Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಇಂಡಿಯಾ ಎಂಬ ಹೆಸರು ಬಂದಿದ್ದು ಯಾವಾಗ? ಭಾರತದ ಇತರ ಹೆಸರುಗಳೇನು?
ನಮ್ಮ ದೇಶವನ್ನು ನಾವು ಭಾರತ, ಹಿಂದೂಸ್ತಾನ, ಇಂಡಿಯಾ ಹೀಗೆ ವಿವಿಧ ಹೆಸರಿನಿಂದ ಕರೆಯಲಾಗುವುದು. ಆದರೆ ನಮ್ಮ ದೇಶದ ಹೆಸರನ್ನು ಇಂಡಿಯಾ ಅಂತ ಹೇಳುವುದು ಬೇಡ, ಭಾರತ ಅಂತ ಮಾತ್ರ ಹೇಳಿದರೆ ಎಂಬ ಅಭಿಪ್ರಾಯ ಸ್ವಾತಂತ್ರ್ಯ ಭಾರತದಿಂದಲೇ ಇದೆ. ಇದೀಗ ಕೇಂದ್ರ ಸರ್ಕಾರ ಇಂಡಿಯಾ ಎಂಬ ಹೆಸರನ್ನು ತೆಗೆದುಹಾಕಲು ತೀರ್ಮಾನಿಸಿರುವುದು ದೇಶದಲ್ಲಿ ದೊಡ್ಡ ರಾಜ್ಯಕೀಯ ಜಿದ್ದಾಜಿದ್ದಿಗೆ ಕಾರಣವಾಗಿದೆ.
ನಮ್ಮ ದೇಶಕ್ಕೆ ಇಂಡಿಯಾ ಎಂಬ ಹೆಸರು ಬಂದಿದ್ದು ಹೇಗೆ? ಭಾರತವನ್ನು ಯಾವೆಲ್ಲಾ ಹೆಸರಿನಿಂದ ಕರೆಯಲಾಗುವುದು, ಭಾರತ ಎಂಬ ಪದದ ಅರ್ಥವೇನು ಎಂದು ನೋಡೋಣ ಬನ್ನಿ:

ಇಂಡಿಯಾ ಎಂಬ ಹೆಸರು ಹೇಗೆ?
ಇಂಡಿಯಾ ಎಂಬುವುದು ಭಾರತದ ಭಾಷೆಯ ಪದವಲ್ಲ, ಇದು ಗ್ರೀಕ್ ಭಾಷೆಯ ಇಂಡಿಕಾ ಎಂಬ ಪದದಿಂದ ಬಂದಿದೆ, ಈ ಪದವನ್ನು ಕೊದಲಿಗೆ ಚಂದ್ರಗುಪ್ತ ಮೌರ್ಯನ ಆಸ್ಥಾನದಲ್ಲಿದ್ದ ಗ್ರೀಕ್ ರಾಯಭಾರಿ ಮೆಗಾಸ್ತನೀಸ್ ಮೊದಲಿಗೆ ಪ್ರಯೋಗ ಮಾಡಿದ್ದ, ಅಲ್ಲಿಂದ ಭಾರತವನ್ನು ಇಂಡಿಯಾ ಎಂದು ಕರೆಯಲಾರಂಭಿಸಿದರು. ಬ್ರಿಟಿಷರು ಭಾರತಕ್ಕೆ ಬಂದ ಮೇಲೆ ಭಾರತವನ್ನು ಬ್ರಿಟಿಷರು ಇಂಡಿಯಾ ಎಂದು ಕರೆಯಲಾರಂಭಿಸಿದರು.
ಭಾರತ ಎಂಬ ಪದ ಸಂಸ್ಕೃತ ಮೂಲದಿಂದ ಬಂದ ಪದವಾಗಿದೆ
ಬಹಳ ಹಿಂದಿನಿಂದಲೂ ಭಾರತವನ್ನು ಭಾರತ ಎಂದೇ ಕರೆಯಲಾಗುತ್ತಿತ್ತು, ಅದಕ್ಕೆ ಸಾಕ್ಷಿ ಎಂಬಂತೆ ನಮ್ಮ ಪೌರಾಣಿಕ ಕತೆಗಳಲ್ಲಿ ಭಾರತ ದೇಶದ ಉಲ್ಲೇಖವಿದೆ. ಸಂಸ್ಕೃತದಲ್ಲಿ ಭರ್ ಎಂದರೆ ಯುದ್ಧ, ಜನಗಣ ಎಂಬ ಅರ್ಥವುದೆ, ಭರತ್ ಎಂದರೆ ವಿಶ್ವರಕ್ಷಕ ಎಂಬ ಅರ್ಥವನ್ನು ಹೊಂದಿದೆ. ವಿಷ್ಣು ಪುರಾಣಗಳಲ್ಲಿ ಕೂಡ ಭಾರತದ ಪ್ರಸ್ತಾಪವಿದೆ. ಭಾರತಕ್ಕೆ ಇಂಡಿಯಾ ಎಂಬ ಹೆಸರು ಬರುವ ಮೊದಲಿನಿಂದಲೂ ಭಾರತ ಎಂಬ ಹೆಸರಿತ್ತು.
ನಮ್ಮ ದೇಶವನ್ನೂ ಇನ್ನೂ ಹಲವು ಹೆಸರಿನಿಂದ ಕರೆಯಲಾಗುವುದು
ಭಾರತವನ್ನು ಇಂಡಿಯಾ ಮಾತ್ರವಲ್ಲ ಹಿಂದೂಸ್ಥಾನ್. ಜಂಬೂದ್ವೀಪ, ಭರತಖಂಡ, ಹಿಮವರ್ಷ, ಅಜ್ಞಾನಭವರ್ಷ, ಭಾರತವರ್ಷ, ಆರ್ಯಾವರ್ತ, ಹಿಂದ್ ಹೀಗೆ ಹಲವು ಪ್ರಾಚೀನ ಹೆಸರಿನಿಂದ ಕೂಡ ಗುರುರಿಸ್ಲಪಟ್ಟಿರುವ ದೇಶವಾಗಿದೆ. ಆದರೆ ಹಿಂದೂಸ್ಥಾನ್, ಭಾರತ, ಇಂಡಿಯಾ ಈ ಮೂರು ಹೆಸರಿನಿಂದ ಹೆಚ್ಚಾಗಿ ಕರೆಯಲ್ಪಟ್ಟಿದೆ.
ಇಂಡಿಯಾ ಭಾರತ ಎಂದು ಚರ್ಚೆ ಹುಟ್ಟಿಕೊಂಡಿರುವುದು ಏಕೆ?
ರಾಷ್ಟ್ರಪತಿಗಳ ಕಚೇರಿಯಿಂದ ಜಿ20 ಪ್ರನಿಧಿಗಳಿಗೆ ಔತಣಕೂಟಕ್ಕೆ ಆಹ್ವಾನ ನೀಡಲಾಗಿದ್ದು ಆ ಆಹ್ವಾನದಲ್ಲಿ ಪ್ರೆಸಿಡೆಂಡ್ ಆಫ್ ಇಂಡಿಯಾ ಬದಲಿಗೆ ಪ್ರೆಸಿಡೆಂಟ್ ಆಫ್ ಭಾರತ್ ಎಂದು ಉಲ್ಲೇಖಿಸಲಾಗಿದೆ. ಈ ಕಾರಣಕ್ಕೆ ಇದೀಗ ರಾಷ್ಟ್ರದಲ್ಲಿ ಇಂಡಿಯಾ ಅಥವಾ ಭಾರತ ಇದರಲ್ಲಿ ಯಾವ ಹೆಸರು ಸೂಕ್ತ ಎಂಬುವುದರ ಬಗ್ಗೆ ದೊಡ್ಡ ಚರ್ಚೆಯೇ ನಡೆಯುತ್ತಿದೆ.
ನಾನು ಭಾರತೀಯ, ನಾನು ಇಂಡಿಯನ್ ಈ ಎರಡನ್ನೂ ನಾವು ಹೆಮ್ಮೆಯಿಂದಲೇ ಹೇಳುತ್ತಿದ್ದೇವೆ. ಹೊರ ದೇಶಗಳಿಗೆ ಹೋದಾಗ ಭಾರತೀಯರು ಹೆಚ್ಚಾಗಿ ಇಂಡಿಯನ್ಸ್ ಎಂದೇ ಗುರುತಿಸಿಕೊಳ್ಳುತ್ತಿದ್ದಾರೆ. ಇಂಡಿಯಾ ಎಂದು ಹೇಳುವಾಗಲೇ ನಮ್ಮಲ್ಲಿ ಅಷ್ಟೇ ರಾಷ್ಟ್ರಪ್ರೇಮ ಮೂಡುವುದು, ಭಾರತ ಎಂದಾಗಲೂ ಅದೇ ರಾಷ್ಟ್ರಪ್ರೇಮ ಮೂಡುವುದು. ಇಲ್ಲಿ ಹೆಸರಿಗಿಂತ ನಮಗೆ ನಮ್ಮ ರಾಷ್ಟ್ರದ ಮೇಲೆ ಮೂಡುವ ಪ್ರೀತಿ, ಭಾವ, ಅಭಿಮಾನ ಮುಖ್ಯ ಅಲ್ಲವೇ?
ಭಾರತ ಎಂಬ ಹೆಸರು ನಮ್ಮ ದೇಶಕ್ಕೆ ಯಾವಾಗ ಬಂತು?
ಭಾರತ ಎಂಬ ಹೆಸರು ಭಾರತಕ್ಕೆ ಯಾವಾಗ ಬಂತು ಎಂದು ಕೇಳಿದರೆ ಭಾರತ ಎಂಬ ಎಂಬ ಹೆಸರು ನಮ್ಮ ದೇಶ ಹುಟ್ಟಿಕೊಂಡಾಗಲೇ ಬಂದಿರಬಹುದು, ಏಕೆಂದರೆ ಅನೇಕ ಪೌರಾಣಿಕ ಕರೆಗಳಲ್ಲಿ ಭರತ ಖಂಡ ಎಂಬ ಎಲ್ಲೇಖವಿದೆ. ಅದೇ ಇಂಡಿಯಾ ಎಂಬ ಹೆಸರು ಬಂದಿರುವುದು ಬ್ರಿಟಿಷರು ಭಾರತಕ್ಕೆ ಬಂದಾಗ, ಆದರೆ ಬ್ರಿಟಿಷರನ್ನು ಭಾರತದಿಂದ ಓಡಿಸಿದ ಬಳಿಕ ಕೂಡ ಆ ಹೆಸರೂ ಹಾಗೆಯೇ ಉಳಿದುಕೊಂಡಿತು. ಇದೀಗ ಈ ಹೆಸರಿನ ಬದಲಿಗೆ ಬರೀ ಭಾರತ ಎಂದು ಮಾತ್ರ ಹೇಳುವ ಎಂಬುವುದು ಕೇಂದ್ರ ಸರ್ಕಾರದ ಅಭಿಪ್ರಾಯವಾಗಿದೆ, ಆದ್ದರಿಂದ ಪ್ರೆಸಿಡೆಂಟ್ ಆಫ್ ಇಂಡಿಯಾ ಬದಲಿಗೆ ಪ್ರೆಸಿಡೆಂಟ್ ಆಫ್ ಭಾರತ ಎಂದು ನೀಡಿದ್ದಾರೆ. ನಮ್ಮ ದೇಶ ನಮ್ಮ ಹೆಮ್ಮೆ... ಭಾರತೀಯರು ನಾವೇ, ಇಂಡಿಯನ್ಸ್ ಅಂದರೂ ನಾವೇ ... ಆದರೆ ಭಾರತ ಎಂಬ ಪದ ನಮ್ಮ ಮೂಲವನ್ನು ಪ್ರತಿನಿಧಿಸುತ್ತದೆ ಈ ಕಾರಣಕ್ಕೆ ಇದೇ ಹೆಸರೇ ಇರಲಿ ಎಂಬ ಅಭಿಪ್ರಾಯ ಕೂಡ ಕೇಳಿ ಬರುತ್ತಿದೆ ಈ ಕುರಿತು ನಿಮ್ಮ ಅಭಿಪ್ರಾಯವೇನು?



Click it and Unblock the Notifications











