Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಈ 5 ಸಂದರ್ಭಗಳಲ್ಲಿ ಮನೆಯಲ್ಲಿ ಚಪಾತಿ ಮಾಡೋದನ್ನು ನಿಷೇಧಿಸಲಾಗಿದೆ!
ಚಪಾತಿ ಎಂದರೆ ನಮಗೆ ತಕ್ಷಣ ನೆನಪಾಗೋದು ಇದೊಂದು ಅತ್ಯುತ್ತಮ ಡಯೇಟ್ ಆಹಾರ. ಫಿಟ್ ನೆಸ್ ಗೆ ಹೆಚ್ಚಿನ ಮಹತ್ವ ನೀಡುವವರು ನಿತ್ಯ ಚಪಾತಿ ಸೇವನೆ ಮಾಡ್ತಾರೆ. ಇನ್ನೂ ಉತ್ತರ ಭಾರತದಲ್ಲಂತೂ ಚಪಾತಿ ಜನರ ಜೀವನದ ಅವಿಭಾಜ್ಯ ಅಂಗವೇ ಆಗಿ ಹೋಗಿದೆ. ಚಪಾತಿ ಇಲ್ಲದೇ ಅವರ ದಿನವೇ ಸಾಗೋದಿಲ್ಲ. ಆದರೆ ಕೆಲವು ದಿನಗಳಲ್ಲಿ ಮನೆಯಲ್ಲಿ ಚಪಾತಿಯನ್ನು ತಯಾರು ಮಾಡಬಾರದಂತೆ. ಈ ದಿನ ಮನೆಯಲ್ಲಿ ಚಪಾತಿ ಮಾಡೋದು ಮನೆಗೆ ಶುಭವಲ್ಲ ಅಂತ ಹೇಳಲಾಗುತ್ತದೆ.
ಅದ್ರಲ್ಲೂ ಮುಖ್ಯವಾಗಿ 5 ಸಂದರ್ಭಗಳಲ್ಲಿ ಮನೆಯಲ್ಲಿ ಚಪಾತಿಯನ್ನು ಮಾಡಲೇಬಾರದು. ಒಂದು ವೇಳೆ ಮಾಡಿದರೆ ಆ ಮನೆಯಲ್ಲಿ ಹಣ ಮತ್ತು ಧಾನ್ಯಗಳ ಕೊರತೆ ಎದುರಾಗುತ್ತಂತೆ. ಅಷ್ಟೇ ಅಲ್ಲದೇ ಮಾತೆ ಲಕ್ಷ್ಮೀ ಕೂಡ ನಮ್ಮ ಮೇಲೆ ಕೋಪಗೊಳ್ಳುತ್ತಾಳಂತೆ. ಅಷ್ಟಕ್ಕು ಯಾವ 5 ದಿನಗಳಲ್ಲಿ ಮನೆಯಲ್ಲಿ ಚಪಾತಿ ಮಾಡಬಾರದು ಅನ್ನೋದನ್ನು ತಿಳಿಯೋಣ.

ನಾಗರ ಪಂಚಮಿ ಹಬ್ಬ
ಆಷಾಢ ಮಾಸ ಕಳೆದ ನಂತರ ಶ್ರಾವಣ ಇದಾದ ಬಳಿಕ ನಾವು ಆಚರಿಸುವ ಮೊದಲ ಹಬ್ಬವೇ ನಾಗರ ಪಂಚಮಿ. ನಾಗರ ಪಂಚಮಿಯ ದಿನ ನಾಗರಾಜನಿಗೆ ಹಾಲೆರೆದು ವಿಶೇಷವಾಗಿ ಆ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಆ ದಿನ ಮನೆಯಲ್ಲಿ ಸಿಹಿ ತಿಂಡಿ ಸೇರಿದಂತೆ ಹಬ್ಬದೂಟವನ್ನೇ ತಯಾರು ಮಾಡಲಾಗುತ್ತದೆ. ನಮ್ಮ ನಂಬಿಕೆಗಳ ಪ್ರಕಾರ ನಾಗರ ಪಂಚಮಿಯ ದಿನ ಮನೆಯಲ್ಲಿ ಚಪಾತಿಯನ್ನು ಮಾಡಬಾರದಂತೆ. ಆ ದಿನ ಚಪಾತಿ ತಯಾರಿಸಿದರೆ ಅಶುಭ ಎಂದು ಹೇಳಲಾಗುತ್ತದೆ.
ಹೀಗಾಗಿ ನಾಗರ ಪಂಚಮಿಯ ದಿನ ಆದಷ್ಟು ಎಲ್ಲಾ ಆಹಾರಗಳನ್ನು ಮಣ್ಣಿನ ಮಡಕೆಯಲ್ಲಿ ತಯಾರು ಮಾಡಿ ಸೇವಿಸಿದರೆ ಒಳ್ಳೆಯದು. ಸ್ಟೀಲ್ ಅಥವಾ ಸ್ಟೈನ್ ಲೆಸ್ ಸ್ಟೀಲ್ ಪಾತ್ರೆಗಳನ್ನು ಬಳಸುವುದನ್ನು ಆದಷ್ಟು ನಿರಾಕರಿಸಿದರೆ ಉತ್ತಮ.
ದೀಪಾವಳಿ ಹಬ್ಬ
ದೀಪಾವಳಿ ದೀಪಗಳ ಹಬ್ಬ. ಇದು ಹಿಂದೂಗಳ ಅತೀ ದೊಡ್ಡ ಹಬ್ಬವೆಂದು ಪರಿಗಣಿಸಲಾಗಿದೆ. ಮೂರು ದಿನಗಳ ಕಾಲ ದೀಪಾವಳಿ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಮನೆಯಲ್ಲಿ ಚಪಾತಿಯನ್ನು ತಯಾರು ಮಾಡಬಾರದು. ಬದಲಾಗಿ ಈ ಸಂದರ್ಭದಲ್ಲಿ ಮನೆಯಲ್ಲಿ ವಿಶೇಷ ರೀತಿಯ ಭಕ್ಷ್ಯಗಳನ್ನು ತಯಾರು ಮಾಡಿ ತಿನ್ನಬೇಕು. ಇದರ ಜೊತೆಗೆ ಸಿಹಿ ತಿಂಡಿಯನ್ನು ಕೂಡ ತಯಾರಿಸಿ. ಆ ದಿನ ಚಪಾತಿ ಮಾಡಿದರೆ ಲಕ್ಷ್ಮೀಯ ಕೋಪಕ್ಕೆ ತುತ್ತಾಗುತ್ತೀರಿ.
ಶರದ್ ಪೂರ್ಣಿಮಾ
ಶರದ್ ಪೂರ್ಣಿಮಾದ ದಿನ ತಾಯಿ ಲಕ್ಷ್ಮೀ ಕಾಣಿಸಿಕೊಳ್ಳುತ್ತಾಳಂತೆ. ಹೀಗಾಗಿ ಶರದ್ ಪೂರ್ಣಿಮಾದ ದಿನದಂದು ಮನೆಯಲ್ಲಿ ಹಸಿ ಆಹಾರವನ್ನು ಬೇಯಿಸಿ ತಿನ್ನಬಾರದು. ಈ ದಿನ ಪಾಯಸ ಮತ್ತು ಪೂರಿಯನ್ನು ತಯಾರಿಸಬೇಕು. ಈ ದಿನ ಪಾಯಸವನ್ನು ತಯಾರಿಸಿ ಚಂದ್ರನ ಬೆಳಕಿನಲ್ಲಿ ಇಡಬೇಕು. ಯಾಕಂದ್ರೆ ಆ ದಿನ ಚಂದ್ರನ ಬೆಳಕಿನಿಂದ ಅಮೃತ ಹೊರಬರುತ್ತದೆ ಎಂಬ ನಂಬಿಕೆಯಿದೆ. ಇದನ್ನು ಸೇವಿಸಿದರೆ ಒಳ್ಳೆಯದಾಗುತ್ತಂತೆ. ಇನ್ನೂ ಶರದ್ ಪೂರ್ಣಿಮಾದ ದಿನ ವಿಶೇಷ ಭಕ್ಷ್ಯಗಳನ್ನು ಕೂಡ ಸೇವಿಸಬಹುದು.
ಶೀತಲ ಅಷ್ಟಮಿ
ಶೀತಲ ಅಷ್ಟಮಿಯ ದಿನ ಕೂಡ ಮನೆಯಲ್ಲಿ ಚಪಾತಿಯನ್ನು ತಯಾರಿಸಬಾರದು. ಹಾಗೂ ಚಪಾತಿಯನ್ನು ಸೇವನೆ ಕೂಡ ಮಾಡಬಾರದು. ಇದರಿಂದ ಮನೆಗೆ ಶುಭವಾಗೋದಿಲ್ಲ ಎಂದು ನಂಬಲಾಗಿದೆ.
ಮನೆಯಲ್ಲಿ ಸಾವಾದಾಗ
ಮನೆಯಲ್ಲಿ ಸಾವು ಸಂಭವಿಸಿದ ದಿನ ಹೆಣವನ್ನು ಮನೆಯಿಂದ ಹೊರ ಹಾಕುವ ಮೊದಲು ಯಾವುದೇ ಆಹಾರವನ್ನು ತಯಾರಿಸುವಂತಿಲ್ಲ. ಆ ನಂತರ ಮನೆಯಲ್ಲಿ ಶುದ್ಧಿ ಮಾಡಿ. ಆಹಾರ ತಯಾರು ಮಾಡಲಾಗುತ್ತದೆ. ಆದರೆ ಚಪಾತಿಯನ್ನು ತಯಾರು ಮಾಡಬಾರದು. ಸತ್ತ ವ್ಯಕ್ತಿಯ 13 ನೇ ಸಂಸ್ಕಾರದ ನಂತರವೇ ಮನೆಯಲ್ಲಿ ಚಪಾತಿಯನ್ನು ತಯಾರು ಮಾಡಬೇಕು ಎಂದು ಶಾಸ್ತ್ರಗಳಲ್ಲಿ ಉಲ್ಲೇಖ ಮಾಡಲಾಗಿದೆ. ಹೀಗಾಗಿ ಹದಿಮೂರು ದಿನಗಳ ಕಾಲ ಕಟ್ಟು ನಿಟ್ಟಾಗಿ ಇರಬೇಕು.
ಹೀಗಾಗಿ ಈ ಐದು ದಿನಗಳ ಕಾಲ ಮನೆಯಲ್ಲಿ ಯಾವುದೇ ಕಾರಣಕ್ಕೂ ಚಪಾತಿ ತಯಾರು ಮಾಡೋದಕ್ಕೆ ಹೋಗಬೇಡಿ. ಇದರಿಂದ ನಿಮ್ಮ ಮನೆಗೆ ಶೋಭೆ ತರೋದಿಲ್ಲ.



Click it and Unblock the Notifications


