Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಇಲ್ಲಿ ತಲೆಯಿಲ್ಲದ ಗಣಪನ ಪೂಜಿಸಲಾಗುವುದು!
ಪೌರಾಣಿಕ ಕತೆಯಲ್ಲಿ ಶಿವ ಗಣೇಶನ ತಲೆಕತ್ತರಿಸಿದ, ನಂತರ ಆನೆಯ ತಲೆಯನ್ನು ತಂದು ಜೋಡಿಸಿ ಗಣಪನಿಗೆ ಜೀವ ನೀಡಲಾಯಿತು ಎಂಬ ಕತೆಯಿದೆ. ಆದ್ದರಿಂದಲೇ ಆನೆಯ ತಲೆಯ ಗಣಪನ ಆರಾಧನೆ ಮಾಡುತ್ತೇವೆ. ಆದರೆ ನಮ್ಮ ದೇಶದಲ್ಲಿ ಒಂದು ಕಡೆ ತಲೆಯೇ ಇಲ್ಲದೆ ಗಣೇಶನ ವಿಗ್ರಹವನ್ನು ಪೂಜಿಸಲಾಗುವುದು. ಅದು ಎಲ್ಲಿ ಎಂಬುವುದು ಗೊತ್ತೇ?

ಕೇದರ ಕಣಿವೆಯಲ್ಲಿರುವ ಮುಂಡಿಕಾಟೀಯ ದೇವಾಲಯದಲ್ಲಿ ತಲೆಯಿಲ್ಲದ ಗಣಪತಿಯನ್ನು ಆರಾಧನೆ ಮಾಡಲಾಗುವುದು. ಈ ಪ್ರದೇಶ ಉತ್ತರಕಾಂಡ ರಾಜ್ಯದ ಸೋನ್‌ಪ್ರಯಾಗ್‌ನಿಂದ 3 ಕಿ.ಮೀ ದೂರದಲ್ಲಿದೆ. ಈ ಪ್ರದೇಶವನ್ನು ದೇವಭೂಮಿಯೆಂದು ಕರೆಯಲಾಗುವುದು.
ಶಿವ ಪುರಾಣದ ಪ್ರಕಾರ ಪಾರ್ವತಿ ತನ್ನ ಬೆವರಿನಿಂದ ಗಣಪತಿಯನ್ನು ತಯಾರಿಸುತ್ತಾಳೆ. ನಂತರ ತಾನು ಸ್ನಾನಕ್ಕೆ ಹೋಗುವಾಗ ಯಾರೇ ಬಂದರು ಒಳಗಡೆ ಬಿಡದಂತೆ ಮಗನಿಗೆ ಹೇಳಿ ಹೋಗುತ್ತಾಳೆ. ಆವಾಗ ಅಲ್ಲಿಗೆ ಬರುವ ಶಿವನನ್ನು ಗಣಪ ತಡೆಯುತ್ತಾನೆ, ಇದರಿಂದ ಕೋಪಗೊಂಡ ಶಿವ ಗಣಪನ ತಲೆಯನ್ನು ಕತ್ತರಿಸುತ್ತಾನೆ, ಆವಾಗ ಅಲ್ಲಿಗೆ ಬರುವ ಪಾರ್ವತಿ ಅದು ನಮ್ಮ ಮಗ ಎಂಬುವುದಾಗಿ ಹೇಳುತ್ತಾಳೆ. ನಂತರ ಆನೆಯ ತಲೆಯನ್ನು ತಂದು ಗಣಪನಿಗೆ ಜೋಡಿಸಿ ಮರು ಜೀವ ನೀಡಲಾಗುವುದು ಎಂಬ ಕತೆಯಿದೆ.
ದೇವಭೂಮಿಯಲ್ಲಿಯೇ ಶಿವ ಗಣಪತಿಯ ತಲೆ ತೆಗೆದ, ಇಲ್ಲಿಯೇ ಜೋಡಿಸಿದ ಎಂದು ಕೂಡ ಹೇಳಲಾಗುವುದು, ಆದ್ದರಿಂದ ಇಲ್ಲಿಗೆ ಮುಂಡಿಕಾಟೀಯ ಎಂಬ ಹೆಸರು ಬಂತು ಎಂದು ಕೂಡ ಹೇಳಲಾಗುವುದು. ಮುಂಡ ಎಂದರೆ ತಲೆ, ಕಾಟೀಯ ಎಂದರೆ ಕತ್ತರಿಸಿದ ಎಂಬ ಅರ್ಥವಿದೆ.
ಕೇದರ್‌ನಾಥ ದೇವಾಲಯಕ್ಕೆ ನಡೆದುಕೊಂಡು ಹೋಗುವ ಹಳೆಯ ರಸ್ತೆಯಲ್ಲಿ ಹೋಗುವ ಭಕ್ತರು ಇಲ್ಲಿ ಗಣಪನಿಗೆ ಪೂಜೆ ಸಲ್ಲಿಸುತ್ತಾರೆ. ಆದರೆ ಬಹುತೇಕರು ಹೊಸ ರಸ್ತೆ ಮೂಲಕ ಹೋಗುವುದರಿಂದ ಹೆಚ್ಚಿನವರಿಗೆ ಈ ರಸ್ತೆ ಬಗ್ಗೆ ಗೊತ್ತಿಲ್ಲ.
ಶಿವ ಪುರಾಣ:
ಶಿವ ಪುರಾಣದಲ್ಲಿ ಗಣೇಶನಿಗೆ ಆನೆಯ ತಲೆ ಹೇಗೆ ಬಂತು ಎಂಬ ಕತೆ ಇದೆ. ಪಾರ್ವತಿ ಸ್ನಾನಕ್ಕೆ ಹೋಗುವಾಗ ನಂದಿ ಬಳಿ ಯಾರನ್ನೂ ಒಳಗಡೆ ಬಿಡಬೇಡ ಎಂದು ಹೇಳಿ ಹೋಗುತ್ತಾಳೆ, ಆದರೆ ನಂದಿ ಶಿವ ಬಂದಾಗ ಶಿವನನ್ನು ತಡೆಯಲ್ಲ, ಶಿವ ಒಳಗಡೆ ಬರುತ್ತಾನೆ, ಇದರಿಂದ ಪಾರ್ವತಿಗೆ ಮುಜುಗರವಾಗುತ್ತದೆ.
ಪಾರ್ವತಿ ತಾನು ಮೈಗೆ ಹಚ್ಚಿದ ಅರಿಶಿಣದಿಂದ ಬಾಲಕನ ರೂಪ ಮಾಡುತ್ತಾಳೆ, ಅದರಲ್ಲಿ ಪಾರ್ವತಿ ಬೆವರು ಕೂಡ ಇರುತ್ತದೆ. ನಂತರ ಆ ಮೂರ್ತಿಗೆ ತನ್ನ ಶಕ್ತಿ ಧಾರೆ ಎರೆದು ಜೀವಕೊಡುತ್ತಾಳೆ, ನಂತರ ನಾನು ಸ್ನಾನಕ್ಕೆ ಹೋಗುವಾಗ ಯಾರನ್ನು ಬಿಡಬೇಡ ಎಂದು ಹೇಳುತ್ತಾಳೆ. ಅಮ್ಮನ ಮುದ್ದಿನ ಮಗ ತಾಯಿ ಹೇಳಿದ ಮಾತನ್ನು ತಪ್ಪದೆ ಪಾಲಿಸುತ್ತಾನೆ, ಶಿವ ಪಾರ್ವತಿಯನ್ನು ನೋಡಲು ಬಂದಾಗ ಕೂಡ ಒಳಗಡೆ ಬಿಡುವುದಿಲ್ಲ, ಇದರಿಂದ ಕೋಪಗೊಂಡ ಶಿವ ಗಣಪತಿಯ ತಲೆಯನ್ನು ಕತ್ತರಿಸುತ್ತಾನೆ.
ಶಿವನಿಗೆ ಈ ಮಗು ಪಾರ್ವತಿಯ ಅಂಶದಿಂದ ಉಂಟಾಗಿರುವ ಹುಡುಗ ಎಂಬುವುದು ತಿಳಿದಿರುವುದಿಲ್ಲ. ಪಾರ್ವತಿ ಬಂದು ನೋಡಿದಾಗ ಮಗನ ಮುಂಡ ರುಂಡದಿಂದ ಬೇರೆಯಾಗಿದೆ, ಇದರಿಂದ ಪಾರ್ವತಿಗೆ ತುಂಬಾನೇ ಕೋಪ ಬರುತ್ತದೆ. ಇಡೀ ಜಗತ್ತನ್ನೇ ನಾಶ ಮಾಡುತ್ತೇನೆ ಎಂದು ಶಾಪ ನೀಡುತ್ತಾಳೆ. ಶಿವನಿಗೆ ತನ್ನ ತಪ್ಪಿನ ಬಗ್ಗೆ ಪಶ್ಚಾತಾಪ ಆಗುತ್ತದೆ. ಅಲ್ಲಿಗೆ ಬರುವ ಬ್ರಹ್ಮನ ಬಳಿ ಉತ್ತರ ದಿಕ್ಕಿಗೆ ಮುಖ ಮಾಡಿ ಮಲಗಿರುವ ಯಾವುದೇ ಪ್ರಾಣಿಯ ತಲೆಯನ್ನು ತರುವಂತೆ ಹೇಳುತ್ತಾನೆ. ಉತ್ತರ ಮುಖ ಮಾಡಿ ಮಲಗಿರುವ ಆನೆಯ ತಲೆಯನ್ನು ತಂದು ದೇಹಕ್ಕೆ ಜೋಡಿಸಲಾಗುವುದು, ನಂತರ ಮರುಜೀವ ಕೊಡಲಾಗುವುದು. ಹೀಗೆ ಗಣೇಶನಿಗೆ ಆನೆಯ ತಲೆ ಸಿಕ್ತುಜ, ಗಣೇಶ ಗಜಾನನ ಆದ. ಶಿವನಲ್ಲಿರುವ ಪ್ರಮುಖ ಶಕ್ತಿಯನ್ನು ಕೂಡ ಗಣೇಶನಿಗೆ ನೀಡಲಾಗುವುದು. ಅಲ್ಲದೆ ಯಾವುದೇ ಪೂಜೆಯ ಮುಂಚೆ ಗಣೇಶನ ಆರಾಧನೆ ಮಾಡಬೇಕು ಎಂದು ಶಿವ ಹೇಳುತ್ತಾನೆ. ಹೀಗಾಗಿ ಎಲ್ಲಾ ಪೂಜೆ ಮುಂಚೆ ಗಣೇಶನಿಗೆ ಪೂಜೆ ಮಾಡಲಾಗುವುದು.
ಮಂತ್ರ
ಓಂ ಶ್ರೀಂ ಹ್ರೀಂ ಕ್ಲೀಂ ಗ್ಲೌಂ ಗಂ ಗಣಪತಯೇ ವರ ವರದ ಸರ್ವಜನಂ ಮೇ ವಶಮಾನಯ ಸ್ವಾಹಾ॥ ಏಕದಂತಾಯ ವಿದ್ಮಹೇ , ವಕ್ರತುಂಡಾಯ ಧೀಮಹಿ, ತನ್ನೋ ದಂತಿ ಪ್ರಚೋದಯಾತ್ ॥ ಓಂ ಶಾಂತಿ ಶಾಂತಿ ಶಾಂತಿಃ ॥



Click it and Unblock the Notifications
