Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ!
ಮುರುಡೇಶ್ವರ ದೇವಾಲಯಕ್ಕೆ ಯಾವ ಸಮಯದಲ್ಲಿ ಭೇಟಿ ನೀಡಬೇಕು? ಇಲ್ಲಿ ಸಲ್ಲಿಸಬೇಕಾದ ವಿಶೇಷ ಪೂಜೆಗಳ್ಯಾವುದು?
ಮುರುಡೇಶ್ವರ ದೇವಾಲಯವು ವಿಶ್ವದ ಅತ್ಯಂತ ಪ್ರಸಿದ್ಧ ಶಿವ ದೇವಾಲಯಗಳಲ್ಲಿ ಒಂದು. ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಕಡಲ ತೀರದಲ್ಲಿ ನೆಲೆಯಾಗಿರುವ ದೇವಾಲಯವಿದು. ಇಲ್ಲಿನ ಸೌಂದರ್ಯ ಕಣ್ಣಿಗೆ ಕುಕ್ಕುವಂತಿದೆ. ಇಲ್ಲಿನ ರಾಜ ಗೋಪುರ ಹಾಗೂ ಶಿವನ ಬೃಹತ್ ವಿಗ್ರಹವನ್ನು ನೋಡೋದಕ್ಕೆ ಎರಡು ಕಣ್ಣು ಸಾಲದು.
ಹೆಚ್ಚಿನವರು ಈ ಮಳೆಗಾಲದಲ್ಲಿ ಮುರುಡೇಶ್ವರ ದೇವಾಲಯಕ್ಕೆ ಭೇಟಿ ನೀಡೋದಕ್ಕೆ ಇಚ್ಛಿಸುತ್ತಾರೆ. ಮಳೆಗಾಲದಲ್ಲಿ ಈ ದೇವಾಲಯವನ್ನು ಕಣ್ತುಂಬಿಕೊಳ್ಳುವುದು ಇನ್ನೂ ಚೆನ್ನ. ಅಷ್ಟಕ್ಕು ದೇವಾಲಯದ ದರ್ಶನ ಸಮಯ ಯಾವಾಗ? ಇಲ್ಲಿ ಯಾವೆಲ್ಲಾ ವಿಶೇಷ ಪೂಜೆಗಳು ನೆರವೇರುತ್ತೆ? ಪೂಜಾ ಸಮಯದಲ್ಲಿ ಯಾವ ರೀತಿಯ ವಸ್ತ್ರಗಳನ್ನು ಧರಿಸಬೇಕು ಅನ್ನೋದ್ರ ಬಗ್ಗೆ ಮಾಹಿತಿ ತಿಳಿಯೋಣ.

ದರ್ಶನ ಸಮಯ :
ಬೆಳಗ್ಗಿನ ದರ್ಶನ : ಬೆಳಗ್ಗೆ 6:00 ರಿಂದ ಮಧ್ಯಾಹ್ನ 1:00 ಗಂಟೆವರೆಗೆ
ಸಂಜೆಯ ದರ್ಶನ : ಸಂಜೆ 3:00 ರಿಂದ ರಾತ್ರಿ 8:30 ವರೆಗೆ
ಬೆಳಗ್ಗಿನ ಪೂಜೆ : ಬೆಳಗ್ಗೆ 6:30 ರಿಂದ ಬೆಳಗ್ಗೆ 7:30 ರವರೆಗೆ
ಮಹಾ ಪೂಜೆ : ಮಧ್ಯಾಹ್ನ 12:15 ರಿಂದ ಮಧ್ಯಾಹ್ನ 1:00 ಗಂಟೆವರೆಗೆ
ರಾತ್ರಿ ಪೂಜೆ : ರಾತ್ರಿ 7:15 ರಿಂದ ರಾತ್ರಿ 8:15 ರವರೆಗೆ
ಮುರುಡೇಶ್ವರ ದೇವಾಲಯದಲ್ಲಿ ನಿತ್ಯ ಯಾವೆಲ್ಲಾ ಪೂಜೆ ನಡೆಯುತ್ತೆ ಅಂತ ನೋಡೋದಾದ್ರೆ :
ರುದ್ರಾಭಿಷೇಕ : ಈ ಪೂಜೆಯನ್ನು ಅಗ್ನಿ ಅಥವಾ ರುದ್ರ ಎಂದು ಪೂಜಿಸುವ ಶಿವನಿಗೆ ಸಮರ್ಪಿಸಲಾಗಿದೆ. ಪೂಜೆಯು ಎಲ್ಲಾ ಪಾಪಗಳನ್ನು ತೊಡೆದುಹಾಕುತ್ತದೆ ಮತ್ತು ನಮ್ಮ ವಾತಾವರಣವನ್ನು ಶುದ್ಧಗೊಳಿಸುತ್ತದೆ ಎಂದು ನಂಬಲಾಗಿದೆ. ಈ ಪೂಜೆ ಮಾಡಿಸೋದ್ರಿಂದ ಗ್ರಹಗಳಿಗೆ ಸಂಬಂಧಿಸಿದ ದುಷ್ಪರಿಣಾಮಗಳನ್ನು ಸಹ ತೆಗೆದುಹಾಕುತ್ತಂತೆ.
ಪಂಚಾಮೃತ ಅಭಿಷೇಕ : ಲಿಂಗಕ್ಕೆ ಐದು "ಅಮೃತ" ಅಥವಾ "ಮಕರಂದ" ಗಳಿಂದ ಅಭಿಷೇಕ ಮಾಡಲಾಗುತ್ತದೆ. ಅವುಗಳೆಂದರೆ ಹಾಲು, ಜೇನು, ತುಪ್ಪ, ಸಕ್ಕರೆ ಮತ್ತು ಮೊಸರು.
ಪಂಚ ಕಜ್ಜಾಯ : ಪಂಚಕಜ್ಜಾಯವು ಕರ್ನಾಟಕಕ್ಕೆ ಮಾತ್ರ ಸೀಮಿತವಾದ ವಿಶಿಷ್ಟವಾದ ಪ್ರಸಾದವಾಗಿದೆ. ಹಲವಾರು ವಿಧಗಳಲ್ಲಿ ಪಂಚ ಕಜ್ಜಾಯವನ್ನು ಮಾಡಬಹುದು. ಆದರೆ ಸಾಮಾನ್ಯವಾದವು ಹಸಿರು ಬೇಳೆ, ತೆಂಗಿನಕಾಯಿ, ಬೆಲ್ಲ, ಎಳ್ಳು, ಏಲಕ್ಕಿ ಮತ್ತು ತುಪ್ಪವನ್ನು ಬಳಸಿ ಕಜ್ಜಾಯ ತಯಾರು ಮಾಡಲಾಗುತ್ತದೆ. ಇದನ್ನು ಪ್ರಾರ್ಥನೆಯ ಸಮಯದಲ್ಲಿ ದೇವರಿಗೆ ನೈವೇದ್ಯವಾಗಿ ಅರ್ಪಿಸಲಾಗುತ್ತದೆ.
ಬಿಲ್ವಾರ್ಚನೆ : ಬಿಲ್ವಾರ್ಚನೆಯ ಸಮಯದಲ್ಲಿ ಬಿಲ್ವಪತ್ರೆಯ ಎಲೆಯನ್ನು ಶಿವನಿಗೆ ಅರ್ಪಣೆ ಮಾಡಲಾಗುತ್ತದೆ.
ಚಂದನ ಅಭಿಷೇಕ : ಶಿವಲಿಂಗಕ್ಕೆ ಚಂದನ ಅಥವಾ ಶ್ರೀಗಂಧದಿಂದ ಅಭಿಷೇಕವನ್ನು ಮಾಡಲಾಗುತ್ತದೆ.
ಬಸ್ಮಾರ್ಚನೆ : ಆರ್ಚನೆ ಮಾಡುವ ಸಂದರ್ಭದಲ್ಲಿ ಶಿವಲಿಂಗಕ್ಕೆ ಭಸ್ಮವನ್ನು ಹಚ್ಚಲಾಗುತ್ತದೆ.
ನವಗ್ರಹ ಪೂಜೆ : ಒಂಬತ್ತು ಗ್ರಹಗಳನ್ನು ಪ್ರತಿನಿಧಿಸುವ ಒಂಬತ್ತು ದೇವರುಗಳನ್ನು ಪೂಜಿಸಿದರೆ ವ್ಯಕ್ತಿಯ ಜೀವನದಲ್ಲಿ ಅದೃಷ್ಟ ಹೆಚ್ಚಾಗುತ್ತಂತೆ.
ಏಕಾದಶಿ ಪೂಜೆ : ಭಗವಾನ್ ಶಿವನಿಗೆ ಹನ್ನೊಂದು ರುದ್ರ ರೂಪಗಳಿವೆ ಎಂದು ಎಲ್ಲಾ ಪ್ರಮುಖ ಪುರಾಣಗಳಲ್ಲಿ ಉಲ್ಲೇಖವಾಗಿದೆ. ಭಕ್ತರು ಶ್ಲೋಕಗಳು ಮತ್ತು ಮಂತ್ರಗಳ ಮೂಲಕ ಶಿವನನ್ನು ಪೂಜಿಸುತ್ತಾರೆ. ಈ ಹನ್ನೊಂದು ರೂಪಗಳೆಂದರೆ ಮಹಾದೇವ, ಶಿವ, ಮಹಾ ರುದ್ರ, ಶಂಕರ, ನೀಲಲೋಹಿತ, ಈಶಾನ, ವಿಜಯ ರುದ್ರ, ಭೀಮ, ದೇವದೇವ, ಭಾವೋದ್ಭವ ಮತ್ತು ಆದಿತ್ಯಮಕ ಶ್ರೀರುದ್ರ.
ನಿತ್ಯ ಈ ಸೇವಗಳ ಜೊತೆಗೆ ಅನ್ನ ಸಂತರ್ಪಣೆ, ತಿಲಾರ್ಚನೆ, ಶಿವಸಹಸ್ರನಾಮ, ಸುದರ್ಶನ ಜಪ, ಲಲಿತಾ ಸಹಸ್ರನಾಮ ಪೂಜೆ, ಕುಂಕುಮಾರ್ಚನೆ, ದುರ್ಗಾ ಸಹಸ್ರನಾಮ, ಗಣಪತಿ ಮತ್ತು ಸುಬ್ರಹ್ಮಣ್ಯ ಸಹಸ್ರನಾಮ, ಮತ್ತು ಆಂಜನೇಯ ಸಹಸ್ರನಾಮ ಇತ್ಯಾದಿಗಳನ್ನು ನೆರವೇರಿಸಲಾಗುತ್ತದೆ.
ಮುರುಡೇಶ್ವರ ದೇವಾಲಯದಲ್ಲಿ ನಡೆಯುವ ವರ್ಷದ ಪೂಜೆ ಯಾವುದು?
- ಸರ್ವ ದೇವ ಪೂಜೆ
- ನಂದಾ ದೀಪ ಸೇವೆ
- ಅನ್ನ ಸಂತರ್ಪಣೆ ಸೇವೆ
ಮುರುಡೇಶ್ವರ ದೇವಾಲಯಕ್ಕೆ ಬರುವಾಗ ಡ್ರೆಸ್ ಕೋಡ್ ಹೇಗಿರಬೇಕು?
ಮುರುಡೇಶ್ವರ ದೇವಾಲಯದ ಒಳಗಡೆ ಇಂತಹದ್ದೇ ಬಟ್ಟೆಗಳನ್ನು ಹಾಕಬೇಕೆನ್ನುವ ನಿಯಮಗಳು ಇಲ್ಲ. ಆದರೆ ಆದಷ್ಟು ಸಭ್ಯಾ ರೀತಿ ಬಟ್ಟೆಗಳನ್ನು ಧರಿಸಿಕೊಂಡು ಬಂದು ದೇವರ ದರ್ಶನ ಪಡೆದರೆ ಒಳ್ಳೆಯದು.
ಮುರುಡೇಶ್ವರ ದೇವಾಲಯದಲ್ಲಿ ಯಾವೆಲ್ಲಾ ಹಬ್ಬಗಳನ್ನು ಆಚರಣೆ ಮಾಡಲಾಗುತ್ತದೆ?
- ಮಹಾಶಿವರಾತ್ರಿ
- ಕಾರ್ತಿಕ ಪೂರ್ಣಿಮಾ
ಸುತ್ತಲೂ ಅರಬ್ಬಿ ಸಮುದ್ರದಿಂದ ಸುತ್ತುವರೆದಿರುವ ಸುಂದರವಾದ ಮುರುಡೇಶ್ವರ ದೇವಾಲಯಕ್ಕೆ ಜೀವನದಲ್ಲಿ ಒಮ್ಮೆಯಾದರೂ ಭೇಟಿ ನೀಡಿ, ಮಹಾದೇವನ ಆಶೀರ್ವಾದವನ್ನು ಪಡೆಯಿರಿ.



Click it and Unblock the Notifications

