Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಜುಲೈ 1ಕ್ಕೆ ಅಮರನಾಥ ಯಾತ್ರೆ ಪ್ರಾರಂಭ: ಹಿಂದೂಗಳಿಗೆ ಈ ಯಾತ್ರೆ ತುಂಬಾ ಮಹತ್ವವಾದದ್ದು, ಏಕೆ?
ಹಿಂದೂಗಳ ಅನೇಕ ಪವಿತ್ರ ಧಾರ್ಮಿಕ ಯಾತ್ರೆಗಳಲ್ಲಿ ಅಮರನಾಥ ಯಾತ್ರೆ ಕೂಡ ಒಂದಾಗಿದೆ. ಈ ಯಾತ್ರೆ ಎರಡು ತಿಂಗಳವರೆಗೆ ನಡೆಯಲಿದೆ. ಯಾರು ಅಮರನಾಥ ಯಾತ್ರೆ ಮಾಡುತ್ತಾರೋ ಅವರಿಗೆ 23 ಪುಣ್ಯ ಕ್ಷೇತ್ರಗಳ ದರ್ಶನ ಮಾಡಿ ಪುಣ್ಯ ಲಭಿಸುವುದು ಎಂದು ಹೇಳಲಾಗುವುದು. ಅಮರನಾಥ ಗುಹೆಯು ಶ್ರೀನಗರದ ಈಶಾನ್ಯದಿಮದ 145 ಕಿ. ಮೀ ದೂರದಲ್ಲಿರುವ ಕಾಶ್ಮೀರದಲ್ಲಿದೆ. ಇಲ್ಲಿಗೆ ಭಕ್ತರು ನೈಸರ್ಗಿಕವಾಗಿ ರೂಪುಗೊಂಡಿರುವ ಶಿವಲಿಂಗವನ್ನು ಕಣ್ತುಂಬಿಕೊಳ್ಳಲು ಬರುತ್ತಾರೆ.

ಅಮರನಾಥ ಧಾಮಕ್ಕೆ ಪ್ರಯಾಣವನ್ನು ಎರಡು ಮಾರ್ಗಗಳ ಮೂಲಕ ನಿರ್ಧರಿಸಲಾಗುತ್ತದೆ, ಒಂದು ಬಾಲ್ಟಾಲ್ ಮತ್ತು ಇನ್ನೊಂದು ಪಹಲ್ಗಾಮ್. ಗುಹೆಯನ್ನು ತಲುಪಲು ಶಿವನು ಪಹಲ್ಗಾಮ್ ಮಾರ್ಗವನ್ನು ಆರಿಸಿಕೊಂಡಿದ್ದಾನೆ ಎಂದು ನಂಬಲಾಗಿದೆ. ಶಿವನು ತಾಯಿ ಪಾರ್ವತಿಯನ್ನು ಏಕಾಂತ ಗುಹೆಯ ಕಡೆಗೆ ಕರೆದೊಯ್ಯುತ್ತಿದ್ದಾಗ, ಅವನು ಮೊದಲು ನಂದಿಯನ್ನು ತ್ಯಜಿಸಿದನು. ಇಂದು ಈ ಸ್ಥಳವನ್ನು ಪಹಲ್ಗಾಮ್ ಎಂದು ಕರೆಯಲಾಗುತ್ತದೆ.
ಪಹಲ್ಗಾಮ್ ಅಮರನಾಥನ ಪವಿತ್ರ ಗುಹೆಗೆ ವಾರ್ಷಿಕ ತೀರ್ಥಯಾತ್ರೆಯ ಪ್ರಾರಂಭದ ಸ್ಥಳವಾಗಿದೆ. ಇಲ್ಲಿಂದ ಪ್ರಯಾಣ ಆರಂಭವಾಗುತ್ತದೆ. ಅಮರನಾಥದ ಗುಹೆಯಲ್ಲಿ ಈ ಸಮಯದಲ್ಲಿ ಮಂಜು ಬಿದ್ದು ನೈಸರ್ಗಿಕವಾಗಿ ಶಿವಲಿಂಗ ರೂಪುಗೊಳ್ಳುತ್ತದೆ, ಶಿವನೇ ಇಲ್ಲಿ ನೆಲೆಸಿದ್ದಾನೆ ಎಂದು ಹೇಳಲಾಗುವುದು. ಭಕ್ತರು ಇಲ್ಲಿಗೆ ಬಂದು ಶಿವಲಿಂಗದ ದರ್ಶನ ಪಡೆದು ಹೋಗುತ್ತಾರೆ. ಇಲ್ಲಿದೆ ದೇಶದ ವಿವಿಧ ಮೂಲೆಗಳಿಂದ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.
ಅಮರನಾಥ ಗುಹೆಯಲ್ಲಿರುವ ಶಿವಲಿಂಗದ ಮಹತ್ವ
ಈ ಪವಿತ್ರ ಸ್ಥಳದಲ್ಲಿ ಶಿವನೇ ನೆಲೆಸಿದ್ದಾನೆ ಅದಕ್ಕೆ ಸಾಕ್ಷಿಯಾಗಿ ಇಲ್ಲಿ ಶಿವಲಿಂಗವೂ ನೈಸರ್ಗಿಕವಾಗಿ ರೂಪುಗೊಳ್ಳುತ್ತದೆ. ಇಲ್ಲಿಯ ಶಿವಲಿಂಗವು ಕಾಶಿಯ ಶಿವಲಿಂಗಕ್ಕಿಂತ 10 ಪಟ್ಟು, ಪ್ರಯಾಗ್‌ರಾಜ್ನಲ್ಲಿರುವ ಶಿವಲಿಂಗಕ್ಕಿಂತ 100 ಪಟ್ಟು ಅಧಿಕ ದೊಡ್ಡ ಗಾತ್ರದಲ್ಲಿರುತ್ತದೆ. ಇಲ್ಲಿಗೆ ಬಂದು ಶಿವಲಿಂಗವನ್ನು ದರ್ಶನ ಪಡೆಯುವುದು ಅಷ್ಟು ಸುಲಭವಲ್ಲ, ಹಲವಾರು ಸವಾಲುಗಳನ್ನು ಎದುರಿಸಬೇಕಾಗುವುದು. ಇಲ್ಲಿಗೆ ಬರುವಾಗ ನೈಸರ್ಗಿಕ ವಿಕೋಪದ ಅಪಾಯವೂ ಅಧಿಕ. ಆದರೂ ಅಮರನಾಥ ಗುಹೆಯಲ್ಲಿ ಶಿವಲಿಂಗದ ದರ್ಶನ ಪಡೆಯಲು ಭಕ್ತರು ಇಲ್ಲಿಗೆ ಬರುತ್ತಾರೆ, ಇಲ್ಲಿಗೆ ಭೇಟಿ ನೀಡಿದರೆ ತುಂಬಾನೇ ಪುಣ್ಯ ಫಲ ದೊರೆಯುವುದು ಎಂಬುವುದು ಭಕ್ತರ ಬಲವಾದ ನಂಬಿಕೆಯಾಗಿದೆ.
ಇಲ್ಲಿಗೆ ತಲುಪುವ ಮೊದಲು ಈ ನಾಲ್ಕು ಪುಣ್ಯ ಕ್ಷೇತ್ರಗಳು ದೊರೆಯುತ್ತದೆ, ಕೊನೆಗೆ ಗುಹೆಯನ್ನು ತಲುಪಲಾಗುವುದು.
ಚಂದನ್ ವಾಡಿ
ಪಹಲ್ಗಾಮ್‌ನಿಂದ ಕೆಲವು ಕಿಲೋಮೀಟರ್ ಮುಂದೆ ಚಲಿಸಿದಾಗ ಚಂದನ್‌ವಾಡಿ ಸಿಗಲಿದೆ. ಶಿವನು ತನ್ನ ತಲೆಯಿಂದ ಚಂದ್ರನನ್ನು ಬೇರ್ಪಡಿಸಿದ ಸ್ಥಳ ಇದು ಎಂದು ನಂಬಲಾಗಿದೆ. ಈ ಸ್ಥಳದ ಪ್ರತಿಯೊಂದು ಕಣವನ್ನು ಪವಿತ್ರವೆಂದು ಪರಿಗಣಿಸಲಾಗಿದೆ. ಇಲ್ಲಿರುವ ಮಣ್ಣನ್ನು ಭಕ್ತರು ತಲೆಗೆ ಹಚ್ಚಿಕೊಳ್ಳುತ್ತಾರೆ.
ಶೇಷನಾಗ ಸರೋವರ
ಅಲ್ಲಿಂದ ಸ್ವಲ್ಪ ಮುಂದೆ ಸಾಗಿದಾಗ ಸಿಗುವುದೇ ಶೇಷನಾಗ ಸರೋವರ. ಇಲ್ಲಿ ಮಹಾದೇವನು ತನ್ನ ಪ್ರೀತಿಯ ಹಾವು ವಾಸುಕಿಯನ್ನು ತನ್ನ ಕೊರಳಿನಿಂದ ತೆಗೆದನು ಎಂದು ಹೇಳಲಾಗುವುದು.
ಮಹಾಗುಣ ಪರ್ವತ
ಅಲ್ಲಿಂದ ಮುಂದೆ ಸಾಗಿದಾಗ ಮಹಾಗುಣ ಪರ್ವತ ಸಿಗುವುದು. ಈ ಸ್ಥಳದಲ್ಲಿ ಭಗವಂತ ತನ್ನ ಪ್ರೀತಿಯ ಮಗ ಗಣೇಶನನ್ನು ನಿಲ್ಲಿಸಿ ಕಾಯುವಂತೆ ಕೇಳಿಕೊಂಡಿದ್ದಾನೆ ಎಂಬ ಪೌರಾಣಿಕ ಕತೆಯಿದೆ. ಈ ಸ್ಥಳವನ್ನು ನೋಡಲು ತುಂಬಾನೇ ಸುಂದರವಾಗಿರುತ್ತದೆ.
ಕೊನೆಗೆ ಸಿಗುವುದೇ ಅಮರನಾಥ ಗುಹೆ
ಇಲ್ಲಿ ಶಿವಲಿಂಗವು ನೈಸರ್ಗಿಕವಾಗಿ ರೂಪುಗೊಂಡಿರುತ್ತದೆ. ಯಾರು ಈ ಶಿವಲಿಂಗದ ದರ್ಶನ ಪಡೆಯುತ್ತಾರೋ ಅವರು ತಮ್ಮ ಪಾಪಗಳಿಂದ ಮುಕ್ತರಾಗುತ್ತಾರೆ. 23 ಪುಣ್ಯ ಕ್ಷೇತ್ರಗಳನ್ನು ದರ್ಶನ ಮಾಡಿದ ಪುಣ್ಯ ಸಿಗುವುದು ಎಂದು ಹೇಳಲಾಗುವುದು.



Click it and Unblock the Notifications

