Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನವ ವಿವಾಹಿತರು ಮಂಗಳ ಗೌರಿ ವ್ರತ ಮಾಡಬೇಕು ಎಂದು ಹೇಳುವುದೇಕೆ?
ಶ್ರಾವಣ ಮಾಸದ ಸೋಮವಾರದಂತೆ ಪ್ರತಿ ಮಂಗಳವಾರ ಕೂಡ ತುಂಬಾನೇ ವಿಶೇಷವಾದದ್ದು, ಈ ದಿನ ಮಂಗಳ ಗೌರಿ ವ್ರತವನ್ನು ಆಚರಿಸಲಾಗುವುದು. ಅದಿಕ ಮಾಸದಿಂದ ಮಂಗಳ ಗೌರಿ ವ್ರತ ಪ್ರಾರಂಭವಾಗಿದೆ. ನಿಜ ಶ್ರಾವಣ ಮಾಸದ ಮೊದಲ ಹಾಗೂ ಈ ವರ್ಷದ 6ನೇ ಮಂಗಳ ಗೌರಿ ವ್ರತವನ್ನು ಆಗಸ್ಟ್ 22ಕ್ಕೆ ಆಚರಿಸಲಾಗುವುದು.
ಮಂಗಳ ಗೌರಿ ವ್ರತವನ್ನು ಮದುವೆಯಾದ ಐದು ವರ್ಷದೊಳಗೆ ಆಚರಿಸಬೇಕು, ಮೊದಲ ಮಂಗಳ ಗೌರಿ ವ್ರತವನ್ನು ತಾಯಿ ಮನೆಯಲ್ಲಿ ನಂತರ ಗಂಡನ ಮನೆಯಲ್ಲಿ ಮಂಗಳ ಗೌರಿ ವ್ರತವನ್ನು ಆಚರಿಸಲಾಗುವುದು. ಮದುವೆಯಾದ ಹೊಸತರಲ್ಲಿಯೇ ಮಂಗಳ ವ್ರತ ಮಾಡಬೇಕು ಏಕೆ ಎಂದು ನೋಡೋಣ ಬನ್ನಿ:

ಮಂಗಳ ಗೌರಿ ವ್ರತವನ್ನು ನವ ವಿವಾಹಿತರು ಆಚರಿಸುವುದರ ಹಿಂದಿರುವ ಕಾರಣವೇನು?
ನವ ವಿವಾಹಿತರು ತಾನು ಸೇರಿದ ಮನೆ ಚೆನ್ನಾಗಿರಬೇಕು, ಗಂಡನ ಆಯುಸ್ಸು ಹೆಚ್ಚಾಗ, ಸಂಪತ್ತು ವೃದ್ದಿಸಬೇಕು, ಸಂತಾನ ಭಾಗ್ಯ ದೊರೆಯಬೇಕೆಂದು ಮಂಗಳ ಗೌರಿ ವ್ರತವನ್ನು ಆಚರಿಸುತ್ತಾರೆ. ಇದರ ಮಹತ್ವವನ್ನು ಈ ಕತೆಯ ಮೂಲಕ ಹೇಳಲಾಗುವುದು:
ಮಹಿಷ್ಮತಿ ಎಂಬ ರಾಜ್ಯದಲ್ಲಿ ಜಯಪಾಲ ಎಂಬ ರಾಜನಿರುತ್ತಾರೆ. ಅವನಿಗೆ ಮಕ್ಕಳಿರುವುದಿಲ್ಲ, ಜಯಪಾಲ ಮತ್ತು ಆತನ ಪತ್ನಿ ಶಿವನನ್ನು ಪ್ರಾರ್ಥಿಸಿದಾಗ 16 ವರ್ಷ ಮಾತ್ರ ಆಯುಸ್ಸು ಇರುವ ಮಗನ ಜನನವಾಗುತ್ತದೆ ಅವನೇ ಶಿವಧರ್ಮ. ಅವನಿಗೆ ದೊಡ್ಡವನು ಆದಾಗ ತನ್ನಅಲ್ಪಾಯುಷ್ಯದ ಬಗ್ಗೆ ತಿಳಿಯುತ್ತದೆ, ಆತ ಕಾಶಿಯಾತ್ರೆ ಮಾಡಲು ತೀರ್ಮಾನಿಸಿ ತನ್ನ ಸೋದರ ಮಾವನ ಜೊತೆ ಕಾಶಿಯಾತ್ರೆಗೆ ಹೊರಡುತ್ತಾನೆ.
ಈತ ಹೀಗೆ ಹೋಗುವಾಗ ಪ್ರತಿಷ್ಠಾಪುರ ಎಂಬ ನಗರದ ಉದ್ಯಾನದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ಅಲ್ಲಿಯ ರಾಜನಿಗೆ ಅಶರೀರವಾಣಿಯೊಂದು ನಿನ್ನ ಮಗಳನ್ನು ಶಿವಧರ್ಮನಿಗೆ ಕೊಟ್ಟು ಮದುವೆ ಮಾಡುವಂತೆ ಸೂಚಿಸುತ್ತದೆ. ಆತನ ಮಗಳು ಸುಶೀಲೆ, ತುಂಬಾನೇ ದೈವ ಭಕ್ತೆ, ಆಕೆ ಶಿವಧರ್ಮನ ಪತ್ನಿಯಾಗುತ್ತಾಳೆ. ಹೀಗಿರುವಾಗ ಸುಶೀಲೆಗೆ ಕನಸ್ಸಿನಲ್ಲಿ ಮಂಗಳ ಗೌರಿ ಪ್ರತ್ಯಕ್ಷವಾಗಿ ನಿನ್ನ ಪತಿಗೆ ಅಲ್ಪಾಯುಷ್ಯ, ಕರಿ ನಾಗರ ಹಾವೊಂದು ಕಚ್ಚಿ ಸಾಯಿಸುತ್ತದೆ, ನೀನು ನಿನ್ನ ಗಂಡನ ಪ್ರಾಣ ಉಳಿಸಲು ಪ್ರಯತ್ನಿಸು . ಸರ್ಪ ಬಂದಾಗ ಹಾಲಿರುವ ಕಲಶವನ್ನು ಅದರ ಮುಂದೆ ಹಿಡಿ, ಅವು ಅದರೊಳಗೆ ಹೋದಾಗ ಅದರ ಬಾಯಿ ಮುಚ್ಚಿ, ನಂತರ ನಾಳೆ ಅದನ್ನು ನಿನ್ನ ತಾಯಿಗೆ ಬಾಗಿನವಾಗಿ ಕೊಡುವಂತೆ ಸೂಚಿಸುತ್ತಾಳೆ.
ದೇವಿ ಕನಸ್ಸಿನಲ್ಲಿ ಸೂಚಿಸಿದಂತೆಯೇ ಎಲ್ಲವೂ ನಡೆಯುತ್ತದೆ, ಮಾರನೇಯ ದಿನ ಆ ಕಲಶವನ್ನು ನೋಡಿದಾಗ ಅದರೊಳಗೆ ಚಿನ್ನದ ಹಾರವಿರುತ್ತೆ, ಶಿವಧರ್ಮ ತನ್ನ ಕಾಶಿಯಾತ್ರೆ ಮುಗುಸಿಕೊಂಡು ಬರಲು ಹೊರಡುತ್ತಾನೆ, ಹೀಗೆ ಹೊರಡುವ ಮುನ್ನ ಪತ್ನಿಗೆ ಉಂಗುರವನ್ನು ಬಿಚ್ಚು ಕೊಟ್ಟು ಹೊರಡುತ್ತಾನೆ.. ಇದಾಗಿ 5 ವರ್ಷಗಳ ಬಳಿಕ ಕಾಶಿಯಾತ್ರೆ ಮಗುಸಿ ಬರುತ್ತಾನೆ. ಅಲ್ಲಿಯವರೆಗೆ ಸುಶೀಲ ಮಂಗಳ ಗೌರಿ ವ್ರತ ಆಲಸಿಉತ್ತಾರೆ. ನಂತರ ಅವರಬ್ಬರು ಸುಖ ಜೀವನ ನಡೆಸುತ್ತಾರೆ. ಹೀಗಾಗಿ ಗಂಡ ಆಯುಸ್ಸು ಹೆಚ್ಚುವಂತೆ ಕೋರಿ ಮಂಗಳ ಗೌರಿ ವ್ರತ ಮಾಡಲಾಗುವುದು.
ನಿಜ ಶ್ರಾವಣದಲ್ಲಿ ಮಂಗಳ ಗೌರಿಯನ್ನು ಈ ದಿನಾಂಕಗಳಲ್ಲಿ ಆಚರಿಸಲಾಗುವುದು
ಆಗಸ್ಟ್ 22
ಆಗಸ್ಟ್ 29
ಸೆಪ್ಟೆಂಬರ್ 5
ಸೆಪ್ಟೆಂಬರ್ 12
ಈ ಮಂತ್ರ ಪಠಿಸಿ
ಓಂ ಉಮಾಮಹೇಶ್ವರಾಭ್ಯಂ ನಮಃ'
' ''ಓಂ ಪಾರ್ವತ್ಯೈ ನಮಃ''
ಓಂ ಗೌರ್ಯೇ ನಮಃ''
''ಓ ಸಾಂಬ ಶಿವಾಯ ನಮಃ''
''ಹೇ ಗೌರೀ ಶಂಕರಾರ್ಧಾಂಗೀ ಯಥಾ ತ್ವಂ ಶಂಕರ ಪ್ರಿಯಾ''
''ತಥಾ ಮಾಂ ಕುರೂ ಕಲ್ಯಾಣೀ, ಕಾಂತ ಕಾಂತಾಂ ಸುದುರ್ಲಭಾಂ''
''ಓಂ ಹ್ಲೀಂ ವಾಗ್ವಾದಿನೀ ಭಗವತೀ ಮಮಂ ಕಾರ್ಯ ಸಿದ್ಧಿ ಕುರೂ ಕುರೂ ಫಟ್ ಸ್ವಾಹಾ''



Click it and Unblock the Notifications