Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ಈ ವರ್ಷ ಬ್ರಹ್ಮ ಯೋಗದಲ್ಲಿ ಬಂದಿದೆ ಪದ್ಮಿನಿ ಏಕಾದಶಿ: ಈ ಏಕಾದಶಿ ಆಚರಣೆಯ ಮಹತ್ವವೇನು?
ಪ್ರತಿ ತಿಂಗಳು ಎರಡು ಏಕಾದಶಿ ಬರುತ್ತದೆ, ಒಂದೊಂದು ಏಕಾದಶಿಯೂ ಅದರದ್ದೇ ಆದ ಮಹತ್ವವನ್ನು ಹೊಂದಿದೆ. ಶ್ರಾವಣ ಮಾಸದ ಶುಕ್ಲಪಕ್ಷದಲ್ಲಿ ಪದ್ಮಿನಿ ಏಕಾದಶಿಯನ್ನು ಆಚರಿಸಲಾಗುವುದು. ಈ ಏಕಾದಶಿಯನ್ನು ಶ್ರೀ ವಿಷ್ಣುವಿಗೆ ತುಂಬಾ ಪ್ರಿಯವಾದ ಏಕಾದಶಿಯಂದು ಹೇಳಲಾಗುವುದು. ಯಾರು ಈ ಏಕಾದಶಿಯನ್ನು ಆಚರಿಸುತ್ತಾರೋ ಅವರು ಅಂತ್ಯಕಾಲದಲ್ಲಿ ಮೋಕ್ಷವನ್ನು ಪಡೆಯುತ್ತಾರೆ ಎಂದು ಹೇಳಲಾಗಿದೆ. ಈ ಬಾರಿ ಇದೇ ದಿನ ಬ್ರಹ್ಮಯೋಗ ಕೂಡ ಏರ್ಪಟ್ಟಿರುವುದು ಕಾಕತಾಳೀಯವೇ ಸರಿ.
ಪದ್ಮಿನಿ ಏಕಾದಶಿಯ ಮಹತ್ವ, ಪೂಜಾ ಮುಹೂರ್ತ, ಪೂಜಾ ವಿಧಿ, ಇದರ ಪ್ರಯೋಜನಗಳ ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ:

ಏಕಾದಶಿ ತಿಥಿ ಪ್ರಾರಂಭ: ಪದ್ಮಿನಿ ಏಕಾದಶಿ ತಿಥಿ ಜುಲೈ 28 ಮಧ್ಯಾಹ್ನ 02:51ಕ್ಕೆ ಪ್ರಾರಂಭವಾಗಿದೆ
ಪದ್ಮಿನಿ ಏಕಾದಶಿ ತಿಥಿ ಮುಕ್ತಾಯ: ಜುಲೈ 29 ಮಧ್ಯಾಹ್ನ 01:05ಕ್ಕೆ
ಏಕಾದಶಿ ವ್ರತವನ್ನು ಜುಲೈ 29ರಂದು ಆಚರಿಸಲಾಗುವುದು.
ಪದ್ಮಿನಿ ಏಕಾದಶಿಯಂದು ಈ ಎರಡ ವಿಶೇಷ ಯೋಗ ಏರ್ಪಟ್ಟಿದೆ
ಜುಲೈ 28 ರಾತ್ರಿ 11:56ರಿಂದ ಜುಲೈ 29 ಬೆಳಗ್ಗೆ 09:34ರವರೆಗೆ ಬ್ರಹ್ಮ ಯೋಗವಿದೆ:
ಜುಲೈ 29 09:34ರಿಂದ ಜುಲೈ 30 ಬೆಳಗ್ಗೆ 06:33ರವರೆಗೆ ಇಂದ್ರಯೋಗವಿದೆ
ಈ ಎರಡು ಯೋಗಗಳು ಪೂಜಾ ಕಾರ್ಯಗಳಿಗೆ ಹಾಗೂ ಏನಾದರೂ ಹೊಸ ಕಾರ್ಯ ಪ್ರಾರಂಭಿಸಲು ಶುಭ ಎಂದು ಪರಿಗಣಿಸಲಾಗಿದೆ.
ಪದ್ಮಿನಿ ಏಕಾದಶಿಯ ಮಹತ್ವ
* ಪದ್ಮಿನಿ ಏಕಾದ ದಿನದಂದು ಭಗವಾನ್ ವಿಷ್ಣುವನ್ನು ಪೂಜಿಸುವುದರಿಂದ ಜೀವನದಲ್ಲಿ ಎಲ್ಲಾ ತೊಂದರೆಗಳು ದೂರವಾಗುತ್ತವೆ. ಇದರೊಂದಿಗೆ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗಲಿದೆ.
* ಈ ವ್ರತವನ್ನು ಆಚರಿಸುವುದರಿಂದ ಯಜ್ಞ, ತಪಸ್ಸು, ದಾನ ಮುಂತಾದ ಫಲಗಳು ದೊರೆಯುತ್ತವೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.
* ಈ ದಿನ ಯಾರು ಉಪವಾಸವಿದ್ದು ಪದ್ಮಿನಿ ಏಕಾದಶಿ ವ್ರತವನ್ನು ಆಚರಿಸುತ್ತಾರೋ ಆ ವ್ಯಕ್ತಿಯು ಗೌರವ ಮತ್ತು ಸಂಪತ್ತು ಗಳಿಸುತ್ತಾನೆ
* ಈ ಉಪವಾಸವನ್ನು ಆಚರಿಸುವುದರಿಂದ ವ್ಯಕ್ತಿಯ ಎಲ್ಲಾ ಪಾಪಗಳು ನಾಶವಾಗುತ್ತವೆ ಎಂದು ನಂಬಲಾಗಿದೆ.
* ಶ್ರೀವಿಷ್ಣುವಿನ ಕೃಪೆಯಿಂದ ಮರಣಾನಂತರ ವೈಕುಂಠಧಾಮದಲ್ಲಿ ಸ್ಥಾನ ಪಡೆಯುತ್ತಾನೆ ಎಂದು ಹೇಳಾಗುವುದು
* ಈ ವ್ರತವನ್ನು ಆಚರಿಸುವುದರಿಂದ ಮಕ್ಕಳಿಲ್ಲದ ದಂಪತಿಗಳು ಸಂತಾನ ಭಾಗ್ಯ ಪಡೆಯುತ್ತಾರೆ ಎಂದು ನಂಬಲಾಗಿದೆ.
ಪದ್ಮಿನಿ ಏಕಾದಶಿ ಪೂಜಾ ವಿಧಾನ
ಏಕಾದಶಿ ವ್ರತದ ದಿನ ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ಹಳದಿ ಬಟ್ಟೆ ಧರಿಸಿ. ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಿ, ವಿಷ್ಣುವಿನ ಮೂರ್ತಿಯನ್ನು ಪೂಜಿಸಿ, ಇದಾದ ನಂತರ, ನಿಯಮಗಳ ಪ್ರಕಾರ ವಿಷ್ಣುವನ್ನು ಪೂಜಿಸಿ ಮತ್ತು ಪೂಜೆಯ ಸಮಯದಲ್ಲಿ ವಿಷ್ಣುವಿಗೆ ಕುಂಕುಮ ಮಿಶ್ರಿತ ನೀರಿನಿಂದ ಅಭಿಷೇಕ ಮಾಡಿ.
* ಶ್ರೀ ವಿಷ್ಣುವಿಗೆ ಹಳದಿ ಹೂ, ಹಣ್ಣುಗಳನ್ನು ಅರ್ಪಿಸಿ
* ವಿಷ್ಣು ಮಂತ್ರಗಳನ್ನು ಪಠಿಸಿ
* ನಂತರ ನೈವೇದ್ಯ ಅರ್ಪಿಸಿ, ಆರತಿ ಬೆಳಗಿ.
* ಶ್ರೀವಿಷ್ಣುವಿನ ಮಂತ್ರ ಪಠಿಸಿ
* ದಾನವನ್ನು ಮಾಡಿ.
ವಿಷ್ಣು ಮಂತ್ರಗಳು
ಓಂ ನಮೋ ನಾರಾಯಣಾಯ
ಓಂ ನಮೋ ಭಗವತೇ ವಾಸುದೇವಾಯ
ವಿಷ್ಣು ಗಾಯತ್ರಿ ಮಂತ್ರ
ಓಂ ಶ್ರೀ ವೈಷ್ಣವೇ ಚ ವಿದಾಮಹೇ ವಾಸುದೇವಾಯ ಧೀಮಹಿ ತನ್ನೊ ವಿಷ್ಣು ಪ್ರಚೋದಯಾತ್
ವಿಷ್ಣು ಸಂಕಷ್ಟಹರ ಮಂತ್ರ
ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ
ವಿಶ್ವಾಧಾರಂ ಗಗನಸದೃಶಂ ಮೇಘವರ್ಣಂ ಶುಭಾಂಗಂ
ಲಕ್ಷ್ಮೀಕಾಂತಂ ಕಮಲನಯನಂ ಯೋಗಿಭೃದ್ಯಾನಗಮ್ಯಂ
ವಂದೇ ವಿಷ್ಣುಂ ಭವಭಯಹರಂ ಸರ್ವಲೋಕೈಕನಾಥಂ



Click it and Unblock the Notifications











