Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಆಸ್ತಿಗಿಂತ ಹೆಚ್ಚು ದಾನ ಮಾಡಿದ ಜೆಮ್‌ಸೆಟ್‌ಜಿ ಟಾಟಾ..! ಯಾರು ಗೊತ್ತಾ ಈ ಮಹಾದಾನಿ..!
ಭಾರತದ ಬೃಹತ್ ಉದ್ಯಮ ಟಾಟಾ ಗ್ರೂಪ್ ಬಗ್ಗೆ ನಿಮಗೆಲ್ಲಾ ಗೊತ್ತಿರುತ್ತದೆ. ವಿಶ್ವದ ಅಗ್ಗದ ಕಾರಿನಿಂದ ಹಿಡಿದು ಭಾರತದ ವಾಹನ ಕ್ಷೇತ್ರದಲ್ಲಿ ತನ್ನದೇ ಮಾರುಕಟ್ಟೆ ಹಿಡಿತ ಸಾಧಿಸಿರುವ ಕಂಪನಿಯಾಗಿದೆ. ಸದ್ಯಕ್ಕೀಗ ರತನ್ ಟಾಟಾ ಈ ಕಂಪನಿಯ ಮುನ್ನಡೆಸುತ್ತಿದ್ದಾರೆ. ಅವರ ಬಗ್ಗೆಯೂ ನೀವು ಕೇಳಿರುತ್ತೀರ. ಆದ್ರೆ ಈ ಕಂಪನಿ ಹುಟ್ಟಿದ್ದೆಲ್ಲಿ. ಜಮ್‌ಸೆಟ್‌ಜಿ ಟಾಟಾ ಬಗ್ಗೆ ಎಂದಾದ್ರು ಕೇಳಿದ್ದೀರಾ?
ಹೌದು ಜೆಮ್‌ಸೆಟ್‌ಜಿ ಟಾಟಾ ಈ ಕಂಪನಿಯ ಸಂಸ್ಥಾಪಕನ ಬಗ್ಗೆ ನೀವೆಂದು ಕೇಳಿರಲು ಸಾಧ್ಯವಿಲ್ಲ. ಅತ್ಯಧಿಕ ಆಸ್ತಿಯನ್ನು ದಾನವಾಗಿ, ಸಮಾಜ ಸೇವೆಗಾಗಿ ದೇಣಿಗೆ ನೀಡಿದರವ ಸಾಲಿನಲ್ಲಿ ಇವರ ಹೆಸರು ಈಗಲೂ ಮೊದಲ ಸ್ಥಾನದಲ್ಲಿದೆ ಎಂದರೆ ನಂಬುತ್ತೀರಾ? ಹೌದು ಈ ಪಟ್ಟಿಯಲ್ಲಿ ದಶಕಗಳಿಂದಲೂ ಜೆಮ್‌ಸೆಟ್‌ಜಿ ಟಾಟಾ ಹೆಸರು ಇದೆ. ಹಾಗಾದರೆ ಯಾರು ಈ ಜೆಮ್‌ಸೆಟ್‌ಜಿ ಟಾಟಾ?

ಜೆಮ್‌ಸೆಟ್‌ಜಿ ಟಾಟಾ ಟಾಟಾ ಗ್ರೂಪ್ ಅನ್ನು ಹುಟ್ಟಿಹಾಕಿದವರು. 1868ರಲ್ಲಿ ಟಾಟಾ ಗ್ರೂಪ್ ಅನ್ನು ಸ್ಥಾಪಿಸಿದ ನಂತರದ ಮೊದಲ ಮೂರು ದಶಕಗಳಲ್ಲಿ, ಜಮ್ಸೆಟ್ಜಿ ಈಗಾಗಲೇ ಅತ್ಯಂತ ಯಶಸ್ವಿ ಜವಳಿ ಗಿರಣಿಗಳನ್ನು ಸ್ಥಾಪಿಸಿದ್ದರು. ನಾಗ್ಪುರದಲ್ಲಿ ಎಂಪ್ರೆಸ್ ಮಿಲ್ಸ್, ಮುಂಬೈನಲ್ಲಿ ಸ್ವದೇಶಿ ಮಿಲ್ಸ್ ಮತ್ತು ಅಹಮದಾಬಾದ್ನಲ್ಲಿ ಅಡ್ವಾನ್ಸ್ ಮಿಲ್ಸ್ ಎಂಬ ಸಂಸ್ಥೆ ಕಟ್ಟಿದ್ದರು.
ಜಮ್ಶೆಡ್‌ಪುರದಲ್ಲಿ ಭಾರತದ ಮೊದಲ ಸಂಯೋಜಿತ ಉಕ್ಕಿನ ಕಾರ್ಖಾನೆಯನ್ನು ತೆರೆದರು. ಅದು ಟಾಟಾ ಸ್ಟೀಲ್ ಆಗಿ ಈಗ ದೈತ್ಯ ಕಂಪನಿಯಾಗಿದೆ. ಮುಂಬೈನಲ್ಲಿ ಅಸಾಧಾರಣ ತಾಜ್ ಮಹಲ್ ಹೋಟೆಲ್ ಅನ್ನು ಸ್ಥಾಪಿಸಲು ಕೆಲಸ ಮಾಡಲು ಪ್ರಾರಂಭಿಸಿದರು. ಅವರು ಬೆಂಗಳೂರಿನಲ್ಲಿ ಭಾರತದ ಮೊದಲ ಪೂರ್ಣ ಪ್ರಮಾಣದ ವಿಜ್ಞಾನ ಸಂಶೋಧನಾ ವಿಶ್ವವಿದ್ಯಾನಿಲಯ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಅನ್ನು ರಚಿಸಲು ಪ್ರಾರಂಭಿಸಿದರು ಮತ್ತು ಭಾರತೀಯರಿಗೆ ವಿದೇಶದಲ್ಲಿ ಉನ್ನತ ಶಿಕ್ಷಣಕ್ಕಾಗಿ ದೇಶದ ಮೊದಲ ವಿದ್ಯಾರ್ಥಿವೇತನವನ್ನು ಪ್ರಾರಂಭಿಸಿದರು.
1890 ದಶಕದ ವಿನಾಶಕಾರಿ ಬುಬೊನಿಕ್ ಪ್ಲೇಗ್ ನಂತರ ಆಹಾರ ಪೂರೈಕೆಯನ್ನು ಹೆಚ್ಚಿಸಲು ಮತ್ತು ನಿರಂತರ ಕೊರತೆಯನ್ನು ತಡೆಗಟ್ಟಲು ಅವರು ಹಣ್ಣುಗಳು ಮತ್ತು ಮೀನುಗಳಿಗಾಗಿ ಶೀತಲ ಶೇಖರಣಾ ಘಟಕವನ್ನು ಸ್ಥಾಪಿಸಲು ಬಯಸಿದ್ದರು. ಆದ್ದರಿಂದ, 1900ರ ಸುಮಾರಿಗೆ, ಅವರು ಈಗ ಛತ್ರಪತಿ ಶಿವಾಜಿ ಮಹಾರಾಜ್ ವಸ್ತು ಸಂಗ್ರಹಾಲಯ (ಹಿಂದೆ ಪ್ರಿನ್ಸ್ ಆಫ್ ವೇಲ್ಸ್ ಮ್ಯೂಸಿಯಂ ಎಂದು ಕರೆಯಲಾಗುತ್ತಿತ್ತು) ಆಕ್ರಮಿಸಿಕೊಂಡಿರುವ ಭೂಮಿಯಲ್ಲಿ ಬೃಹತ್ ಕಟ್ಟಡವನ್ನು ನಿರ್ಮಿಸಲು ಯೋಜನೆಗಳನ್ನು ರೂಪಿಸಲು ಪ್ರಾರಂಭಿಸಿದರು.
ಇನ್ನು ಜೆಮ್‌ಸೆಟ್‌ಜಿ ಟಾಟಾ ಅಂದಿನ ಕಾಲದಲ್ಲೇ ದೇಣಿಗೆ ನೀಡುವುದು, ಸಮಾಜ ಮುಖಿ ಕಾರ್ಯದಲ್ಲಿ ನಿರತರಾಗಿದ್ದರು. ಅವರು ತಮ್ಮ ಒಟ್ಟು ಆಸ್ತಿಯಲ್ಲಿ ಇಂದಿನ ದಿನಕ್ಕೆ ಹೋಲಿಸಿದರೆ ಬರೋಬ್ಬರಿ 102 ಬಿಲಿಯನ್ ಡಾಲರ್ ದಾನವಾಗಿ ನೀಡಿದ್ದರಂತೆ. ಭಾರತೀಯ ರೂಪಾಯಿಯಲ್ಲಿ ಸುಮಾರು 200 ಕೋಟಿ ರೂಪಾಯಿಯಾಗುತ್ತದೆ. ಇವರ ನಂತರ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ($74.6 ಬಿಲಿಯನ್), ವಾರೆನ್ ಬಫೆಟ್ ($37.4 ಶತಕೋಟಿ), ಜಾರ್ಜ್ ಸೊರೊಸ್ ($34.8 ಶತಕೋಟಿ), ಮತ್ತು ಜಾನ್ ಡಿ ರಾಕ್‌ಫೆಲ್ಲರ್ ($26.8 ಶತಕೋಟಿ) ಸ್ಥಾನ ಪಡೆದಿದ್ದಾರೆ.
ರತನ್ ಟಾಟಾಗೂ ಜೆಮ್‌ಸೆಟ್‌ಜಿ ಟಾಟಾಗೂ ಏನು ಸಂಬಂಧ
ನೀವು ಅಚ್ಚರಿ ಪಡುವಂತಹ ವಿಷಯವೇನೆಂದರೆ ಜೆಮ್‌ಸೆಟ್‌ಜಿ ಟಾಟಾ ಈಗಿನ ರತನ್ ಟಾಟಾ ಅವರ ಮುತ್ತಾತ ಆಗಿದ್ದಾರೆ. ಜೆಮ್‌ಸೆಟ್ ಟಾಟಾ ಅವರ ಪುತ್ರರು ರತನ್‌ಜಿ ಟಾಟಾ, ದೊರಬ್ಜಿ ಟಾಟಾ, ರತನ್‌ಜಿ ಟಾಟಾ ಪುತ್ರ ನಾವಲ್ ಟಾಟಾ, ನಾವಲ್ ಟಾಟಾ ಪುತ್ರ ರತನ್ ಟಾಟಾ, ನಿಯೋಲ್ ಟಾಟಾ, ಜಿಮ್ಮಿ ನಾವಲ್ ಟಾಟಾ ಆಗಿದ್ದಾರೆ. ಇದ್ರಲ್ಲಿ ವಾವಲ್ ಟಾಟಾ ಅವರ ಪುತ್ರ ಈಗಿನ ರತನ್ ಟಾಟಾ ಆಗಿದ್ದಾರೆ. ಮೂರು ತಲೆಮಾರುಗಳು ಕಳೆದರು ಟಾಟಾ ಗ್ರೂಪ್ ಈಗಲೂ ಸೇವೆ ನೀಡುತ್ತಲೇ ಬಂದಿದೆ. ಈಗಲೂ ರತನ್ ಟಾಟಾ ತಮ್ಮ ಒಟ್ಟು ಗಳಿಕೆಯ ಬಹುಪಾಲು ಆಸ್ತಿಯನ್ನು ಸಮಾಜ ಮುಖಿ ಕಾರ್ಯಕ್ಕೆ ಮೀಸಲಿಟ್ಟಿದ್ದಾರೆ.



Click it and Unblock the Notifications

