Latest Updates
-
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ!
ಅಯೋಧ್ಯೆ ರಾಮ ಮಂದಿರ ಉದ್ಘಾಟನೆ: ಜನವರಿ 16ರಿಂದ 22ರವರೆಗೆ ನಡೆಯಲಿರುವ ಧಾರ್ಮಿಕ ಕಾರ್ಯಗಳಿವು
ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆ ಜನವರಿ 22ಕ್ಕೆ ನೆರವೇರಲಿದೆ. ಜನವರಿ 22ರಂದು ಕೋಟ್ಯಾಂತರ ಶ್ರೀರಾಮ ಭಕ್ತರ ಕನಸು ನನಸಾಗಲಿದೆ. ನಮ್ಮ ನೆಚ್ಚಿನ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಈ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಸನಾತನ ಧರ್ಮಕ್ಕೆ ಆ ಕ್ಷಣ ಅತ್ಯಂತ ಹೆಮ್ಮೆಯ ಕ್ಷಣವಾಗಿದೆ.
ಪ್ರಾಣಪ್ರತಿಷ್ಠಾಪನೆಯ ಮುನ್ನ ಪ್ರಧಾನಿ ಮೋದಿಯವರು ಮೊದಲು ಹನುಮಾನ್‌ನ ಸ್ಥಾನಕ್ಕೆ ಹೋಗುತ್ತಾರೆ. ಶ್ರೀರಾಮ ದೇಹವನ್ನು ಬಿಟ್ಟು ಹೋದ ಬಳಿಕ ಹನುಮಂತ ಆ ಸ್ಥಳವನ್ನು ಆಳಿದ ಎಂದು ಹಿಂದೂ ಪುರಾಣದಲ್ಲಿ ಹೇಳಲಾಗಿದೆ. ಹನುಮಂತ ಶ್ರೀರಾಮನ ಪರಮಭಕ್ತ. ಆದ್ದರಿಂದ ಹನುಮಂತನ ಅನುಮತಿ ಪಡೆದು , ಹನುಮಂತನಿಗೆ ವಂದಿಸಿ ನಂತರ ಪ್ರತಿಷ್ಠಾಪನೆ ಮಾಡಲಾಗುವುದು.

ಜನವರಿ 22ಕ್ಕೆ ಪ್ರಾಣ ಪ್ರತಿಷ್ಠಾಪನೆಯನ್ನು ಅರ್ಚಕರಾದ ಪಂಡಿತ್ ಲಕ್ಷ್ಮಿಕಾಂತ್ ದೀಕ್ಷಿತ್ ಅವರ ಮಾರ್ಗದರ್ಶನದಲ್ಲಿ 121 ಬ್ರಾಹ್ಮಣರು ಮಂತ್ರ ಪಠಣೆ ಮಾಡುತ್ತಿರುವಾಗ ಪ್ರಾಣಪ್ರತಿಷ್ಠಾಪನೆ ಮಾಡಲಾಗುವುದು. ಸಂಜೀವಿನಿ ಯೋಗದಲ್ಲಿ ಪ್ರಾಣಪ್ರತಿಷ್ಠಾಪನೆ ಮಾಡಲಾಗುವುದು. ಸಂಜೀವಿನಿ ಯೋಗ ಅತ್ಯಂತ ಶ್ರೇಷ್ಠ ಯೋಗವಾಗಿದೆ. ಅಭಿಜಿತ್ ಮಹೂರ್ತದಲ್ಲಿ ಪ್ರತಿಷ್ಠಾಪನೆಯಾಗಲಿದೆ.
ಪ್ರಾಣ ಪ್ರತಿಷ್ಠಾಪನೆ ಪೂಜಾ ಕಾರ್ಯಗಳು ಮಧ್ಯಾಹ್ನ 12:20ರಿಂದ 12:30ರೊಳಗೆ ನಡೆಯಲಿದೆ. ಪ್ರಾಣಪ್ರತಿಷ್ಠಾಪನೆ ಮಾಡಿದ ಮೂಲಕ ಶ್ರೀರಾಮನಿಗೆ ನರೇಂದ್ರ ಮೋದಿಯವರು ಶ್ರೀರಾಮನಿಗೆ ಆರತಿ ಬೆಳಗಲಿದ್ದಾರೆ.
ಶ್ರೀರಾಮ ಮಂದಿರ ಉದ್ಘಾಟನೆ ಸಂಭ್ರಮ ಜನವರಿ 16ರಿಂದಲೇ ಪ್ರಾರಂಭವಾಗಲಿದೆ:
ಜನವರಿ 16, 2024: ಅಮೃತ ಮಹೋತ್ಸವ ಜನವರಿ 16ರಿಂದ ಪ್ರಾರಂಭವಾಗಲಿದೆ. ಈ ದಿನ ಶ್ರೀರಾಮನ ಮೂರ್ತಿಯನ್ನು ನಗರದೊಳಗೆ ಮೆರವಣಿಗೆ ಕರೆದುಕೊಂಡು ಹೋಗಲಾಗುವುದು.
ಜನವರಿ17, 2024: ಗಣೇಶನನ್ನು ಪೂಜಿಸಿದ ಬಳಿಕ ಪ್ರಾಣಪ್ರತಿಷ್ಠಾಪನೆ ಕಾರ್ಯಗಳು ನಡೆಯಲಿದೆ.
ಜನವರಿ 18, 2024: ಮಂಟಪ ಪೂಜೆ, ವಾಸ್ತು ಪೂಜೆ, ವರುಣ ಪೂಜೆ ಇವುಗಳನ್ನು ಈ ಶುಭದಿನದಂದು ಮಾಡಲಾಗುವುದು.
ಜನವರಿ 19, 2024: ಜನವರಿ 19ರಂದು ರಾಮ ಮಂದಿರದಲ್ಲಿ ಯಜ್ಞವನ್ನು ಮಾಡಲಾಗುವುದು, ವೇದ ಮಂತ್ರಗಳನ್ನು ಹೇಳುತ್ತಾ ಯಜ್ಞ ಕಾರ್ಯ ಮಾಡಲಾಗುವುದು.
ಜನವರಿ 20, 2024: ಜನವರಿ 20ರಂದು ಮಂದಿರ ಗರ್ಭಗುಡಿಯಲ್ಲಿ 81 ಕಲಶ ಪ್ರತಿಷ್ಠಾಪನೆ ಮಾಡಲಾಗುವುದು. ದೇಶದ ವಿವಿಧ ಪವಿತ್ರಗಳ ನದಿಗಳ ನೀರನ್ನು ತುಂಬಲಾಗುವುದು. ಈ ದಿನ ವಾಸ್ತು ಶಾಂತಿ ಪೂಜಾ ವಿಧಾನ ಮಾಡಲಾಗುವುದು.
ಜನವರಿ 21, 2024: ಈ ದಿನ ರಾಮ ಲಲ್ಲಾಗೆ ಅಭಿಷೇಕ ಮಾಡಿ, ಯಜ್ಞವನ್ನು ಮಾಡಲಾಗುವುದು.
ಜನವರಿ 22, 2024: ಈ ದಿನ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುವುದು. ಈ ದಿನದಿಂದ ರಾಮ ಮಂದಿರ ಪ್ರತಿನಿತ್ಯ ಲಕ್ಷಾಂತರ ಭಕ್ತರು ಭೇಟಿ ನೀಡುವ ಕ್ಷೇತ್ರವಾಗಲಿದೆ.
ರಾಮ ಮಂದಿರದ ಕೆಲವು ವಿಶೇಷತೆಗಳು
* ಈ ಮಂದಿರ ನಿರ್ಮಾಣದಲ್ಲಿ ಕಬ್ಬಿಣ, ಸಿಮೆಂಟ್ ಬಳಕೆಯೇ ಆಗಿಲ್ಲ, ಇದರಿಂದಾಗಿ ಈ ದೇವಾಲು ಭೂಕಂಪಕ್ಕೆ ಬಗ್ಗಲ್ಲ, ಸಾವಿರ ವರ್ಷಗಳಿಗಿಂತಲೂ ಅಧಿಕ ಕಾಲ ಉತ್ತಮಸ್ಥಿತಿಯಲ್ಲಿ ಇರುತ್ತದೆ ಎಂದು ಹೇಳಲಾಗುವುದು.
* ಶ್ರೀರಾಮ ಮಂದಿರದಲ್ಲಿ ಭಕ್ತರಿಗೆ ಕಲ್ಲು ಸಕ್ಕರೆಯನ್ನು ಪ್ರಸಾದವನ್ನಾಗಿ ನೀಡಲಾಗುವುದು.
* ಈ ದೇವಾಲಯದಲ್ಲಿ ಕಲಶಾಭಿಷೇಕ ಮಾಡಲು 1 ಲಕ್ಷ ರುಪಾಯಿ ಪಾವತಿಸಬೇಕು, ಯಾರು ಸಮಾಜ ಸೇವೆ ಮಾಡಿದ್ದಾರೋ ಅವರಿಗೆ ಮಾತ್ರ ಈ ಪೂಜೆ ಮಾಡಿಸಲು ಅವಕಾಶ ಸಿಗುವುದು. ಈ ಹಣವನ್ನು ಕೂಡ ಬಡವರಿಗೆ ಮನೆ ನಿರ್ಮಿಸಲು, ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ, ಆಸ್ಪತ್ರೆ ಖರ್ಚುಗಳಿಗೆ ವಿನಿಯೋಗಲಾಗಿಸುವುದು.
* ಶ್ರೀರಾಮ ಮಂದಿರದ 24 ಅರ್ಚಕರಲ್ಲಿ SC ಮತ್ತು OBC ವರ್ಗದವರೂ ಇದ್ದಾರೆ.



Click it and Unblock the Notifications