಲರ ಬಾಯಲ್ಲಿ ಕೇಳಿ ಬರುತ್ತಿರುವ ವಿಷಯವೆಂದರೆ ಅಯೋಧ್ಯೆ.. ಎಲ್ಲರಲ್ಲೂ ಕುತೂಹಲ, ಸಂಭ್ರಮ, ಇಡೀ ದೇಶ ಅಯೋಧ್ಯೆಯಲ್ಲಿ ಶ್ರೀರಾಮ ಕಣ್ತುಂಬಿಕೊಳ್ಳಲು ಆಸೆಪಡುತ್ತಿದ್ದು, ಜನವರಿ 22 ಬೇಗ ಬರಲಿ ಎಂದು ಬಯಸುತ್ತಿದ್ದಾರೆ. ಅಯೋಧ್ಯೆ ಶ್ರೀರಾಮನ ಜನ್ಮ ಸ್ಥಳ, ಅದೇ ಜನ್ಮಸ್ಥಳದಲ್ಲಿ ಮತ್ತೆ ಶ್ರೀರಾಮ ದರ್ಶನ ಪಡೆಯುವ ಪುಣ್ಯ ನಮಗೆ ಲಭಿಸಿದೆ.
ಜನವರಿ 22ಕ್ಕೆ ಪ್ರಾಣಪ್ರತಿಷ್ಠಾಪನೆ ನಡೆಯಲಿದೆ. ಅದೇ ಸಮಯದಲ್ಲಿ ಕರ್ನಾಟಕದಲ್ಲಿ ದೇವಾಲಯದಲ್ಲಿ ಮಹಾ ಮಂಗಳಾರತಿ ಮಾಡಲು ರಾಜ್ಯ ಸರ್ಕಾರ ಸೂಚಿಸದೆ. ಕರ್ನಾಟಕದಲ್ಲಿರುವ ಅಷ್ಟೂ ದೇವಾಲಯಗಳಲ್ಲಿ ಈ ದಿನ ವಿಶೇಷ ಪೂಜೆ ಏರ್ಪಡಿಸಲಿದ್ದು ಮಧ್ಯಾಹ್ನ 12:29ರಿಂದ 1:32ರವರೆಗೆ ವಿಶೇಷ ಪೂಜೆ ನಡೆಯಲಿದೆ.

ಅಮೃತ ಮಹೋತ್ಸವ
ವಾರಣಸಿಯ ಅರ್ಚಕರಾಗಿರುವ ಲಕ್ಷ್ಮಿ ಕಾಂತ್ ದೀಕ್ಷಿತ್ ಈ ದಿನ ರಾಮ ಲಲ್ಲಾದಲ್ಲಿ ಪ್ರಾಣಪ್ರತಿಷ್ಠಾಪನೆ ಮಾಡಲಿದ್ದಾರೆ. ಜನವರಿ 14ರಿಂದ ಜನವರಿ 22ರವರೆಗೆ ಅಮೃತ ಮಹೋತ್ಸವ ನೆರವೇರಲಿದೆ. ಅಮೃತ ಮಹೋತ್ಸವದಲ್ಲಿ ಪ್ರತಿದಿನ 60, 000ಕ್ಕೂ ಅಧಿಕ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ.
ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆ
ಅಯೋಧ್ಯೆಯಲ್ಲಿ ಶ್ರೀರಾಮ ವಿಗ್ರಹ ಪ್ರಾಣಪ್ರತಿಷ್ಠಾಪನೆ 84 ಸೆಕೆಂಡ್‌ಗ ಒಳಗೆ ಆಗಬೇಕು. ಈ 84 ಸೆಕೆಂಡ್ ಅತ್ಯಂತ ಶುಭ ಘಳಿಗೆ ಎಂದು ಹೇಳಲಾಗುವುದು, ಈ ಮುಹೂರ್ತದಲ್ಲಿ ಪ್ರಾಣಪ್ರತಿಷ್ಠಾಪನೆ ಮಾಡುವುದರಿಂದ ಭಾರತಕ್ಕೆ ಒಳಿತಾಗಲಿದೆ. ಶ್ರೀರಾಮನ ಕೃಪೆಯಿಂದ ಅಗ್ನಿ, ಅಕಾಲಿಕ ಸಾವು, ಕಳ್ಳತನ, ಕಾಯಿಲೆ, ಸಾವಿನ ಸಂಕೋಲೆ ಈ ಬಗೆಯ ಆಪತ್ತುಗಳು ದೂರಾಗಲಿದೆ ಎಂಬುವುದು ಧಾರ್ಮಿಕ ನಂಬಿಕೆ.
ಪ್ರಾಣ ಪ್ರತಿಷ್ಠಾಪನೆಗೆ ಇರುವ ಶುಭ ಮುಹೂರ್ತ ಜನವರಿ 22 ಮಧ್ಯಾಹ್ನ 12:29:08 ಸೆಕೆಂಡ್‌ನಿಂದ 12:30:32 ಸೆಕೆಂಡ್ ಒಳಗಡೆ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುವುದು.
ಜನವರಿ 22ರ ಸೋಮವಾರ ಮಂಗಳಕರವಾದ ಮೃಗಶಿರಾ ನಕ್ಷತ್ರ ಬೆಳಗ್ಗೆ 3.52ಕ್ಕೆ ಶುರುವಾಗುವುದು. ಮೃಗಶಿರಾ ನಕ್ಷತ್ರ ಸಮಯ ಜನವರಿ 23ರ ಮಂಗಳವಾರ ಬೆಳಗ್ಗೆ 4:58ರ ವರೆಗೆ ಇರಲಿದೆ, ಇದು ಕೂಡ ಅತ್ಯಂತ ಶುಭ ಸಮಯವಾಗಿದೆ.
ಅಯೋಧ್ಯೆ ಜನ್ಮದಿನದಂದೇ ಪ್ರಾಣಪ್ರತಿಷ್ಠಾಪನೆ
. ಜನವರಿ 22ರ 12.30ರ ಸಮಯ ಅಭಿಜಿತ್ ಮುಹೂರ್ತವಾಗಿದೆ. ಅಭಿಜಿತ್ ಮುಹೂರ್ತವು ಬೆಳಗ್ಗೆ 11:51 ರಿಂದ ಮಧ್ಯಾಹ್ನ 12:33 ರವರೆಗೆ ಇರಲಿದೆ. ಶ್ರೀರಾಮನ ಈ ಅಭಿಜಿತ್ ಮುಹೂರ್ತದಲ್ಲಿಯೇ ಜನಿಸಿದನು ಎಂದು ರಾಮಾಯಣದಲ್ಲಿ ಹೇಳಲಾಗಿದೆ.
ಹಿಂದೂ ಪುರಾಣದ ಪ್ರಕಾರ ಇದೇ ಅಭಿಜಿತ್ ಮುಹೂರ್ತದಲ್ಲಿ ಶಿವನು ರಾಕ್ಷಸನಾದ ತ್ರಿಪುರಾಸುರನನ್ನು ಕೊಂದ ಎಂದು ಹೇಳಲಾಗುವುದು. ಹೀಗೆ ಶತ್ರುಗಳ ಅವನತಿಗೆ ಈ ಮುಹೂರ್ತ ಶುಭವಾಗಿದೆ, ಈ ಸಮಯ ಸದಾ ಜಯವನ್ನು ನೀಡಲಿದೆ. ಹೀಗಾಗಿ ಹೊಸ ಉದ್ಯಮ, ವ್ಯವಹಾರ, ಕೆಲಸ, ಹಣಕಾಸು ಹೂಡಿಕೆ, ಗೃಹಪ್ರವೇಶ, ಸಮಾರಂಭ ಮುಂತಾದ ಶುಭ ಕಾರ್ಯಗಳಿಗೆ ಈ ಮುಹೂರ್ತ ಉತ್ತಮವೆಂದು ಪರಿಗಣಿಸಲಾಗುವುದು.
ಜನವರಿ 22ರಂದು ಪ್ರಾಣಪ್ರತಿಷ್ಠಾಪನೆಯ ಸಮಯದಲ್ಲಿ ಪ್ರಧಾನಿ ಮೋದಿ, ಲಕ್ಷ್ಮಿ ಕಾಂತ್ ದೀಕ್ಷಿತ್, ಉತ್ತರ ಪ್ರದೇಶದ ಮುಖ್ಯಮಂತ್ರ ಯೋಗಿ ಆದಿತ್ಯ ನಾಥ್, ರಾಜ್ಯಪಾಲರಾದ ಆನಂದಿಬೆನ್ ಪಾಟೇಲ್, ಆರ್‌ಎಸ್‌ಎಸ್ ಮುಖಂಡ ಮೋಹನ್ ಭಾಗವತ್‌ರಷ್ಟೇ ಇರಲಿದ್ದಾರೆ.



Click it and Unblock the Notifications