Latest Updates
-
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್! -
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್!
ರಾತ್ರಿ ಶ್ರೀ ಕೃಷ್ಣನ ಪೂಜೆಗೆ ಅಗತ್ಯವಾಗಿ ಬೇಕಾದ ವಸ್ತುಗಳಿವು!
ಈ ವರ್ಷ ಸೆಪ್ಟೆಂಬರ್ 6 ರಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಆಚರಿಸಲಾಗುತ್ತಿದೆ. ಹೆಚ್ಚಿನ ಕಡೆಗಳಲ್ಲಿ ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಸೆಪ್ಟೆಂಬರ್ 6 ರಂದು ಆಚರಿಸಿದರೆ, ವೈಷ್ಣವ ಪಂಥವನ್ನು ಅನುಸರಿಸುವ ಜನರು ಸೆಪ್ಟೆಂಬರ್ 7 ರಂದು ವಿಜೃಂಭಣೆಯಿಂದ ಈ ಹಬ್ಬವನ್ನು ಆಚರಿಸುತ್ತಾರೆ. ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಪ್ರತಿ ವರ್ಷ ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ಮಧ್ಯರಾತ್ರಿ ರೋಹಿಣಿ ನಕ್ಷತ್ರದಲ್ಲಿ ಆಚರಿಸಲಾಗುತ್ತದೆ.

ಈ ದಿನ ಶ್ರೀಕೃಷ್ಣನ ಜನ್ಮ ದಿನ ಆಗಿರೋದ್ರಿಂದ ಶ್ರೀ ಕೃಷ್ಣನನ್ನು ಮಗುವಿನ ರೂಪವನ್ನು ಪೂಜಿಸಲಾಗುತ್ತದೆ. ಜೊತೆಗೆ ಹಾಲು, ಮೊಸರು, ಜೇನುತುಪ್ಪ, ತುಪ್ಪ, ಗಂಗಾಜಲ ಇತ್ಯಾದಿಗಳಿಂದ ಚರಣಾಮೃತವನ್ನು ತಯಾರಿಸಿ ಮಧ್ಯರಾತ್ರಿಯಲ್ಲಿ ಅಭಿಷೇಕ ಮಾಡಲಾಗುತ್ತದೆ. ಹೆಚ್ಚಿನವರು ಶ್ರೀ ಕೃಷ್ಣನ ಪೂಜೆ ಮಾಡೋದಕ್ಕೆ ಇಷ್ಟ ಪಡುತ್ತಾರೆ.
ಆದರೆ ಅವರಿಗೆ ಪೂಜಾ ವಿಧಾನ ಹಾಗೂ ಅದಕ್ಕೆ ಯಾವೆಲ್ಲಾ ಸಾಮಾಗ್ರಿಗಳು ಬೇಕು ಅನ್ನೋದ್ರ ಬಗ್ಗೆ ಹೆಚ್ಚಿನ ಮಾಹಿತಿ ಇರೋದಿಲ್ಲ. ಅಷ್ಟಕ್ಕೂ ಶ್ರೀ ಕೃಷ್ಣನ ಪೂಜೆಗೆ ಯಾವೆಲ್ಲಾ ಸಾಮಾಗ್ರಿಗಳು ಮುಖ್ಯವಾಗಿಬೇಕು ಅನ್ನೋದನ್ನು ಒಂದೊಂದಾಗಿಯೇ ತಿಳಿಯೋಣ.
ಶ್ರೀ ಕೃಷ್ಣನ ಪೂಜೆಗೆ ಬೇಕಾದ ಸಾಮಾಗ್ರಿಗಳು!
ಶ್ರೀ ಕೃಷ್ಣನ ಪೂಜೆಗೆ ಮುಖ್ಯವಾಗಿ ಈ ವಸ್ತುಗಳು ಬೇಕಾಗುತ್ತದೆ. ಅವುಗಳು ಯಾವುದು ಅಂತ ನೊಡೋದಾದ್ರೆ ಅಗರಬತ್ತಿಗಳು, ಧೂಪದ್ರವ್ಯಗಳು, ಕುಂಕುಮ, ಕರ್ಪೂರ, ಸಿಂಧೂರ, ಶ್ರೀಗಂಧ, ಅಕ್ಷತೆ, ವೀಳ್ಯದೆಲೆಗಳು,
ಹೂವಿನ ಮಾಲೆ, ಅರಿಶಿನ, ಆಭರಣ, ಹತ್ತಿ, ತುಳಸಿ ಮಾಲೆ, ಗಂಗಾಜಲ, ಜೇನುತುಪ್ಪ, ತುಳಸಿ, ಗರಿಕೆ, ಐದು ತೆಂಗಿನ ಕಾಯಿಗಳು, ಸಕ್ಕರೆ, ಹಸುವಿನ ತುಪ್ಪ, ಹಸುವಿನ ಮೊಸರು, ಹಸುವಿನ ಹಾಲು, ಹಣ್ಣುಗಳು, ಸಣ್ಣ ಏಲಕ್ಕಿ, ಉಯ್ಯಾಲೆ, ಸಿಹಿತಿಂಡಿಗಳು, ಬಾಲ ಕೃಷ್ಣನ ವಿಗ್ರಹ, ದೇವರ ವಸ್ತ್ರ, ಬಾಳೆ ಎಲೆ, ಪಂಚಾಮೃತ, ದೀಪ, ತೆಂಗಿನಕಾಯಿ, ಹೂವು, ನವಿಲು ಗರಿಗಳು, ಕೊಳಲು, ಬೆಣ್ಣೆ, ಸಕ್ಕರೆ ಮಿಠಾಯಿ, ಸೌತೆಕಾಯಿ
ವೈಷ್ಣವ ಪಂಥದವರು ಸೆಪ್ಟೆಂಬರ್ 7 ರಂದು ಜನ್ಮಾಷ್ಟಮಿಯನ್ನು ಆಚರಿಸುತ್ತಾರೆ!
ಜನ್ಮಾಷ್ಟಮಿ ಹಬ್ಬವನ್ನು ಹೆಚ್ಚಾಗಿ 2 ದಿನಗಳ ಕಾಲ ಆಚರಿಸಲಾಗುತ್ತದೆ. ಸೆಪ್ಟೆಂಬರ್ 6 ಮತ್ತು ಸೆಪ್ಟೆಂಬರ್ 7ರಂದು ಈ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಎರಡು ದಿನಗಳ ಕಾಲ ವಿಶೇಷವಾಗಿ ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ವೈಷ್ಣವ ಪಂಥದ ಪ್ರಕಾರ ಈ ಹಬ್ಬವನ್ನು ವೈಷ್ಣವರು ಆಚರಣೆಯನ್ನು ಮಾಡುತ್ತಾರೆ.
ವೈಷ್ಣವರು ಯಾರು?
ವೈಷ್ಣವ ಪಂಥದಲ್ಲಿ ನಂಬಿಕೆಯುಳ್ಳವರು ಭಗವಾನ್ ವಿಷ್ಣು ಮತ್ತು ಅವನ ಅವತಾರಗಳಾದ ಶ್ರೀರಾಮ ಮತ್ತು ಶ್ರೀಕೃಷ್ಣನನ್ನು ಮಾತ್ರ ಪೂಜಿಸುತ್ತಾರೆ. ಅಷ್ಟಮಿ ತಿಥಿ ಒಂದು ದಿನ ಬಂದರೆ ಒಂದು ದಿನ ಮಾತ್ರ ಹಬ್ಬ ಆಚರಣೆ ಮಾಡಲಾಗುತ್ತದೆ. ಎರಡು ದಿನ ಅಷ್ಟಮಿ ಬಂದರೆ ಎರಡು ದಿನ ಆಚರಿಸಲಾಗುತ್ತದೆ. ಮೊದಲ ದಿನ ಸಾಮಾನ್ಯ ಜನ ಮತ್ತು ಎರಡನೇ ದಿನ ವೈಷ್ಣವ ಸಮುದಾಯದವರು ಈ ಹಬ್ಬವನ್ನು ಆಚರಿಸುತ್ತಾರೆ.
ಕೃಷ್ಣನ ಜನ್ಮದಂತಹ ಕಾಕತಾಳೀಯ ಘಟನೆಗಳು!
ಭಾದ್ರಪದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯು ಸೆ.6ರಂದು ಮಧ್ಯಾಹ್ನ 3.37ಕ್ಕೆ ಆರಂಭವಾಗಿ ಸೆ.7ರಂದು ಸಂಜೆ 4.14ಕ್ಕೆ ಮುಕ್ತಾಯವಾಗಲಿದೆ. ಈ ಬಾರಿ ಎರಡು ದಿನಗಳ ಕಾಲ ಅಷ್ಟಮಿಯು ಇರೋದ್ರಿಂದ ಈ ಹಬ್ಬವು ಸೆಪ್ಟೆಂಬರ್ 6 ಮತ್ತು 7 ರಂದು ಇರುತ್ತದೆ. ಆದರೂ ಹೆಚ್ಚಿನ ಜನರು ಸೆಪ್ಟೆಂಬರ್ 7 ರಂದು ಮಾತ್ರ ಹಬ್ಬವನ್ನು ಆಚರಿಸುತ್ತಾರೆ. ಏಕೆಂದರೆ ದೇವಸ್ಥಾನಗಳಲ್ಲಿ ಜನ್ಮಾಷ್ಟಮಿಯನ್ನು ಸೆಪ್ಟೆಂಬರ್ 7 ರಂದು ಮಾತ್ರ ಆಚರಿಸಲಾಗುತ್ತದೆ.
ಈ ಬಾರಿ ಸೆಪ್ಟೆಂಬರ್ 6 ಬುಧವಾರವೂ ಆಗಿದೆ. ಅಷ್ಟಮಿಯ ಜೊತೆಗೆ ರೋಹಿಣಿ ನಕ್ಷತ್ರವೂ ಇದೆ. ಈ ಕಾಕತಾಳೀಯವು ಶ್ರೀಕೃಷ್ಣನ ಕಾಲದಲ್ಲೂ ಆಗಿತ್ತು ಅಂತ ಹೇಳಲಾಗುತ್ತದೆ. 30 ವರ್ಷಗಳ ನಂತರ ಈ ಬಾರಿ ಈ ಕಾಕತಾಳೀಯ ಮತ್ತೆ ಸಂಭವಿಸುತ್ತಿದೆ.



Click it and Unblock the Notifications