Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಶ್ರೀ ಕೃಷ್ಣ ಪದೇ ಪದೇ ನಿಮ್ಮ ಕನಸಿನಲ್ಲಿ ಬಂದರೆ ಏನರ್ಥ ಗೊತ್ತಾ!
ಕನಸುಗಳು ಯಾರಿಗೆ ಬೀಳೋದಿಲ್ಲ ಹೇಳಿ. ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಕನಸು ಬಿದ್ದೇ ಬೀಳುತ್ತದೆ. ಕೆಲವೊಂದು ಸಲ ಕೆಟ್ಟ ಕನಸುಗಳು ಬಿದ್ದರೆ, ಇನ್ನೂ ಅನೇಕ ಬಾರಿ ನಮ್ಮ ಮನಸ್ಸಿಗೆ ಸಂತೋಷ ನೀಡುವ ಸಿಹಿಗನಸುಗಳು ಬೀಳುತ್ತವೆ. ಒಳ್ಳೆಯ ಕನಸುಗಳು ಬಿದ್ದಾಗ ಎಷ್ಟು ಖುಷಿಯಾಗುತ್ತೋ, ಅದೇ ರೀತಿ ಕೆಟ್ಟ ಕನಸುಗಳು ಬಿದ್ದ ಸಂದರ್ಭದಲ್ಲಿ ಮನಸ್ಸಿನಲ್ಲಿ ಒಂದು ರೀತಿಯ ನೋವು ಇದ್ದೇ ಇರುತ್ತದೆ.

ಯಾವಾಗ ಏನು ಕೆಟ್ಟದಾಗುತ್ತೋ ಅನ್ನೋ ಭಯ ನಮ್ಮನ್ನು ಕಾಡದೇ ಇರೋದಿಲ್ಲ. ಅದೇ ರೀತಿ ನಿಮಗೇನಾದರೂ ಶ್ರೀ ಕೃಷ್ಣನ ಕನಸುಗಳು ಬೀಳ್ತಿದ್ಯಾ? ಒಂದು ವೇಳೆ ನಿಮಗೆ ಶ್ರೀ ಕೃಷ್ಣನ ಕನಸುಗಳು ಬಿದ್ದರೆ ಏನರ್ಥ ಅನ್ನೋದನ್ನು ತಿಳಿಯೋಣ.
ಶ್ರೀ ಕೃಷ್ಣನ ಹುಟ್ಟು ಹಬ್ಬವಾದ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ನಾವು ಆಚರಿಸಲಿದ್ದೇವೆ. ಈ ಹೊತ್ತಿನಲ್ಲಿ ನಿಮ್ಮ ಕನಸಿನಲ್ಲಿ ಪದೇ ಪದೇ ಶ್ರೀ ಕೃಷ್ಣ ಬರುತ್ತಿರಬಹುದು. ದೇವರು ನಮ್ಮ ಕನಸಿನಲ್ಲಿ ಬಂದಾಗ ನಮ್ಮ ಮನಸ್ಸಿನಲ್ಲಿ ಒಂದು ರೀತಿಯ ಭಯ ಇದ್ದೇ ಇರುತ್ತದೆ. ಇದರಿಂದ ಒಳ್ಳೆಯದಾಗುತ್ತಾ? ಕೆಟ್ಟದಾಗುತ್ತಾ? ಎಂದು. ಅಷ್ಟಕ್ಕೂ ಶ್ರೀ ಕೃಷ್ಣ ಕನಸಿನಲ್ಲಿ ಬಂದರೆ ಏನರ್ಥ ಅನ್ನೋದನ್ನು ತಿಳಿಯೋಣ.
1. ಮುಗುಳು ನಗುತ್ತಿರುವ ಶ್ರೀ ಕೃಷ್ಣ!
ಕನಸಿನಲ್ಲಿ ಗೋಪಾಲ ಕೃಷ್ಣನ ನಗು ಮುಖವನ್ನು ನೋಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಇದು ಕುಟುಂಬದಲ್ಲಿ ಸಂತೋಷ ಹೆಚ್ಚಾಗುವುದನ್ನು ಸೂಚಿಸುತ್ತದೆ. ಅಷ್ಟೇ ಅಲ್ಲದೇ, ಶೀಘ್ರದಲ್ಲೇ ನಿಮ್ಮ ವೃತ್ತಿಜೀವನದಲ್ಲಿ ಪ್ರಗತಿ ಕಂಡು ಬರುತ್ತದೆ.
2. ಮುಂಗೋಪಿ ಶ್ರೀ ಕೃಷ್ಣ!
ನೀವೇನಾದರೂ ಕನಸಿನಲ್ಲಿ ಮುಂಗೋಪಿ ಅಥವಾ ಕೋಪಗೊಂಡಿರುವ ಶ್ರೀ ಕೃಷ್ಣನನ್ನು ಕಂಡರೆ ಅದು ಅಶುಭದ ಸಂಕೇತವಾಗಿದೆ. ಹೀಗಾದರೆ ಖಂಡಿತ ನಿಮ್ಮಿಂದ ಏನಾದರೂ ತಪ್ಪಾಗಿದೆ ಎಂದರ್ಥ. ಹೀಗಾಗಿ ಆದಷ್ಟು ಶ್ರೀ ಕೃಷ್ಣನ ಭಕ್ತಿ, ಜ್ಞಾನದಲ್ಲಿ ತೊಡಗಿಕೊಳ್ಳುವುದು ಉತ್ತಮ.
3. ಮುದ್ದು ಕೃಷ್ಣ
ಕನಸಿನಲ್ಲಿ ಮುದ್ದು ಕೃಷ್ಣನನ್ನು ನೋಡುವುದು ಅತ್ಯಂತ ಮಂಗಳಕರ ಎಂದು ನಂಬಲಾಗಿದೆ. ಮತ್ತು ನೀವೇನಾದರೂ ಮಗುವಿನ ನಿರೀಕ್ಷೇಯಲ್ಲಿದ್ದರೆ ಆದಷ್ಟು ಬೇಗ ನೀವು ಮಗುವನ್ನು ಹೊಂದಲು ಸಾಧ್ಯವಾಗುತ್ತದೆ ಎಂಬುವುದನ್ನು ಇದು ಸೂಚಿಸುತ್ತದೆ.
4. ನಗು ನಗುತ್ತಿರುವ ಶ್ರೀ ಕೃಷ್ಣ!
ನಿಮ್ಮ ಕನಸಿನಲ್ಲಿ ಶ್ರೀಕೃಷ್ಣನು ನಗು ನಗುತ್ತಿದ್ದರೆ ನಿಮ್ಮ ಶತ್ರುಗಳು ನಾಶವಾಗಲಿದ್ದಾರೆ ಎಂದು ನಂಬಲಾಗಿದೆ. ಇದರರ್ಥ ಶೀಘ್ರದಲ್ಲೇ ನಿಮ್ಮ ಜೀವನದಲ್ಲಿರುವ ಅಡೆತಡೆಗಳು ಶ್ರೀಘ್ರದಲ್ಲೇ ನಿವಾರಣೆಯಾಗುತ್ತದೆ ಎಂದರ್ಥ.
5. ಶ್ರೀ ಕೃಷ್ಣ ತೂಗಾಡುತ್ತಿದ್ದರೆ!
ನೀವೇನಾದರೂ ನಿಮ್ಮ ಕನಸಿನಲ್ಲಿ ತೂಗಾಡುತ್ತಿರುವ ಗೋಪಾಲ ಕೃಷ್ಣನನ್ನು ಕಂಡರೆಅದು ಧನಾತ್ಮಕ ಸಂಕೇತವಾಗಿದೆ. ಇದರರ್ಥ ನೀವು ಶೀಘ್ರದಲ್ಲೇ ಕೆಲವು ಪ್ರಮುಖ ಕೆಲಸಗಳಲ್ಲಿ ಯಶಸ್ವಿಯಾಗಲಿದ್ದೀರಿ ಅನ್ನೋದನ್ನು ಸೂಚಿಸುತ್ತದೆ.
6. ಯಾವುದೇ ರೂಪದಲ್ಲಿ ಕೃಷ್ಣನನ್ನು ಕಂಡರೆ ಏನರ್ಥ!
ಒಬ್ಬ ವ್ಯಕ್ತಿ ತುಂಬಾ ವರ್ಷಗಳಿಂದ ಯಾವುದಾದರೂ ರೋಗಗಳಿಂದ ಬಳಲುತ್ತಿದ್ದರೆ ಅವನ ಕನಸಿನಲ್ಲಿ ಏನಾದರೂ ಶ್ರೀ ಕೃಷ್ಣ ಬಂದರೆ ಶೀಘ್ರದಲ್ಲೇ ಆ ವ್ಯಕ್ತಿ ಕಾಯಿಲೆಗಳಿಂದ ಮುಕ್ತಿ ಹೊಂದಲಿದ್ದಾನೆ ಎಂಬುವುದನ್ನು ಸೂಚಿಸುತ್ತದೆ.
ಶ್ರೀ ಕೃಷ್ಣ ಕನಸಿನಲ್ಲಿ ಬಂದರೆ ತುಂಬಾನೇ ಒಳ್ಳೆಯದು. ಯಾವುದಾದರೂ ರೂಪದಲ್ಲಿ ನಿಮ್ಮೆಲ್ಲಾ ಕಷ್ಟಗಳು ನಿವಾರಣೆಯಾಗುತ್ತದೆ ಅನ್ನೋದನ್ನು ಸೂಚಿಸುತ್ತದೆ.



Click it and Unblock the Notifications
