Latest Updates
-
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ
ಪುರಿ ಜಗನ್ನಾಥ ರಥಯಾತ್ರೆ 2023: 3 ಶುಭ ಯೋಗದಲ್ಲಿ ರಥಯಾತ್ರೆ ಪ್ರಾರಂಭ, ಪುರಿ ರಥಯಾತ್ರೆಯ ಮಹತ್ವವೇನು?
ಒಡಿಶಾ ರಾಜ್ಯ ಮಾತ್ರವಲ್ಲ ಇಡೀ ದೇಶವೇ ಕಾತರದಿಂದ ಎದುರು ನೋಡುತ್ತಿರುವ ಪುರಿ ಜಗನ್ನಾಥ ರಥಯಾತ್ರೆ ಪ್ರಾರಂಭವಾಗಿದೆ. ಪ್ರತಿವರ್ಷ ಆಷಾಢ ಮಾಸದ ಶುಕ್ಲ ಪಕ್ಷದ ಎರಡನೇ ದಿನದಂದು ಪುರಿ ರಥಯಾತ್ರೆ ಪ್ರಾರಂಭವಾಗುವುದು. ಈ ವರ್ಷಜೂನ್ 20 ಮಂಗಳವಾರದಂದು ರಥಯಾತ್ರೆ ಪ್ರಾರಂಭವಾಗಲಿದೆ. ಈ ವರ್ಷ ಜಗನ್ನಾಥ ರಥಯಾತ್ರೆಯು ರಾತ್ರಿ 10:04 ಕ್ಕೆ ಪ್ರಾರಂಭವಾಗುತ್ತದೆ. ಈ ದಿನದ ವಿಶೇಷವೆಂದರೆ ಈ ದಿನ 3 ಮಂಗಳಕರ ಯೋಗಗಳು ಕೂಡ ರೂಪುಗೊಳ್ಳಲಿದೆ.
ಪುರಿ ರಥಯಾತ್ರೆಗೆ ಸುನಾರು 5000 ವರ್ಷಗಳಿಗಿಂತಲೂ ಇತಿಹಾಸವಿದೆ. ರಥಯಾತ್ರೆ ಸಮಯದಲ್ಲಿ ಭಾರತದಲ್ಲಿರುವ ಎಲ್ಲಾ ಜಗನ್ನಾಥ ಮಂದಿರಗಳಲ್ಲಿ ರಥಯಾತ್ರೆ ನಡೆಸಲಾಗುವುದು. 2023ರಲ್ಲಿ ರಥಯಾತ್ರೆ ಯಾವ ಶುಭ ಸಮಯದಲ್ಲಿ ಪ್ರಾರಂಭವಾಗಲಿದೆ? ಈ ರಥ ಯಾತ್ರೆಯ ಮಹತ್ವವೇನು? ರಥಯಾತ್ರೆ ನಿಯಮಗಳೇನು ಎಂದು ನೋಡೋಣ ಬನ್ನಿ:

ಪುರಿ ರಥಯಾತ್ರೆಯ ಸಂಪೂರ್ಣ ವೇಳಾಪಟ್ಟಿ ಮತ್ತು ಆಚರಣೆಗಳು
- ಜಗನ್ನಾಥ ರಥಯಾತ್ರೆಯ ಆರಂಭ, ಜೂನ್ 20, ರಾತ್ರಿ 10:04 ರಿಂದ ಜೂನ್ 21 ರಂದು ಸಂಜೆ 07:09 ಗಂಟೆಯವರೆಗೆ ಇರಲಿದೆ. ಪುರಿ ಜಗನ್ನಾಥ ರಥಯಾತ್ರೆ ಗುಂಡಿಚಾ ದೇವಾಸ್ಥಾನಕ್ಕೆ ಬರಲಿದೆ.
- ಬಹುದಾ ಯಾತ್ರೆ: ಜೂನ್ 28, ಬುಧವಾರಂದು ಜಗನ್ನಾಥ ರಥಯಾತ್ರೆ ಗುಂಡಿಚಾ ದೇವಸ್ಥಾನದಿಂದ ಪುರಿ ದೇವಸ್ಥಾನದ ಕಡೆಗೆ ಪ್ರಾರಂಭವಾಗಲಿದೆ.
'ಸುನಾಭೇಶ' : ಜೂನ್ 29, ಗುರುವಾರ, ಭಗವಾನ್ ಜಗನ್ನಾಥ, ಬಲಭದ್ರ ಮತ್ತು ಸುಭದ್ರಾ ದೇವರುಗಳಿಗೆ ಚಿನ್ನದ ಆಭರಣಗಳಿಂದ ಅಲಂಕರಿಸಲಾಗುವುದು.
'ಅಧಾರ್ ಪಾನ' ಸಮಾರಂಭ: ಶುಕ್ರವಾರ, 30 ಜೂನ್, ಭಗವಾನ್ ಜಗನ್ನಾಥ, ಬಲಭದ್ರ ಮತ್ತು ಸುಭದ್ರೆಯರಿಗೆ ನೀರು, ಪನೀರ್, ಸಕ್ಕರೆ, ಬೆಣ್ಣೆ, ಕರಿಮೆಣಸು, ಬಾಳೆಹಣ್ಣು, ಜಾಯಿಕಾಯಿ, ಇತರ ಮಸಾಲೆಗಳಿಂದ ಮಾಡಿದ ಅಧಾರ್ ಪಾನವನ್ನು ನೀಡಲಾಗುವುದು.
'ನೀಲಾದ್ರಿ ಬಿಜೆ' ಸಮಾರಂಭ: ಜುಲೈ 1, ಶನಿವಾರ, ಈ ದಿನ ಭಗವಾನ್ ಜಗನ್ನಾಥ, ಸಹೋದರರಾದ ಬಲಭದ್ರ ಮತ್ತು ಸುಭದ್ರರು ಪುರಿ ದೇವಸ್ಥಾನದ ಗರ್ಭಗುಡಿಯಲ್ಲಿ ಸಿಂಹಾಸನದ ಮೇಲೆ ಕೂರಿಸಲಾಗುವುದು.
ರಥಯಾತ್ರೆ ಪೂಜಾ ವಿಧಿಗಳು
- ರಥಯಾತ್ರೆ ಸಮಯದಲ್ಲಿ ಮೊದಲು ಬಲಭದ್ರ ಸ್ವಾಮಿಯ ವಿಗ್ರಹವನ್ನು ತರಲಾಗುವುದು
- ಆ ಬಳಿಕ ದೇವಿ ಸುಭದ್ರ ಕೊನೆಗೆ ಜಗನ್ನಾಥ ಸ್ವಾಮಿಯ ವಿಗ್ರಹವನ್ನು ತರಲಾಗುವುದು. ಪುರಿಯ ರಾಜ ಮನೆತನಕ್ಕೆ ಸೇರಿದವರು ಚಿನ್ನದ ಪೊರಿಕೆಯಿಂದ ಗುಡಿಸಿ ರಥಗಳು ಮುಂದೆ ಸಾಗಲು ಅನುವು ಮಾಡಿಕೊಡಲಾಗುವುದು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ರಥ ಎಳೆಯುತ್ತಾರೆ. ರಥಗಳನ್ನು ಭಕ್ತಾಧಿಗಳು ಸಮೀಪಾದ ಗುಂಡಿಚಾ ದೇವಾಲಯವರೆಗೆ ಎಳೆದು ತರಲಾರುವುದು.
ಜಗನ್ನಾಥ ರಥಯಾತ್ರೆಯ ಮಹತ್ವ
ಧಾರ್ಮಿಕ ನಂಬಿಕೆಗಳ ಪ್ರಕಾರ, ಜಗನ್ನಾಥ ರಥಯಾತ್ರೆಯಲ್ಲಿ ಭಾಗವಹಿಸಿದ್ದರೆ ಪಾಪಗಳು ನಾಶವಾಗುತ್ತಚೆ, ಅಲ್ಲದೆ ಈ ರಥಯಾತ್ರೆಯಲ್ಲಿ ಭಾಗವಹಿಸಿದರೆ 100 ಯಾಗಗಳನ್ನು ಮಾಡಿದ ಪುಣ್ಯವನ್ನು ಪಡೆಯುತ್ತಾರೆ ಎಂದು ಹೇಳಲಾಗುವುದು. ಈ ಜಗನ್ನಾಥ ರಥಯಾತ್ರೆಯಲ್ಲಿ ಭಾಗವಹಿಸಲು ಪ್ರಪಂಚದಾದ್ಯಂತದಿಂದ ಭಕ್ತರು ಆಗಮಿಸುತ್ತಾರೆ.



Click it and Unblock the Notifications