Latest Updates
-
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ?
ಭಾರತದಲ್ಲಿರುವ ಈ ದೇವಾಲಯಗಳ ನಿಗೂಢ ಶಕ್ತಿಯ ರಹಸ್ಯ ಬೇಧಿಸಲು ಯಾವ ವಿಜ್ಞಾನಕ್ಕೂ ಸಾಧ್ಯವಾಗಿಲ್ಲ
ಭಾರತದಲ್ಲಿ ಸಾವಿರಾರು ಪುಣ್ಯ ಕ್ಷೇತ್ರಗಳಿವೆ, ಒಂದೊಂದು ದೇವಾಲಯವೂ ಅದರದ್ದೇ ಆದ ಇತಿಹಾಸ, ಪವಾಡಗಳನ್ನು ಒಳಗೊಂಡಿದೆ. ಕೆಲವೊಂದು ದೇವಾಲಯಗಳಲ್ಲಿರುವ ಪವಾಡಗಳನ್ನು ಕೇಳುವಾಗ ತುಂಬಾ ಅಚ್ಚರಿ ಅನಿಸುವುದು ಆದರೆ ಆ ಪವಾಡಗಳನ್ನು ಬೇಧಿಸಲು ವಿಜ್ಞಾನಕ್ಕೂ ಸಾಧ್ಯವಾಗಿಲ್ಲ...
ಮೆಹಂದಿಪುರ ಬಾಲಾಜಿ ದೇವಾಲಯ
ಇದು ಹನುಮಂತನ ದೇವಾಲಯವಾಗಿದ್ದು ರಾಜಾಸ್ಥಾನದಲ್ಲಿದೆ. ಇಲ್ಲಿಗೆ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಿರುತ್ತಾರೆ. ಮಾಟ, ಮಂತ್ರ ಇವುಗಳ ಪ್ರಭಾವದಿಂದ ಪಾರಾಗಲು ಜನರು ಹನುಮಂತನ ಮೊರೆ ಹೋಗುತ್ತಾರೆ. ಋಣಾತ್ಮಕ ಶಕ್ತಿಯಿಂದ ತುಂಬಾ ತೊಂದರೆ ಅನುಭವಿಸುತ್ತಿರುವವರು ಈ ದೇವಾಲಯಕ್ಕೆ ಭೇಟಿ ನೀಡಿ ಪರಿಹಾರ ಕಂಡುಕೊಳ್ಳುತ್ತಾರೆ.

ಕಾಮಾಕ್ಯ ದೇವಾಲಯ
ಸ್ತ್ರೀಯರ ಮುಟ್ಟಿಗೆ ತುಂಬಾ ಮೈಲಿಗೆ ಎಂದು ಹೇಳುವ ಸಮಾಜದಲ್ಲಿ ಈ ದೇವಾಲಯದಲ್ಲಿರುವ ದೇವಿ ಮುಟ್ಟಿನ ದೇವತೆ! ಭಾರತದಲ್ಲಿರುವ 51 ಶಕ್ತಿ ಪೀಠಗಳಲ್ಲಿ ಇದು ಒಂದಾಗಿದೆ. ಇಲ್ಲಿ ಯಾವುದೇ ಮೂರ್ತಿಗೆ ಪೂಜೆ ಸಲ್ಲಿಸುವುದಿಲ್ಲ, ಬದಲಿಗೆ ಯೋನಿಯಾಕಾರದ ಕಲ್ಲಿಗೆ ಪೂಜೆಯನ್ನು ಸಲ್ಲಿಸಲಾಗುವುದು. ಆಷಾಢದಲ್ಲಿ 3 ದಿನ ಇಲ್ಲಿಯ ದೇವಿ ಮುಟ್ಟಾಗುತ್ತಾಳೆ. ದೇವಿ ಮುಟ್ಟಾಗುವ ಸಮಯದಲ್ಲಿ ಯೋನಿಯಾಕಾರದ ಕಲ್ಲಿನ ಮೇಲೆ ಬಿಳಿ ಬಟ್ಟೆಗಳನ್ನು ಹಾಸಲಾಗಿರುತ್ತದೆ, 3 ದಿನಗಳ ಬಳಿಕ ಬಾಗಿಲು ತೆಗೆದು ನೋಡಿದರೆ ಆ ಬಿಳಿ ಬಟ್ಟೆ ಕೆಂಪಾಗಿರುತ್ತದೆ. ಅಷ್ಟು ಮಾತ್ರವಲ್ಲಿ ಆ ದೇವಾಲಯದ ಪಕ್ಕ ಝರಿ ಹರಿಯುತ್ತಿರುತ್ತದೆ, ಅದರ ನೀರು ಕೂಡ ಕೆಂಪಾಗುವುದು. ಈ ಸಮಯದಲ್ಲಿ ಅಲ್ಲಿ ಹರಿಯುವ ಬ್ರಹ್ಮಪುತ್ರ ನದಿ ಕೂಡ ಕೆಂಪಾಗುವುದು.
ಶ್ರೀ ಪದ್ಮಸ್ವಾಮಿ ದೇವಾಲಯ
ಕೇರಳದಲ್ಲಿರುವ ಈ ದೇವಾಲಯಕ್ಕೆ ಬೇಟಿ ನೀಡುವವರು ಅಲ್ಲಿಯ ನಿಯಮಗಳನ್ನು ಪಾಲಿಸಬೇಕು. ಪುರುಷರು ಪಂಚೆ ಧರಿಸಬೇಕು, ಸ್ತ್ರೀಯರು ಸೀರೆ, ಹೆಣ್ಮಕ್ಕಳು ಲಂಗ-ಬ್ಲೌಸ್ ಧರಿಸಬೇಕು. ಈ ದೇವಾಲಯದ ಒಳಗಡೆ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳನ್ನು ತೆಗೆದುಕೊಂಡು ಹೋಗಲು ಬಿಡುವುದಿಲ್ಲ. ಅಪಾರ ಸಂಪತ್ತು ಹೊಂದಿರುವ ಈ ದೇವಾಲಯಕ್ಕೆ Z ಸೆಕ್ಯೂರಿಟಿ ನೀಡಲಾಗಿದೆ. ಈ ದೇವಾಲಯಕ್ಕೆ ಭೇಟಿ ನೀಡಿದರೆ ಬಯಸಿದ್ದು ನೆರವೇರುವುದು ಎಂಬ ನಂಬಿಕೆಯಿದೆ.
ಆಂಧ್ರಪ್ರದೇಶದ ತಿರುಮಲದಲ್ಲಿರುವ ವೆಂಕಟೇಶ್ವರ ದೇವಾಲಯ
ಆಂಧ್ರದ ತಿರುಪತಿಯಲ್ಲಿರುವ ಬಾಲಾಜಿಯ ಪವಾಡಗಳನ್ನು ವರ್ಣಿಸಲು ಪದಗಳೇ ಸಾಲದು, ಭಕ್ತರಿಗೆ ತಿರುಪತಿ ತಿಮ್ಮಪ್ಪನ ಮೇಲೆ, ಅವನ ಪವಾಡಗಳ ಮೇಲೆ ಅಷ್ಟೊಂದು ನಂಬಿಕೆ. ಪ್ರತಿದಿನ ಲಕ್ಷಾಂತರ ಜನರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಭಾರತದ ಶ್ರೀಮಂತ ದೇವಾಲಯವಾಗಿರುವ ತಿರುಪತಿಯ ವೆಂಕಟೇಶ್ವರ ಮೂರ್ತಿಯ ಉಷ್ಣಾಂಶ 100ಡಿಗ್ರಿC ಇರುತ್ತದೆ, ಅಲ್ಲಿಯ ಮೂರ್ತಿ ಬೆವರುತ್ತಿರುತ್ತದೆ.
ಮಥುರೈಯ ಮೀನಾಕ್ಷಿ ಅಮ್ಮನ ದೇವರು
14 ಎಕರೆಯಲ್ಲಿ ಮೀನಾಕ್ಷಿ ಅಮ್ಮನ ದೇವಾಲಯವಿದೆ. ಈ ದೇವಾಲಯದ ಒಳಗೆ ಕಾಲಿಟ್ಟ ತಕ್ಷಣ ಒಂಥರಾ ದೈವಿಕ ಅನುಭವ ಉಂಟಾಗುವುದು, ಈ ದೇವಾಲಯದಲ್ಲಿ 4000ಕ್ಕೂ ಅಧಿಕ ಸ್ತಂಭಗಳಿದ್ದು ಪ್ರತಿಯೊಂದು ಸ್ತಂಭವನ್ನು ಏಕ ಶಿಲೆಯಿಂದ ನಿರ್ಮಿಸಲಾಗಿದ್ದು ಪ್ರಪಂಚ ಹಲವು ಅದ್ಭುತಗಳಲ್ಲಿ ಇದು ಕೂಡ ಒಂದಾಗಿದೆ. ವಿಶ್ವದ 7 ಅದ್ಭುತಗಳ ಪಟ್ಟಿಯಲ್ಲಿ ಇದು ಏಕಿಲ್ಲ ಎಂಬುವುದೇ ಸೋಜಿಗ. ಈ ದೇವಾಲಯಕ್ಕೆ ಬಂದು ಶುದ್ಧ ಮನಸ್ಸಿನಿಂದ ಬೇಡಿಕೊಂಡರೆ ಬೇಡಿಕೊಂಡಿದ್ದು ಎಲ್ಲವೂ ನೆರವೇರಲಿದೆ ಎಂಬ ನಂಬಿಕೆ ಇದೆ.
ಆಂಧ್ರದ ಲೇಪಾಕ್ಷಿಯಲ್ಲಿರುವ ವೀರ ಭದ್ರ ದೇವಾಲಯ
ಈ ದೇವಾಲಯದ ಪವಾಡ ಕೂಡ ತುಂಬಾನೇ ನಿಗೂಢವಾಗಿದೆ. ಈ ದೇವಾಲಯದಲ್ಲಿ ಕೆಂಪನೆಯ ರಕ್ತಧಾರೆಯಿದೆ, ಇಲ್ಲಿ ನೀವು ಅಪೂರ್ಣವಾಗಿರುವ ಪಾರ್ವತಿ ಪರಮೇಶ್ವರನ ಮಂಟಪವಿದೆ. ವಿರೂಪಣ್ಣನಿಗೆ ಆಗದ ವಿರೊಧಿಗಳು ಆತ ರಾಜ್ಯದ ಖಜಾನೆಯ ಹಣವನ್ನೆಲ್ಲಾ ದೋಚುತ್ತಿದ್ದಾನೆ ಎಂದು ರಾಜನಿಗೆ ಹೇಳಿದಾಗ ರಾಜನು ವಿರೂಪಣ್ಣನ ಕಣ್ಣುಗಳನ್ನು ಕೀಳಲು ಆಜ್ಞೆ ನೀಡುತ್ತಾನೆ, ಇದನ್ನು ಕೇಳಿ ವಿರೂಪಣ್ಣ ತನ್ನ ಕಣ್ಣುಗಳನ್ನು ಕೆತ್ತಿ ಬಿಸಾಕಿದ, ಹೀಗಾಗಿ ಆ ಭಾಗದಲ್ಲಿ ಕೆಂಪು ರಕ್ತಧಾರೆ ಇದೆ ಹೇಳಲಾಗುವುದು. ಇಲ್ಲಿ ಸೀತಪಾದವೆಂದು ಹೇಳುವ ಸ್ಥಳವಿದೆ. ಅಲ್ಲಿ ಹೆಬ್ಬೆಟ್ಟಿನ ಬದಿಯಿಂದ ವರ್ಷದ ಎಲ್ಲಾ ಸಮಯದಲ್ಲೂ ನೀರು ಜಿನುಗುತ್ತಾ ಇರುತ್ತದೆ.
ಮಹಾರಾಷ್ಟ್ರದ ಕೈಲಾಸನಾಥ ದೇವಾಲಯ
ಈ ದೇವಾಲಯವನ್ನು ಒಂದೇ ಕಲ್ಲಿನಿಂದ ಕೆತ್ತಿದ್ದಾರೆ ಎಂಬುವುದೇ ಮಹಾ ಪವಾಡ, ಒಂದೇ ಕಲ್ಲಿನಿಂದ ಹೇಗೆ ನಿರ್ಮಿಸಿದರು ಎಂಬುವುದನ್ನು ವಿವರಿಸಲು ಇದುವರೆಗೆ ಯಾವ ಆರ್ಕಿಟೆಕ್ಟ್‌ಗೂ ಸಾಧ್ಯವಾಗಿಲ್ಲ.
ಚೆನ್ನಪಟ್ಟಣದಲ್ಲಿರುವ ನಾಯಿಯ ದೇವಾಲಯ
ರಾಮನಗರದಲ್ಲಿರುವ ಈ ದೇವಾಲಯ ಕೂಡ ನಿಗೂಢ ದೇವಾಲಯದಲ್ಲಿ ಒಂದು ಎಂದು ಗುರುತಿಸಲಾಗಿದೆ. ಈ ದೇವಾಲಯವು ದುಷ್ಟಶಕ್ತಿಗಳಿಂದ ಊರನ್ನು ಕಾಪಾಡುತ್ತದೆ ಎಂಬ ಬಲವಾದ ನಂಬಿಕೆ ಜನರಲ್ಲಿದೆ.
ಕೊಡಂಕಲೂರು ಭಗವತಿ ಕ್ಷೇತ್ರ'
ಕೇರಳದ ತ್ರಿಶೂರ್‌ನಲ್ಲಿರುವ ಈ ಕ್ಷೇತ್ರ ಕೂಡ ನಿಗೂಢ ಶಕ್ತಿ ಹೊಂದಿರುವ ದೇವಾಲಯಗಳಲ್ಲಿ ಒಂದಾಗಿದೆ. ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಇಲ್ಲಿಗೆ ಭೇಟಿ ನೀಡುತ್ತಾರೆ. ವರ್ಷಕ್ಕೊಮ್ಮೆ ನಡೆಯುವ 7 ದಿನಗಳ ಹಬ್ಬದಲ್ಲಿ ಇಲ್ಲಿಗೆ ಬರುವ ಭಕ್ತರು ಖಡ್ಗದಲ್ಲಿ ತಮ್ಮ ಹಣೆಗೆ ಹೊಡೆದುಕೊಳ್ಳುತ್ತಾರೆ, ಹಣೆ ಒಡೆದು ರಕ್ತ ಸುರಿಯುತ್ತಿರುತ್ತದೆ, ಆದರೆ ಭಕ್ತರಿಗೆ ಯಾವುದೇ ತೊಂದರೆಯಾಗುವುದಿಲ್ಲ.



Click it and Unblock the Notifications












