Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಕರ್ಕ ಸಂಕ್ರಾಂತಿ 2023: ಎಲ್ಲರೂ ಎದುರು ನೋಡುತ್ತಿರುವ ಈ ದಿನದ ಮಹತ್ವವೇನು?
ವೈದಿಕ ಶಾಸ್ತ್ರದಲ್ಲಿ ಕರ್ಕ ಸಂಕ್ರಾಂತಿಗೆ ತುಂಬಾನೇ ಮಹತ್ವವಿದೆ, ಏಕೆಂದರೆ ಕರ್ಕ ಸಂಕ್ರಾಂತಿಯಿಂದ ದಕ್ಷಿಣಾಯನ ಪ್ರಾರಂಭ. ದಕ್ಷಿಣಾಯನದ ನಾಲ್ಕು ತಿಂಗಳು ಭಗವಾನ್ ಶ್ರೀ ವಿಷ್ಣು ಯೋಗ ನಿದ್ರೆಯಲ್ಲಿರುತ್ತಾನೆ. ವರ್ಷದಲ್ಲಿ ಎರಡು ಆಯನಗಳಿರುತ್ತದೆ, ಒಂದು ಉತ್ತರಾಯಣ, ಮತ್ತೊಂದು ದಕ್ಷಿಣಾಯನ. ಉತ್ತರಾಯಣದಲ್ಲಿ ಸೂರ್ಯ 6 ತಿಂಗಳಿದ್ದರೆ, ಇನ್ನು 6 ತಿಂಗಳು ದಕ್ಷಿಣಾಯಣದಲ್ಲಿ ಇರುತ್ತದೆ. ಕರ್ಕ ಸಂಕ್ರಾಂತಿಗಾಗಿ ಜನರು ಕಾಯುತ್ತಿರುತ್ತಾರೆ. ಕರ್ಕ ಸಂಕ್ರಾಂತಿಯಂದು ಪಿತೃ ತರ್ಪಣ ಮಾಡಲಾಗುವುದು, ಈ ದಿನ ಪಿತೃ ತರ್ಪಣ ಮಾಡುವುದರಿಂದ ಪಿತೃದೋಷದಿಂದ ಮುಕ್ತಿ ಸಿಗಲಿದೆ.

ಕರ್ಕ ಸಂಕ್ರಾಂತಿ ಯಾವ, ಶುಭ ಮುಹೂರ್ತ ಹಾಗೂ ಕರ್ಕ ಸಂಕ್ರಾಂತಿಯ ಮಹತ್ವವೇನು ಎಂದು ನೋಡೋಣ:
ಕರ್ಕ ಸಂಕ್ರಾಂತಿ ದಿನಾಂಕ ಮತ್ತು ಮುಹೂರ್ತ
ಕರ್ಕ ಸಂಕ್ರಾಂತಿ ಪುಣ್ಯ ಕಾಲ -ಜುಲೈ 16, ಮಧ್ಯಾಹ್ನ 12:27ರಿಂದ -ಸಂಜೆ 07.21ರವರೆಗೆ
ಕರ್ಕ ಸಂಕ್ರಾಂತಿ ಮಹಾ ಪುಣ್ಯ ಕಾಲ -ಜುಲೈ16, ಸಂಜೆ 05.03 - ರಾತ್ರಿ 07.21ರವರೆಗೆ
ಕರ್ಕ ರಾಶಿಗೆ ಸೂರ್ಯ ಸಂಚಾರ: ಜುಲೈ 17, ಬೆಳಗ್ಗೆ 05:19ಕ್ಕೆ
ಕರ್ಕ ಸಂಕ್ರಾಂತಿಯಿಂದ ದಕ್ಷಿಣಾಯನದ ಆರಂಭ
ಕರ್ಕ ಸಂಕ್ರಾಂತಿಯಿಂದಲೇ ದಕ್ಷಿಣಾಯಣ ಆರಂಭವಾಗುತ್ತದೆ. ಕರ್ಕ ರಾಶಿಯಲ್ಲಿ ಒಂದು ತಿಂಗಳ ಅವಧಿಯವರೆಗೆ ಇರುವ ಸೂರ್ಯ ನಂತರ ಸಿಂಹ ರಾಶಿಗೆ ಸಂಚರಿಸಲಿದೆ, ಹೀಗೆ ಪ್ರತಿ ತಿಂಗಳು ರಾಶಿ ಬದಲಾಯಿಸುತ್ತಾ ಧನು ರಾಶಿ ಪ್ರವೇಶ ಮಾಡುವವರೆಗೆ ದಕ್ಷಿಣಾಯನ, ನಂತರ ಉತ್ತಾರಾಯಣ ಪುಣ್ಯ ಕಾಲ ಪ್ರಾರಂಭವಾಗುವುದು.
ಕರ್ಕ ಸಂಕ್ರಾಂತಿಯಂದು ಸ್ನಾನ, ದಾನದ ಮಹತ್ವ
ಕರ್ಕ ಸಂಕ್ರಾಂತಿಯ ದಿನದಂದು ಸೂರ್ಯೋದಯಕ್ಕೆ ಮುನ್ನ ಎದ್ದು ಪುಣ್ಯನದಿಯಲ್ಲಿ ಸ್ನಾನ ಮಾಡಿ ಆಯುರಾರೋಗ್ಯಕ್ಕಾಗಿ ಸೂರ್ಯ ದೇವರನ್ನು ಪ್ರಾರ್ಥಿಸಲಾಗುವುದು. ಕರ್ಕ ಸಂಕ್ರಾಂತಿಯ ದಿನದಂದು ಭಗವಾನ್ ಶಿವ, ವಿಷ್ಣು ಮತ್ತು ಸೂರ್ಯ ದೇವರ ಆರಾಧನೆಗೆ ವಿಶೇಷ ಪ್ರಾಮುಖ್ಯತೆ ಇದೆ. ಈ ದಿನ ವಿಷ್ಣು ಸಹಸ್ತ್ರ ನಾಮ ಪಠಿಸಲಾಗುವುದು.
ಕರ್ಕ ಸಂಕ್ರಾಂತಿಯಿಂದ 4 ತಿಂಗಳವರೆಗೆ ಯಾವುದೇ ಶುಭ ಕಾರ್ಯವಾಗಲಿ, ಹೊಸ ಕೆಲಸವಾಗಲಿ ಪ್ರಾರಮಭ ಮಾಡುವುದಿಲ್ಲ. ಈ ಸಮಯದಲ್ಲಿ, ದಾನ, ಪೂಜೆ ಮತ್ತು ಪುಣ್ಯದ ಕಾರ್ಯಗಳನ್ನು ಮಾಡಲಾಗುವುದು.
ಕರ್ಕ ಸಂಕ್ರಾಂತಿಯ ಪೌರಾಣಿಕ ಕತೆ
ಭಗವಾನ್ ವಿಷ್ಣುವು ಸೃಷ್ಟಿಯ ಜವಾಬ್ದಾರಿಯನ್ನು ವಹಿಸಿಕೊಳ್ಳುವಾಗ ತುಂಬಾ ದಣಿದಿರುತ್ತಾನೆ. ಆಗ ಮಾತೆ ಲಕ್ಷ್ಮಿಯು ಸ್ವಲ್ಪ ಸಮಯದವರೆಗೆ ಮಹಾದೇವನಿಗೆ ಸೃಷ್ಟಿಯ ಚಿಂತೆ ಮತ್ತು ಹೊರೆಯನ್ನು ನೀಡಬೇಕೆಂದು ವಿಷ್ಣುವಿನಲ್ಲಿ ವಿನಂತಿಸುತ್ತಾಳೆ. ನಂತರ ಮಹಾದೇವ ಜಿ ಹಿಮಾಲಯದಿಂದ ಭೂಮಿಗೆ ಬರುತ್ತಾನೆ. 4 ತಿಂಗಳವರೆಗೆ ಮಹಾದೇವನು ಜವಾಬ್ದಾರಿ ತೆಗೆದುಕೊಳ್ಳುತ್ತಾನೆ. ನಂತರ ಶ್ರೀವಿಷ್ಣು ಯೋಗ ನಿದ್ದೆಯಿಂದ ಎಚ್ಚರವಾದ ಮೇಲೆ ಮಹಾದೇವ ಕೈಲಾಸಕ್ಕೆ ಹಿಂತಿರುಗುತ್ತಾರೆ ಎಂಬ ಪೌರಾಣಿಕ ಕತೆಯಿದೆ.
ಈ ಸಮಯದಲ್ಲಿ ಶಿವನು ಜವಾಬ್ದಾರಿ ತೆಗೆದುಕೊಳ್ಳುವುದರಿಂದ ಶ್ರಾವಣ ಮಾಸದಲ್ಲಿ ಶಿವನ ಆರಾಧನೆ ಮಾಡಲಾಗುವುದು. ಶ್ರಾವಣ ಮಾಸದಿಂದ ಹಬ್ಬಗಳು ಶುರುವಾಗುವುದು.
ಕರ್ಕ ಸಂಕ್ರಾಂತಿ ಪೂಜಾ ವಿಧಾನ
* ಕರ್ಕ ಸಂಕ್ರಾಂತಿಯ ದಿನದಂದು ಬೆಳಗ್ಗೆ ಬೇಗನೆ ಎದ್ದು ಪುಣ್ಯ ಸ್ನಾನ ಮಾಡಿ. ನಂತರ ಸೂರ್ಯನಿಗೆ ಆರ್ಘ್ಯ ಅರ್ಪಿಸಿ.
* ಆರ್ಘ್ಯವನ್ನು ಅರ್ಪಿಸಿದ ನಂತರ ಸೂರ್ಯ ಮಂತ್ರವನ್ನು ಪಠಿಸಲಾಗುತ್ತದೆ.
* ನಂತರ ವಿಷ್ಣು ದೇವರನ್ನು ಪೂಜಿಸಲಾಗುತ್ತದೆ.
* ಪೂಜೆಯ ನಂತರ ಸಹಸ್ತ್ರನಾಮ ಪಠಿಸಿ
ಹೀಗೆ ಮಾಡುವುದರಿಂದ ಶಾಂತಿ ಮತ್ತು ಅದೃಷ್ಟವನ್ನು ಪಡೆಯಬಹುದು.



Click it and Unblock the Notifications
