Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಜೂನ್ 17ಕ್ಕೆ ಶನಿ ಅಮವಾಸ್ಯೆ: ಶನಿಯ ಕೆಟ್ಟ ಪ್ರಭಾವ, ಪಿತೃದೋಷವಿದ್ದರೆ ಈ ಪರಿಹಾರ ಮಾಡಿ
ಹಿಂದೂ ಧರ್ಮದಲ್ಲಿ ಅಮವಾಸ್ಯೆಗೆ ಅದರದ್ದೇ ಆದ ಮಹತ್ವವಿದೆ, ಅದರಲ್ಲೂ ಅಮವಾಸ್ಯೆ ಶನಿವಾರ ಬಂದರೆ ಶನಿ ಅಮವಾಸ್ಯೆ ಎಂದು ಕರೆಯಲಾಗುವುದು. ಈ ವರ್ಷದ ಮೊದಲ ಶನಿ ಅಮವಾಸ್ಯೆ ಜನವರಿ 21ಕ್ಕೆ ಏರ್ಪಡಲಿದೆ. ಇದೀಗ ಜೂನ್ 17ಕ್ಕೆ ಶನಿ ಅಮವಾಸ್ಯೆ ಉಂಟಾಗಲಿದೆ. ಶನಿವಾರ ಶನಿ ದೇವರಿಗೆ ಮೀಸಲಾದ ದಿನ. ಈ ದಿನದಂದೇ ಅಮವಾಸ್ಯೆ ಬಂದರೆ ಅಮವಾಸ್ಯೆ ಬಂದರೆ ಶನಿ ಅಮವಾಸ್ಯೆ ಎಂದು ಕರೆಯಲಾಗುವುದು.
ಈ ಶನಿ ಅಮವಾಸ್ಯೆ ಮತ್ತೊಂದು ವಿಶೇಷವೆಂದರೆ ಬರೋಬರಿ 30 ವರ್ಷಗಳ ಬಳಿಕ ಶನಿಯು ಕುಂಭ ರಾಶಿಯಲ್ಲಿ ವಕ್ರೀಯವಾಗಿ ಚಲಿಸಲಿದೆ. ಶನಿ ಅಮವಾಸ್ಯೆಯಂದು ಶನಿ ದೋಷಕ್ಕೆ ಪರಿಹಾರ ಮಾಡಲು ಅತ್ಯಂತ ಸೂಕ್ತವಾದ ದಿನವೆಂದು ಪರಿಗಣಿಸಲಾಗಿದೆ. ಈ ದಿನದಂದು ಶನಿ ದೋಷಕ್ಕೆ ಪರಿಹಾರ ಮಾಡಲು ಹಾಗೂ ಪಿತೃದೋಷಕ್ಕೆ ಪರಿಹಾರ ಮಾಡಲು ಶ್ರೇಷ್ಠವಾಗಿದೆ. ಶನಿಯ ಸಾಡೇಸತಿ, ಧೈಯ ಅಥವಾ ಶನಿಯ ಮಹಾದಶಾ ಇರುವವರು ಈ ಶನಿ ಅಮಾವಾಸ್ಯೆಯಂದು ಶನಿ ಪರಿಹಾರವನ್ನು ಮಾಡಬೇಕು.

ಶನಿ ಅಮಾವಾಸ್ಯೆಯ ದಿನದಂದು ಈ ಪರಿಹಾರ ಮಾಡಿ:
- ಶನಿ ಅಮವಾಸ್ಯೆಯಂದು ಹಾಲಿಗೆ ಕಪ್ಪು ಎಳ್ಳು ಬೆರೆಸಿ ಶಿವನಿಗೆ ಅರ್ಪಿಸಿ. ಹೀಗೆ ಮಾಡುವುದರಿಂದ ಶನಿದೋಷದ ಪ್ರಭಾವದಿಂದ ಸಂಸಾರದಲ್ಲಿ ಉಂಟಾಗಿರುವ ಸಮಸ್ಯೆಗೆ ಪರಿಹಾರ ಸಿಗಲಿದೆ.
- ಶನಿ ದೇವಾಲಯಕ್ಕೆ ಹೋಗಿ ಕಪ್ಪು ಎಳ್ಳು ಹಾಗೂ ಎಳ್ಳೆಣ್ಣೆ ಅಥವಾ ಸಾಸಿವೆಯೆಣ್ಣೆ ಅರ್ಪಿಸಿ.
- ಶನಿ ಸಾಡೇಸಾತಿ, ಶನಿ ಧೈಯ್ಯ ಇರುವವರು ಉಪ್ಪು, ಸಾಸಿವೆ, ಎಳ್ಳನ್ನು ದಾನ ಮಾಡಿ. ಉದ್ದು ಹಾಗೂ ಸಕ್ಕರೆ ಮಿಶ್ರ ಮಾಡಿ ಇರುವೆಗಳಿಗೆ ಹಾಕಿ.
- ಈ ದಿನ ಎಳ್ಳು ಹಾಗೂ ಉದ್ದು ಮಿಶ್ರ ಮಾಡಿ ಮೀನುಗಳಿಗೆ ಹಾಕಿ
- ಬೆಳಗ್ಗೆ ಆಹಾರ ಸೇವಿಸುವ ಮುನ್ನ ಕರಿಮೆಣಸು ಅಗೆದು ಸೇವಿಸಿ.
- ಈ ದಿನ ನಿಮ್ಮ ಶಕ್ತಿಗೆ ಅನುಸಾರ ದಾನ ಮಾಡಿ.
- ಈ ದಿನದಿನ ನಿರ್ಗತಿಕರಿಗೆ ದಾನ ಮಾಡುವುದರಿಂದ ಕಷ್ಟಗಳು ಕಡಿಮೆಯಾಗುವುದು.
- ಶನಿ ಅಮವಾಸ್ಯೆಯಂದು ಕಪ್ಪು ಬಟ್ಟೆ ಧರಿಸಿ.
- ಬಡವರಿಗೆ ಕಪ್ಪು ರಗ್ ದಾನ ಮಾಡಿ.
ಪಿತೃದೋಷ ಪರಿಹಾರಕ್ಕೆ ಈ ದಿನ ಶ್ರೇಷ್ಠವಾಗಿದೆ
ಪಿತೃದೋಷವಿದ್ದರೆ ಅನೇಕ ಆರೋಗ್ಯ ಸಮಸ್ಯೆ, ವ್ಯವಹಾರದಲ್ಲಿ ನಷ್ಟ, ಕುಟುಂಬದದಲ್ಲಿ ಸಮಸ್ಯೆ, ಸಂತಾನಹೀನತೆ ಮುಂತಾದ ಸಮಸ್ಯೆ ಕಂಡು ಬರುವುದು. ಪಿತೃದೋಷಕ್ಕೆ ಶನಿ ಅಮವಾಸ್ಯೆಯಂದು ಪರಿಹಾರ ಮಾಡಿ.
ಅಲ್ಲದೆ ಶನಿಯ ಹಿಮ್ಮುಖ ಚಲನೆ ಕೂಡ ಇರುವುದರಿಂದ ಇದು ಕೂಡ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ಈ ಹಿಮ್ಮುಖ ಚಲನೆ ಕರ್ಕ, ಸಿಂಹ, ವೃಶ್ಚಿಕ ಮತ್ತು ಮೀನ ರಾಶಿಯವರಿಗೆ ಸಮಸ್ಯೆಗಳನ್ನು ಉಂಟುಮಾಡಬಹುದು. ಉಳಿದ ರಾಶಿಯವರ ಮೇಲೆ ಶನಿಯ ಹಿಮ್ಮುಖ ಚಲನೆಯ ಪರಿಣಾಮವು ಸಾಮಾನ್ಯವಾಗಿರುತ್ತದೆ. ಶನಿಯ ಹಿಮ್ಮುಖ ಚಲನೆಯಿಂದ ಕೆಟ್ಟ ಪ್ರಭಾವ ಎದುರಿಸುವ ರಾಶಿಯವರೂ ಈ ಪರಿಹಾರ ಮಾಡುವುದು ಒಳ್ಳೆಯದು.
ಶನಿ ಅಮವಾಸ್ಯೆಯ ದಿನ ಶನಿ ದೇವಾಲಯಕ್ಕೆ ಹೋಗಿ ಈ ಮಂತ್ರ ಪಠಿಸಿ
"ಓಂ ಹಿಲ್ಮ್ ಶಾಮ್ ಶನಾಯ ನಮ
" "ಓಂ ಪ್ರಾಮ್ ಪ್ರೀಮ್ ಪ್ರೌಮ್ ಸಹ ಶಾನೈಶ್ರಾಯ ನಮ"
"ಓಂ ಶಾಮ್ ಶನೇಶ್ಚಾರ ನಮಃ" "ಔಮ್ ಐಂಗ್ ಹರಿಂಗ್ ಶರಿಂಗ್ ಶಂಗ್ ಶನೈಶ್ಚರಾಯ ನಮ ಔಮ್"
ಶನಿ ಗಾಯತ್ರಿ ಮಂತ್ರ
ಓಂ ಶನೈಶ್ಚರಾಯ ವಿದ್ಮಯೇ
ಸೂರ್ಯಪುತ್ರಾಯ ದಹಿಮಹಿ ತನ್ನೊ ಮಂಡಾ ಪ್ರಚೋದಾಯತ್
ಶನಿ ಧ್ಯಾನ ಮಂತ್ರ
ನೀಲಂಜನ ಸಮಾಭಮ್ ರವಿಪುತ್ರಂ ಯಮಗ್ರಾಜಂ ಚಯಾ ಮಾರ್ತಾಂದ ಸಂಭಾತ್ ತಮ್ ನಮಮಿ ಶೈಶ್ಚರಂ



Click it and Unblock the Notifications
