Latest Updates
-
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್! -
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ!
ಸಹೋದರನಿಗೆ ರಾಕಿ ಕಟ್ಟುವಾಗ ಈ ಮಂತ್ರ ಪಠಿಸಿದ್ರೆ ಶುಭ!
ಶ್ರಾವಣ ಮಾಸದ ಹುಣ್ಣಿಮೆಯಂದು ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಗುವುದು. ಆದರೆ ಈ ಬಾರಿ ಭದ್ರ ಕಾಲದ ಕಾರಣದಿಂದ ಕೆಲವರು ಆಗಸ್ಟ್ 30 ರಂದು ಹಾಗೂ ಇನ್ನೂ ಕೆಲವರು ಆಗಸ್ಟ್ 31 ರಂದು ರಾಖಿ ಹಬ್ಬವನ್ನು ಆಚರಿಸುತ್ತಿದ್ದಾರೆ.

ಈ ಪವಿತ್ರ ಹಬ್ಬದಂದು ಸಹೋದರಿಯರು ತಮ್ಮ ಸಹೋದರರ ಮಣಿಕಟ್ಟಿನ ಮೇಲೆ ರಾಖಿ ಕಟ್ಟುತ್ತಾರೆ. ಮತ್ತು ಅವರಿಗೆ ದೀರ್ಘಾಯುಷ್ಯ ಮತ್ತು ಸಂತೋಷ ಪ್ರಾಪ್ತಿಯಾಗಲೆಂದು ಹಾರೈಸುತ್ತಾರೆ. ರಕ್ಷಾ ಬಂಧನ ಹಬ್ಬವು ಸಹೋದರ ಸಹೋದರಿಯರ ಪರಸ್ಪರ ಪ್ರೀತಿ ಮತ್ತು ವಾತ್ಸಲ್ಯಕ್ಕೆ ಸಮರ್ಪಿಸಲಾಗಿದೆ.
ರಾಕಿಗೆ ಪ್ರತಿಯಾಗಿ ಸಹೋದರರು ಸಹೋದರಿಗೆ ಉಡುಗೊರೆಗಳನ್ನು ನೀಡುತ್ತಾನೆ. ಮತ್ತು ಯಾವಾಗಲೂ ಅವಳನ್ನು ರಕ್ಷಿಸುವ ಭರವಸೆ ನೀಡುತ್ತಾನೆ. ಹಿಂದೂ ಪಂಚಾಂಗದ ಲೆಕ್ಕಾಚಾರದಂತೆ ಶುಭ ಮುಹೂರ್ತವನ್ನು ಗಮನದಲ್ಲಿಟ್ಟುಕೊಂಡು ರಾಖಿಯನ್ನು ಕಟ್ಟಬೇಕು. ಹಿಂದೂ ಧರ್ಮದಲ್ಲಿ ಯಾವುದೇ ಪವಿತ್ರ ಕಾರ್ಯವನ್ನು ಮಂತ್ರಗಳಿಲ್ಲದೆ ಪೂರ್ಣವೆಂದು ಪರಿಗಣಿಸಲಾಗುವುದಿಲ್ಲ. ಅಷ್ಟಕ್ಕೂ ರಾಖಿ ಕಟ್ಟುವಾಗ ಸಹೋದರಿಯರು ಕಡ್ಡಾಯವಾಗಿ ಪಠಿಸಬೇಕಾದ ಮಂತ್ರಗಳು ಯಾವುದು ಅನ್ನೋದನ್ನು ತಿಳಿಯೋಣ.
ಮಂತ್ರ ಪಟಿಸೋದ್ರಿಂದ ಏನೆಲ್ಲಾ ಪ್ರಯೋಜನಗಳಿದೆ?
ಪುರಾಣ ಕಾಲದಿಂದಲೂ ಈ ರಾಕಿ ಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಈ ಹಬ್ಬದ ಉಲ್ಲೇಖವು ಮಹಾಭಾರತ, ಪುರಾಣ ಕಾಲದಲ್ಲಿಯೂ ಮತ್ತು ಮೊಘಲರ ಕಾಲದ ಇತಿಹಾಸದಲ್ಲಿಯೂ ಕಂಡುಬರುತ್ತದೆ. ವ್ಯಕ್ತಿಯ ಮಣಿಕಟ್ಟಿನ ಮೇಲೆ ರಕ್ಷಣೆ / ಪವಿತ್ರ ದಾರವನ್ನು ಕಟ್ಟಿದಾಗ ಆ ಕ್ಷಣ ವ್ಯಕ್ತಿಯು ಈ ಕೆಳಗಿನ ಮಂತ್ರವನ್ನು ಪಠಿಸಬೇಕು ಎಂದು ಧಾರ್ಮಿಕ ಗ್ರಂಥಗಳಲ್ಲಿ ಅನೇಕ ಸ್ಥಳಗಳಲ್ಲಿ ಉಲ್ಲೇಖಿಸಲಾಗಿದೆ.
ಈ ಮಂತ್ರವು ಜೀವನದ ಎಲ್ಲಾ ಹಂತಗಳಲ್ಲಿ ಹೆಚ್ಚಿನ ಪ್ರಗತಿ ಮತ್ತು ಯಶಸ್ಸನ್ನು ಸಾಧಿಸಲು ಸಹಾಯ ಮಾಡುತ್ತದೆ. ಹೆಚ್ಚಿನ ಜನರು ಈಗಲೂ ಇದನ್ನು ಸರಿಯಾಗಿ ಅನುಸರಿಸುತ್ತಾರೆ. ರಕ್ಷಾ ಬಂಧನದ ಹಬ್ಬದ ಸಮಯದಲ್ಲಿ ಸಹೋದರಿ ತನ್ನ ಸಹೋದರನ ಮಣಿಕಟ್ಟಿನ ಮೇಲೆ ರಾಖಿಯನ್ನು ಕಟ್ಟುತ್ತಾಳೆ. ಈ ಮಂತ್ರವನ್ನು ಪಠಿಸುವಾಗ ಸಹೋದರನ ಮಣಿಕಟ್ಟಿನ ಮೇಲೆ ರಾಖಿ ಕಟ್ಟುವುದರಿಂದ ಸಹೋದರ-ಸಹೋದರಿ ಸಂಬಂಧವು ಬಲಗೊಳ್ಳುತ್ತದೆ. ಮತ್ತು ಸಹೋದರನಿಗೆ ದೀರ್ಘಾಯುಷ್ಯ ದೊರೆಯುತ್ತದೆ ಎಂದು ನಂಬಲಾಗಿದೆ.
ಈ ಮಂತ್ರ ಪಠಿಸಿ!
ಯೇನ ಬದ್ಧೋ ಬಲಿ: ದನವೇಂದ್ರೋ ಮಹಾಬಲ: ನಿಂದಿಸು!
ತೇನ ತ್ವಮಭಿಬಧ್ನಾಮಿ ರಕ್ಷೇ ಮಾ ಕಾಲ ಮಾ ಕಾಲ !!
ಈ ಮಂತ್ರದ ಅರ್ಥವೇನೆಂದರೆ, "ಅತ್ಯಂತ ಕರುಣಾಮಯಿ ರಾಜ ಬಲಿಗೆ ಕಟ್ಟಿದ ರಕ್ಷಣೆಯ ದಾರ. ನಾನು ಅದೇ ಪವಿತ್ರ ದಾರವನ್ನು ನಿನ್ನ ಮಣಿಕಟ್ಟಿನ ಮೇಲೆ ಕಟ್ಟುತ್ತೇನೆ. ಅದು ನಿಮ್ಮನ್ನು ವಿಪತ್ತುಗಳಿಂದ ಶಾಶ್ವತವಾಗಿ ರಕ್ಷಿಸುತ್ತದೆ.
ಸಹೋದರನ ಮಣಿಕಟ್ಟಿನ ಮೇಲೆ ರಕ್ಷಾ ದಾರವನ್ನು ಕಟ್ಟಿದ ನಂತರವೂ "ನಾನು ಆ ಪವಿತ್ರ ದಾರದ ಮೇಲೆ ಸಹೋದರಿಯ ಬಾಧ್ಯತೆ ಎಂದು ಪ್ರತಿಜ್ಞೆ ಮಾಡುತ್ತೇನೆ. ನಾನು ಯಾವಾಗಲೂ ನಿಮ್ಮನ್ನು ಎಲ್ಲಾ ತೊಂದರೆ ಮತ್ತು ವಿಪತ್ತುಗಳಿಂದ ರಕ್ಷಿಸುತ್ತೇನೆ" ಎಂದು ಪ್ರತಿಜ್ಞೆ ಮಾಡುತ್ತಿದ್ದೇನೆ. ಇದುವೇ ಈ ಮಂತ್ರದ ನಿಜವಾದ ಅರ್ಥ.
ಶ್ರೀ ಕೃಷ್ಣನಿಗೆ ರಾಕಿ ಕಟ್ಟಿದ್ದ ದ್ರೌಪದಿ!
ಸಹೋದರ ಪ್ರೇಮದ ಪ್ರತೀಕವೆಂದೇ ಹೇಳಲಾಗುವ ಈ ಹಬ್ಬವನ್ನು ಪ್ರಾಚೀನ ಕಾಲದಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ. ಅನೇಕ ಪೌರಾಣಿಕ ನಂಬಿಕೆಗಳು ಈ ಹಬ್ಬದೊಂದಿಗೆ ಸಂಬಂಧ ಹೊಂದಿವೆ. ಒಂದು ಕಥೆಯ ಪ್ರಕಾರ ಮಹಾಭಾರತದ ಕಾಲದಲ್ಲಿ "ಶಿಶುಪಾಲ" ನನ್ನು ಕೊಲ್ಲುವಾಗ ಭಗವಾನ್ ಕೃಷ್ಣನು ಅವನ ಒಂದು ಬೆರಳನ್ನು ಕತ್ತರಿಸಿದನು. ದ್ರೌಪದಿಯು ಶ್ರೀಕೃಷ್ಣನ ಕತ್ತರಿಸಿದ ಬೆರಳಿನಿಂದ ರಕ್ತ ಹೊರಬರುವುದನ್ನು ನೋಡಿದ ತಕ್ಷಣ ಅವಳು ಗಾಬರಿಯಿಂದ ತನ್ನ ಸೀರೆಯ ಸೆರಗನ್ನು ಹರಿದು ಶ್ರೀಕೃಷ್ಣನ ಬೆರಳಿಗೆ ಬಟ್ಟೆ ಕಟ್ಟುತ್ತಾಳೆ.
ಶ್ರಾವಣ ಮಾಸದ ಹುಣ್ಣಿಮೆಯಂದು ದ್ರೌಪದಿ ಶ್ರೀ ಕೃಷ್ಣನಿಗೆ ಈ ರಕ್ಷಣಾ ದಾರವನ್ನು ಕಟ್ಟಿದಳು ಎಂದು ಹೇಳಲಾಗುತ್ತದೆ. ಆದ್ದರಿಂದ ರಾಖಿ ಕಟ್ಟುವ ಸಂಪ್ರದಾಯ ಇಲ್ಲಿಂದ ಪ್ರಾರಂಭವಾಯಿತು ಅಂತ ಹೇಳಲಾಗುತ್ತದೆ. ಅಂದಿನಿಂದ ಇಂದಿನವರೆಗೂ ಈ ಹಬ್ಬವನ್ನು ಪ್ರಪಂಚದಾದ್ಯಂತ ಬಹಳ ಸಂತೋಷ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತಿದೆ ಎಂದು ನಂಬಲಾಗಿದೆ.



Click it and Unblock the Notifications