Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಜು.14 ಆಷಾಢ ಕೊನೆಯ ಶುಕ್ರವಾರ: ಲಕ್ಷ್ಮಿಗೆ ತುಪ್ಪದ ದೀಪ ಹಚ್ಚಿ ಈ ಮಂತ್ರಗಳನ್ನು ಹೇಳಿದರೆ ಸಂಪತ್ತು ವೃದ್ಧಿಸುವುದು
ಜುಲೈ 14ರಂದು ಆಷಾಢ ಕೊನೆಯ ಶುಕ್ರವಾರ, ಆಷಾಢ ಮಾಸದ ಶುಕ್ರವಾರದಂದು ಲಕ್ಷ್ಮಿ ಪೂಜೆಗೆ ತುಂಬಾನೇ ಮಹತ್ವವಿದೆ, ಈ ದಿನ ಲಕ್ಷ್ಮಿಯನ್ನು ಪೂಜಿಸಿದರೆ ಸಂಪತ್ತು ವೃದ್ಧಿಸುವುದು ಎಂದು ಹೇಳಲಾಗುವುದು. ನೀವು ಆಷಾಢ ಕೊನೆಯ ಶುಕ್ರವಾರದಂದು ಲಕ್ಷ್ಮಿಗೆ ತುಪ್ಪದ ದೀಪ ಹಚ್ಚಿ ಈ ಮಂತ್ರಗಳನ್ನು ಹೇಳಿದರೆ ಹಣಕಾಸಿನ ಸಮಸ್ಯೆ ದೂರಾಗಿ ಸಂಪತ್ತು ವೃದ್ಧಿಸುವುದು.

ನಮಸ್ತೇಸ್ತು ಮಹಾಮಾಯೇ ಶ್ರೀಪೀಠೇ ಸುರ ಪೂಜಿತೇ|
ಶಂಖಚಕ್ರ ಗದಾಹಸ್ತೇ ಮಹಾಲಕ್ಷ್ಮಿ ನಮೋಸ್ತುತೇ||
ಅರ್ಥ: ಹೇ ಮಹಾಮಾಯೇ ಸ್ವರೂಪಳೇ ಶ್ರೀ ಚಕ್ರವಾಸಿನಿ, ದೇವತೆಗಳಿಂದ ಪೂಜಿತಳಾಗಿರುವ ಶಂಖಚಕ್ರ ಗದೆಗಳನ್ನು ಧರಿಸಿದ ಶ್ರೀ ಮಹಾಲಕ್ಷ್ಮಿಯೇ ನಿನಗೆ ನಮಸ್ಕಾರಗಳು
ವಂದೇ ಲಕ್ಷ್ಮೀಂ ಪರಶಿವಮಮೀಂ ಶುದ್ಧಜಾಂಬೂನ ಧಾಭಾಂ
ತೇಜೋರೂಪಾಂ ಕನಕವಸನಾಂ ಸರ್ಪ ಭೂಷೋಜ್ಜ್ವಲಾಂಗೀಂ
ಬೀಜಾಪೂರಂ ಕನಕಲಶಂ ಹೇಮ ಪದ್ಮಂ ಧಧಾನಾಂ
ಆದ್ಯಾಂ ಶಕ್ತಿಂ ಸಕಲ ಜನನೀಂ ವಿಷ್ಣುವಾನಾಂಕಸಂ ಸ್ಥಾಮ್
ಪರಮಾತ್ಮ ಸ್ವರೂಪಿಣಿಯಾದ, ಬಂಗಾರದ ಮೈಕಾಂತಿಯುಳ್ಳ, ಚಿನ್ನದ ವಸ್ತ್ರ ಭೂಷಿತಳಾಗಿ ಸರ್ವಾಂಕಾರಭರಿತಳಾಗಿರುವ, ಸ್ವರ್ಣ ಕಲಶ, ಸ್ವರ್ಣ ಪದ್ಮಗಳನ್ನು ಧರಿಸಿರುವ ಆದಿ ಶಕ್ತಿ ಸ್ವರೂಪಿಣಿಯೇ, ಜಗಜ್ಜನನಿಯೇ, ವಿಷ್ಣುವಿನ ಎಡ ತೊಡೆಯ ಮೇಲೆ ಆಸೀನಳಾಗಿರುವ ಮಹಾಲಕ್ಷ್ಮಿಯೇ ನಿನಗೆ ನನ್ನ ನಮಸ್ಕಾರಗಳು
ಲಕ್ಷ್ಮಿಬೀಜ ಮಂತ್ರ
ಓಂ ಹ್ರೀಮ್ ಶ್ರೀಮ್ ಲಕ್ಷ್ಮೀಭ್ಯೋ ನಮಃ
ಓಂ ಶ್ರಿಂಗ್ ಶ್ರೀಯೆ ನಮಃ
ಲಕ್ಷ್ಮಿ ಗಾಯತ್ರಿ ಮಂತ್ರ
ಓಂ ಶ್ರೀ ಮಹಾಲಕ್ಷ್ಮೀಯೇ ಚ ವಿದಾಮಹೇ ವಿಷ್ಣು ಪತ್ನಿಯೇ ಚ ದೀಮಹಿ ತನ್ನೊ ಲಕ್ಷ್ಮೀ ಪ್ರಚೋದಯಾತ್ ಓಂ
ಮಹಾಲಕ್ಷ್ಮಿ ಮಂತ್ರ
ಓಂ ಸರ್ವಬಾಧಾ ವಿನಿರ್ಮುಕ್ತೋ, ಧನ್ ಧಾನ್ಯ್ ಸು ತನ್ವಿತಾಃ ಮನುಷ್ಯೊ ಮತಪ್ರಸಾದಿನ್ ಭವಿಷ್ಯತಿ ನ ಸನ್ಷ್ಯಾ ಓಂ
ಒಂಭತ್ತು ಮಹಾಲಕ್ಷ್ಮಿಯ ಹೆಸರುಗಳಿರುವ ಈ ಮಂತ್ರ ಪಠಿಸಿ
ಓಂ ಮಹಾಲಕ್ಷ್ಮಿ ನಮಃ
ಓಂ ಗಜಾ ಲಕ್ಷ್ಮಿ ನಮಃ
ಓಂ ಜಯ ಲಕ್ಷ್ಮಿ ನಮಃ
ಓಂ ಧನ ಲಕ್ಷ್ಮಿ ನಮಃ
ಓಂ ಸಂತಾನ ಲಕ್ಷ್ಮಿ ನಮಃ
ಓಂ ಸೀತಾ ಲಕ್ಷ್ಮಿ ನಮಃ
ಓಂ ಧೈರ್ಯಲಕ್ಷ್ಮಿ ನಮಃ
ಓಂ ಧಾನ್ಯ ಲಕ್ಷ್ಮಿ ನಮಃ
ಓಂ ವಿದ್ಯಾ ಲಕ್ಞ್ಮಿ ನಮಃ



Click it and Unblock the Notifications
