Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಜುಲೈ 14ಕ್ಕೆ ಉಡಾವಣೆಯಾಗಲಿರುವ ಚಂದ್ರಯಾನ 3ವಿಕ್ರಮ್ ಕುರಿತ 6ಆಸಕ್ತಿಕರ ಸಂಗತಿಗಳು
ಇಡೀ ವಿಶ್ವವೇ ಭಾರತದ ಕಡೆ ಕುತೂಹಲ ಕಣ್ಣಿನಿಂದ ನೋಡುತ್ತಿದೆ, ಅದಕ್ಕೆ ಕಾರಣ ಚಂದ್ರಯಾನ 3 ಉಡಾವಣೆ. ಇಸ್ರೋದ ಮಹಾತ್ವಾಕಾಂಕ್ಷೆ ಯೋಜನೆಗೆ ಕ್ಷಣಗಣನೆ ಶುರುವಾಗಿದೆ. ಚಂದ್ರಯಾನ 3 ತ್ರಿವಿಕ್ರಮ ಜುಲೈ 14, 2:35ಕ್ಕೆ ಭೂಮಿಯನ್ನು ಬಿಟ್ಟು ಚಂದ್ರನ ಕಕ್ಷೆಯತ್ತ ಸಾಗಲಿದೆ. ಈ ಮೂಲಕ ಭಾರತ ಹೊಸ ಸಾಧನೆಯತ್ತ ಹೆಜ್ಜೆ ಹಾಕಲಿದೆ. ಚಂದ್ರಯಾನ 3 ತ್ರಿವಿಕ್ರಮದ ಕುರಿತ ಕೆಲ ಆಸಕ್ತಿಕರ ಸಂಗತಿಗಳ ಕುರಿತು ನೋಡೋಣ:
1. ಚಂದ್ರಯಾನ 3 ತ್ರಿವಿಕ್ರಮ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲಿದೆ. ಜುಲೈ 14 ಮಧ್ಯಾಹ್ನ 2:30ಕ್ಕೆ ಶ್ರೀಹರಿ ಕೂಟದಿಂದ ಎಲ್‌ವಿಎಂ3 ರಾಕೆಟ್ ಉಡಾವಣೆಯಾಗಲಿದೆ.

2. ವಿಕ್ರಮ ಲ್ಯಾಂಡರ್‌ನ ಕಾರ್ಯವೇನು?
ಇಂದು ಉಡಾವಣೆಯಾದ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈ ತಲುಪಲು ಸುಮಾರು 43 ದಿನಗಳು ಬೇಕು. ಆದ್ದರಿಂದ ಜುಲೈ 14ರಂದು ಭೂಮಿಯಿಂದ ಹೊರಡ ವಿಕ್ರಮ್ ಲ್ಯಾಂಡರ್ ಆಗಸ್ಟ್ 22 ಅಥವಾ 23ರಂದು ಚಂದ್ರನ ಮೇಲ್ಮೈಗೆ ಇಳಿದು ಚಂದ್ರನ ಕಕ್ಷೆಯ ಸುತ್ತಲು ಸುತ್ತಲಿದೆ.
ಚಂದ್ರಯಾನ 2 ವೈಫಲ್ಯದಿಂದ ಪಾಠ ಕಲಿತ ಇಸ್ಟ್ರೋ ಹಲವು ಬದಲಾವಣೆಗಳ ಮೂಲಕ ಚಂದ್ರನತ್ತ ಹೆಜ್ಜೆ ಇರಿಸಿದೆ
- ಭಾರತದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದ ಚಂದ್ರಯಾನ 2 ವೈಫಲ್ಯವಾಗಿತ್ತು. ಇನ್ನೇನು ಚಂದ್ರನ ಮೇಲೆ ಇಳಿಯಬೇಕು ಎನ್ನುವಷ್ಟರಲ್ಲಿ, ಸಂಪರ್ಕ ಕಳೆದುಕೊಂಡು ತೀವ್ರ ನಿರಾಸೆ ಉಂಟು ಮಾಡಿತ್ತು. ವಿಜ್ಞಾನಿಗಳಷ್ಟೇ ಅಲ್ಲ ಇಡೀ ಭಾರತೀಯರು ಅಯ್ಯೋ ಹೀಗಾಯ್ತಲ್ಲ ಎಂದು ಬೇಸರ ಪಟ್ಟುಕೊಂಡಿದ್ದರು. ಆದರೆ ನಮ್ಮ ವಿಜ್ಞಾನಿಗಳು ಈ ಬಾರಿ ಎಲ್ಲಾ ರೀತಿಯಲ್ಲೂ ಪರೀಕ್ಷೆ ಮಾಡಿ, ಮತ್ತೊಂದು ಚಂದ್ರಯಾನಕ್ಕೆ ಸಿದ್ಧವಾಗಿದೆ.
3. ಚಂದ್ರಯಾನ 3 ಮಿಷನ್‌ಗೆ ವಿಜ್ಞಾನಿಗಳು ವಿಕ್ರಮ್ ಎಂದು ಹೆಸರಿಡಲಾಗಿದೆ.
4. GSLV Mk III ಅಥವಾ LVM3 ಹೆಸರಿನ ರಾಕೆಟ್ 3,900ಕೆಜಿ ತೂಕದ ಚಂದ್ರಯಾನ 3 ತೆಗೆದು ಚಂದ್ರನ ಕಕ್ಷೆಯತ್ತ ಸಾಗಲಿದೆ.
5. ವಿಕ್ರಮ್ ಕಾರ್ಯವೇನು?
* ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೆ ತಲುಪುತ್ತಿದ್ದಂತೆ ಪ್ರಗ್ಯಾನ್ ಎಂಬ ರೋಬೋ ಹೊರಬರಲಿದು, ಅದು ಅಲ್ಲಿರುವ ಖನಿಜಾಂಶಗಳ ಬಗ್ಗೆ ಅಧ್ಯಯನ ಮಾಡಿ ಮಾಹಿತಿಯನ್ನು ಇಸ್ರೋಗೆ ರವಾನಿಸಲಿದೆ.
* ಚಂದ್ರನ ವಾತಾವರಣದ ಬಗ್ಗೆ ಅಧ್ಯಯನ ಮಾಡಿ ಭವಿಷ್ಯದಲ್ಲಿ ಜನರನ್ನು ಚಂದ್ರನ ಕಡೆಗೆ ಕೊಂಡೊಯ್ಯುವ ಉದ್ದೇಶದಿಂದ ಈ ಯೋಜನೆ ಕೈಗೊಂಡಿದೆ.
6. ತಿರುಪತಿ ತಿಮ್ಮಪ್ಪನ ಆಶೀರ್ವಾದ ಪಡೆದ ವಿಜ್ಞಾನಿಗಳು
ಚಂದ್ರಯಾನ 3 ವಿಕ್ರಮ ಉಡಾವಣೆಗೆ ಮುನ್ನ ವಿಜ್ಞಾನಿಗಳು ಅದರ ಮಾದರಿಯನ್ನು ತಂದು ತಿರುಪತಿ ತಿಮ್ಮಪ್ಪನಿಗೆ ಪೂಜೆ ಸಲ್ಲಿಸಿ ಚಂದ್ರಯಾನ 3 ವಿಕ್ರಮ ಯೋಜನೆ ಯಶಸ್ವಿಯಾಗಲಿ ಎಂದು ಬೇಡಿಕೊಂಡಿದ್ದಾರೆ. ಯಾವುದೇ ಶುಭ ಕಾರ್ಯಕ್ಕೆ ದೇವರ ಕೃಪೆ ಇರಬೇಕೆಂದು ಭಾರತೀಯರು ಬಲವಾಗಿ ನಂಬುತ್ತೇವೆ. ಚಂದ್ರನಲ್ಲಿಗೆ ವಿಕ್ರಮ ಲ್ಯಾಂಡರ್ ತಲುಪಲು ನಮ್ಮ ಪ್ರಯತ್ನವಿದ್ದರಷ್ಟೇ ಸಾಲದು ದೇವರ ಆಶೀರ್ವಾದ ಕೂಡ ಮುಖ್ಯ ಎಂಬುವುದನ್ನು ನಮ್ಮ ವಿಜ್ಞಾನಿಗಳು ಕೂಡ ಬಲವಾಗಿ ನಂಬುತ್ತಾರೆ ಎಂಬುವುದಕ್ಕೆ ವಿಜ್ಞಾನಿಗಳು ನೆನ್ನೆ ತಿರುಪತಿಗೆ ಭೇಟಿ ನೀಡಿದ್ದೇ ಸಾಕ್ಷಿ.



Click it and Unblock the Notifications
