Latest Updates
-
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ!
ಪುರಿ ಜಗನ್ನಾಥ ರಥಯಾತ್ರೆ: ಪುರಿ ಜಗನ್ನಾಥ ದೇವಾಲಯದಲ್ಲಿರುವ 10 ನಿಗೂಢ ರಹಸ್ಯಗಳಿವು
ಪುರಿ ಜಗನ್ನಾಥ ರಥಯಾತ್ರೆಗೆ ವಿಜೃಂಭಣೆಯ ಆರಂಭ ಸಿಕ್ಕಿದೆ. ಪ್ರತಿವರ್ಷ ಪುರಿ ರಥಯಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ರಥಯಾತ್ರೆಯು ಶ್ರೀಮಂದಿರದಿಂದ ಗುಂಡಿಚಾ ದೇವಲಯದವರೆಗೆ ಸಾಗಲಿದೆ. ಈ ರಥಯಾತ್ರೆಗೆ ಪ್ರತೀವರ್ಷವೂ 3 ಹೊಸ ರಥಗಳನ್ನು ನಿರ್ಮಿಸಿ ಅವುಗಳನ್ನು ಎಳೆಯಲಾಗುವುದು.
ಪುರಿ ಜಗನ್ನಾಥ ದೇವಾಲಯವು ಭಾರತದ ಪುರಾತದ ದೇವಾಲಯಗಳಲ್ಲಿ ಒಂದಾಗಿದ್ದು ಇದನ್ನು 12ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಪುರಿ ಜಗನ್ನಾಥ ದೇವಾಲಯದಲ್ಲಿ ಹಲವಾರು ಪವಾಡಗಳಿವೆ, ಕೆಲವೊಂದು ಪವಾಡಗಳಿಗೆ ಕಾರಣ ಇದುವರೆಗೂ ರಹಸ್ಯವಾಗಿಯೇ ಉಳಿದಿದೆ. ಈ ದೇವಾಲಯದ ಬಗ್ಗೆ 10 ಆಸಕ್ತಿಕರ ಪವಾಡಗಳ ಬಗ್ಗೆ ನೋಡುವುದಾದರೆ:

1. ದೇವಾಲಯ ಮೇಲೆ ಹಾರಿಸಲಾದ ಧ್ವಜದ ದಿಕ್ಕು
ಪುರಿ ಜಗನ್ನಾಥ ದೇವಾಲಯದ ಮೇಲೆ ಹಾರಿಸಲಾಗಿರುವ ಧ್ವಜವು ಗಾಳಿ ಬೀಸುವ ವಿರುದ್ಧ ದಿಕ್ಕಿನಲ್ಲಿ ಹಾರಾಡುತ್ತಿರುತ್ತದೆ. ಯಾವುದೇ ಧ್ವಜವಾದರೂ ಗಾಳಿ ಯಾವ ಕಡೆ ಬೀಸುತ್ತದೆಯೋ ಆ ದಿಕ್ಕಿನಲ್ಲಿ ಧ್ವಜ ಹಾರಾಡುತ್ತದೆ, ಆದರೆ ಈ ದೇವಾಲಯದಲ್ಲಿ ಮಾತ್ರ ಗಾಳಿ ಬೀಸುವ ವಿರುದ್ಧ ದಿಕ್ಕಿನಲ್ಲಿ ದೇವಾಲಯದ ಧ್ವಜ ಹಾರಾಡುತ್ತಿರುತ್ತದೆ. ಇದಕ್ಕೆ ಕಾರಣವೇನು ಎಂಬುವುದನ್ನು ವೈಜ್ಞಾನಿಕವಾಗಿ ಹೇಳಲು ಯಾರಿಗೂ ಇದುವರೆಗೆ ಸಾಧ್ಯವಾಗಿಲ್ಲ. ಈ ರಹಸ್ಯ ದೇವರ ಪವಾಡವೇ ಎಂದು ಭಕ್ತರು ಬಲವಾಗಿ ನಂಬುತ್ತಾರೆ.
2. ಈ ದೇವಾಲಯದ ಧ್ವಜವನ್ನು ಪ್ರತಿದಿನ ಬದಲಾಯಿಸಲಾಗುವುದು
ಪುರಿ ಜಗನ್ನಾಥ ದೇವಾಲಯದಲ್ಲಿ ಹಾರಾಡುತ್ತಿರುವ ಧ್ವಜವನ್ನು ಪ್ರತಿದಿನ ಬದಲಾಯಿಸಲಾಗುವುದು. ಪ್ರತಿದಿನ ಇಲ್ಲಿ ಪೂಜೆ ಮಾಡುವವರು ಮಂತ್ರಗಳನ್ನು ಹೇಳುತ್ತಾ ಧ್ವಜವನ್ನು ಬದಲಾಯಿಸುತ್ತಾರೆ. ಒಂದು ವೇಳೆ ಒಂದು ದಿನ ಬದಲಾಯಿಸದೇ ಇದ್ದರು 18 ವರ್ಷಗಳ ಕಾಲ ಧ್ವಜ ಹಾರಿಸುವಂತಿಲ್ಲ ಎಂಬ ಕಠಿಣ ನಿಯಮವೂ ಇದೆ.
3. ಸುದರ್ಶನ ಚಕ್ರ
ಈ ದೇವಾಲಯದ ಮೇಲೆ 20 ಅಡಿ ದೊಡ್ಡದಿರುವ ಸುದರ್ಶನ ಚಕ್ರವಿದೆ. ಈ ಸುದರ್ಶನ ಚಕ್ರ ಸಿಟಿಯ ಯಾವುದೇ ದಿಕ್ಕಿನಲ್ಲಿ ನಿಂತು ನೋಡಿದರೂ ನಿಮಗೆ ಒಂದೇ ರೀತಿ ಕಾಣುತ್ತದೆ. ಚಕ್ರದ ಹಿಂಬದಿಯಿಂದ ನೋಡಿದರೂ ಕೂಡ ನಿಮಗೆ ಒಂದೇ ರೀತಿ ಕಾಣುವುದು. ಇದರ ಆರ್ಕಿಟೆಕ್ಟ್ ರಹಸ್ಯ ಬೇಧಿಸಲು ಯಾವ ಆರ್ಕಿಟೆಕ್ಟ್‌ಗೂ ಸಾಧ್ಯವಾಗುತ್ತಿಲ್ಲ, ಇದನ್ನು ಹೇಗೆ ಈ ರೀತಿ ನಿರ್ಮಿಸಿದರು ಎಂಬ ಕೌತುಕ ಈಗಲೂ ಹಾಗೆಯೇ ಉಳಿದುಕೊಂಡಿದೆ.
4. ಇಲ್ಲಿ ಸಮುದ್ರ ಅಲೆಗಳ ಶಬ್ಧವೂ ಸ್ತಬ್ಧವಾಗುವುದು
ಮತ್ತೊಂದು ದೊಡ್ಡ ಚಿದಂಬರಂ ರಹಸ್ಯವೆಂದರೆ ಇಲ್ಲಿರುವ ಸಮುದ್ರ. ಹೌದು ನೀವು ಯಾವುದೇ ಸಮುದ್ರಕ್ಕೆ ಹೋದರೆ ಅಲ್ಲಿ ಅದರ ಅಲೆಯ ಬೋರ್ಗರೆತ ನಮ್ಮ ಕಿವಿಗೆ ಬೀಳುತ್ತದೆ ಅಲ್ವಾ? ಆದರೆ ಇಲ್ಲಿ ಮಾತ್ರ ನಿಮಗೆ ಸಮುದ್ರ ಅಲೆಗಳ ಶಬ್ದ ಕೇಳಿಸುವುದಿಲ್ಲ. ನೀವು ಸಿಂಹಧ್ವಾರ ಪ್ರವೇಶ ಮಾಡಿದ ಮೇಲೆ ಸಮುದ್ರದ ಶಬ್ದ ಕೇಳಿಸುವುದೇ ಇಲ್ಲ, ಅದೇ ಹೊರಗಡೆ ಬಂದಾಗ ಕೇಳಿಸುತ್ತದೆ. ಏಕೆ? ಇದಕ್ಕೆ ಕಾರಣವೇನು ಎಂಬುವುದರ ಬಗ್ಗೆ ಕಾರಣ ಮಾತ್ರ ಇನ್ನೂ ನಿಗೂಢವಾಗಿಯೇ ಇದೆ.
5. ಪ್ರಸಾದ ಸಾಲಲ್ಲ ಅಂತ ಆಗುವುದಿಲ್ಲ, ವ್ಯರ್ಥವೂ ಆಗುವುದಿಲ್ಲ
ಈ ದೇವಾಲಯದ ಮತ್ತೊಂದು ಪವಾಡವೆಂದರೆ ಈ ದೇವಾಲಯದಲ್ಲಿ ತಯಾರಿಸುವ ಪ್ರಸಾದ ವ್ಯರ್ಥವಾಗುವುದೇ ಇಲ್ಲ. ಹಾಗಂತ ಇಲ್ಲಿ ಎಷ್ಟೇ ಭಕ್ತರು ಬರಲಿ ಅವರಿಗೆ ಪ್ರಸಾದ ಸಿಗದೆ ಇರುವುದೇ ಇಲ್ಲ. ಅದು ಕೂಡ ಇಲ್ಲಿಯ ಪವಾಡಗಳಲ್ಲಿ ಒಂದಾಗಿದೆ.
6. ಇಲ್ಲಿ ಪ್ರಸಾದ ಬೇಯುವ ರೀತಿ ಕೂಡ ಅಚ್ಚರಿಯೇ ಸರಿ
ಇಲ್ಲಿ 7 ಮಣ್ಣಿನ ಮಡಿಕೆಯಲ್ಲಿ ಪ್ರಸಾದವನ್ನು ಮಾಡಲಾಗುವುದು. ಒಂದರ ಮೇಲೆ ಒಂದರಂತೆ ಮಡಿಕೆಗಳನ್ನು ಇರಿಸಿ ಪ್ರಸಾದವನ್ನು ಬೇಯಿಸಲಾಗುವುದು. ಆದರೆ ಇಲ್ಲಿ ಟಾಪ್‌ನಲ್ಲಿರುವ ಪಾತ್ರೆಯಲ್ಲಿ ಮೊದಲು ಪ್ರಸಾದ ಬೇಯುತ್ತದೆ, ಅದರ ಬಳಿಕ ಅದರ ಕೆಳಗಡೆಯ ಮಡಿಕೆ ಹೀಗೆ ಒಂದೊಂದೇ ಮಡಿಕೆಯಲ್ಲಿರುವ ಪ್ರಸಾದ ಬೇಯುತ್ತಾ ಕೊನೆಗೆ ಮೊದಲು ಮಡಿಕೆಯಿಟ್ಟ ಪ್ರಸಾದ ಬೇಯುವುದು.
7. ದೇವಾಲಯದ ಮೇಲೆ ಏನು ಅಂದ್ರೆ ಏನೂ ಹಾರಾಡುವುದಿಲ್ಲ
ಆಕಾಶದಲ್ಲಿ ಸಾಮಾನ್ಯವಾಗಿ ಪಕ್ಷಿಗಳು ಹಾರಾಡುವುದನ್ನು ಕಾಣಬಹುದು. ಆದರೆ ಈ ದೇವಾಲಯದ ಮೇಲೆ ಯಾವುದೇ ಪಕ್ಷಿಯಾಗಲಿ, ಮಾನವ ನಿರ್ಮಿತ ವಿಮಾನವಾಗಲಿ ಹಾರಾಡುವುದಿಲ್ಲ.
8. ಇಲ್ಲಿ ನಿಮ್ಮ ನೆರಳು ನಿಮಗೆ ಕಾಣಿಸುವುದಿಲ್ಲ
ನಾವು ನಡೆಯುತ್ತಿದ್ದರೆ ನಮ್ಮ ನೆರಳು ನಮ್ಮನ್ನು ಹಿಂಬಾಲಿಸುತ್ತದೆ ಅಲ್ವಾ? ಆದರೆ ಈ ದೇವಾಲಯದಲ್ಲಿ ನಮ್ಮ ನೆರಳು ನಮಗೆ ಕಾಣಿಸುವುದಿಲ್ಲ, ಅಂಥ ತಂತ್ರಜ್ಞಾನ ಬಳಸಿ ಆ ಕಾಲದಲ್ಲಿಯೇ ಇದನ್ನು ತೀರ್ಮಾನಿಸಲಾಗಿದೆ.
9. ಸುದರ್ಶನ ಚಕ್ರವನ್ನು ಅಷ್ಟು ಎತ್ತರದಲ್ಲಿ ಹೇಗೆ ಇಟ್ಟರು ಎಂಬ ಪ್ರಶ್ನೆಗೆ ಉತ್ತರ ಸಿಗಲ್ಲ
ಈ ದೇವಾಲಯದ ಮೇಲುಗಡೆ ಇರುವ ದೇವಾಲಯದಲ್ಲಿ ಇಟ್ಟಿರುವ ಸುದರ್ಶನ ಚಕ್ರ 20 ಅಡಿ ಎತ್ತರ, ಎಷ್ಟೋ ಟನ್ ತೂಕವಿದೆ. ಅಷ್ಟು ತೂಕವಿರುವ ಈ ಚಕ್ರವನ್ನು ಅಷ್ಟು ಎತ್ತರದಲ್ಲಿ ಹೇಗೆ ಇರಿಸಿದರು ಎಂಬ ಪ್ರಶ್ನೆ ಈ ದೇವಾಲಯಕ್ಕೆ ಭೇಟಿ ನೀಡಿದವರನ್ನು ಕಾಡುವುಉದ.
10. ಇಲ್ಲಿಯ ಮೂರ್ತಿಗಳನ್ನು ಬದಲಾಯಿಸಲಾಗುವುದು
ಇಲ್ಲಿಯ ಹಳೆಯ ಮೂರ್ತಿಗಳನ್ನು 14-18 ವರ್ಷಗಳಿಗೊಮ್ಮೆ ಬದಲಾಯಿಸಲಾಗುವುದು. ಹಳೆಯ ವಿಗ್ರಹವನ್ನು ಪೂಜಾ ಕರ್ಮಗಳ ಮೂಲಕ ಬೆಂಕಿಗೆ ಹಾಕಲಾಗುವುದು.



Click it and Unblock the Notifications











