Latest Updates
-
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು!
ಶ್ರೀ ಕೃಷ್ಣ ಜನ್ಮಾಷ್ಟಮಿ ದಿನ ಜಯಂತಿ ಯೋಗ! ಉಪಯೋಗಗಳೇನು?
ಈ ಬಾರಿಯ ಜನ್ಮಾಷ್ಟಮಿಯ ದಿನದಂದು ಜಯಂತಿ ಯೋಗ ಸೃಷ್ಟಿಯಾಗುತ್ತಿದೆ. ಹೀಗಾಗಿ ಈ ವರ್ಷದ ಜನ್ಮಾಷ್ಟಮಿ ಹಬ್ಬವೂ ಬಹಳ ಅಪರೂಪವೆಂಬಂತೆ ಪರಿಗಣಿಸಲಾಗುತ್ತಿದೆ. ಇನ್ನೂ ವಿಶೇಷವಾಗಿ ಈ ಬಾರಿ ಸೆಪ್ಟೆಂಬರ್ 6 ಮತ್ತು ಸೆಪ್ಟೆಂಬರ್ 7 ರಂದು ಜನ್ಮಾಷ್ಟಮಿ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ.

ಇದೇ ದಿನ ಜಯಂತಿ ಯೋಗ ಬಂದಿರೋದ್ರಿಂದ ತುಂಬಾನೇ ವಿಶೇಷವಾಗಿದೆ. ಅಷ್ಟಕ್ಕು ಜಯಂತಿ ಯೋಗ ಯಾವಾಗ ಮತ್ತು ಹೇಗೆ ರೂಪುಗೊಳ್ಳುತ್ತದೆ ಮತ್ತು ಅದರ ಪ್ರಯೋಜನಗಳೇನು ಎಂಬುದನ್ನು ತಿಳಿಯೋಣ.
ಜನ್ಮಾಷ್ಟಮಿಯಂದು ಅಪರೂಪದ ಕಾಕತಾಳೀಯವೇ ಜಯಂತಿ ಯೋಗ!
ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ ವರ್ಷ ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಹೆಚ್ಚಿನ ಕಡೆಗಳಲ್ಲಿ ಸೆಪ್ಟೆಂಬರ್ 6 ರಂದು ಆಚರಿಸಲಾಗುತ್ತದೆ. ಸೆಪ್ಟಂಬರ್ 6 ರಂದು ಮನೆಯವರು ಉಪವಾಸ ಮಾಡಿದರೆ ತುಂಬಾ ಒಳ್ಳೆಯದು ಅಂತ ಹೇಳಲಾಗುತ್ತದೆ.
ಈ ಬಾರಿ ಸೆಪ್ಟೆಂಬರ್ 6 ರಂದು ಎಲ್ಲಾ ಆರು ಅಂಶಗಳ ಭದ್ರ ಕೃಷ್ಣ ಪಕ್ಷ, ಮಧ್ಯರಾತ್ರಿ, ಅಷ್ಟಮಿ ತಿಥಿ, ರೋಹಿಣಿ ನಕ್ಷತ್ರ ಮತ್ತು ಈ ದಿನ ಚಂದ್ರನು ವೃಷಭ ರಾಶಿಯಲ್ಲಿ ಸಾಗುತ್ತಾನೆ. ಹಾಗೆಯೇ ಜನ್ಮಾಷ್ಟಮಿ ಬುಧವಾರ ಮತ್ತು ಸೋಮವಾರ ಸಂಭವಿಸಿದರೆ ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ.
ಈ ಬಾರಿ ಸೆಪ್ಟೆಂಬರ್ 6 ರಂದು ಅಪರೂಪದ ಕಾಕತಾಳೀಯವೆಂಬಂತೆ ಜನ್ಮಾಷ್ಟಮಿ ಸಂಭವಿಸುತ್ತಿದೆ. ಈ ರೀತಿ ಕಾಕತಾಳೀಯವಾದಾಗಲೆಲ್ಲ ಅದನ್ನು ಜಯಂತಿ ಯೋಗ ಎನ್ನುತ್ತಾರೆ. ಅದಕ್ಕಾಗಿಯೇ ಸೆಪ್ಟೆಂಬರ್ 6 ರಂದು ಜನ್ಮಾಷ್ಟಮಿಯಂದು ಮನೆಯವರು ಉಪವಾಸ ಮಾಡುವುದು ಮಂಗಳಕರವಾಗಿರುತ್ತದೆ. ಋಷಿಮುನಿಗಳು ಮತ್ತು ಸಂತರು ಸೆಪ್ಟೆಂಬರ್ 7 ರಂದು ಜನ್ಮಾಷ್ಟಮಿಯಂದು ಉಪವಾಸ ಮಾಡುತ್ತಾರೆ.
ಜಯಂತಿ ಯೋಗದ ಸಮಯದಲ್ಲಿ ಉಪವಾಸದ ಪ್ರಯೋಜನಗಳೇನು?
ಜ್ಯೋತಿಷ್ಯಶಾಸ್ತ್ರದ ಪ್ರಕಾರ ಜಯಂತಿ ಯೋಗದಲ್ಲಿ ಜನ್ಮಾಷ್ಟಮಿಯಂದು ಉಪವಾಸ ಮಾಡುವುದು ಮತ್ತು ಶ್ರೀ ಕೃಷ್ಣನನ್ನು ಪೂಜಿಸುವುದು ಮೂರು ಜನ್ಮಗಳ ಪಾಪಗಳಿಂದ ವ್ಯಕ್ತಿಯನ್ನು ಮುಕ್ತಗೊಳಿಸುತ್ತಂತೆ. ಅಷ್ಟಮಿ ತಿಥಿಯಂದು ರೋಹಿಣಿ ನಕ್ಷತ್ರ ಬಂದಾಗಲೆಲ್ಲ ಅದನ್ನು ಜಯಂತಿ ಯೋಗ ಎನ್ನುತ್ತಾರೆ.
ಜಯಂತಿ ಯೋಗದಲ್ಲಿ ಉಪವಾಸ ಮಾಡಿದ್ರೆ ಅನೇಕ ಪುಣ್ಯ-ಫಲಗಳನ್ನು ಪಡೆಯಲು ಸಾಧ್ಯವಾಗುತ್ತಂತೆ. ಇನ್ನೂ ಜನ್ಮಾಷ್ಟಮಿಯ ಎರಡನೇ ದಿನ ಪ್ರಸಾದವಾಗಿ ಕೆಲವು ಸಿಹಿತಿಂಡಿಗಳನ್ನು ವಿತರಿಸಿ. ಇದರ ಜೊತೆಗೆ ಬ್ರಾಹ್ಮಣರಿಗೆ ಅನ್ನಸಂತರ್ಪಣೆ ಮಾಡಿ. ಹೀಗೆ ಮಾಡುವುದರಿಂದ ಜನ್ಮಾಷ್ಟಮಿ ಹಬ್ಬದ ಪುಣ್ಯ ಖಂಡಿತಾ ಸಿಗುತ್ತದೆ ಎಂದು ನಂಬಲಾಗಿದೆ.



Click it and Unblock the Notifications
