Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ರೈಲು ಹಳಿಗೆ ಬಿದ್ದ ಅಂಧ ತಾಯಿಯ ಕಂದಮ್ಮ, ಆಕೆ ಪಾಲಿಗೆ ದೇವರಾದ ಆ ವ್ಯಕ್ತಿ!
ಒಂದು ಕ್ಷಣ ತಡವಾಗಿದ್ದರೂ ಎಂಥ ಘನಘೋರ ಘಟನೆ ನಡೆಯುತ್ತಿತ್ತು ಎಂದು ಊಹಿಸಲೂ ಭಯವಾಗುತ್ತೆ. ಅಂಧ ತಾಯಿಯ ಕೈಹಿಡಿದು ಬರುತ್ತಿದ್ದ ಮಗು ರೈಲ್ವೆ ಹಳಿಗೆ ಬಿದ್ದು ಬಿಡುತ್ತೆ, ಅಲ್ಲಿಂದ ಟ್ರೈನ್ ಬರ್ತಾ ಇರುತ್ತದೆ, ಅಲ್ಲಿಗೆ ಮಿಂಚಿನ ವೇಗದಲ್ಲಿ ಓಡಿ ಬರುವ ರೈಲ್ವೆ ಸಿಬ್ಬಂದಿ ಆ ಮಗು-ತಾಯಿಯ ಪಾಲಿಗೆ ಸಾಕ್ಷಾತ್ ದೇವರಾಗಿದ್ದಾರೆ.
ಆಕೆ ಅಂಧೆ, ಪುಟ್ಟ ಮಗನಿದ್ದಾನೆ, ಆ ಮಗನೇ ಆಕೆಯ ಬದುಕಿನ ಕಣ್ಣುಗಳು, ಪೆನ್ನು ಮಾರಿ ಬದುಕಿ ಜೀವನ ಸಾಗಿಸುವ ಜೀವಗಳು, ರೈಲ್ವೆ ಫ್ಲಾಟ್‌ಫಾರಂನ ಮಗನ ಕೈಹಿಡಿದು ನಡೆಯುತ್ತಿದ್ದಳು. ಮಗನಿಗೆ 4-5 ವರ್ಷವಿರಬಹುದು. ಅವನ ಕೈ ಹಿಡಿದು ಎಲ್ಲಾ ಕಡೆ ಸಾಗುತ್ತಿದ್ದಳು, ಮಗ ಸ್ವಲ್ಪ ದೊಡ್ಡವನಾದ ಮೇಲೆ ಎಲ್ಲಾ ಕಡೆ ಹೋಗುವಾಗ ಮಗನ ಕೈ ಹಿಡದೇ ಹೋಗುತ್ತಿದ್ದಳು. ಅವನು ನನ್ನ ನಡೆಸಿಕೊಂಡು ಹೋಗುತ್ತಾನೆ ಎಂಬ ಧೈರ್ಯದಲ್ಲಿ ಹೋಗುತ್ತಿದ್ದಳು.

ಹೀಗೆ ರೈಲ್ವೆಫ್ಲಾಟ್‌ಫಾರಂ ಬಳಿ ನಡೆಯುವಾಗ ಮಗ ಅಚಾನಕ್ಕಾಗಿ ಸ್ಲಿಪ್ ಆಗಿ ಕೆಳಗೆ ಬೀಳುತ್ತಾನೆ. ತಾಯಿ ಮಗನಿಗಾಗಿ ತಡಕಾಡುತ್ತಿರುತ್ತಾಳೆ, ಅತ್ತ ಕಡೆಯಿಂದ ವೇಗವಾಗಿ ಟ್ರೈನ್ ಬರ್ತಾ ಇದೆ, ಮಗು ಬಿದ್ದಿದ್ದನ್ನು ನೋಡಿದ ರೈಲ್ವೆ ಸಿಬ್ಬಂದಿ ಓಡೋಡಿ ಬಂದಿ ಆ ಮಗುವನ್ನು ಎತ್ತಿ ಫ್ಲಾಟ್‌ಫಾರಂ ಬಿಟ್ಟು ತಾವೂ ಹತ್ತುತ್ತಾರೆ, ಇವೆಲ್ಲಾ ಕ್ಷಣಾರ್ಧದಲ್ಲಿ ನಡೆಯುತ್ತದೆ. ಒಂದು ಕ್ಷಣ ತಡವಾಗಿದ್ದರೂ ಮಗುವಿನ ಪ್ರಾಣ ಹೋಗುತ್ತಿತ್ತು, ಜೊತೆಗೆ ಆ ವ್ಯಕ್ತಿಯ ಪ್ರಾಣವೂ ಹೋಗುತ್ತಿತ್ತು, ಆದರೆ ಕಣ್ಣಿಲ್ಲದ ಆ ತಾಯಿ ಪಾಲಿಗೆ ದೇವರಾಗಿ ಬಂದು ಮಗುವಿನ ರಕ್ಷಣೆ ಮಾಡಿದ್ದಾರೆ ಆ ವ್ಯಕ್ತಿ.
ಮಗುವಿನ ಪ್ರಾಣವನ್ನು ರಕ್ಷಿಸಿದ ಆ ವ್ಯಕ್ತಿ ಹೆಸರು ಮಯೂರ್ ಶೆಲ್ಕೆ. ರೈಲ್ವೆಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ಧೈರ್ಯ ಮಾಡಿ ಮಗುವಿನ ರಕ್ಷಣೆ ಮಾಡಿದ್ದಕ್ಕೆ ಸೆಂಟ್ರಲ್ ರೈಲ್ವೆ ಮಯೂರ್ ಶೆಲ್ಕೆಯವರಿಗ 50 ಸಾವಿರ ಬಹುಮಾನ ನೀಡಿ ಗೌರವಿಸಲಾಯಿತು. ಅಲ್ಲಿಯೂ ಆ ವ್ಯಕ್ತಿ ದೊಡ್ಡ ಮನಸ್ಸು ಮಾಡಿದ್ದಾರೆ. ಆ 50 ಸಾವಿರ ರುಪಾಯಿಯನ್ನು ಕೂಡ ಆ ಗುವಿನ ಶಿಕ್ಷಣಕ್ಕೆ ಅಂತ ಆ ಅಂಧ ತಾಯಿಗೆ ನೀಡಿದ್ದಾರೆ. ದೇವರು ಯಾವುದೋ ಒಂದು ರೂಪದಲ್ಲಿ ಬರುತ್ತಾರೆ ಎಂದು ಹೇಳಲಾಗುವುದು. ಆ ಅಂಧ ಮಹಿಳೆಯ ಪಾಲಿಗೆ ಮಯೂರ್ ಶೆಲ್ಕೆ ದೇವರಾಗಿದ್ದಾರೆ.
ತಾನು ಇಷ್ಟೆಲ್ಲಾ ಸಾಹಸ ಮಾಡಿ ಮಗುವಿನ ಪ್ರಾಣ ಉಳಿಸಿ, ತನಗೆ ಬಂದ ರಿವಾರ್ಡ್ ಅನ್ನು ಕೂಡ ಆ ಮಗುವಿಗೆ ನೀಡಿದ ಮಯೂರ್ ಶೆಲ್ಕ್ ತಮ್ಮ ಪಾಡಿಗೆ ತಾವಿದ್ದರು. ಮನೆಗೆ ಹೋಗಿ ತಾನು ಮಾಡಿದ ಕೆಲಸವನ್ನು ಕೊಚ್ಚಿಕೊಳ್ಳಲಿಲ್ಲ, ಈ ವೀಡಿಯೋ ವೈರಲ್ ಆದ ಮೇಲಷ್ಟೇ ಅವರ ಕುಟುಂಬಕ್ಕೆ ಈ ವಿಷಯ ತಿಳಿಯಿತು. ಮಾನವೀಯತೆ ಗುಣದಿಂದಾಗಿ ಎಲ್ಲರ ಮನಗೆದ್ದಿದ್ದಾರೆ ಮಯೂರ್ ಶೆಲ್ಕ್.
ಇದು 2021ರಲ್ಲಿ ನಡೆದ ಘಟನೆ, ಈ ವೀಡಿಯೋ ಇದೀಗ ಮತ್ತೆ ವೈರಲ್ ಆಗುತ್ತಿದೆ.



Click it and Unblock the Notifications
